ಎದೆಗೆ ಬಿದ್ದ ಗಾಂಧಿ!
-ರಘೋತ್ತಮ ಹೊ.ಬ
“ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಶ್ರೀ ಗಾಂಧಿಯವರು ಅಸ್ಪøಶ್ಯರ ಪ್ರಮುಖ ಶತೃ ಎಂಬುದು ಅರ್ಥವಾಗಿಹೋಯಿತು. ಅಸ್ಪøಶ್ಯರ ಸಮಸ್ಯೆಗಳ ಬಗ್ಗೆ ಶ್ರೀ ಗಾಂಧಿಯವರು ಅದ್ಯಾವ ಪರಿ ಆಸಕ್ತಿ ತೋರಿದರೆಂದರೆ...ಅದೆಷ್ಟು ಶಕ್ತಿ ವ್ಯಯಿಸಿದರೆಂದರೆ... ಬಹುಶಃ ಅಸ್ಪøಶ್ಯರ ಬೇಡಿಕೆಗಳನ್ನು ವಿರೋಧಿಸುವ ಬಹುಮುಖ್ಯ ಉದ್ದೇಶ ಇಟ್ಟುಕೊಂಡೇ ಶ್ರೀ ಗಾಂಧಿಯವರು ದುಂಡುಮೇಜಿನ ಸಭೆಗೆ ಬಂದರೆಂದು ಹೇಳಿದರೆ ಅದು ತಪ್ಪೆನಿಸುವುದಿಲ್ಲ!” ಇವು ದುಂಡುಮೇಜಿನ ಸಭೆಯಲ್ಲಿ ಗಾಂಧೀಜಿಯವರ ನಡವಳಿಕೆಯ ಬಗ್ಗೆ ಅಂಬೇಡ್ಕರರು ತಮ್ಮ “ತಿhಚಿಣ ಛಿoಟಿgಡಿess ಚಿಟಿಜ ಉಚಿಟಿಜhi hಚಿve ಜoಟಿe ಣo uಟಿಣouಛಿhಚಿbಟes?” (ಕಾಂಗ್ರೆಸ್ ಮತ್ತು ಗಾಂಧಿ ಅಸ್ಪøಶ್ಯರಿಗೆ ಮಾಡಿದ್ದೇನು?) ಎಂಬ ಕೃತಿಯಲ್ಲಿ (ಪುಟ,70) ಹೇಳಿರುವ ಮಾತುಗಳು. ಅಂದಹಾಗೆ ಇತ್ತೀಚೆಗೆ ಪ್ರಕಟಗೊಂಡಿರುವ “ಎದೆಗೆ ಬಿದ್ದ ಅಕ್ಷರ” ಎಂಬ ತಮ್ಮ ಕೃತಿಯಲ್ಲಿ ದೇವನೂರರೂ ಕೂಡ ಗಾಂಧೀಜಿಯವರ ಬಗ್ಗೆ ಕೆಲವು ಮಾತುಗಳನ್ನು ಹೇಳಿದ್ದಾರೆ ಅಥವಾ ಬರೆದಿದ್ದಾರೆ. ಅವುಗಳೆಂದರೆ “ಗಾಂಧಿಯವರ ನಡಿಗೆಯ ಪ್ರತಿ ಹೆಜ್ಜೆಯೂ ದೇವರನ್ನು ಸಾಕ್ಷಾತ್ಕರಿಸಿಕೊಳ್ಳುವವನೊಬ್ಬ ಮಾಡುವ ಪ್ರಯತ್ನದಂತೆ ಕಾಣಿಸುತ್ತದೆ. ಅವರು ಮಾಡಿದ ಎಲ್ಲಾ ಕೆಲಸಗಳ ಆಳದ ತುಡಿತವು ತನ್ನ ಬಿಡುಗಡೆಗಾಗೇ, ತನ್ನ ಮೋಕ್ಷಕ್ಕಾಗೇ ಎಂಬಂತೆ ಇವೆ!” (ಎದೆಗೆ ಬಿದ್ದ ಅಕ್ಷರ; ಪುಟ,294). ಖಂಡಿತ, ದೇವನೂರ ಮಹಾದೇವರವರ ಈ ಕೃತಿ ಅಂಬೇಡ್ಕರರ ಕೃತಿಗೆ ಸಮ ಎಂದು ಇಂತಹ ಹೋಲಿಕೆ ಮಾಡುತ್ತಿಲ್ಲ. ಆದರೆ ಗಾಂಧಿಯವರ ಬಗೆಗಿನ ದೇವನೂರರ ನಿಲುವು? ಅಂಬೇಡ್ಕರ್ ಗಾಂಧಿಯನ್ನು ‘ಅಸ್ಪøಶ್ಯರ ಶತೃ’ ಎಂಬಂತಹ ಮಾತನ್ನಾಡಿದರೆ ದೇವನೂರರು ಅವರನ್ನು ‘ದೇವರನ್ನು ಸಾಕ್ಷಾತ್ಕರಿಸಿಕೊಳ್ಳುವವನೊಬ್ಬ’ ಎನ್ನುವುದು? ಈ ನಿಟ್ಟಿನಲಿ ಕೇಳುವುದಾದರೆ ಪೂನಾ ಒಪ್ಪಂದದ ಸಂದರ್ಭದಲ್ಲಿ ಅಸ್ಪøಶ್ಯರ ನ್ಯಾಯಬದ್ಧ ಹಕ್ಕುಗಳ ವಿರುದ್ಧ ಉಪವಾಸ ಕುಳಿತ ಗಾಂಧಿಯವರ ನಿಲುವು ದೇವನೂರರು ಹೇಳುವ ಹಾಗೆ ಗಾಂಧೀಜಿಯವರ “ದೇವರನ್ನು ಸಾಕ್ಷಾತ್ಕರಿಸಿಕೊಳ್ಳುವ” ಕ್ರಿಯೆಯಾಗಿತ್ತೆ? ಈ ನಿಟ್ಟಿನಲಿ ಅಂಬೇಡ್ಕರರ ನಿಲುವೇ ತಪ್ಪೆ? ದೇವನೂರರು ಉತ್ತರಿಸಿದರೆ ಒಳಿತು!
ಮುಂದುವರಿದು ದೇವನೂರರು ತಮ್ಮ ಕೃತಿಯಲ್ಲಿ “ಗಾಂಧಿಯವರು ಭೂಮಿಯಂತೆ ಒಂದು ಕ್ಷಣವು ನಿಲ್ಲದ ಚಲಿಸುವ ಚೇತನವು” ಎಂದಿದ್ದಾರೆ(ಪು.290). ಆದರೆ ಅಂಬೇಡ್ಕರ್ ಗಾಂಧೀಜಿಯವರನ್ನು “ಒಬ್ಬ ಯಶಸ್ವಿ ನಯವಂಚಕ” ಎನ್ನುತ್ತಾರೆ(ತಿhಚಿಣ ಛಿoಟಿgಡಿess ಚಿಟಿಜ ಉಚಿಟಿಜhi hಚಿve ಜoಟಿe ಣo uಟಿಣouಛಿhಚಿbಟes?, ಪು.432). ಹಾಗಿದ್ದರೆ ಯಾರು ಸರಿ? ದೇವನೂರರೋ ಅಥವಾ ಅಂಬೇಡ್ಕರರೋ? ಎಂಬ ಪ್ರಶ್ನೆ ಈ ಸಂದರ್ಭದಲ್ಲಿ ಖಂಡಿತ ಕೇಳಬೇಕಾಗುತ್ತದೆ. ಈ ನಿಟ್ಟಿನಲಿ ಇಂತಹ ನೂರು ಉದಾಹರಣೆ ಕೊಡಬಹುದು. ಕೊಡುತ್ತಲೇ ಹೋಗಬಹುದು ದೇವನೂರರ ಆ ಕೃತಿಯಲ್ಲಿ. ಅಂದಹಾಗೆ ಒಂದೆಡೆ ದೇವನೂರರು “ಸಾಮಾಜಿಕವಾಗಿ ಕೆಳಸ್ತರದತ್ತ ಗಾಂಧಿ ಚಲಿಸುವಂತಾಗಿ ಗಾಂಧಿ ಮಹಾತ್ಮನಾಗುವುದರಲ್ಲಿ ಅಂಬೇಡ್ಕರರ ಅದಮ್ಯ ಚೇತನವೂ ಕಾರಣ” ಎನ್ನುತ್ತಾರೆ! (ಪುಟ,289). ಇದರರ್ಥ ಹರಿಜನ ಸೇವಕ ಸಂಘ, ಹರಿಜನ ಪತ್ರಿಕೆ, ದಲಿತರನ್ನು ಹರಿಜನರೆಂದು ಕರೆದದ್ದು, ಇತ್ಯಾದಿಗಳು ಗಾಂಧೀಜಿಯವರ ಮಹಾತ್ಮನಾಗುವ ಪ್ರಕ್ರಿಯೆಯಾಗಿತ್ತು ಅಥವಾ ಸಾಮಾಜಿವಾಗಿ ಅವರು ಕೆಳಸ್ತರದತ್ತ ಚಲಿಸುವಂತಹದ್ದಾಗಿತ್ತು ಎಂದರ್ಥವೆ? ಖಂಡಿತ, ದೇವನೂರರೇ ಆಗಲಿ ಅಥವಾ ಮತ್ಯಾರೇ ಆಗಲಿ ಇದನ್ನು ಗಾಂಧೀಜಿಯವರ ಮಹಾತ್ಮನಾಗುವ ಪ್ರಕ್ರಿಯೆ ಅಥವಾ ‘ಕೆಳಸ್ತರದ ನಡೆ’ ಎಂದರೆ ಅದು ವಂಚನೆಯ ಮಾತಾಗುತ್ತದೆ. ಯಾಕೆಂದರೆ “ಹರಿಜನ ಸೇವಕ ಸಂಘ” ಅಥವಾ ಅದರ ಮೂಲ ರೂಪವಾದ “ಚಿಟಿಣi uಟಿಣouಛಿhಚಿbiಟiಣಥಿ ಟeಚಿgue” ಪ್ರಾರಂಭವಾದದ್ದು ಸೆಪ್ಟೆಂಬರ್ 30, 1932ರಲ್ಲಿ. ಅಂದರೆ ಸೆಪ್ಟೆಂಬರ್ 24, 1932ರ ಪೂನಾ ಒಪ್ಪಂದದ ನಂತರ!
ಯಾವ ದುಂಡುಮೇಜಿನ ಸಭೆಗಳಲ್ಲಿ ಗಾಂಧೀಜಿ ದಲಿತರ ವಿರುದ್ಧ ಉಗ್ರ ನಿಲುವು ತಳೆದರೋ, ಅವರ ನ್ಯಾಯಬದ್ಧ ಹಕ್ಕುಗಳ ವಿರುದ್ಧ ಅಮರಣಾಂತ ಉಪವಾಸ ಕುಳಿತರೊ ಅಂತಹ ಪಾಪಗಳನ್ನು ತೊಳೆದುಕೊಳ್ಳಲಲ್ಲ ಅವರು ‘ಹರಿಜನ’ ನಾಟಕ ಅಥವಾ ದೇವನೂರರಂತಹವರು ಹೇಳುವ ಹಾಗೆ ‘ಕೆಳಸ್ತರದ ಚಲನೆ’ ಪ್ರಾರಂಭಿಸಿದ್ದು. ಸತ್ಯವೆಂದರೆ ಪೂನಾ ಒಪ್ಪಂದದ ನಂತರ ಎಲ್ಲಿ ದಲಿತರು ಕಾಂಗ್ರೆಸ್ ಕೈ ಬಿಡುವರೋ, ಅಂಬೇಡ್ಕರರ ಹಿಂದೆ ಚಲಿಸುವರೋ ಎಂದು ಹೆದರಿದ ಗಾಂಧೀಜಿ 1935ರ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯ ಭಾಗವಾಗಿ, ಕಾಂಗ್ರೆಸ್‍ನ ಓಟ್‍ಬ್ಯಾಂಕ್ ತಂತ್ರವಾಗಿಯಷ್ಟೆ ಇಂತಹ ‘ಹರಿಜನ’ ನಾಟಕ ಪ್ರಾರಂಭಿಸಿದ್ದು! ಸಾಕ್ಷಿ ಬೇಕಿದ್ದರೆ ಆಸಕ್ತರು ಅಂಬೇಡ್ಕರರ ಅದೇ ‘ತಿhಚಿಣ ಛಿoಟಿgಡಿess ಚಿಟಿಜ ಉಚಿಟಿಜhi hಚಿve ಜoಟಿe ಣo uಟಿಣouಛಿhಚಿbಟes?’ ಕೃತಿಯ ಪುಟ 239,240ನ್ನು ಗಮನಿಸಬಹುದು. ಅದರಲ್ಲಿ ಅಂಬೇಡ್ಕರರು ಹೇಗೆ ಗಾಂಧೀಜಿಯವರ ಅನುಯಾಯಿಗಳು “ಪೂನಾ ಒಪ್ಪಂದ ಗಾಂಧಿ ಮಾಡಿದ್ದು, ಅದರ ಮೂಲಕ ಅವರು ಅಸ್ಪøಶ್ಯರಿಗೆ ಹಕ್ಕುಗಳನ್ನು ತಂದು ಕೊಡಲು ಹೋರಾಡಿದರು”, ಎಂದು ಸಾರ್ವಜನಿಕವಾಗಿ ಹೇಗೆ ಸುಳ್ಳು ಹೇಳಲು ಪ್ರಾರಂಭಿಸಿದರು, ತನ್ಮೂಲಕ ಅಸ್ಪøಶ್ಯರನ್ನು ತಮ್ಮತ್ತ ಸೆಳೆಯಲು ಯತ್ನಿಸಿದರು ಎಂಬುದನ್ನು ಬಹಳ ಸೂಚ್ಯವಾಗಿ ವಿವರಿಸಿದ್ದಾರೆ. ಹೀಗಿದ್ದರೂ ಗಾಂಧೀಜಿಯವರ “ಹರಿಜನ ಡ್ರಾಮಾ” ದೇವನೂರರವರಂಥವರಿಗೆ ಗಾಂಧೀಜಿಯವರ ಕೇಳಸ್ತರದ ನಡೆಯ ಹಾಗೆ ಕಾಣಿಸುತ್ತದೆ! ಒಟ್ಟಾರೆ ಹೇಳುವುದಾದರೆ ಯಾವ ಪೂನಾ ಒಪ್ಪಂದದ ಬಗ್ಗೆ ಗಾಂಧೀಜಿ ಅನುಯಾಯಿಗಳು ಆ ಕಾಲದಲ್ಲಿ ಸುಳ್ಳು ಹೇಳಲು ಪ್ರಾರಂಭಿಸಿದರೋ ಅಂತಹ ಆ ಕಾಲದ ಸುಳ್ಳಿನ ಪ್ರಚಾರಕ್ಕೆ ದೇವನೂರರಂತಹ ಈ ಕಾಲದ ಮಹತ್ವದ ದಲಿತ ಲೇಖಕರೂ ಬಲಿಯಾಗುತ್ತಿದ್ದಾರಲ್ಲ ಅಥವಾ ಸುಳ್ಳನ್ನು ಅರ್ಥಮಾಡಿಕೊಳ್ಳುವಲ್ಲಿ ಸೋಲುತ್ತಿದ್ದಾರಲ್ಲ ಎಂಬುದು.
ಅದಿರಲಿ, ತಮ್ಮ ಕೃತಿಯಲ್ಲಿ ದೇವನೂರರು ಒಂದೆಡೆ ರಿಚರ್ಡ್ ಅಟೆನ್‍ಬರೋನ “ಗಾಂಧಿ” ಚಿತ್ರದ ಬಗ್ಗೆ ಲೇಖನ ಬರೆಯುತ್ತಾರೆ. ಈ ನಿಟ್ಟಿನಲಿ ಹೇಳುವುದಾದರೆ “ಗಾಂಧಿ” ಚಿತ್ರದಷ್ಟೆ ಅದ್ಭುತವಾಗಿರುವ ಜಬ್ಬಾರ್‍ಪಟೇಲ್ ನಿರ್ದೇಶನದ ಮಮ್ಮೂಟಿ ಅಭಿನಯದ “ಬಾಬಾಸಾಹೇಬ್ ಅಂಬೇಡ್ಕರ್” ಎಂಬ ಚಿತ್ರದ ಬಗ್ಗೆಯೂ ದೇವನೂರರು ವಿಮರ್ಶೆ ಬರೆಯಬಹುದಿತ್ತು! ಆದರೆ ಅವರು ಅಂತಹ ಪ್ರಯತ್ನಕ್ಕೆ ಕೈ ಹಾಕಿಲ್ಲ! ಕಾರಣ? ಅಂದಹಾಗೆ “ಎದೆಗೆ ಬಿದ್ದ ಅಕ್ಷರ”ದ ಒಂದು ಮಹಾನ್ ಸುಳ್ಳನ್ನು ಹೇಳಲೇಬೇಕು. ಅದೆಂದರೆ “ಹಿಂದೂ ಧರ್ಮ ಎಂಬ ಮನೆಯೊಳಗೆ ಭಿನ್ನಭಾವ, ಜಾತಿತಾರತಮ್ಯದ ಕಂಬಗಳನ್ನು ಒಳಗೊಳಗೆ ಕುಯ್ಯುವವನಂತೆ ಗಾಂಧಿ ಕಾಣಿಸುತ್ತಾರೆ” ಎಂಬ ದೇವನೂರರ ಹೇಳಿಕೆ! ಬಹುಶಃ ಇದು ಶುದ್ಧ ಸುಳ್ಳು ಎಂದು ಹೇಳಲೇಬೇಕು. ಯಾಕೆಂದರೆ ತಮ್ಮ ಅದೇ “ತಿhಚಿಣ ಛಿoಟಿgಡಿess ಚಿಟಿಜ ಉಚಿಟಿಜhi hಚಿve ಜoಟಿe ಣo uಟಿಣouಛಿhಚಿbಟes?” ಕೃತಿಯ 275ನೇ ಪುಟದಲ್ಲಿ ಅಂಬೇಡ್ಕರ್‍ರವರು ಗಾಂಧೀಜಿಯವರು 1921-22ರಲ್ಲಿ ಗುಜರಾತಿನ ‘ನವಜೀವನ’ ಎಂಬ ಪತ್ರಿಕೆಯಲ್ಲಿ ಬರೆದಿದ್ದ ಲೇಖನವೊಂದನ್ನು ಉದ್ಧರಿಸಿದ್ದಾರೆ. ಗಾಂಧೀಜಿಯವರ ಆ ಲೇಖನದ ಕೆಲ ಅಂಶಗಳು ಹೀಗಿವೆ.
“1.ಹಿಂದೂಧರ್ಮ ಜಾತಿ ಪದ್ಧತಿಯ ಆಧಾರದ ಮೇಲೆ ಸ್ಥಾಪಿತವಾಗಿರುವುದರಿಂದ ಅದು ಸಧೃಡವಾಗಿ ನಿಂತಿದೆ ಎಂದು ನಾನು ನಂಬುತ್ತೇನೆ.
2.ಸ್ವರಾಜ್ಯದ ಬೀಜಗಳನ್ನು ನಾವು ಜಾತಿಪದ್ಧತಿಯಲ್ಲಿ ಕಾಣಬಹುದು.
3.ಜಾತಿಪದ್ಧತಿಯನ್ನು ಸೃಷ್ಟಿಸುವ ಸಾಮಥ್ರ್ಯ ಯಾವ ಸಮುದಾಯಕ್ಕಿದೆಯೋ ಆ ಸಮುದಾಯಕ್ಕೆ ಅದ್ಭುತ ಸಂಘಟನಾ ಸಾಮಥ್ರ್ಯವಿರುತ್ತದೆ.
4.ಪ್ರಾಥಮಿಕ ಶಿಕ್ಷಣ ಪಸರಿಸಲು ಜಾತಿ ಒಂದು ಪ್ರಮುಖ ಸಾಧನ!
5.ರಾಷ್ಟ್ರೀಯ ಐಕ್ಯತೆ ಸಾಧಿಸಲು ಅಂತರ್ಜಾತಿ ಭೊಜನ, ಅಂತರ್ಜಾತಿ ವಿವಾಹಗಳ ಅಗತ್ಯವಿಲ್ಲ ಎಂಬುದನ್ನು ನಾನು ಒಪ್ಪತ್ತೇನೆ.
6.ಸಮಾಜದ ನಿಯಂತ್ರಣಕ್ಕೆ ಮತ್ತೊಂದು ಹೆಸರೇ ಜಾತಿ!
7.ಜಾತಿ ಪದ್ಧತಿ ಬಿಡುವುದೆಂದರೆ ಹಿಂದೂಗಳು ವಂಶಪಾರಂಪರ್ಯ ಉದ್ಯೋಗವನ್ನು ಕಳೆದುಕೊಳ್ಳುವುದೆಂದರ್ಥ.
8.ಜಾತಿ ಪದ್ಧತಿ ಎಂಬುದು ಸಮಾಜವೊಂದರ ಸ್ವಾಭಾವಿಕ ಶ್ರೇಣೀಕರಣವಾಗಿದೆ.
ಜಾತಿಯ ಬಗ್ಗೆ ಇವು ನನ್ನ ನಿಲುವುಗಳಾಗಿದ್ದು ಅದನ್ನು(ಜಾತಿಪದ್ಧತಿ) ನಾಶಪಡಿಸಲು ಯತ್ನಿಸುವ ಯಾರದೇ ಪ್ರಯತ್ನಕ್ಕೂ ನನ್ನ ವಿರೋಧವಿದೆ!”
ಜಾತಿಪದ್ಧತಿಯ ಬಗ್ಗೆ ಗಾಂಧೀಜಿಯವರ ಶ್ರೇಷ್ಠ ನಿಲುವುಗಳಿವು! ಅಂದಹಾಗೆ ದೇವನೂರರಿಗೆ ಅದ್ಯಾವ ಆಧಾರದ ಮೇಲೆ ಗಾಂಧೀಜಿಯವರು “ಜಾತಿಪದ್ಧತಿಯನ್ನು ಒಳಗೊಳಗೆ ಕುಯ್ಯುವವನಂತೆ” ಕಂಡರು? ಮುಂದುವರಿದು ಗಾಧೀಜಿಯವರು 1925ರಲ್ಲಿ ಗುಜರಾತಿ ಭಾಷೆಯಲ್ಲಿ “ವರ್ಣವ್ಯವಸ್ಥಾ” ಎಂಬ ಮನುಪ್ರಣೀತ ವರ್ಣಾಶ್ರಮವನ್ನು ಬೆಂಬಲಿಸುವ ಕೃತಿ ಬರೆದರು. ಆ ಕೃತಿಯಲ್ಲೂ ಅಷ್ಟೆ ಗಾಂಧೀಜಿಯವರು “ಹುಟ್ಟಿನ ಆಧಾರದ ಮೇಲೆ ವರ್ಣ ಸೃಷ್ಟಿಯಾಗಿದೆ. ವ್ಯಕ್ತಿಯೋರ್ವನ ಉದ್ಯೋಗದ ಆಧಾರದ ಮೇಲೆ ವರ್ಣ ಅವಲಂಬಿತವಾಗಿದೆ. ವರ್ಣದ ಉದ್ದೇಶ ವರ್ಗ ಹೋರಾಟ ತಪ್ಪಿಸುವುದು, ಪರಸ್ಪರ ಸ್ಪರ್ಧೆ ತಪ್ಪಿಸುವುದು! ವರ್ಣವೆಂದರೆ ಹುಟ್ಟುವುದಕ್ಕೂ ಮೊದಲೇ ವ್ಯಕ್ತಿಯೋರ್ವನ ಉದ್ಯೋಗದ ನಿರ್ಧಾರ”. ಹೀಗೆ ಮನುಸ್ಮøತಿಯ ವಿಚಾರಗಳನ್ನು ಬೆಂಬಲಿಸುವ ನಿಲುವುಗಳನ್ನು ವ್ಯಕ್ತಪಡಿಸುತ್ತಾರೆ. ಅಂದಹಾಗೆ ಇವೆಲ್ಲಾ ಗಾಂಧೀಜಿಯವರ ಹಿಂದೂ ಧರ್ಮ ಎಂಬ ಮನೆಯೊಳಗೆ ತಾರತಮ್ಯ ಎಂಬ ಕಂಬವನ್ನು ಕುಯ್ಯುವ ಕೃತ್ಯದ ಮಾತುಗಳೇ ಅಥವಾ ಬರಹಗಳೇ? ದೇವನೂರರು ಉತ್ತರಿಸಿದರೆ ಒಳಿತು!
ಅಂದಹಾಗೆ “ಗಾಂಧಿ ಸಾಹಿತ್ಯವನ್ನು ದಲಿತನ ಒಡಲಿಗೆ, ಹಿತಾಸಕ್ತಿಗೆ ಎಷ್ಟು ಒಗ್ಗುತ್ತದೋ ಅಷ್ಟನ್ನು ಮಾತ್ರ ಸಂಪಾದಿಸಿ ಇಟ್ಟುಕೊಂಡರೆ ಅಲ್ಲಿಂದ ಗಾಂಧೀಜಿ ಮತ್ತೆ ಹುಟ್ಟುತ್ತಾನೆ” ಎನ್ನುತ್ತಾರೆ ದೇವನೂರರು. ಅಂದರೆ ದೇವನೂರರ ಪ್ರಕಾರ ಗಾಂಧೀಜಿ ದಲಿತರಲ್ಲಿ ಮತ್ತೆ ನೆಲೆಗೊಳ್ಳಬೇಕು! ಆದರೆ, ಅಂಬೇಡ್ಕರರು ಗಾಂಧಿವಾದವನ್ನು “ಅದು ಅಸ್ಪøಶ್ಯರ ಸಮಾಧಿ ಮೇಲೆ ಕಟ್ಟಲ್ಪಡುವ ಗೋರಿ” (ಉಚಿಟಿಜhism: ಣhe ಜoom oಜಿ uಟಿಣouಛಿhಚಿbಟes) ಎನ್ನುತ್ತಾರೆ! (ಪುಟ,274). ಹಾಗಿದ್ದರೆ ದೇವನೂರರ ಪ್ರಕಾರ ದಲಿತರಲ್ಲಿ ಗಾಂಧಿ ನೆಲೆಗೊಳ್ಳಬೇಕೆಂದರೆ ಅಸ್ಪøಶ್ಯರ ಸಮಾಧಿಯಾಗಬೇಕೆಂದರ್ಥವೆ? ಖಂಡಿತ, ಅಂಬೇಡ್ಕರರ ಬರಹಗಳಿಗೆ ವ್ಯತಿರಿಕ್ತವಾದ ದೇವನೂರರ ಇಂತಹ ಅನೇಕ ನಿಲುವುಗಳನ್ನು ಅವರ ಕೃತಿಯಲ್ಲಿ ಕಾಣಬಹುದು.
ಕಡೆಯದಾಗಿ, ದೇವನೂರರು ತಮ್ಮ ಆ ಮಹತ್ವದ ಕೃತಿಯಲ್ಲಿ “ಗಾಂಧೀಜಿ ಕಾಠಿಣ್ಯದ ತಂದೆಯಂತೆ, ಜೆಪಿ ಅಸಹಾಯಕ ತಾಯಿ, ವಿನೋಭಾ ಮದುವೆಯಾಗದ ವ್ರತನಿಷ್ಠ ಅಕ್ಕನಂತೆ, ಲೋಹಿಯಾ ಊರೂರು ಅಲೆಯುವ ಮನೆಸೇರದ ಅಲೆಮಾರಿ ಮಗ, ಅಂಬೇಡ್ಕರ್ ತಾರತಮ್ಯಕ್ಕೆ ಒಳಗಾಗಿ ಮುನಿಸಿಕೊಂಡು ಹೊರಗೆ ಇರುವ ಮಗ” ಎನ್ನುತ್ತಾರೆ (ಎದೆಗೆ ಬಿದ್ದ ಅಕ್ಷರ-ಪು.88). ಪ್ರಶ್ನೆ ಏನೆಂದರೆ ಅಂಬೇಡ್ಕರರು “ಣheಡಿe is ಟಿo ಊiಟಿಜuism” ಎಂದದ್ದು, 1935 ರಲ್ಲೇ uಟಿಜಿoಡಿಣuಟಿಚಿಣeಟಥಿ I hಚಿve ಚಿ boಡಿಟಿ ಚಿ hiಟಿಜu. ಃuಣ I ತಿiಟಟ ಟಿoಣ ಜie ಚಿ hiಟಿಜu ಎಂದದ್ದು, ಹಿಂದೂ ಧರ್ಮದಲ್ಲಿನ ಮೌಢ್ಯಗಳನ್ನು ಪ್ರಶ್ನಿಸಿ “ಹಿಂದೂ ಧರ್ಮದ ಒಗಟುಗಳು” ಎಂಬ ಕ್ರಾಂತಿಕಾರಿ ಕೃತಿ ಬರೆದದ್ದು, ಹಾಗೆಯೇ ಬೌದ್ಧ ಧರ್ಮ ಸ್ವೀಕರಿಸಿದ್ದು, ಇವೆಲ್ಲಾ ದೇವನೂರರಂಥವರಿಗೆ ಅಂಬೇಡ್ಕರರ ಮುನಿಸಿನ ಕ್ರಿಯೆಯಾಗಿ ಕಂಡಿದೆಯೇ? ಹಾಗೆಯೇ ದಲಿತರ ನ್ಯಾಯಬದ್ಧ ಹಕ್ಕುಗಳು, ಅಂದರೆ ಪ್ರತ್ಯೇಕ ಮತದಾನ, ಪ್ರತ್ಯೇಕ ಮೀಸಲಾತಿ, ಪ್ರತ್ಯೇಕ ಐಡೆಂಟಿಟಿ ಇವನ್ನೆಲ್ಲಾ ವಿರೋಧಿಸಿ ಬ್ಲ್ಯಾಕ್‍ಮೇಲ್ ಮಾಡುವ ರೀತಿ ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಉಪವಾಸ ಕುಳಿತ ಗಾಂಧೀಜಿ ತಂದೆಯಂತೆ(ವಿಶೇಷವಾಗಿ ದಲಿತರಿಗೆ) ಕಾಣುತ್ತಾರೆಯೇ? ಅಂಬೇಡ್ಕರ್ ಅಂತಹವರ ಮಗ ಆಗುತ್ತಾರೆಯೇ? ಖಂಡಿತ, ಇಂತಹದ್ದನ್ನೆಲ್ಲ ಬರೆಯಲು ಅಥವಾ ಹೇಳಲು ದೇವನೂರರವರಂಥವರಿಗೆ ಮನಸ್ಸಾದರೂ ಹೇಗೆ ಬಂತೋ? ಬಹುಶಃ ಅವರು ಉತ್ತರಿಸದಿದ್ದರೂ ಪರವಾಗಿಲ್ಲ, ಕೇಳಲು ನಮಗೇ ನಾಚಿಕೆಯಾಗುತ್ತಿದೆ!
ಒಟ್ಟಾರೆ ಹೇಳುವುದಾದರೆ, ದೇವನೂರರೇ ಆಗಲಿ ಮತ್ಯಾರೇ ಆಗಲಿ ಅಂಬೇಡ್ಕರ್ ಬಗ್ಗೆ ಬರೆಯುವಾಗ ತುಸು ಎಚ್ಚರವಿರಬೇಕು. ಬೇಕಿದ್ದರೆ ಅಂತಹವರು ಗಾಂಧೀಜಿಯ ಬಗ್ಗೆ ಪ್ರತ್ಯೇಕ ಪುಸ್ತಕವನ್ನೇ ಬರೆಯಲಿ. ಅದರಲ್ಲಿ ಅವರನ್ನು ಇಂದ್ರ ಚಂದ್ರ ಎಂದು ಹೊಗಳಲಿ, ದೇವರ ಅವತಾರ ಎಂದೂ ಕೂಡ ಹೇಳಲಿ. ಅದಕ್ಕೆ ಯಾರ ಅಭ್ಯಂತರವೂ ಇರಲಿಕ್ಕಿಲ್ಲ. ಆದರೆ “ಎದೆಗೆ ಬಿದ್ದ ಅಕ್ಷರ”ದಂತಹ ಕೃತಿಯಲ್ಲಿ ಅಂಬೇಡ್ಕರ್ ಜೊತೆ ಗಾಂಧೀಜಿಯವರನ್ನು ಸಮೀಕರಿಸುವುದೆಂದರೆ? ಸಮೀಕರಿಸಿ ಬರೆಯುವುದೆಂದರೆ? ಬಹುಶಃ ಅದು ಅಂತಹ ಲೇಖಕನ ಅಂಬೇಡ್ಕರರ ಬಗೆಗಿನ ಅಜ್ಞಾನವಾಗುತ್ತದೆ. ಈ ದಿಸೆಯಲ್ಲಿ ದೇವನೂರ ಮಹಾದೇವರ “ಎದೆಗೆ ಬಿದ್ದ ಅಕ್ಷರ” ಎದೆಗೆ ಬಿದ್ದ ಅಕ್ಷರದಂತಲ್ಲ, “ಎದೆಗೆ ಬಿದ್ದ ಗಾಂಧಿ”ಯಂತೆ ಕಾಣಿಸುತ್ತದಷ್ಟೆ!
No comments:
Post a Comment