[A poem written about devanura mahadeva when he was awarded padmashree]
ಕುರಚಲು ಗಡ್ಡದ
ಕೆದರಿದ ಕೂದಲ
ತಣ್ಣನೆಯ ಕಂಗಳ
ಎತ್ತರದ ನಿಲುವಿನ
ಒಳಗೆ
ತುಂಬಿದ ನೋವ
ತಬ್ಬಿದ ಕಾವ
ಮನಸ್ಸು ನೇತಾಡುವ ಕೊರಬಾಡು
ಅಗ್ನಿ ಅಗ್ಗಿಷ್ಟಿಕೆಗಳ ಸೂರ್ಯಪಾಡು
ನೋಡಬೇಕೆನಿಸುತ್ತದೆ
ಬಾಯ್ಬಿಟ್ಟರೆ ಕೇಳಬೇಕೆನಿಸುತ್ತದೆ
ಇಸ್ತ್ರಿ ಇಲ್ಲದ ಜುಬ್ಬದಲ್ಲೂ
ಇತಿಹಾಸ ಧುಮ್ಮಿಕ್ಕುತ್ತಿರುತ್ತದೆ
ಎಂದೋ ಹಿಡಿದ ಪೆನ್ನು
ಬರೆದದ್ದು ಎರಡಕ್ಷರ
ಬರೆಯದೇ ಹೇಳಿದ್ದು ನೂರಕ್ಷರ
ಬರೆದದ್ದ
ಗಬರಿದ್ದು ಹಲವರು ಥರಾಥರ
ಕವಿ ಕಾದಿದೆ
ಮನಸ್ಸು ಮಾಗಿದೆ
ಚಳುವಳಿಗೆ ಜೀವ ಕೊಟ್ಟು
ಕುಳಿತಿದೆ ಸುಮ್ಮನೆ
ಆಗಸ ನೋಡುತ್ತಾ
ಕಿರಿಯರಿಗೆ
ಕುತೂಹಲಕಾರಿ ಚುಕ್ಕಿಯಾಗುತ್ತಾ
ನೆಲದೊಡಲ ಚುಕ್ಕಿ
ಮಣ್ಣ ಕಂಪ ಹೆಕ್ಕಿ
ನಡೆಯುತಿರಲು
ಹಿಂಬಾಲಿಸಿತು
ಪದ್ಮ ಎಂಬ ಚಿಕ್ಕ ಹಕ್ಕಿ
ಹಕ್ಕಿ ಸಾಲು ಸಾಲು
ಪಿಕ್ಕಿ ಇಡಲು
ಆ ಪಿಕ್ಕಿಯ ಜೋಡಿಸಿ
ಖುಷಿ ಪಡುತ್ತಿತ್ತು
ದ್ಯಾವನೂರು ಎಂಬ ಧೃವ ಚುಕ್ಕಿ
ಬಿಕ್ಕಿ ಅಳುತ್ತಿತ್ತು
ಇಡಲಾರದೆ
ತನ್ನವರ ನೋವಿಗೆ ಪೂರ್ಣಚುಕ್ಕಿ.......
ದ್ಯಾವನೂರು ಎಂಬ ಧೃವ ಚುಕ್ಕಿ
-ರಘೋತ್ತಮ ಹೊ.ಬ
ಕುರಚಲು ಗಡ್ಡದ
ಕೆದರಿದ ಕೂದಲ
ತಣ್ಣನೆಯ ಕಂಗಳ
ಎತ್ತರದ ನಿಲುವಿನ
ಒಳಗೆ
ತುಂಬಿದ ನೋವ
ತಬ್ಬಿದ ಕಾವ
ಮನಸ್ಸು ನೇತಾಡುವ ಕೊರಬಾಡು
ಅಗ್ನಿ ಅಗ್ಗಿಷ್ಟಿಕೆಗಳ ಸೂರ್ಯಪಾಡು
ನೋಡಬೇಕೆನಿಸುತ್ತದೆ
ಬಾಯ್ಬಿಟ್ಟರೆ ಕೇಳಬೇಕೆನಿಸುತ್ತದೆ
ಇಸ್ತ್ರಿ ಇಲ್ಲದ ಜುಬ್ಬದಲ್ಲೂ
ಇತಿಹಾಸ ಧುಮ್ಮಿಕ್ಕುತ್ತಿರುತ್ತದೆ
ಎಂದೋ ಹಿಡಿದ ಪೆನ್ನು
ಬರೆದದ್ದು ಎರಡಕ್ಷರ
ಬರೆಯದೇ ಹೇಳಿದ್ದು ನೂರಕ್ಷರ
ಬರೆದದ್ದ
ಗಬರಿದ್ದು ಹಲವರು ಥರಾಥರ
ಕವಿ ಕಾದಿದೆ
ಮನಸ್ಸು ಮಾಗಿದೆ
ಚಳುವಳಿಗೆ ಜೀವ ಕೊಟ್ಟು
ಕುಳಿತಿದೆ ಸುಮ್ಮನೆ
ಆಗಸ ನೋಡುತ್ತಾ
ಕಿರಿಯರಿಗೆ
ಕುತೂಹಲಕಾರಿ ಚುಕ್ಕಿಯಾಗುತ್ತಾ
ನೆಲದೊಡಲ ಚುಕ್ಕಿ
ಮಣ್ಣ ಕಂಪ ಹೆಕ್ಕಿ
ನಡೆಯುತಿರಲು
ಹಿಂಬಾಲಿಸಿತು
ಪದ್ಮ ಎಂಬ ಚಿಕ್ಕ ಹಕ್ಕಿ
ಹಕ್ಕಿ ಸಾಲು ಸಾಲು
ಪಿಕ್ಕಿ ಇಡಲು
ಆ ಪಿಕ್ಕಿಯ ಜೋಡಿಸಿ
ಖುಷಿ ಪಡುತ್ತಿತ್ತು
ದ್ಯಾವನೂರು ಎಂಬ ಧೃವ ಚುಕ್ಕಿ
ಬಿಕ್ಕಿ ಅಳುತ್ತಿತ್ತು
ಇಡಲಾರದೆ
ತನ್ನವರ ನೋವಿಗೆ ಪೂರ್ಣಚುಕ್ಕಿ.......
No comments:
Post a Comment