ಬಾಬಾ ರಾಮ್ ದೇವ್ ಬಂಧನವಾಗುವುದಿಲ್ಲ, ಯಾಕೆಂದರೆ...
ಬಾಬಾ ರಾಮ್ ದೇವ್ ಬಂಧನವಾಗುವುದಿಲ್ಲ. ಯಾಕೆಂದರೆ ಬಂಧಿಸುವ ಜಾಗದಲ್ಲಿ ದಲಿತರಿಲ್ಲ. ಅರ್ಥಾತ್ ರಾಜ್ಯಾಧಿಕಾರದ ಕೀಲಿ ಕೈನ ಜಾಗದಲ್ಲಿ ದಲಿತರಿಲ್ಲ. ಅಂಬೇಡ್ಕರ್ ಆಶಿಸಿದ್ದರು “ನನ್ನ ಜನ ಸ್ವಂತ ಶಕ್ತಿ(ರಾಜಕೀಯ ಪಕ್ಷ)ಯ ಆಧಾರದ ಮೇಲೆ ಈ ದೇಶದ ರಾಜ್ಯಾಧಿಕಾರ ಹಿಡಿಯಬೇಕು. ಆಗ ಮಾತ್ರ ನಮ್ಮ ವಿಮೋಚನೆ ಸಾಧ್ಯ” ಎಂದು. ಆದರೆ ದಲಿತರು ಬೀದಿಗಳಲ್ಲಿ ನಿಂತರು, ಧಿಕ್ಕಾರ ಎಂದು ಕೂಗಿದರು, ಗುಂಡೇಟು ತಿಂದು, ಬೆವರು ಸುರಿಸಿ ನೊಂದು, ಹೆಂಡ-ಬಾಡು ದುಡ್ಡಿಗೆ ಓಟು ಮಾರುವುದ ಕಲಿತರು. ಸಾಮಾನ್ಯ ದಲಿತರು ಹೀಗೆ ಕಲಿತರೆ ಸುಶಿಕ್ಷಿತ ಮಂಚೂಣಿ ದಲಿತ ಚಳುವಳಿಗಳ ನೇತಾರರು ಚುನಾವಣೆ ಸಂದರ್ಭದಲ್ಲಿ ವಿವಿಧ ಪಕ್ಷಗಳನ್ನು ಬೆಂಬಲಿಸಲು “ನಾ ಮುಂದು... ತಾ ಮುಂದು...” ಎಂದು ನುಗ್ಗಿದರು... ಘನತೆವೆತ್ತ ದಲಿತ ಸಾಹಿತಿಗಳೆನಿಸಿಕೊಂಡವರೂ ಇಂತಹ ನುಗ್ಗಾಟದಲ್ಲಿ, ರಾಜಕೀಯ ಪಕ್ಷಗಳನ್ನು ಬೆಂಬಲಿಸುವ ತಳ್ಳಾಟದಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆಂದರೆ... ಹ್ಞಾಂ, ಹಾಗೆ ನುಗ್ಗಾಡಿದವರಿಗೆ ಒಂದೆರಡು ಎಂಎಲ್‍ಸಿ, ಪ್ರಾಧಿಕಾರಗಳ ಅಧ್ಯಕ್ಷಗಿರಿಗಳೂ, ಪದ್ಮ, ರಾಜ್ಯೋತ್ಸವದಂತಹ ಪ್ರಶಸ್ತಿ ಫಲಕಗಳೂ, ನಿಗಮ ಮಂಡಲಿಗಳ ಅಧ್ಯಕ್ಷ ಸ್ಥಾನಗಳೂ, ವಿವಿಗಳ ಗೌರವ ಡಾಕ್ಟರೇಟ್‍ಗಳೂ ಸಿಗುತ್ತವೆಂದರೆ... ಇನ್ನು ಸಾಮಾನ್ಯ ದಲಿತರಿಗೆ? ಅದೇ ಸರ್ಕಾರ ನೀಡುವ ‘ಅನ್ನ ಭಾಗ್ಯ’ದ ಅಕ್ಕಿ, ಶೌಚಾಲಯ- ಚರಂಡಿ ಶುಚಿಗೊಳಿಸುವ ‘ಶ್ರೇಷ್ಠ’ ಕೆಲಸಗಳು... ಸಂಜೆ ‘ನೆಮ್ಮದಿಯಾಗಿ’ ನಿದ್ದೆ ಮಾಡಲಿಕ್ಕೆ ಕಳಪೆ ದರ್ಜೆಯ ಮದ್ಯದ ಬಾಟಲಿಗಳೂ... ‘ಬದುಕಲಿಕ್ಕೆ’ ಏನೇನು ಬೇಕೋ ಎಲ್ಲವೂ... ರಾಜ್ಯಾಧಿಕಾರವೊಂದನ್ನು ಬಿಟ್ಟು!
ರಾಜ್ಯಾಧಿಕಾರದಲ್ಲಿ ‘ಧಣಿಗಳು’ ಆಳುವವರಾಗಿರುತ್ತಾರೆ. ಬಾಬಾ ರಾಮ್‍ದೇವ್‍ರನ್ನೇ ತೆಗೆದುಕೊಳ್ಳುವುದಾದರೆ ರಾಮಕೃಷ್ಣ ಯಾದವ್ ಎಂಬುದು ಆತನ ಮೂಲ ಹೆಸರು. ಬಾಬಾ ರಾಮ್‍ದೇವ್ ಅಲಿಯಾಸ್ ರಾಮಕೃಷ್ಣ ಯಾದವ್ ಹೇಳಿಕೆ ನೀಡಿದ ಅದೇ ಲಕ್ನೋದಲ್ಲಿ ಹಾಲಿ ಇರುವುದು ಸ್ವಜಾತಿ ಅಖಿಲೇಶ್ ಯಾದವ್‍ನ ಸರ್ಕಾರ. ಅಂದಹಾಗೆ ಅಖಿಲೇಶ್‍ನ ಬದಲು ಅದೇ ಜಾಗದಲ್ಲಿ ಮಾಯಾವತಿ ಇದ್ದಿದ್ದರೆ? (ಉತ್ತರ ಪ್ರದೇಶದ ಕುಖ್ಯಾತ ಡಾನ್, ದೌರ್ಜನ್ಯಕೋರ ರಾಜಾ ಭಯ್ಯಾನಿಗಾದ ಗತಿ ರಾಮ್‍ದೇವ್‍ಗೂ ಆಗುತ್ತಿತ್ತು!) ದುರಂತವೆಂದರೆ ಮಾಯಾವತಿಯವರು ಈಗ ಅಧಿಕಾರದ ಆ ಸ್ಥಾನದಲ್ಲಿ ಇಲ್ಲ. ಯಾಕೆಂದರೆ ‘ಮಾರಿಕೊಳ್ಳುವವರು’ ಬಹುಸಂಖ್ಯಾತರಿರುವಾಗ “ಅಂಬೇಡ್ಕರ್ ಫೋಟೋ ಇಟ್ಟು ರಾಜಕೀಯ ಮಾಡುವ ಮಾಯಾವತಿಯವರಿಗಾದರೂ ಬಲ ಎಲ್ಲಿ ಬರುತ್ತದೆ?”. ಈ ಕಾರಣಕ್ಕೆ ಬಾಬಾ ರಾಮ್‍ದೇವ್ ಬಂಧನವಾಗುವುದಿಲ್ಲ. ಯಾಕೆಂದರೆ...
-ರಘೋತ್ತಮ ಹೊ.ಬ

No comments:
Post a Comment