Monday, 26 May 2014

ಇನ್ನು ನಮ್ಮ ನಾಳೆಗಳು ಸಾಯುತ್ತವೆ


ಅಂದು ಹೇಳಿದ್ದು
ತಂದೆ ಬಾಬಾಸಾಹೇಬ
‘ನೋಡಪ್ಪಾ, ಹಿಡಿ ರಾಜ್ಯಾಧಿಕಾರದ
ಕೈಯನ್ನು, ಬಳಸಿ, ಬೀಸು
ಓಟೆಂಬ ಖಡ್ಗವನ್ನು ಬಲಕ್ಕೆ ಎಡಕ್ಕೆ
ಮುಗಿಸು ಅಸಮಾನತೆಯ
ಅನ್ಯಾಯ, ಅಜ್ಞಾನವ
ಉಳಿಸು ಸಂವಿಧಾನ ಧರ್ಮವ’

ಇಂದು ನೊಂದು
ನುಡಿಯುತ್ತಿದೆ ಮನ
ತಂದೆ ನೀ ಹೇಳಿದ್ದು ಕೇಳಲಿಲ್ಲ
ನನ್ನ ಜನ, ನನ್ನ ಮನ
ಅಡವಿಟ್ಟರು ನೋಡಾ ಖಡ್ಗವ
ಹೆಂಡಕ್ಕೆ,  ಬ್ರಾಂದಿಗೆ, ಬೀರಿಗೆ
ನೂರು ಇನ್ನೂರರ ನೋಟಿಗೆ
ಕುಳಿತಿಹರು ಮೈಕೊಡುತ್ತಾ
ಪೋಲೀಸರ ಬೂಟಿಗೆ

ಇನ್ನು ನಮ್ಮ ನಾಳೆಗಳು
ಅವರದಾಗಿವೆ
ನಮ್ಮದು ಕನಸಾಗಿದೆ
ಅರಿಯದೆ ನನ್ನವರು
ರಾಜ್ಯಾಧಿಕಾರದ ನಿನ್ನುಸಿರು
ಥರಥರದ ಕೈಯ ಹಿಡಿದರು
ಬಗೆಬಗೆಯ ಹೂವ ಮುಡಿದರು

ಕ್ಷಮಿಸು ತಂದೆ
ಕಂದ ಆನೆ
ಘೀಳಿಡುತ್ತಿದೆ
ನಿನ್ನಯ ಘೋಷವ
ಹೇಳಲಾರದೆ
ಜೈಭೀಮ ಎಂದು
ಕೂಗಲಾರದೆ

             -ರಘೋತ್ತಮ ಹೊ.ಬ.




 

No comments:

Post a Comment