Saturday, 10 May 2014

behenji made uttar pradesh once again THE CRADLE OF BUDDHISM

FOUR FACED BUDDHA STATUE AT LUCKONOW SAMAJIK PARIVARTHAN STHAL
AMBEDKAR PARK 8TH WONDER OF THE WORLD BUILT BY MAYAWATIJI
raghothama hoba

ಉತ್ತರ ಪ್ರದೇಶವನ್ನು ಬೌದ್ಧ ತೊಟ್ಟಿಲನ್ನಾಗಿಸಿದ ಅಕ್ಕ ಮಾಯಾವತಿ

- ರಘೋತ್ತಮ ಹೊ.ಬ

ಭಾರತದ ಇತಿಹಾಸದ ಆಳ ಅಗೆದಾಗೆಲ್ಲ ಅಲ್ಲಿ ಬರೇ ಬುದ್ಧನ ಮೂರ್ತಿಗಳೇ ಸಿಗುತ್ತವೆ. ಬೌದ್ಧ ಸ್ತೂಪಗಳು, ವಿಹಾರಗಳು, ಹೆಗ್ಗುರುತುಗಳು... ಹೀಗೆ... ಹಾಗಿದ್ದರೆ ಇವೆಲ್ಲವನ್ನು ಯಾರು ನಿರ್ಮಿಸಿದರು? ಗುಲಾಮರೇ? ಸದಾ ಕೊಡಿ... ಕೊಡಿ... ಎಂದು ಭಿಕ್ಷೆ ಬೇಡುವ ಬಿಕ್ಷುಕರೇ? ಅಥವಾ ಸಮಾಜಕ್ಕೆ ತಾವೇನು ಕೊಡದೇ ತಮ್ಮಷ್ಟಕ್ಕೆ ತಾವೇ ಬದುಕುವ ಸ್ವಾರ್ಥಿಗಳೇ? ಖಂಡಿತ ಇಲ್ಲ. ಇವೆಲ್ಲವನ್ನೂ ನಿರ್ಮಿಸಿದವರು ಆಳುವ ದೊರೆಗಳು. ಸಾಮ್ರಾಟ್ ಅಶೋಕ, ಕಾನಿಷ್ಕ, ಹರ್ಷವರ್ಧನ, ಮಿಳಿಂದ ಇತ್ಯಾದಿ ಬೌದ್ಧ ದೊರೆಗಳು. ಅಂದರೆ ಆಳುವ ದೊರೆಗಳು ಮಾತ್ರ ಧರ್ಮವನ್ನು ಪೊರೆಯುವವರು ಎಂಬುದು ಶತಸಿದ್ಧವಾಯಿತು. ಹಾಗಿದ್ದರೆ ಅಶೋಕ, ಕಾನಿಷ್ಕಾ, ಹರ್ಷರ್ದನ ಇಂತಹ ಬೌದ್ಧ ದೊರೆಗಳ ಬೌದ್ಧ ಪರಂಪರೆಯನ್ನು ಆಧುನಿಕ ಯುಗದಲ್ಲಿ ಮತ್ತದೇ ‘ಬುದ್ಧ ಹುಟ್ಟಿದ ನಾಡಲ್ಲಿ, ಬೋಧಿಸತ್ವರ ಬೀಡಲ್ಲಿ” ಮುಂದುವರಿಸಿದವರು? ಖಂಡಿತ, ಅದು ಬೆಹನ್‍ಜೀ ಮಾಯಾವತಿ. ಉತ್ತರಪ್ರದೇಶವನ್ನು ಮತ್ತೆ ಬೌದ್ಧ ಧರ್ಮದ ತೊಟ್ಟಿಲನ್ನಾಗಿ ನಿರ್ಮಿಸುವಲ್ಲಿ ಶ್ರಮಿಸುತ್ತಿರುವ ಧೀರ ರಾಣಿ.

ಹಾಗಿದ್ದರೆ ಮಾಯಾವತಿಯವರಿಗೆ ಇದಕ್ಕೆ ಪ್ರೇರಣೆ? ಸ್ಫೂರ್ತಿ? ಬಾಬಾಸಾಹೇಬ್ ಅಂಬೇಡ್ಕರ್‍ರವರ “ಇತಿಹಾಸವನ್ನು ಮರೆತವರು ಇತಿಹಾಸ ಸೃಷ್ಟಿಸಲಾರರು” ಎಂಬ ಶ್ರೇಷ್ಠ ನುಡಿ. ಹೌದು, ಅಂಬೇಡ್ಕರರ ಈ ನುಡಿಯ ಮಾದರಿಯಲ್ಲಿಯೇ ಬೆಹನ್‍ಜೀ ಮಾಯಾವತಿಯವರ ಈ ಕೆಳಗಿನ ಮಾತುಗಳನ್ನು ಗಮನಿಸಿ “ಯಾವ ಸಮಾಜಕ್ಕೆ ಯಾವುದೇ ಇತಿಹಾಸವಿರುವುದಿಲ್ಲವೋ ಅದು ಎಂದಿಗೂ ಕೂಡ ಆಳುವ ಸಮಾಜವಾಗದು. ಇತಿಹಾಸದಿಂದ ಸ್ಫೂರ್ತಿ ಸಿಗುತ್ತದೆ, ಅಂತಹ ಸ್ಫೂರ್ತಿ ಜಾಗೃತಿಯನ್ನುಂಟುಮಾಡುತ್ತದೆ, ಜಾಗೃತಿಯಿಂದ ಚಿಂತನೆ ಹೆಚ್ಚುತ್ತದೆ, ಚಿಂತನೆ ಶಕ್ತಿಯಾಗುತ್ತದೆ, ಅ ಶಕ್ತಿ ಅಧಿಕಾರವನ್ನು ನೀಡುತ್ತದೆ ಮತ್ತು ಆ ಅಧಿಕಾರ ವ್ಯಕ್ತಿಯೋರ್ವನನ್ನು ಆಳುವ ದೊರೆಯನ್ನಾಗಿಸುತ್ತದೆ”.(ಆಧಾರ: Towards an equalitarian society. A U.P. Buddhist tourist guide. P.No.II)

ಅರ್ಥವಾಯಿತೇ ಮಾಯವತಿಯವರ ನುಡಿಗಳು ಮತ್ತು ಆ ನುಡಿಗಳಲ್ಲಿರುವ ಇತಿಹಾಸಕ್ಕೂ, ಆಳುವ ವರ್ಗಕ್ಕು ಇರುವ ಸಂಬಂಧ. ದುರಂತವೆಂದರೆ ಈ ರಾಜ್ಯದ ಜನ ದಲಿತ ಚಳುವಳಿ ಎಂದರೆ ಅಂಬೇಡ್ಕರ್ ಎನ್ನುತ್ತಾರೆ, ಅಂಬೇಡ್ಕರ್ ಎಂದರೆ ಬೌದ್ಧಧವರ್i ಎನ್ನುತ್ತಾರೆ. ಆದರೆ ಅದೇ ಬೌದ್ಧಧರ್ಮಕ್ಕೆ ತಮ್ಮ ಕೊಡುಗೆ ಏನು? ತಾವು ಆಳುವ ಮಂತ್ರಿಯಾಗಿದ್ದಾಗ, ಶಾಸಕನಾಗಿದ್ದಾಗ, ಸಂಸದನಾಗಿದ್ದಾಗ ಆ ಧರ್ಮಕ್ಕೆ ಏನು ಕೊಡುಗೆ ನೀಡಿದೆ? ಖಂಡಿತ, ಹೇಳಲು/ಕೇಳಲು ನಾಚಿಕೆಯಾಗುತ್ತದೆ. ಅದರಲ್ಲೂ ಅಂತಹ ಮಹನೀಯರುಗಳಿಂದ ಮಾಯಾವತಿಯವರ ಬಗ್ಗೆ ಕೊಂಕು ನುಡಿಗಳು ಬೇರೆ! ಹಾಗಿದ್ದರೆ ತಾಕತ್ತಿದ್ದರೆ ಮಾಡಿ ತೋರಿಸಲಿ ಅಮತಹವರು ಬೆಹನ್‍ಜೀಯವರ ಹಾಗೇ. ಕರ್ನಾಟಕವನ್ನೂ ಮಾಡಲಿ ಮತ್ತೊಂದು ಬೌದ್ಧ ತೊಟ್ಟಿಲಿನಂತೆ ಉತ್ತರಪ್ರದೇಶದ ರೀತಿ.

ಬೌದ್ಧ ತೊಟ್ಟಿಲು(Cradle of Buddhism() ಮಾಯಾವತಿಯವರು ಏನೇನು ಮಾಡಿದರು? ಎಂತಹ ಮೋಸವೆಂದರೆ ಮಾಯಾವತಿಯವರ ಈ ಬೌದ್ಧ ಸಾಧನೆಯ ಬಗ್ಗೆ ಈ ದೇಶದ ಕುತ್ಸಿತ ಮನುವಾದಿ ಮಾಧ್ಯಮಗಳಿಂದ ಎಳ್ಳಷ್ಟೂ ಪ್ರಚಾರವಿಲ್ಲ! ಇರಲಿ, ಮಾಯಾವತಿಯವರ ಸರ್ಕಾರವೇ ಪ್ರಕಟಿಸಿರುವ Towards an equalitarian society. A U.P. Buddhist tourist guide ಅನ್ನೇ ದಾಖಲಿಸುವುದಾದರೆ ಮಾಯಾವತಿಯವರು 1995 ಅಂದರೆ ಅಧಿಕಾರಕ್ಕೆ ಬಂದ ಮೊದಲ ಸಲವೇ ದೇಶದ ರಾಜಧಾನಿ ದೆಹಲಿಯ ಸಮೀಪವಿರುವ ಉತ್ತರಪ್ರದೇಶಕ್ಕೆ ಸೇರಿದ ಕೈಗಾರಿಕ ನಗರ ಗ್ರೇಟರ್ ನೋಯ್ಡಾದಲ್ಲಿ ಐತಿಹಾಸಿಕ ನಳಂದಾ ವಿಶ್ವವಿದ್ಯಾನಿಲಯವನ್ನು ನೆನಪಿಸುವ ಅಂತರಾಷ್ಟ್ರೀಯ ದರ್ಜೆಯ ಒಂದು ಬೌದ್ಧ ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸುವ ಯೋಜನೆ ರೂಪಿಸಿದರು. ಅಂದಹಾಗೆ ಆ ವಿವಿ ಸ್ಥಾಪಿಸುವ ಉದ್ದೇಶವೇ ಎಸ್‍ಸಿ/ಎಸ್‍ಟಿ/ಓಬಿಸಿ/ಧಾರ್ಮಿಕ ಅಲ್ಪಸಂಖ್ಯಾತ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಂದ ಬಂದ ವಿದ್ಯಾರ್ಥಿಗಳಿಗೆ ಅತ್ಯುತ್ಕøಷ್ಟ ದರ್ಜೆಯ ಶಿಕ್ಷಣ ಒದಗಿಸುವುದಾಗಿತ್ತು. ಅಂತೆಯೇ ಮೊದಲ ಅಧಿಕಾರದ ಅವಧಿ ಕೆಲವೇ ತಿಂಗಳುಗಳಿದ್ದರಿಂದ ತಮ್ಮ ಎರಡನೇ ಅವಧಿಯಲ್ಲಿ ಅಂದರೆ 1997 ಮಾರ್ಚ್ 21ರಂದು ಮಾಯಾವತಿಯವರು ದೆಹಲಿ ಸಮೀಪವಿರುವ ಆ ಗ್ರೇಟರ್ ನೋಯ್ಡಾ ಪ್ರದೇಶವನ್ನೊಳಗೊಂಡು ‘ಗೌತಮ ಬುದ್ಧನಗರ ಜಿಲ್ಲೆ’ ಎಂಬ ಹೊಸ ಜಿಲ್ಲೆಯನ್ನೆ ಸೃಷ್ಟಿಸಿದರು. ತದನಂತರ ಅದೇ ವರ್ಷ ಮೇ 1ರಂದು ತಮ್ಮ ಕನಸಿನ ಕಲ್ಪನೆಯ ಗೌತಮ ಬುದ್ಧ ವಿಶ್ವವಿದ್ಯಾನಿಲಯಕ್ಕೆ ಶಿಲಾನ್ಯಾಸ ನೆರವೇರಿಸಿದರು. ಅಂತೆಯೇ ಐತಿಹಾಸಿಕ ನಳಂದಾ ವಿವಿ ಮಾದರಿಯ ಆ ಪವಿತ್ರ ಬೌದ್ಧ ವಿವಿ ಶಿಲಾನ್ಯಾಸದ ಅಧ್ಯಕ್ಷತೆ ವಹಿಸಿದ್ದವರು ಬಿಎಸ್‍ಪಿ ಮುಖ್ಯಸ್ಥರಾದ ಪೂಜ್ಯ ದಾದಾಸಾಹೇಬ್ ಕಾನ್ಷೀರಾಮ್‍ಜೀಯವರು.

ಗೌತಮ ಬುದ್ಧ ವಿಶ್ವವಿದ್ಯಾನಿಲಯ: ನೂತನ ಆ ಗೌತಮ ಬುದ್ಧನಗರದಲ್ಲಿ 511 ಎಕರೆ ಸವಿಸ್ತಾರದ ವಿಶಾಲ ಪ್ರದೇಶದಲ್ಲಿ ಇಂದು ಅನಾವರಣಗೊಂಡಿದೆ. ಪ್ರಪಂಚದಲ್ಲೇ ಅತ್ಯುತ್ತಮ ಕ್ಯಾಂಪಸ್‍ಅನ್ನು ಅಲ್ಲಿ ನಿರ್ಮಾಣಮಾಡಲಾಗಿದೆ. ಹಾಗೆ ಅಲ್ಲಿರುವ ಕಟ್ಟಡಗಳು? ಮಾನ್ಯವರ್ ಶ್ರೀಕಾನ್ಷಿರಾಮ್‍ಜೀ ಆಡಿಟೋರಿಯಂ, ಮಹಾತ್ಮ ಜ್ಯೋತಿಬಾಫುಲೆ ಮೆಡಿಟೇಷನ್ ಸೆಂಟರ್, ಬೋಧಿಸತ್ವ ಡಾ.ಭೀಮರಾವ್ ಅಂಬೇಡ್ಕರ್ ಗ್ರಂಥಾಲಯ! ಸಾವಿತ್ರಿ ಬಾಫುಲೆ ಮತ್ತು ರಮಾಬಾಯಿ ಅಂಬೇಡ್ಕರ್ ಮಹಿಳಾ ವಿದ್ಯಾರ್ಥಿನಿಲಯಗಳು, ಪುರುಷರಿಗಾಗಿ ಶ್ರೀನಾರಾಯಣ ಗುರು ಮತ್ತು ಸಂತ ರವಿದಾಸ್‍ರವರ ಹೆಸರಿನ ವಿದ್ಯಾರ್ಥಿನಿಲಯಗಳು! ಕ್ರೀಡೆಗಾಗಿ ಏಕಲವ್ಯ ಕ್ರೀಡಾ ಸಂಕೀರ್ಣ, ಬಹುಜನ ಸಮಾಜದ ಮಹಾಪುರುಷರ ಸ್ಮರಣೆಗಾಗಿ ವಿವಿಯ ಕ್ಯಾಂಪಸ್‍ನಲ್ಲಿ ‘ಸಾಮಾಜಿಕ ಪರಿವರ್ತನ ಪ್ರೇರಣಾ ಸ್ಥಳ’! ಸಾಕೇ? ಅಥವಾ ಇನ್ನಷ್ಟು ಮಾಹಿತಿ ಬೇಕೆ? ಯಾಕೆಂದರೆ ನಾವು ಒಂದು ಅಂಬೇಡ್ಕರ್ ಭವನ ಕಟ್ಟಿಸಿಕೊಳ್ಳಲು ಅಥವಾ ಒಂದು ರಸ್ತೆಗೆ, ವೃತ್ತಕ್ಕೆ ಅಂಬೇಡ್ಕರ್ ಹೆಸರಿಟ್ಟುಕೊಳ್ಳಲು ಗೋಗರೆಯುತ್ತೇವೆ! ಆದರೆ ಮಾಯಾವತಿಯವರು? ಇನ್ನು ಆ ವಿವಿಯ ಮುಖ್ಯ ರಸ್ತೆಗೆ ‘ಸಿದ್ಧಾರ್ಥ ಗೌತಮ ಮಾರ್ಗ’, ಹೊರ ರಿಂಗ್‍ರಸ್ತೆಗೆ ‘ಬೌದ್ಧ ಪರಿಪಥ್’ ಮತ್ತು ಒಳ ರಿಂಗ್‍ರಸ್ತೆಗೆ ‘ಮಹಾಮಾಯಾ ಪರಿಪಥ್’, ವಿವಿಯ ಮುಖ್ಯ ದ್ವಾರಕ್ಕೆ ಮಹಾಮಾಯಾ ದ್ವಾರ! ಅಬ್ಬಾ! ಬುದ್ಧ ನೆಲೆಗೊಳ್ಳಲು ಇನ್ನೇನೇನು ಬೇಕು? ಬುದ್ಧನ ವಿಗ್ರಹ? ಹೌದು, ಅದೂ ಇದೆ. ವಿವಿಯ ಪ್ರಾರಂಭಿಕ ಆವರಣದಲ್ಲೇ ತಥಾಗತ ಬುದ್ಧನ ಬೃಹತ್ ವಿಗ್ರಹ ನಿರ್ಮಿಸಲಾಗಿದೆ!

ಹ್ಞಾಂ! ತಡೆಯಿರಿ ಇದು ಒಂದು ವಿಶ್ವವಿದ್ಯಾನಿಲಯದ ಕಥೆಯಷ್ಟೆ. ಮಾಯಾವತಿಯವರ ಬೌದ್ಧ ಸಾಧನೆಯ ಕಥೆ ಅಗಾಧವಿದೆ! ಅದಾಗಲೇ ಗೌತಮ ಬುದ್ಧ ನಗರ ಜಿಲ್ಲೆಯನ್ನು ಮಾಯಾವತಿಯವರು ನಿರ್ಮಿಸಿದ್ದರ ಬಗ್ಗೆ ಓದಿದ್ದೀರಿ. ಆದರೆ ಮಾಯಾವತಿಯವರು ಅದೊಂದೇ ಅಲ್ಲ, ಒಟ್ಟು 15 ಹೊಸ ಜಿಲ್ಲೆಗಳನ್ನು ನಿರ್ಮಿಸಿದರು. ಅದರಲ್ಲೂ 4 ಜಿಲ್ಲೆಗಳಿಗೆ ಬುದ್ಧ ಸಂಬಂಧಿತ ಹೆಸರುಗಳನ್ನೇ ಇಡಲಾಯಿತು. ಅವುಗಳೆಂದರೆ 1.ಗೌತಮ ಬುದ್ಧ ನಗರ, 2.ಮಹಾಮಾಯಾನಗರ, 3.ಶ್ರಾವಸ್ತಿ, 4.ಕೌಸಂಬಿ. ಅಲ್ಲದೇ ಪದ್ರೌಣ ಜಿಲ್ಲೆಯನ್ನು ಕುಶೀನಗರ(ಕುಶೀನಾರ) ಎಂದು ಮರುನಾಮಕರಣ ಮಾಡಲಾಯಿತು. ಇನ್ನು ಮಾಯಾವತಿಯವರು ನಿರ್ಮಿಸಿದ ಇನ್ನಿತರ ಹೊಸ ಜಿಲ್ಲೆಗಳ ಹೆಸರುಗಳನ್ನು ಕೇಳಿ, ಮಹಾತ್ಮ ಜ್ಯೋತಿಬಾಫುಲೆ ನಗರ, ಛತ್ರಪತಿ ಶಾಹುಜೀ ನಗರ, ಸಂತ ಕಬೀರ್‍ನಗರ, ಸಂತ ರವಿದಾಸ್ ನಗರ. ಹೇಳಲು ವಯಕ್ತಿಕವಾಗೇ ನನಗೆ ಹೃದಯತುಂಬಿ ಬರುತ್ತದೆ. ಇನ್ನು ಇಂತಹದ್ದನ್ನೆಲ್ಲ ಪರಮಪೂಜ್ಯ ಬಾಬಾಸಾಹೇಬರು ನೋಡಿದ್ದರೆ? ಅದೆಷ್ಟು ಖುಷಿ ಪಡುತ್ತಿದ್ದರೋ?

ಹಾಗಿದ್ದರೆ ಮಾಯಾವತಿಯವರು ಏಕೆ ಉತ್ತರ ಪ್ರದೇಶವನ್ನು ಬೌದ್ಧ ತೊಟ್ಟಿಲನ್ನಾಗಿಸಲು ಪ್ರಯತ್ನಿಸಿದರು ಎಂಬ ಪ್ರಶ್ನೆ ಈ ಸಂದರ್ಭದಲ್ಲಿ ಮೂಡುತ್ತದೆ. ಇದಕ್ಕೆ ಉತ್ತರ ನೀಡುವುದಾದರೆ ತಥಾಗತ ಗೌತಮ ಬುದ್ಧರೆಂದು ಹೆಸರಾದ ಸಿದ್ಧಾರ್ಥ ಗೌತಮರು ಹುಟ್ಟಿದ್ದು ಕ್ರಿ.ಪೂ.650ರಲ್ಲಿ ಇದೇ ಉತ್ತರ ಪ್ರದೇಶದ ಪಕ್ಕದಲ್ಲೇ ಇರುವ ಹಾಲಿ ನೇಪಾಳದಲ್ಲಿರುವ ಲುಂಬಿಣಿಯಲ್ಲಿ. ಅವರ ಬದುಕಿನ 27ವಸಂತಗಳನ್ನು ಕಳೆದದ್ದು ಇದೇ ಉತ್ತರ ಪ್ರದೇಶದ ಶ್ರಾವಸ್ತಿಯಲ್ಲಿ ಮತ್ತು ಪರಿನಿಬ್ಬಾಣ ಹೊಂದಿದ್ದು ಕೂಡ ಇದೇ ಉತ್ತರ ಪ್ರಧೇಶದ ಕುಶಿನಾರ(ಕುಶಿನಗರ)ದಲ್ಲಿ. ಹಾಗೆಯೇ ಬುದ್ಧರ ತಂದೆಯೇ ಹೆಸರು ಶುದ್ದೋಧನ, ತಾಯಿಯ ಹೆಸರು ಮಹಾಮಾಯಾ. ಮುಂದುವರಿದು ಸ್ವತಃ ಮಾಯಾವತಿಯವರು ಹೇಳುವುದ ನೋಡಿ “The land of Uttar Pradesh has the glory of having been blessed by the dust beneath the feet of the great humanitarian and epoch making person like Buddha!” ಅರ್ಥವಾಯಿತೇ “ಉತ್ತರ ಪ್ರದೇಶ ಶ್ರೇಷ್ಠ ಮಾನವತಾವಾದಿ, ಯುಗಪುರುಷ ಬುದ್ಧ ನಡೆದಾಡಿದ ನಾಡು. ಆತನ ಪಾದದ ಧೂಳಿನಿಂದ ಆ ನೆಲ ಪಾವನವಾಗಿದೆ”. ಅದಕ್ಕೇ ಮಾಯಾವತಿಯವರು ಅದರ ಪುನರ್ ಸ್ಥಾಪನೆಗೆ ಕೈಹಾಕಿದ್ದು.

ಅಂದಹಾಗೆ ಈ ದಿಸೆಯಲ್ಲಿ ಅವರು ಸ್ಥಾಪಿಸಿದ ಕೆಲ ಜಿಲ್ಲೆಗಳ ಮತ್ತು ವಿವಿಯ ವಿವರ ತಿಳಿದಿರಿ. ಹಾಗಿದ್ದರೆ ಬುದ್ಧನ ಕಾಲದಲ್ಲಿದ್ದ ಹಾಲಿ ಉತ್ತರ ಪ್ರದೇಶದಲ್ಲಿರುವ ಆ ಪವಿತ್ರ ಐತಿಹಾಸಿಕ ನಗರಗಳನ್ನು ಅಂದರೆ ಬುದ್ಧ ಪ್ರಥಮ ಉಪದೇಶ ನೀಡಿದ ಸಾರನಾಥ. ಜ್ಞಾನೋೀದಯದ ನಂತರ ಸತತ 27ವರ್ಷಗಳನ್ನು ಕಳೆದ ಶ್ರಾವಸ್ತಿ, ಬುದ್ಧನ ಪೂರ್ವಿಕರ ಊರು ಕಪಿಲವಸ್ತು, ಅಶೋಕ ಸ್ತಂಭ ಇರುವ ಸ್ಥಳ ಕೌಸಂಬಿ, ಬುದ್ಧ ಮಹಾಪರಿನಿರ್ವಾಣ ಹೊಂದಿದ ಕುಶೀನಗರ, ಸ್ವರ್ಗದಿಂದ ಇಳಿದು ಬಂದ ಸಾಂಕಿಸ ಈ ಎಲ್ಲಾ ನಗರಗಳನ್ನು ಒಂದು ಬೌದ್ಧ ಯಾತ್ರೆ (circuit)ಕಕ್ಷೆಯಲ್ಲಿ ಸಂಪರ್ಕಿಸಿದರೆ? ಖಂಡಿತ, ಈ ನಿಟ್ಟಿನಲಿ 2006 ಅಕ್ಟೋಬರ್ 27ರಂದು ರಾಜ್ಯಸಭೆಯಲ್ಲಿ ಅಂದಿನ ಸದಸ್ಯರಾಗಿದ್ದ ಮಾಯಾವತಿಯವರು ಅಂದಿನ ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್‍ರವರಿಗೆ ‘ಬೌದ್ಧ ಯಾತ್ರಾ ಸ್ಥಳಗಳಾದ ಲುಂಬಿಣಿ, ಕಪಿಲವಸ್ತು, ಶ್ರಾವಸ್ತಿ, ಸಾಂಕಿಸ, ಸಾರನಾಥ, ಬೋಧಗಯಾ, ರಾಜಗೃಹ, ನಳಂದ ಮತ್ತು ವೈಶಾಲಿ ಇವುಗಳನ್ನು ಇದುವರೆಗೂ ಭಾರತೀಯ ರೈಲ್ವೇಯಲ್ಲಿ ಪರಸ್ಪರ ಸಂಪರ್ಕಿಸಲು ಸಾಧ್ಯವಾಗಿಲ್ಲ. ಬೌದ್ಧ ಪ್ರವಾಸಿಗರ ನಿಮಿತ್ತ ಇವುಗಳನ್ನು ಭಾರತೀಯ ರೈಲ್ವೆಯಲ್ಲಿ ಕೂಡಲೇ ಸಂಪರ್ಕಿಸಬೇಕು. ಈ ನಿಟ್ಟಿನಲಿ ‘ಕುಶೀನಗರ-ಕಪಿಲವಸ್ತು-ಲುಂಬಿಣಿ-ಶ್ರಾವಸ್ತಿ’ಗಳನ್ನು ಪರಸ್ಪರ ಸಂಪರ್ಕಿಸುವ ರೀತಿಯಲ್ಲಿ ಒಂದು ವೃತ್ತೀಯ ರೈಲ್ವೆ ಸಂಪರ್ಕವನ್ನು ನಿರ್ಮಿಸಬೇಕು” ಎಂದು ಒತ್ತಾಯಿಸಿ ಪತ್ರ ಬರೆಯುತ್ತಾರೆ. ಹಾಗೆಯೇ ಉತ್ತರ ಪ್ರದೇಶದ ಪ್ರಮುಖ ಬೌದ್ಧ ಸ್ಥಳಗಳನ್ನು ಬಿಹಾರದ ಬೋಧಗಯಾ, ರಾಜಗೃಹ, ನಳಂದ, ಪಾಟ್ನಾ(ಪಾಟಲಿಪುತ್ರ) ಮತ್ತು ವೈಶಾಲಿಗಳ ಜೊತೆ ಸಂಪರ್ಕಿಸಬೇಕೂ ಎಂದು ಕೂಡ ಅವರು ಲಾಲೂ ಯಾದವ್‍ರನ್ನು ಒತ್ತಾಯಿಸುತ್ತಾರೆ. ಅಂದಹಾಗೆ ಈ ಸಂಬಂಧ ಸ್ವತಃ ಅವರೇ ಚೀನಾ, ಜಪಾನ್, ಕಾಂಬೋಡಿಯಾ, ಕೊರಿಯಾ, ಥಾಯ್ಲೆಂಡ್, ಮಲೇಷ್ಯಾ, ಇಂಡೋನೇಷ್ಯಾ, ಶ್ರೀಲಂಕಾ ಹೀಗೆ ವಿವಿಧ ದೇಶಗಳ ಬೌದ್ಧ ಯಾತ್ರಾರ್ಥಿಗಳಿಗೆ ಅನುಕೂಲವಾಗಲೆಂದು ಕುಶೀನಗರದಲ್ಲಿ PPP(Public Private Partnership = ಸರ್ಕಾರಿ ಮತ್ತು ಖಾಸಗಿ ಜಂಟಿ ಸಹಯೋಗತ್ವ) ದ ಆಧಾರದಲ್ಲಿ ಸುಮಾರು 600 ಕೋಟಿ ವೆಚ್ಚದಲ್ಲಿ ಒಂದು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸಲು ಮುಂದಾಗುತ್ತಾರೆ. ಈ ಸಂಬಂಧ 2009ರ ಮೇ ತಿಂಗಳಿನಲ್ಲಿ ಶಂಕುಸ್ಥಾಪನೆಯನ್ನು ಕೂಡ ನೆರವೇರಿಸುತ್ತಾರೆ. ಅಂದಹಾಗೆ ಈ ಯೋಜನೆಗೆ ಮಾಯಾವತಿಯವರು ನೀಡುವ ಕಾರಣ “ಬೌದ್ಧ ಧರ್ಮ ಜಗತ್ತಿನಲ್ಲೇ 4ನೆಯ ದೊಡ್ಡ ಧರ್ಮ ಮತ್ತು ಅದರ ಜನಸಂಖ್ಯೆ ಸುಮಾರು 350ಮಿಲಿಯನ್‍ಗಳು. ಈ ಕಾರಣಕ್ಕೆ ವಿವಿಧ ದೇಶಗಳ ಬೌದ್ಧ ಪ್ರವಾಸಿಗರನ್ನು ಆಕರ್ಷಿಸಲು ಈ ಅಂತರಾಷ್ಟ್ರೀಯ ನಿಲ್ದಾಣ” ಎಂದು.

ರಾಜಧಾನಿ ಲಕ್ನೋದಲ್ಲಿ ಮಾಯಾವತಿಯವರು “ಬಾಬಾಸಾಹೇಬ್ ಅಂಬೇಡ್ಕರ್ ಸಾಮಾಜಿಕ ಪರಿವರ್ತನ ಸ್ಥಳ” ಎಂಬ ಮತ್ತೊಂದು ಅದ್ಭುತ ಸ್ಥಳ ನಿರ್ಮಿಸಿದ್ದಾರೆ. ಬಹುಶಃ ಅದನ್ನು ಇಲ್ಲಿ ವಿವರಿಸಲು ಸಾಧ್ಯವಿಲ್ಲ. ಯಾಕೆಂದರೆ ಅದೊಂದು ಸುಂದರ ಅದ್ಭುತ ರೋಚಕ ಕತೆ. ಅದನ್ನು ಬೇರೊಂದು ಸಂದರ್ಭದಲ್ಲಿ ಬರೆಯುವ. ಆದರೆ ಅದೇ ಲಕ್ನೋದಲ್ಲಿ ಮಾಯಾವತಿಯವರು ಅತ್ಯದ್ಭುತ “ಬುಧ್ಧ ವಿಹಾರ ಶಾಂತಿ ಉಪವನ”ವೊಂದನ್ನು 2009 ಜೂನ್ 25ರಂದು ಲೋಕಾರ್ಪಣೆಗೊಳಿಸಿದರು. ಆ ಉಪವನದಲ್ಲಿ ಸಾಂಚಿ ಸ್ತೂಪದ ಹಾಗೆ ನಾಲ್ಕು ಮುಖದ ಅಪೂರ್ವ ಅಮೃತ ಶಿಲೆಯ ಬುದ್ಧನ ಮೂರ್ತಿಯೊಂದನ್ನು ಸಹ ಮಾಯಾವತಿಯವರು ಅನಾವರಣಗೊಳಿಸಿದ್ದಾರೆ. ಅಂತೆಯೇ ಸಾಮಾಜಿಕ ಪರಿವರ್ತನ ಸ್ಥಳದ ಆ ಪವಿತ್ರ ಬಾಬಾಸಾಹೇಬ್ ಅಂಬೇಡ್ಕರರ ತಾಣದಲ್ಲಿ ಪ್ರತ್ಯೇಕ ‘ಬುದ್ಧ ಸ್ಥಳ’ವೊಂದನ್ನು ಕೂಡ ಮಾಯಾವತಿಯವರು ನಿರ್ಮಿಸಿ ಬುದ್ಧನ ಹಿರಿಮೆಯನ್ನು ಈ ಯುಗದಲ್ಲಿ ಎತ್ತರೆತ್ತರಕ್ಕೆ ಕೊಂಡೊಯ್ದಿದ್ದಾರೆ! ಇದರ ಜೊತೆಗೆ ರಾಜ್ಯದ ವಿವಿಧ ವಲಯಗಳಲ್ಲಿ ಬೌದ್ಧ ಸಂಸ್ಕøತಿಯನ್ನು ಪಸರಿಸಲು ಮಾಯಾವತಿಯವರು ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಒಂದೆರಡನ್ನು ಉಲ್ಲೇಖಿಸುವುದಾದರೆ ಗೋರಖ್‍ಪುರದ ವಲಯದಲ್ಲಿ ಬುದ್ಧ ಕಲಾ ಗ್ಯಾಲರಿ, ಕುಶೀನಗರದಲ್ಲಿ ಬೌದ್ಧ ಮ್ಯೂಸಿಯಂ, ಹಾಗೆಯೇ ಫೈಜಾಬಾದ್ ವಲಯದಲ್ಲಿ ಬರುವ ಅಂದಿನ ಕೋಸಲ ದೇಶದ ಎರಡನೇ ರಾಜಧಾನಿಯಾದ ಶ್ರಾವಸ್ತಿಯಲ್ಲಿ ಥೈಲ್ಯಾಂಡ್ ದೇಶದ ಸಹಕಾರದೊಡನೆ ಒಂದು ಬೃಹತ್ ವಿಹಾರ ನಿರ್ಮಾಣ, ಶ್ರಾವಸ್ತಿಯ ಎಂಟು ಸ್ತೂಪಗಳ ಪುನರ್‍ನವೀಕರಣ, ಅದೇ ಶ್ರಾವಸ್ತಿ ಬಳಿ ಇರುವ ಸಾಹೇತ್‍ನಲ್ಲಿಯ ಪ್ರಾಚೀನ ಬೌದ್ಧ ವಿಹಾರದ ಪಳೆಯುಳಿಕೆಯ ರಕ್ಷಣೆಗೆ ಕ್ರಮ, ಇತ್ಯಾದಿ. ಇನ್ನು ವಾರಣಾಸಿ ವಲಯದಲ್ಲಿ ಬರುವ ಸಾರನಾಥದಲ್ಲಿ ಧಮ್ಮ ಚಕ್ರ ಉದ್ಯಾನ ನಿರ್ಮಾಣ ಮತ್ತು ಚೌಕಂಡಿ ಸ್ತೂಪ ಅಭಿವೃದ್ಧಿ. ಹೀಗೆ ಕೋಟ್ಯಾಂತರ ರೂಗಳನ್ನು ವೆಚ್ಚ ಮಾಡಿ ಮಾಯಾವತಿಯವರು ಬೌದ್ಧ ವಿಹಾರಗಳು, ಅದರ ಹಳೇ ಪಳೆಯುಳಿಕೆಗಳ ರಕ್ಷಣೆ, ಪುನರ್ ನವೀಕರಣ, ಅಲ್ಲಿಗೆ ತೆರಳುವ ಕೋಟ್ಯಾಂತರ ಬೌದ್ಧ ಪ್ರವಾಸಿಗರಿಗಾಗಿ ರಸ್ತೆ, ಶೌಚಾಲಯ, ತಂಗಲು ವಸತಿ ವ್ಯವಸ್ಥೆ ಹೀಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಾರೆ.

ಇದಲ್ಲದೆ ತನ್ನ ಅನೇಕ ಯೋಜನೆಗಳನ್ನು ಬುದ್ಧನ ಹೆಸರಲ್ಲಿ ಜಾರಿಗೆ ತಂದ ಮಾಯಾವತಿಯವರು ಈ ದೇಶದ ಎಲ್ಲ ಯೋಜನೆಗಳನ್ನು ನೆಹರೂ, ಇಂದಿರಾ, ರಾಜೀವ್‍ರ ಹೆಸರಿನಲ್ಲೇ, ಹಾಗೆಯೇ ಮಹಾತ್ಮ ಗಾಂದೀಯವರ ಹೆಸರಿನಲ್ಲೇ ಜಾರಿಗೆ ತಂದ ಮನುವಾದಿಗಳಿಗೆ ಈ ನಿಟ್ಟಿನಲ್ಲಿ ಸೆಡ್ಡು ಹೊಡೆದರು. ಒಂದೆರಡನ್ನು ಉಲ್ಲೇಖಿಸುವುದಾದರೆ ಕಡು ಬಡತನದಲ್ಲಿರುವ ವ್ಯಕ್ತಿಗಳಿಗೆ ತಿಂಗಳಿಗೆ 300ರೂ ಹಣಕಾಸು ನೆರವು ನೀಡುವ ಭಗವಾನ್ ಬುದ್ಧನ ತಾಯಿಯ ಹೆಸರಿನಲ್ಲಿ ‘ಮಹಾಮಾಯಾ ಗರೀಬ್ ಆರ್ಥಿಕ್ ಮದದ್ ಯೋಜನಾ (ಬಡವರಿಗೆ ನೆರವು ನೀಡುವ ಮಹಾಮಾಯಾ ಹಣಕಾಸು ಯೋಜನೆ)’ ಹಾಗೆಯೇ ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಕುಟುಂಬದಲ್ಲಿ ಜನಿಸುವ ಹೆಣ್ಣು ಮಕ್ಕಳ ಹೆಸರಿನಲ್ಲಿ ನಿರ್ದಿಷ್ಟ ಮೊತ್ತ ಇಟ್ಟು ಅವರು 18 ತುಂಬಿದ ನಂತರ 1ಲಕ್ಷ ದೊರೆಯುವಂತೆ ಮಾಡುವ “ಮಹಾಮಾಯಾ ಗರೀಬ್ ಬಾಲಿಕಾ ಆಶೀರ್ವಾದ್ ಯೋಜನಾ” ಇತ್ಯಾದಿ. ಬರೇ ಇಂತಹ ಯೋಜನೆಗಳನ್ನು ರೂಪಿಸಿದ್ದಷ್ಟೆ ಅಲ್ಲ, ಈ ನಿಟ್ಟಿನಲಿ ಮಾಯಾವತಿಯವರು ಬೌದ್ಧ ಧರ್ಮ ಜಾಗೃತಿಯನ್ನು ಮೂಡಿಸಲು ರಾಜ್ಯಾದ್ಯಂತ ಬೌದ್ಧ ಮಹೋತ್ಸವಗಳನ್ನು ಕೂಡ ನಡೆಸಿದರು. 1997 ಮೇ 20ರಂದು ಸಾರನಾಥದಲ್ಲಿ ಬೌದ್ಧ ಮಹೋತ್ಸವ ಹಮ್ಮಿಕೊಂಡಿದ್ದ ಅವರು ಅದರಲ್ಲಿ ಮಾತನಾಡುತ್ತಾ “ಉತ್ತರ ಪ್ರದೇಶವು ಬುದ್ಧನ ಜೀವನ ಮತ್ತು ತತ್ವಗಳ ಸಾಕ್ಷೀಭೂತವಾಗಿದೆ. ಯಾಕೆಂದರೆ ಆತನ ಜೀವನದ ಪ್ರಮುಖ ಘಟನೆಗಳು ಅಂದರೆ ಜನನ, ಜ್ಞಾನೋದಯ, ಪ್ರಥಮ ಉಪದೇಶ ಮತ್ತು ಮಹಾಪರಿನಿರ್ವಾಣ ಉತ್ತರ ಪ್ರದೇಶದ ಈ ಮಣ್ಣಿನಲ್ಲೇ ಘಟಿಸಿವೇ. ಆ ಕಾರಣದಿಂದ ಈ ನೆಲವನ್ನು ವಿಶ್ವದ ಪ್ರತಿಯೊಬ್ಬನಿಗೂ ಪರಿಚಯಿಸಬೇಕಿದೆ” ಎಂದು ತಮ್ಮ ಧಮ್ಮ ಕಳಕಳಿಯ ಅಂತಃಕರಣವನ್ನು ಹೊರಹಾಕುತ್ತಾರೆ. ಹಾಗೆಯೇ 1997 ಅಕ್ಟೋಬರ್ 13ರಂದು ಬಾಬಾಸಾಹೇಬ್ ಅಂಬೇಡ್ಕರ್‍ರವರು ಬೌದ್ಧ ಧರ್ಮ ಸ್ವೀಕರಿಸಿದ ದಿನದ ಸ್ಮರಣಾರ್ಥ ಲಕ್ನೋದ ಗುಲಾಬ್ ವಾಟಿಕಾ ಎಂಬಲ್ಲಿ ‘ಅಖಿಲ ಬಾರತ ಬೌದ್ಧ ಸಮ್ಮೇಳನ’ವನ್ನು ಕೂಡ ಅವರು ಹಮ್ಮಿಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಮಾತನಾಡುತ್ತಾ ಮಾಯಾವತಿಯವರು “ಅಕ್ಟೋಬರ್ ತಿಂಗಳ ಈ ದಿನ ಪರಮಪೂಜ್ಯ ಬಾಬಾಸಾಹೇಬ್ ಅಂಬೇಡ್ಕರ್‍ರವರು ದಲಿತ ಶೊಷಿತ ಸಮಾಜವನ್ನು ಮೂಢನಂಬಿಕೆಗಳ ಕಬಂಧಕ ಬಾಹುಗಳಿಂದ ಬಿಡುಗಡೆಗೊಳಿಸಿ ಅವರಿಗೆ ಹೊಸದಿಕ್ಕನ್ನು ತೋರಿದರು” ಎನ್ನುತ್ತಾರೆ. ಹಾಗೆಯೇ ಮುಂದುವರಿದು ಅವರು “ನಾವು ಜೈರಾಮ್, ಜೈಸೀತಾರಾಮ್, ಜೈರಾಮ್-ಜೈಸೀತಾ ಇದರ ವಿರುದ್ಧ ಇಲ್ಲ. ಆದರೆ ಅವುಗಳ ಜೊತೆಗೆ ಅಂದರೆ ಜೈರಾಮ್, ಜೈಸೀತಾ-ರಾಮ್‍ಗಳ ಜೊತೆಗೆ ‘ನಮೋ ಬುದ್ಧಾಯ-ನಮೋ ಭೀಮಾಯ’ಗಳಿಗೂ ಸ್ಥಾನವಿರಬೇಕು” ಎಂದು ತಮ್ಮ ಹೋರಾಟದ ದಿಕ್ಕನ್ನು ಸೂಚಿಸುತ್ತಾರೆ. ಈ ನಿಟ್ಟಿನಲಿ ತಮ್ಮ ಸರ್ಕಾರ ಕಾರ್ಯೋನ್ಮುಖವಾಗಿರುವುದನ್ನೂ ಅವರು ಆ ಸಭೆಗೆ ಅರುಹುತ್ತಾರೆ. ಇದಲ್ಲದೆ 1997 ಮೇ 25ರಂದು ಲಕ್ನೋದಲ್ಲಿ ಪರಮಪೂಜ್ಯ ಬೌದ್ಧ ಗುರು ದಲೈಲಾಮಾರನ್ನು ಭೇಟಿಮಾಡಿದ ಮಾಯಾವತಿಯವರು ಬೌದ್ಧ ಗುರುಗಳಿಂದ ‘ಖತಮ್’ ಎಂಬ ಟಿಬೆಟ್ ವಸ್ತ್ರ ಪಡೆದು ಅವರಿಂದ ಆಶೀರ್ವಾದ ಪಡೆದುಕೊಳ್ಳುತ್ತಾರೆ. ಅಲ್ಲದೆ 1997ರಲ್ಲಿ ಕೊರಿಯಾಕ್ಕೆ ಭೇಟಿ ನೀಡುವ ಮಾಯಾವತಿಯವರು ಅಲ್ಲಿಯ ಮುಖ್ಯ ಬೌದ್ಧ ಗುರುಗಳಿಂದ ಬೋಧಿವೃಕ್ಷ(ಅರಳೀ ಗಿಡ)ವೊಂದನ್ನು ಸಹ ಉಡುಗೊರೆಯಾಗಿ ಪಡೆಯುತ್ತಾರೆ. ಇನ್ನು 2007ರಲ್ಲಿ ತಮ್ಮ ನಾಲ್ಕನೇ ಅವಧಿಯಲ್ಲಿ ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ ರಾಜ್ಯಾದಾದ್ಯಂತ ‘ದೀಪೋತ್ಸವ’ ನಡೆಸಿದ ಅವರು 2008ರಲ್ಲಿ ‘ದೀಪೋತ್ಸವ’ಗಳಲ್ಲದೆ ‘ಧಮ್ಮೇಕ್ ಸ್ತೂಪ’ದ ಬಳಿ ಬೌದ್ಧ ಭಿಕ್ಕುಗಳ ರಾಷ್ಟ್ರೀಯ ಸಮಾವೇಶವನ್ನು ಕೂಡ ನಡೆಸುತ್ತಾರೆ. 

ಒಟ್ಟಾರೆ ತಮ್ಮ ನಾಲ್ಕು ಅವಧಿಗಳ ಸುಮಾರು 9ವರ್ಷಗಳ ಆಡಳಿತದಲ್ಲಿ ಮಾಯಾವತಿಯವರು ‘ಬುದ್ಧ ಹುಟ್ಟಿದ ನಾಡು, ಬೋಧಿಸತ್ವರ ಬೀಡು’ ಉತ್ತರ ಪ್ರದೇಶವನ್ನು ಮತ್ತೆ ಬೌದ್ಧ ತೊಟ್ಟಿಲ (cardle of buddhism)ನ್ನಾಗಿಸುತ್ತಾರೆ. ಯಾವ ಅಶೋಕ, ಕಾನಿಷ್ಕಾ,
DALIT PRERANA STHAL
ಹರ್ಷವರ್ಧನ ತಮ್ಮ ಆ ಕಾಲದ ಆಳ್ವಿಕೆಯಲ್ಲಿ ಭಗವಾನ್ ಬುದ್ಧನ ಧಮ್ಮವನ್ನು ಪ್ರಚುರ ಪಡಿಸಿದರೋ ಆ ಪವಿತ್ರ ಕಾರ್ಯವನ್ನು ಮಾಯಾವತಿಯವರು ತಮ್ಮ ಈ ಕಾಲದ ಆಳ್ವಿಕೆಯಲ್ಲಿ ಮುಂದುವರೆಸುತ್ತಾರೆ. ಈ ಸಂದರ್ಭದಲ್ಲಿ 1997 ಅಕ್ಟೋಬರ್ 13ರಂದು ‘ಅಖಿಲ ಭಾರತ ಬೌದ್ಧ ಸಮ್ಮೇಳನ’ದಲ್ಲಿ ಬೆಹನ್‍ಜೀಯವರು ಮಾಡಿದ ಭಾಷಣದ ಕೊನೆಯ ಸಾಲುಗಳನ್ನು ಉಲ್ಲೇಖಿಸುತ್ತಾ ಈ ಬೌದ್ಧ ಯಾತ್ರೆಯನ್ನು ಮುಗಿಸುತ್ತೇನೆ. ಮಾಯಾವತಿಯವರು ಹೇಳುತ್ತಾರೆ “ನನ್ನ ಕಳಕಳಿಯ ಮನವಿಯೇನೆಂದರೆ ನಾವು ಮಾನವತೆಗೋಸ್ಕರ ಭಗವಾನ್ ಬುದ್ಧನ ಬೋಧನೆಯನ್ನು ಪಾಲಿಸಬೇಕು. ನಾವು ಬುದ್ಧನನ್ನು ಗೌರವಿಸುತ್ತೇವೆ, ಆರಾಧಿಸುತ್ತೇವೆ. ಆದರೆ ಆ ಆಧರ ಮತ್ತು ಗೌರವ ನಿಜಕ್ಕೂ ಅರ್ಥಪೂರ್ಣವಾಗುವುದು ನಾವು ಅವರ ಮಾರ್ಗ ಅನುಸರಿಸಿದಾಗ. ಈ ಕಾರಣದಿಂದ ನನ್ನ ಮನವಿಯೇನೆಂದರೆ ನೀವು ಭಗವಾನ್ ಬುದ್ಧ ಮತ್ತು ಬಾಬಾಸಾಹೇಬ್ ಡಾ.ಅಂಬೆಶೀಡ್ಕರ್‍ರವರು ತೋರಿಸಿದ ಮಾರ್ಗದಲ್ಲಿ ಮನ್ನಡೆಯಬೇಕು. ಬಾಬಾಸಾಹೇಬ್ ಅಂಬೇಡ್ಕರ್‍ರವರು ಇಂದು ನಮ್ಮ ನಡುವೆ ಇಲ್ಲ. ಆದರೆ ಅವರು ಮಾಡಿರುವ ಕೆಲಸ ಅನನ್ಯವಾದುದು. ಈ ನಿಟ್ಟಿನಲಿ ಅವರ ಆ ಅಪೂರ್ಣ ಕೆಲಸಗಳನ್ನು ಪೂರ್ಣಗೊಳಿಸಬೇಕಾದದ್ದು ಬುದ್ಧೀಜೀವಿಗಳಾದ ನಮ್ಮ ನಿಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲಿ ನಾವು ಕಾರ್ಯೋನ್ಮುಖರಾಗೋಣ. ಜೈಭೀಮ್. ಜೈಭಾರತ್”.

No comments:

Post a Comment