Thursday, 15 May 2014

ಸಂವಿಧಾನ ಸೂರ್ಯನಿಗೇ ಟಾರ್ಚು ಹಿಡಿಯುವವರ ಕುರಿತು...!

                                                                                              -ರಘೋತ್ತಮ ಹೊ.ಬ
subhash kashyap

arun shourie

constitution page 1

                                                                                            -
   ಇತ್ತೀಚೆಗೆ ಅಥವಾ 1950 ಜನವರಿ 26ರಿಂದಲೂ ದೇಶದಲ್ಲಿ ಒಂದು ಷಡ್ಯಂತ್ರ ನಡೆಯುತ್ತಾ ಬಂದಿದೆ. ಅದು ಅಂಬೇಡ್ಕರರನ್ನುಸಂವಿಧಾನ ಶಿಲ್ಪಿಎಂಬ ಪಟ್ಟದಿಂದ ಕೆಳಕ್ಕಿಳಿಸುವುದು! ಅರುಣ್ ಶೌರಿ ಇರಬಹುದು ಅಥವಾ ಮತ್ಯಾರೋ ಆರ್ಯ ಶೂರ ಇರಬಹುದು, ಒಟ್ಟಾರೆ ಎಲ್ಲರ ಟಾರ್ಗೆಟ್ ಒಂದೇ ಅಂಬೇಡ್ಕರರಿಂದಸಂವಿಧಾನ ಶಿಲ್ಪಿಎಂಬ ಟೈಟಲ್ಲನ್ನು ಕಿತ್ತುಕೊಳ್ಳುವುದು ಅಥವಾ ಅವರು ಸಂವಿಧಾನ ಬರೆದೇ ಇಲ್ಲ ಎಂದು ಸಾಧಿಸಿ ತೋರಿಸುವುದು! ಇದು ಎಷ್ಟು ಸಾಧ್ಯ? ಅಥವಾ ಎಷ್ಟು ಅಸಾಧ್ಯ? ಅದನ್ನು ಕಾಲವೇ ನಿರ್ಣಯಿಸುತ್ತದೆ. ಹಿಂದೆಲ್ಲಾ ಇದು ಅಂದರೆ ಅವರು  ಇವರು ಎನ್ನುವುದು ಅಥವಾ ಇವರು  ಅವರೇ ಅಲ್ಲ ಎಂದು ಸಾಧಿಸಿ ತೋರಿಸುವುದು ಅಥವಾ ಸಾಧಿಸಿಯೇ ಬಿಡುವುದು ಆಗಾಗ ನಡೆಯುತ್ತಾ ಬಂದಿದೆ.
  ಉದಾ: ಬುದ್ಧನನ್ನು ವಿಷ್ಣು ಎನ್ನುವುದು, ಶಿವಾಜಿಯನ್ನು ಮುಸ್ಲಿಂ ದ್ವೇಷಿ ಎನ್ನುವುದು ಇತ್ಯಾದಿ. ಹಾಗಿದ್ದರೆ ಹೀಗೆಯೇ ಅಂದರೆ ಬುದ್ಧನನ್ನು ವಿಷ್ಣು ಎಂದಹಾಗೆಸಂವಿಧಾನ ಶಿಲ್ಪಿಅಂಬೇಡ್ಕರರನ್ನು ಸಂವಿಧಾನ ಶಿಲ್ಪಿ ಅಲ್ಲ ಎಂದು ಸಾಧಿಸಲು ಸಾಧ್ಯವೇ? ಜನಸಾಮಾನ್ಯರೆ ಇದನ್ನು ತೀರ್ಮಾನಿಸಬೇಕು.
 \
   ಯಾಕೆಂದರೆ  ತಮಗೆ ಬೇಕೆಂದವರನ್ನು ಇಂದ್ರ ಚಂದ್ರ ಎನ್ನುವುದು, ತಮಗೆ ಬೇಡ ಎಂದವರನ್ನು ಹೀಗಳೆವುದು ಇದು ದೇಶದ ಬ್ರಾಹ್ಮಣವಾದಿ ಚರಿತ್ರಕಾರರು ಮಾಡಿಕೊಂಡು ಬಂದಿರುವ ಪದ್ಧತಿ. ಅಂತಹ ಪದ್ಧತಿಯ ಮುಂದುವರಿದ  ಭಾಗವಾಗಿಯೇ ಅಂಬೇಡ್ಕರರನ್ನು ಸಂವಿಧಾನ ಶಿಲ್ಪಿ ಅಲ್ಲ ಎಂದು ಸಾಧಿಸುವ ವ್ಯರ್ಥಾಲಾಪ. ಅಂದಹಾಗೆ ಅದು ನಡೆದಿರುವುದು ಸುಭಾಷ್ ಕಶ್ಯಪ್ ಎಂಬ ಸಂವಿಧಾನ ತಜ್ಞ ಎನಿಸಿಕೊಂಡವರು ಬರೆದಿರುವ Our Constitution”  ಎಂಬ ಕೃತಿಯಲ್ಲಿ.

    ಹಾಗೆ ಸಾಧಿಸ ಹೊರಟವರು ಮೊದಲು ಹೇಳುವುದು ಸಂವಿಧಾನದ ಪ್ರಥಮ ಕರಡನ್ನು ಸಿದ್ಧಪಡಿಸಿದವರು ಬಿ.ಎನ್.ರಾವ್ ಎಂಬುವವರು ಎಂದು! ಅಂದರೆ ಆಗಸ್ಟ್ 29, 1947ರಂದು ಕರಡು ಸಮಿತಿ ರಚಿಸಲ್ಪಟ್ಟರೆ ಅದು ರಚಿಸಲ್ಪಟ್ಟ ಒಂದೇ ತಿಂಗಳಲ್ಲಿ ಅಂದರೆ ಅಕ್ಟೋಬರ್ 1947ರಲ್ಲಿ ಅದರ ಸದಸ್ಯರಲ್ಲೋರ್ವರಾದ ಬಿ.ಎನ್.ರಾವ್ರವರು ಪ್ರಥಮ ಕರಡು ರಚಿಸಿದರಂತೆ! ಅವರು ರಚಿಸಿದ ಕರಡನ್ನು ಅಂಬೇಡ್ಕರ್ ನೇತೃತ್ವದ ಸಮಿತಿ ಬರೀ ಪರಿಶೀಲಿಸಿತಂತೆ! ಇದು ಸುಭಾಷ್ ಕಶ್ಯಪ್ರಂತಹ ಬ್ರಾಹ್ಮಣ ಚರಿತ್ರಾಕಾರರ ಅಂಬೋಣ. ಆದರೆ ಅದೇ ಸುಭಾಷ್ ಕಷ್ಯಪ್ ತಮ್ಮOur Constitution”  ಕೃತಿಯ ಅದೇ ಪುಟಗಳಲ್ಲಿ ಅಂಬೇಡ್ಕರರ ಹೇಳಿಕೆಯೊಂದನ್ನು ಉಲ್ಲೇಖಿಸುತ್ತಾರೆ. ಹೇಳಿಕೆಯಲ್ಲಿ ಸ್ವತಃ ಅಂಬೇಡ್ಕರರೇ “1947 ಆಗಸ್ಟ್ರಿಂದ 1949 ಅಕ್ಟೋಬರ್ವರೆಗೆ ಕರಡು ಸಮಿತಿ ಅನೇಕ ಸಭೆಗಳನ್ನು ನಡೆಸಿ ಸಂವಿಧಾನದ ಕರಡಿನ ಅಂತಿಮ ಪ್ರತಿಯನ್ನು 1949 ನವೆಂಬರ್ ತಿಂಗಳಲ್ಲಿ ಸಂವಿಧಾನ ಸಭೆಗೆ ಸಲ್ಲಿಸಿತು" ಎನ್ನುತ್ತಾರೆ. ಹಾಗಿದ್ದರೆ 1949 ನವೆಂಬರ್  ತಿಂಗಳಲ್ಲಿ, ಎರಡು ವರ್ಷಗಳ ಸತತ ಸಮಯದಲ್ಲಿ ಸಂವಿಧಾನ ಸಿದ್ಧಗೊಂಡಿತೆಂದರೆ  ಅದರ ಶ್ರೇಯಸ್ಸು ಸಲ್ಲಬೇಕಾದ್ದು ಯಾರಿಗೆ? ಸಮಿತಿಯ ಅಧ್ಯಕ್ಷರಾದ ಅಂಬೇಡ್ಕರರಿಗೆ. ಅಂದಹಾಗೆ 1947 ಆರಂಭದಲ್ಲಿ ಕೇಳಿಬರುವ ಬಿ.ಎನ್.ರಾವ್ ಎಂಬುವವರ ಹೆಸರು ಸಂವಿಧಾನ ರಚಿಸಲು ತೆಗೆದುಕೊಂಡ ಮುಂದಿನ ಎರಡು ವರ್ಷಗಳಲ್ಲಿ ಅಂದರೆ 1948, 1949ರಲ್ಲಿ ಎಲ್ಲಿಯೂ ಕೇಳಿಬರುವುದಿಲ್ಲ!(ಇತ್ತೀಚೆಗೆ ಹಿಂದುತ್ವವಾದಿಗಳಿಂದ ಕೇಳಿಬರುತ್ತಿರುವುದನ್ನೊರತುಪಡಿಸಿದರೆ!). ಇದಕ್ಕೆ ಪೂರಕವಾಗಿ ಸಂವಿಧಾನ ಸಭೆಯಲ್ಲಿ ಮಾತನಾಡಿರುವ ಟಿ.ಟಿ.ಕೃಷ್ಣಮಾಚಾರಿಯವರು ಹೇಳಿರುವುದನ್ನು ನೋಡಿ  “ಸಂವಿಧಾನದ ಕರಡು ಸಮಿತಿಯಲ್ಲಿದ್ದ ಒಬ್ಬರು ತೀರಿಕೊಂಡರು, ಅವರ ಸ್ಥಾನಕ್ಕೆ ಮರುನೇಮಕ ಆಗಲಿಲ್ಲ. ಒಂದಿಬ್ಬರು ವಿದೇಶದಲ್ಲಿ ನೆಲೆಸಿದ್ದರಿಂದ ಅವರಿಗೆ ಕರಡು ರಚನೆ ಕಾರ್ಯದಲ್ಲಿ ಭಾಗವಹಿಸಲಾಗಲಿಲ್ಲ. ಮಗದೊಬ್ಬರು ಸದಸ್ಯರು ದೆಹಲಿಯಿಂದ ದೂರದಲ್ಲಿದ್ದುದರಿಂದ ಅವರು ಕೂಡ ಅದರಲ್ಲಿ ಭಾಗವಹಿಸಲಿಲ್ಲ. ಅಂತಿಮವಾಗಿ ಸಂವಿಧಾನ ರಚನೆಯ ಪೂರ್ಣ ಜವಾಬ್ದಾರಿ ಅಂಬೇಡ್ಕರರ ಮೇಲೆ ಬಿದ್ದಿತು”. ಕೃಷ್ಣಾಮಾಚಾರಿಯವರ ಹೇಳಿಕೆಯ ಪ್ರಕಾರ ಸುಭಾಷ್ ಕಶ್ಯಪ್ರವರು ಹೇಳಿರುವ ಕರಡು ಸಮಿತಿ ಸದಸ್ಯರಾದ ಬಿ.ಎನ್.ರಾವ್ ಎಲ್ಲಿ ಹೋದರು? ವಿದೇಶಕ್ಕೋ ಅಥವಾ ನೇರ ಸ್ವರ್ಗಕ್ಕೋ? ಅಂಬೇಡ್ಕರರು ಸಂವಿಧಾನ ಶಿಲ್ಪಿ ಅಲ್ಲ ಎಂದು ಹೇಳುವವರು ಇದನ್ನು  ಸ್ಪಷ್ಟಪಡಿಸಬೇಕು.
    
   ಸಂವಿಧಾನ ಅರ್ಪಿತವಾದ ಸಂಧರ್ಭದಲ್ಲಿ ಅಂದರೆ ನವೆಂಬರ್ 26, 1949ರಲ್ಲಿ ಸಭೆಯ ಅದ್ಯಕ್ಷರಾದ ಡಾ.ಬಾಬು ರಾಜೇಂದ್ರಪ್ರಸಾದ್ರವರುಡಾ.ಅಂಬೇಡ್ಕರ್ರವರಿಗೆ ಸಂವಿಧಾನ ರಚಿಸಲು ಪೂರ್ಣ ಸ್ವಾತಂತ್ರ್ಯ ನೀಡಿದ್ದಿದ್ದರೆ, ಅವರು ಖಂಡಿತವಾಗಿಯೂ ತಮ್ಮದೇ ಆದ ಮತ್ತು ಭಿನ್ನವಾದ ಸಂವಿಧಾನವನ್ನು ದೇಶಕ್ಕೆ ನೀಡುತ್ತಿದ್ದರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲಎಂದಿದ್ದಾರೆ. ಅಂದಹಾಗೆ ರಾಜೇಂದ್ರ ಪ್ರಸಾದರ ಹೇಳಿಕೆ ಅರ್ಥೈಸುವುದೇನನ್ನು? ಸಂವಿಧಾನ ರಚಿಸುವ ಪೂರ್ಣ ಹೊಣೆ ಅಂಬೇಡ್ಕರರ ಮೇಲೆ ಬಿದ್ದಿತ್ತು ಆದರೆ ಅವರಿಗೆ ಕೆಲವು ತಡೆಗಳಿದ್ದವು ಎಂದು ತಾನೆ? ಅದೇನೆ ಇರಲಿಅಂಬೇಡ್ಕರ್ ಸಂವಿಧಾನಶಿಲ್ಪಿಎಂದು ಘಂಟಾಘೋಷವಾಗಿ ಹೇಳಲು ಡಾ.ಬಾಬುರಾಜೇಂದ್ರಪ್ರಸಾದ್ ಮತ್ತು ಟಿ.ಟಿ.ಕೃಷ್ಣಾಮಾಚಾರಿಯವರ ಇದಿಷ್ಟು ಹೇಳಿಕೆ ಮಾತ್ರ ಸಾಕು. ಯಾಕೆಂದರೆ ಇವರಿಬ್ಬರು ಸಂವಿಧಾನದ ರಚನೆಯ ಜೊತೆಜೊತೆಯಲ್ಲೆ ಬೆಳೆದವರು. ಅರುಣ್ಶೌರಿ ಮತ್ತು ಸುಭಾಷ್ಕಶ್ಯಪ್ ಹಾಗೆ ಅದನ್ನು ಅದರ ಇತಿಹಾಸವನ್ನುದೂರದಿಂದಹಿಂದುತ್ವದ ದೃಷ್ಟಿಯಿಂದ ಕೆದಕಿದವರಲ್ಲ! ಇನ್ನು ತಮ್ಮ ಮಹತ್ವದ ಕಾರ್ಯದ ಬಗ್ಗೆ ಸ್ವತಃ ಅಂಬೇಡ್ಕರರೇ ಹೇಳಿಕೊಳ್ಳುತ್ತಾಹಿಂದೂಗಳಿಗೆ ವೇದ ಬೇಕಾಗಿತ್ತು ಅದಕ್ಕಾಗಿ ಅವರು ಹಿಂದೂ ಅಲ್ಲದ ವ್ಯಾಸನನ್ನು ಕರೆಯಿಸಿಕೊಂಡರು. ಹಿಂದೂಗಳಿಗೆ ಒಂದು ಮಹಾಕಾವ್ಯ ಬೇಕಾಗಿತ್ತು ಅದಕ್ಕಾಗಿ ಅವರು ಅಸ್ಪøಶ್ಯನಾದ ವಾಲ್ಮೀಕಿಯನ್ನು ಕರೆಯಿಸಿಕೊಂಡರು. ಹಿಂದೂಗಳಿಗೆ ಒಂದು ಸಂವಿಧಾನ ಬೇಕಾಗಿತ್ತು ಅದಕ್ಕಾಗಿ ನನ್ನನ್ನು ಕೆರೆಯಿಸಿಕೊಂಡರು!” ಎಂದಿದ್ದಾರೆ .
    
     ಮುಂದುವರಿದು ಅಂಬೇಡ್ಕರರ ಸಂವಿಧಾನ ರಚನೆಯ ಕಾರ್ಯದ ಬಗ್ಗೆ ಆಕ್ಷೇಪಿಸುವವರು ಹೇಳುವುದು  “ಸಂವಿಧಾನ ಎಂಬುದು ಕತೆಯಲ್ಲ, ಕಾದಂಬರಿಯಲ್ಲ ಅದನ್ನು ಅಂಬೇಡ್ಕರರೊಬ್ಬರೇ ಬರೆದಿದ್ದಾರೆ ಎನ್ನುವುದು ಎಷ್ಟು ಸರಿ?” ಎಂದು. ನಿಜ, ಸಂವಿಧಾನ ಕತೆಯಲ್ಲ, ಕಾದಂಬರಿಯೂ ಅಲ್ಲ. ಹಾಗೆಯೇ ಸ್ವಾತಂತ್ರ್ಯ ಎಂಬುದೂ ಕೂಡ ಕಡ್ಲೆಪುರಿಯಲ್ಲ! ಏಕೆಂದರೆ ಗಾಂಧೀಜಿಯವರನ್ನು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಎಂದು ಪ್ರಶ್ನಾತೀತವಾಗಿ ಒಪ್ಪಿಕೊಳ್ಳಲಾಗಿದೆ. ಇದನ್ನು ಯಾರೂ ಗಾಂಧೀಜಿ ಸ್ವಾತಂತ್ರ್ಯಾನ ಯಾವಾಗ, ಯಾವ ಟೈಮಲ್ಲಿ, ಯಾರ ಕೈಗೆ ತಂದುಕೊಟ್ಟರು ಎಂದು ಪ್ರಶ್ನಿಸುವುದಿಲ್ಲ! ಅಂಬೇಡ್ಕರ್ರವರು ರಚಿಸಿದ ಸಂವಿಧಾನಕ್ಕೆ ಸಾಕ್ಷಿಯಾಗಿ ಸಂವಿಧಾನದ ಮೂಲ ಪ್ರತಿ ಇದೆ. ಅದರ ರಚನೆಯ ಹೊಣೆಹೊತ್ತ ಕರಡು ಸಮಿತಿಯ ಅದ್ಯಕ್ಷರು ಅವರು ಎಂಬುದಕ್ಕೆ ದಾಖಲೆ ಇದೆ. ಆದರೆ ಗಾಂಧೀಜಿ ಸ್ವಾತಂತ್ರ್ಯ ತಂದುಕೊಟ್ಟರೆಂಬುದಕ್ಕೆ ಏನು ದಾಖಲೆ ಇದೆ? ಹಾಗೆ ಹೇಳುವುದಾದರೆ  ದೇಶಕ್ಕೆ ಸ್ವಾತಂತ್ರ್ಯ ಬಂದ ದಿನ ಗಾಂಧೀಜಿ ದೇಶದ ರಾಜಧಾನಿ ದೆಹಲಿಯಲ್ಲಿ ಇರಲೇ ಇಲ್ಲ. ದೂರದ ಕಲ್ಕತ್ತಾದಲ್ಲಿ ಇದ್ದರು! ಹಾಗಿದ್ದರೂ ದೇಶ ಅವರನ್ನು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಎಂದು ಒಪ್ಪಿಕೊಂಡಿಲ್ಲವೆ? ಗಾಂಧೀಜಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಎಂಬುದನ್ನು ಒಪ್ಪಿಕೊಳ್ಳಬಹುದಾದರೆ ಅಂಬೇಡ್ಕರರನ್ನುಸಂವಿಧಾನ ಶಿಲ್ಪಿಎಂದು ಒಪ್ಪಿಕೊಳ್ಳಲು ಏನಡ್ಡಿ? ಯಾಕೆ, ಅಂಬೇಡ್ಕರರು ಅಸ್ಪøಶ್ಯರು ಎಂಬ ಕಾರಣಕ್ಕೆ ಅವರಿಗೆ ಅಂತಹ ಗೌರವವನ್ನು ನೀಡಲು ದೇಶದ ಪಟ್ಟಭದ್ರ ಹಿತಾಸಕ್ತಿಗಳಿಗೆ ಮನಸ್ಸಾಗುತ್ತಿಲ್ಲವೆ? ಸತ್ಯ ಹೇಳಿದರೆ ನಾವೇನು ಬೇಜಾರು ಮಾಡಿಕೊಳ್ಳುವುದಿಲ್ಲ. ಬೇಕಿದ್ದರೆ ನೇರವಾಗಿ ಹೇಳಲಿ, “ಅಂಬೇಡ್ಕರ್ ಅಸ್ಪøಶ್ಯರು. ಆದ್ದರಿಂದ ಅವರು ಸಂವಿಧಾನ ಶಿಲ್ಪಿಯಲ್ಲಎಂದು.

    ಅದೇನೆ ಇರಲಿ ಸೂರ್ಯ, ಚಂದ್ರ ಇರುವವರೆಗೂ, ಅವರಿಬ್ಬರೂ ಥಳಥಳ ಎಂದು ಹೊಳೆಯುವವರೆಗೂ ಅಂಬೇಡ್ಕರರು   “ಸಂವಿಧಾನ ಶಿಲ್ಪಿಎಂಬುದು ಸೂರ್ಯ ಪ್ರಕಾಶದಾಣೆಗೂ ಸತ್ಯ. ಯಾರಾದರೂ ಸೂರ್ಯನಿಗೂ ಟಾರ್ಚು ಹಿಡಿಯುವ  ಕೆಲಸ ಮಾಡಿದರೆ ಅದಕ್ಕೆ ಏನೂ ಮಾಡಲಿಕ್ಕಾಗುವುದಿಲ್ಲ. ಹೆಚ್ಚೆಂದರೆ ಸೂರ್ಯ ಪ್ರಕಾಶ ಮತ್ತು ಶಾಖಕ್ಕೆ ಹಾಗೆ ಟಾರ್ಚು ಹಿಡಿಯುವವರು ಸುಟ್ಟು ಭಸ್ಮವಾಗುತ್ತಾರಷ್ಟೆ.


No comments:

Post a Comment