ಅಂಬೇಡ್ಕರ್
ಮತ್ತು ಹಿಂದೂ ದೇವರುಗಳು
-ರಘೋತ್ತಮ ಹೊ.ಬ
-ರಘೋತ್ತಮ ಹೊ.ಬ
ಹಿಂದೂ ದೇವರುಗಳು ಲೆಕ್ಕಕ್ಕೇ ಸಿಗದಷ್ಟಿವೆ. ಬಹುಶಃ, ಗಂಟೆಗೊಂದರಂತೆ ಗಲ್ಲಿಗೊಂದರಂತೆ ದೇವರುಗಳು ಸೃಷ್ಟಿಯಾಗುತ್ತಲೇ ಇವೆ. ಹಾಗೆಯೇ ಆ ದೇವರುಗಳ ಭಕ್ತರುಗಳು ಕೂಡ. ಅಂದಹಾಗೆ ಇದರಿಂದ ಲಾಭ ಆಗುವುದು ಯಾರಿಗೆ? ಉತ್ತರ ಸರಳ. ಪೂಜೆ ಮಾಡುವವರಿಗೆ, ಅರ್ಥಾತ್ ಪೂಜಾರಿಗಳಿಗೆ. ಹಾಗೆಯೇ ಅಂತಹ ದೇವರುಗಳ ಮೂಲಕ ರಾಜಕಾರಣದ ಸವಾರಿ ಮಾಡುವವರಿಗೆ, ಅನ್ಯ ಧರ್ಮಗಳ ವಿರುದ್ಧ ಕತ್ತಿ ಮಸೆಯುವವರಿಗೆ.
ಪರಿಸ್ಥಿತಿ ಹೀಗಿದ್ದೂ ಅಂದರೆ ಕಾಪಾಡುವವ ಗಂಟೆಗೊಂದರಂತೆ,
ಗಳಿಗೆಗೊಂದರಂತೆ ಸೃಷ್ಟಿಯಾಗುತ್ತಿದ್ದೂ ಯಾಕೆ ಇನ್ನೂ ಅಸ್ಪøಶ್ಯತೆ ನಿವಾರಣೆಯಾಗಿಲ್ಲ?
ಅಸಮಾನತೆ ದೂರವಾಗಿಲ್ಲ? ತಾರತಮ್ಯ ನಾಶವಾಗಿಲ್ಲ? ಬಹುಶಃ
ಇಂತಹ ಪ್ರಶ್ನೆಗಳಗೆ ಉತ್ತರಗಳು ಆ ದೇವರುಗಳಿಗೆ ಗೊತ್ತಿಲ್ಲದಿರಬಹುದು ಆದರೆ ಆ
ದೇವರುಗಳನ್ನು ಪೂಜಿಸುವ ಅರ್ಚಕರುಗಳಿಗೆ, ಹೊತ್ತು ಮೆರೆಯುವ
ಭಕ್ತ ಸಮೂಹಕ್ಕೆ, ಖಂಡಿತ
ಗೊತ್ತಿರುತ್ತದೆ. ಆದರೂ ಅವರು ಹೇಳುವುದಿಲ್ಲ!
ಯಾಕೆಂದರೆ ಅಂತಹ ತಾರತಮ್ಯಕ್ಕೆ ಧರ್ಮದ
ಬೇಲಿ ಇದೆ. ಶಾಸ್ತ್ರ ಪುರಾಣಗಳ
ಮಾನ್ಯತೆ ಇದೆ. ಅಸಮಾನತೆಗೂ ಮನುಸಂಹಿತೆಯ
ರಕ್ಷಣೆ ಇದೆ ಅದಕ್ಕೆ.
ಹಾಗಿದ್ದರೆ
ಇದಕ್ಕೆ ಏನು ಮಾಡಬೇಕು? ಅಥವಾ
ಏನೂ ಮಾಡದ ಇಂತಹ ಹಿಂದೂ
ದೇವರುಗಳ ಬಗ್ಗೆ ಏನು ನಿರ್ಧಾರ
ತಳೆಯಬೇಕು? ಖಂಡಿತ, ಉತ್ತರ ಬಾಬಾಸಾಹೇಬ್
ಅಂಬೇಡ್ಕರ್ ಹೇಳುತ್ತಾರೆ. ಯಾಕೆಂದರೆ ಅಂಬೇಡ್ಕರ್ ಹಿಂದೂ ದೇವರುಗಳ ಬಗ್ಗೆ
ಧರ್ಮದ ಬಗ್ಗೆ ಇಂಚಿಂಚೂ ಅರೆದು
ಕುಡಿದವರು. ಅದರ ಪೊಳ್ಳುತನವನ್ನು, ದ್ವಂದ್ವವನ್ನು,
ವೈರುಧ್ಯಗಳನ್ನು, ಗದ್ದಲ ಗೌಜಲಗಳನ್ನು Riddles in Hinduism ಎಂದು ಪ್ರಶ್ನಿಸಿದವರು. ಹಾಗೆಯೇ
ಅಂತಹ ಒಗಟುಗಳು(Riddles) ಬಗ್ಗೆ ಅಂತಹದೇ ಹೆಸರಿನ
ಪುಸ್ತಕ ಬರೆದವರು.
ಹಿಂದೂ ದೇವರುಗಳ ಬಗ್ಗೆ
ಅಂಬೇಡ್ಕರ್ ಏನು ಹೇಳುತ್ತಾರೆ? 1937, ಆಗಸ್ಟ್
28 ರಂದು ಬಾಂದ್ರದ ಮುನಿಸಿಪಲ್ ಹಾಲ್ನಲ್ಲಿ ಅಂಬೇಡ್ಕರರ ಅಧ್ಯಕ್ಷತೆಯಲ್ಲಿ ನಡೆದ ಶೋಷಿತ ಸಮುದಾಯಗಳ
ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯವೊಂದರಲ್ಲಿ
ಇದಕ್ಕೆ ನಮಗೆ ಉತ್ತರ ದೊರಕುತ್ತದೆ (Babasaheb
Ambedkar writings and speeches. vol,17. Part II. P,160).
ಆ
ನಿರ್ಣಯ ಹೀಗಿದೆ. “ಬಾಂಬೆ ಪ್ರಾಂತ್ಯದ ಮಹಾರ್ ಸಮ್ಮೇಳನದಲ್ಲಿ ಕೈಗೊಂಡ
ನಿಲುವಿನಂತೆ ನಮ್ಮ
ಸಹೋದರ ಸಹೋದರಿಯರು ಇಂದು
ಪ್ರತಿಜ್ಞೆ ಸ್ವೀಕರಿಸುವುದೇನೆಂದರೆ ನಾವು ಇನ್ನು ಮುಂದೆ
ಹಿಂದೂ ಹಬ್ಬಗಳನ್ನು
ಆಚರಿಸುವುದಿಲ್ಲ. ಹಿಂದೂ ಧರ್ಮದ ಧಾರ್ಮಿಕ ಸಂಪ್ರದಾಯಗಳನ್ನು ಪಾಲಿಸುವುದಿಲ್ಲ.
ಹಾಗೂ ಉಪವಾಸದಂತಹ ಹಿಂದೂ ಧಾರ್ಮಿಕ ಕ್ರಿಯೆಗಳನ್ನು
ನಡೆಸುವುದಿಲ್ಲ” ಎಂಬುದು.
ಖಂಡಿತ, ಅಂಬೇಡ್ಕರರ ನೇತೃತ್ವದಲ್ಲಿ
ಕೈಗೊಂಡ ಈ ನಿರ್ಣಯದಲ್ಲಿ
ಎಲ್ಲವೂ ಸಿಗುತ್ತದೆ. ಹಿಂದೂ ಹಬ್ಬಗಳ ಕುರಿತಂತೆ,
ಆಚರಣೆ ನಂಬಿಕೆಗಳ ಕುರಿತಂತೆ ಹೀಗೆ.
ಅಂದಹಾಗೆ ಆ ಸಭೆಯಲ್ಲಿ ಮಾತನಾಡುತ್ತಾ
ಅಂಬೇಡ್ಕರರು “ಹಿಂದೂ ಧರ್ಮದ ಅನುಸಾರ ಆಚರಿಸಲ್ಪಡುವ
ಎಲ್ಲಾ ಧಾರ್ಮಿಕ ಹಬ್ಬಗಳನ್ನು, ದಿನಗಳನ್ನು
ನಾವು ಆಚರಿಸುವುದನ್ನು ಬಿಡಬೇಕು. ಹಾಗೆಯೇ ಹಿಂದೂ ಧರ್ಮದ
ಪ್ರಕಾರ ಅನುಸರಿಸಲ್ಪಡುತ್ತಿರುವ ಸಂಪ್ರದಾಯಗಳು
ಧಾರ್ಮಿಕವಾಗಿ, ನೈತಿಕವಾಗಿ ಯೋಗ್ಯವೇ ಎಂಬುದರ ಬಗ್ಗೆಯೂ ನಾವು
ಚಿಂತಿಸಬೇಕು. ಕೆಲವು
ಆಚರಣೆಗಳಂತೂ ತುಂಬಾ ಹೀನಾಯವಾಗಿವೆ. ಉದಾಹರಣೆಗೆ
ಕೆಲವರು ಪ್ರತಿ ಸೋಮವಾರ ಶಂಕರ(ಶಿವ)ನ ಹೆಸರಲ್ಲಿ
ಉಪವಾಸ ಆಚರಿಸುತ್ತಾರೆ ಮತ್ತು ಅಂದು ಶಂಕರನ
ಪಿಂಡಿ(ಲಿಂಗ)ವನ್ನು ಪೂಜಿಸುತ್ತಾರೆ.
ಆದರೆ ಪ್ರಶ್ನೆ ಏನೆಂದರೆ ಯಾರಾದರೂ
ಆ ‘ಶಂಕರನ ಪಿಂಡಿ ಎಂದರೇನು,
ಎಂಬುದರ ಬಗ್ಗೆ ಚರ್ಚಿಸಿದ್ದಾರೆಯೇ? ವಾಸ್ತವವೆಂದರೆ
ಅದು ಒಂದು ಹೆಣ್ಣು ಮತ್ತು
ಒಂದು ಗಂಡಿನ ಸಮಾಗಮದ ಸೂಚಕವಲ್ಲದೆ
ಬೇರೇನಲ್ಲ! ಅಂದಹಾಗೆ ಇಂತಹ ಅಸಹ್ಯ
ಸೂಚಕಗಳನ್ನು ವೈಭವೀಕರಿಸುವ ಹಾಡುಗಳನ್ನು ನಾವು ಹಾಡುವ ಅಗತ್ಯವಿದೆಯೇ?
ಎಂಬುದು ಕೂಡ ಇಲ್ಲಿ ಚಿಂತಿಸಬೇಕಾದ
ವಿಷಯ. ವಾಸ್ತವವಾಗಿ ಒಂದು
ಗಂಡು ಮತ್ತು ಒಂದು ಹೆಣ್ಣು
ಹೀಗೆ ನಾಯಿಗಳ ಹಾಗೆ ಬೀದಿಯಲ್ಲಿ
ನಿಂತು ಬಹಿರಂಗವಾಗಿ ಲೈಂಗಿಕವಾಗಿ ಅಸಹ್ಯವಾಗಿ ವರ್ತಿಸಿದರೆ ಅಂತಹವರನ್ನು
ನಾವು ‘ಯಾವುದರಿಂದ ಪೂಜೆ ಮಾಡುತ್ತೇವೆ? ಹೂಗಳು
ಯಾ ಚಪ್ಪಲಿ? ಹೀಗಿರಬೇಕಾದರೆ ಇಂತಹದ್ದೆ
ಅಸಹ್ಯ ಮಾದರಿಯನ್ನು ಸೂಚಿಸುವ ಪಾರ್ವತಿ ಮತ್ತು
ಶಂಕರ(ಶಿವ)ನ ಅರ್ಥಾತ್
ದೇವರುಗಳ ಅಶ್ಲೀಲತೆಯನ್ನು ನಾವು ಪೂಜಿಸಬೇಕೆ? ಗಣಪತಿಯ
ವಿಷಯವೂ ಅಷ್ಟೆ. ಮುಂದುವರಿದು ಅಂಬೇಡ್ಕರರು
“ಗಣಪತಿಯ ಕಥೆ
ಹೇಳುವುದಾದರೆ, ತನ್ನ ಗಂಡ ಶಂಕರ(ಶಿವ) ಹೊರಗಡೆ ಹೋಗಿರಬೇಕಾದರೆ
ಪಾರ್ವತಿ ಒಮ್ಮೆ ಬೆತ್ತಲೆಯಾಗಿ
ಸ್ನಾನ ಮಾಡುತ್ತಿದ್ದಳು. ಈ ಕಾರಣಕ್ಕೆ ತನ್ನ
ಸ್ನಾನಕ್ಕೆ ಯಾರಿಂದಲೂ ತೊಂದರೆಯಾಗಬಾರದು ಎಂದು ತನ್ನನ್ನು ಕಾಯಲು ಪಾರ್ವತಿಯು ತನ್ನ
ಮೈಯ ಕೊಳೆಯನ್ನೇ ತೀಡಿ ಹೊರತೆಗೆದು ಅದರಿಂದ
ಗಣಪತಿಯನ್ನು ಸೃಷ್ಟಿಸಿದಳು! ಪ್ರಶ್ನೆ ಏನೆಂದರೆ ಕೊಳೆಯಿಂದ ಸೃಷ್ಟಿಯಾದ ಅಂತಹ
ದುರ್ನಾತದ ವಿಗ್ರಹ(ಗಣಪತಿ) ದೇವರಾಗಲು
ಹೇಗೆ ಸಾಧ್ಯ ಎಂಬುದು? ದೇವರೆಂದರೆ
ಕಳಂಕರಹಿತವಾಗಿರಬೇಕು. ಪವಿತ್ರ ಸೃಷ್ಟಿಯಾಗಿರಬೇಕು. ಆದರೆ ಹಿಂದೂ
ದೇವರುಗಳಾದರೋ ನಿಮಗೆ ನಾನು ಹೇಳಿದ
ಹಾಗೆ ಅಪಹಾಸ್ಯದ ಸೃಷ್ಟಿಗಳಾಗಿವೆ.
ಈ ಕಾರಣಕ್ಕಾಗಿ ನನ್ನ ಪ್ರಾಮಾಣಿಕ ನಂಬಿಕೆಯೆಂದರೆ ಅವುಗಳನ್ನು ಪೂಜಿಸಲೇಬಾರದು”.
ಕೊನೆಯದಾಗಿ ಅಂಬೇಡ್ಕರರು ದೇವರುಗಳ ಇಂತಹ ಅಶ್ಲೀಲತೆಗೆ
ದತ್ತಾತ್ರೇಯನ ಕಥೆಯನ್ನು ಹೋಲಿಸುತ್ತಾರೆ “ಒಮ್ಮೆ ನಾರದನು ಬ್ರಹ್ಮ, ವಿಷ್ಣು ಮತ್ತು
ಮಹೇಶ್ವರ ಹೀಗೆ ತ್ರಿಮೂರ್ತಿ ದೇವರುಗಳ ಹೆಂಡತಿಯರಿಗೆ
‘ಇನ್ನು ಮುಂದೆ ನೀವು, ನಮ್ಮನ್ನು
ಬಿಟ್ಟು ಬೇರೆ ಯಾರೂ ಪವಿತ್ರರಲ್ಲ(ಲೈಂಗಿಕವಾಗಿ) ಎಂದುಕೊಳ್ಳಬೇಡಿ, ಯಾಕೆಂದರೆ ಅತ್ರಿ ಮುನಿಯ ಪತ್ನಿ
ಅನಸೂಯಳೇ ಅತ್ಯಂತ ಪವಿತ್ರ ಹೆಂಡತಿ’
ಎಂದನು. ಇದನ್ನು ಸಹಿಸದ ಆ
ಮೂವರು ತಮಗಿಂತ ಹೆಚ್ಚು ಪತಿವ್ರತೆ
ಹೆಂಗಸು ಯಾರೂ ಇರಬಾರದು ಎಂದುಕೊಂಡು
ತಮ್ಮ ಗಂಡಂದಿರಿಗೆ ಆ ಅನಸೂಯಳ ಪಾತಿವ್ರತ್ಯತೆಯನ್ನು
ನಾಶಗೊಳಿಸಬೇಕು ಎಂದು ಕಿವಿಯೂದಿದರು. ಅಂತೆಯೇ
ಆ ಮೂವರು ಹೀರೋಗಳು
(ಬ್ರಹ್ಮ, ವಿಷ್ಣು, ಮಹೇಶ್ವರ) ತಮ್ಮ
ಹೆಂಡಂದಿರ ಮಾತು
ಕೇಳಿ ಅದಕ್ಕೆ
(ಅನಸೂಯಳ ಪಾತಿವ್ರತ್ಯತೆ ಕೆಡಿಸಲು) ತಯಾರಾದರು, ತಯಾರಾಗಿ ಅನಸೂಯಳ ಮನೆಗೆ ಹೋದರು. ಅನಸೂಯಳ
ಮನೆ ಸೇರಿಕೊಂಡ ಆ ಮೂವರು ಒಂದು
ನೆಪ ಹೂಡಿ ಅವಳ ಗಂಡನನ್ನು
ಹೊರಹೋಗುವಂತೆ ಮಾಡಿ ಅನಸೂಯಳ ಜೊತೆ
ವಾಸಿಸತೊಡಗಿದರು. ಇಂತಹ ಪರಿಸ್ಥಿತಿಯಲ್ಲಿ ಅನಸೂಯಳಿಗೆ
ಒಂದು ಗಂಡು ಮಗು ಕೂಡ
ಆಯಿತು! ಅಂದಹಾಗೆ ಅಲ್ಲಿ ಮೂವರೂ
(ಬ್ರಹ್ಮ, ವಿಷ್ಣು, ಮಹೇಶ್ವರ) ಇದ್ದುದರಿಂದ ಮಗುವಿನ
ತಂದೆ ಯಾರು? ಎಂಬ ಅನುಮಾನ
ಸಹಜವಾಗಿ ಹುಟ್ಟಿಕೊಂಡಿತು!
ಮತ್ತು ಹಾಗೇ ಪರಿಹಾರವಾಗಿ ಮೂವರಿಗೂ
ಸಮಪಾಲು ದೊರಕಿಸಲು ಆ ಮಗುವಿಗೆ ಮೂರು ತಲೆಗಳನ್ನು ಜೋಡಿಸಲಾಯಿತು.
ಹಾಗೆ ಹುಟ್ಟಿಕೊಂಡ ಮಗುವೇ ದತ್ತಾತ್ರೇಯ!”
ಹಿಂದೂ ದೇವರುಗಳ ಬಹುತೇಕ
ಸೃಷ್ಟಿಯಲ್ಲಿ ಇಂತಹದ್ದೆ ಅಸಹ್ಯಕರ ಕತೆಗಳು ತುಂಬಿಕೊಂಡಿವೆ.
ಅದರಲ್ಲೂ ಅಂಬೇಡ್ಕರರ ನುಡಿಗಳಲ್ಲಿ ಅಂತಹ ಕತೆಗಳನ್ನು ಕೇಳುವುದೆಂದರೆ...!
ಅಬ್ಬಾ, ಅವರ ಹಾಸ್ಯ ಪ್ರಜ್ಞೆ,
ಮನಮುಟ್ಟುವಂತೆ ಹೇಳುವ ಶೈಲಿ... ಖಂಡಿತ,
ಅವರೊಂದು ಬತ್ತದ
ಅದ್ಭುತ ಜ್ಞಾನ ತೊರೆ. ಒಂದು
ಮಾತು, ಅದೇನೆಂದರೆ ಇನ್ನು ಮುಂದೆ ಹಿಂದೂ
ದೇವರುಗಳನ್ನು ಪೂಜಿಸುವ ಮುನ್ನ ಒಮ್ಮೆ
ಅಂಬೇಡ್ಕರ್ ಹೇಳಿದ ಕತೆಗಳನ್ನು ನೆನಪಿಸಿಕೊಳ್ಳಿ
ಪ್ಲೀಸ್!
No comments:
Post a Comment