[ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮವನ್ನು ಸುಪ್ರಿಂ ಕೋರ್ಟ್ ಈಚೆಗೆ ಎತ್ತಿಹಿಡಿದಿದೆ. ಸ್ವತಃ ಬಾಬಾಸಾಹೇಬ್ ಅಂಬೇಡ್ಕರರೂ ಕೂಡ ಜ್ಞಾನಕ್ಕಾಗಿ ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ಶೋಷಿತರ ಕೇರಿಗಳಲ್ಲಿ ತೆರೆಯಬೇಕೆಂದು ಆ ಕಾಲದಲ್ಲೇ ಬ್ರಿಟಿಷರನ್ನು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಕ್ರಿ.ಶ.1854ರಲ್ಲಿ ಪ್ರಕಟವಾದ ಈ ದೇಶದ ಮೊದಲ ಶಿಕ್ಷಕಿ ಮಾತೆ ಸಾವಿತ್ರಿಬಾಯಿ ಫುಲೆಯವರ ‘ಕಬ್ಯ ಫುಲೆ’ ಕವನ ಸಂಕಲನದಿಂದ, ಇಂಗ್ಲೀಷ್ ಮಾಧ್ಯಮದ ಮಹತ್ವ ಸಾರುವ ಈ ಕವನ. ಸಾವಿತ್ರಿಬಾಯಿ ಫುಲೆಯವರ ಈ ಪದ್ಯವನ್ನು ಕನ್ನಡಕ್ಕೆ ಅನುವಾದಿಸಿದವರು ‘ಅಲೆಮಾರಿ’.-ಆರ್.ಹೊ.ಬ]
ಇಂಗ್ಲೀಷೇ ತಾಯಿ
ಇಂಗ್ಲೀಷ್ ಭಾಷೆ, ನಮ್ಮ
ಇಂಗ್ಲೀಷ್ ತಾಯಿ
ಕಸುವು ಮತ್ತು ಕಿಚ್ಚಿನಿಂದ
ಅಲ್ಲಿಗೆ ಕಳುಹಿಸುತ್ತದೆ
ತಾಯಿ ಇಂಗ್ಲೀಷ್
ಮೊಘಲರದಲ್ಲ
ಪೇಶ್ವೆ ಅಥವಾ ಬ್ರಾಹ್ಮಣ
ಮೋಸಗೊಳಿಸುವುದಿಲ್ಲ
ತಾಯಿ ಇಂಗ್ಲೀಷ್ ನಿಜವಾದ
ವಿವೇಚನೆ ಕಲಿಸುತ್ತದೆ
ದಬ್ಬಾಳಿಕೆಗೊಳಗಾದವರನ್ನು
ಪ್ರೀತಿಯಿಂದ ಎಬ್ಬಿಸುತ್ತದೆ
ತಾಯಿ ಇಂಗ್ಲೀಷ್
ಅಪ್ಪಿಕೊಳ್ಳುತ್ತದೆ ಶೋಷಿತರನ್ನ
ಮೈದಡವಿ ಮೇಲೆಬ್ಬಿಸುತ್ತದೆ
ಕೆಳಗೆ ಬಿದ್ದವರನ್ನ
ತಾಯಿ ಇಂಗ್ಲೀಷ್ ಮುರಿಯುತ್ತದೆ
ಗುಲಾಮಗಿರಿಯ ಸಂಕೋಲೆಗಳನ್ನ
ಪಶುತ್ವವನ್ನು ತೊಲಗಿಸಿ ತರುತ್ತದೆ
ಶ್ರೇಷ್ಠ ಮಾನವೀಯತೆಯನ್ನ
No comments:
Post a Comment