Thursday, 29 May 2014

   ಪೂನಾ ಒಪ್ಪಂದ ಮತ್ತು ಕಸಿಯಲ್ಪಟ್ಟ ಅಸ್ಪøಶ್ಯರ ಹಕ್ಕುಗಳು

                  -ರಘೋತ್ತಮ ಹೊ. ಬ.


   “ರಾಮ ಕೃಷ್ಣ ಗಾಂಧಿ ಬುದ್ಧ ಹುಟ್ಟಿದಂತ ದೇಶವೆಂದು ಸಂತೋಷದಿ ಹೇಳುವೆ” _ ಇದು ಜನಪ್ರಿಯ ಚಿತ್ರವೊಂದರ ಜನಪ್ರಿಯ ಹಾಡು. ರಾಮ ಕೃಷ್ಣ ಪುರಾಣದ ಪಾತ್ರಗಳಾದ್ದರಿಂದ ಅವರ ಅಗತ್ಯತೆಯನ್ನು ಇಲ್ಲಿ ಪ್ರಸ್ತಾಪಿಸಲು ಹೋಗುತ್ತಿಲ್ಲ. ಅದೇ ಗಾಂಧಿ,ü ಬುದ್ಧ? ಎಲ್ಲಿಯ ಗಾಂಧಿ? ಎಲ್ಲಿಯ ಬುದ್ಧ? ಏಕೆಂದರೆ “ಬಹುಜನ ಹಿತಾಯ, ಬಹುಜನ ಸುಖಾಯ” ಎಂದ ಬುದ್ಧ ಎಲ್ಲಿ? ಅಸ್ಪøಶ್ಯರ ಹಕ್ಕುಗಳನ್ನು ಪ್ರಾಣವನ್ನೇ ಪಣವಾಗಿಟ್ಟು ವಿರೋಧಿಸಿದ ಗಾಂಧಿ ಎಲ್ಲಿ?
   
   1932 ಸೆಪ್ಟೆಂಬರ್ 24ರ ಪೂನಾ ಒಪ್ಪಂದ, ಮತ್ತದರ ಸಂಬಧಿತ ಘಟನಾವಳಿಗಳು ಗಾಂಧೀಜಿಯವರನ್ನು ಅಕ್ಷರಶಃ ಬೆತ್ತಲುಗೊಳಿಸುತ್ತವೆ! ತಮ್ಮ ಹೀನ ತಂತ್ರಗಳ ಮೂಲಕ ಶೋಷಿತ ಜನಸಮುದಾಯದ ಹಕ್ಕುಗಳಿಗೆ ಬೆಂಕಿಯಿಡಲು ಯತ್ನಿಸಿದ ಆವರ ನಯವಂಚಕತನವನ್ನು ಬಟಾಬಯಲುಗೊಳಿಸುತ್ತವೆ.
  
   ನಿಜ, ಇಡೀ ದೇಶವೆ ಮಹಾತ್ಮರೆಂದು ಕರೆಯುವ ರಾಷ್ಟ್ರಪಿತ ಎಂದು ಗೌರವಿಸುವ ವ್ಯಕ್ತಿಯೊಬ್ಬರ ಬಗ್ಗೆ ಕೇವಲವಾಗಿ ಬರೆಯುವುದು ಅಷ್ಟು ಸುಲಭದ ಮಾತಲ್ಲ. ಆದರೆ ಸತ್ಯ ಎಲ್ಲೆಡೆಗೆ ಹಂಚಬೇಕೆಂದಾಗ, ಆ ಸತ್ಯಕ್ಕೆ ಸೂಕ್ತ ಸಾಕ್ಷಿ ಇರುವಾಗ ಭಯವೇಕೆ? ಅಂಜಿಕೆ ಏಕೆ? ಅಳುಕೇಕೆ? ಅದರಲ್ಲೂ ಸರ್ಕಾರಿ ಮುದ್ರಿತ ಸಾಕ್ಷಿ ಇರುವಾಗ? ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಕಟಿಸಿರುವ “ಬಾಬಾಸಾಹೇಬ್ ಡಾ.ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು” ಕೃತಿ ಸರಣಿಯ 9ನೇ ಸಂಪುಟದ “ಕಾಂಗ್ರೆಸ್ ಮತ್ತು ಗಾಂಧಿ ಅಸ್ಪøಶ್ಯರಿಗಾಗಿ ಮಾಡಿರುವುದೇನು?” ಕೃತಿ ಅಂತಹ ಗಟ್ಟಿ ಸಾಕ್ಷಿಯಾಗಿ ಮಹಾತ್ಮಗಾಂಧಿಯವರ ಇಬ್ಬಗೆಯ ನೀತಿಯನ್ನು ಅಕ್ಷರಶಃ ಬಯಲಿಗೆಳೆಯುತ್ತದೆ. ಮಹಾತ್ಮ ಗಾಂಧಿಯವರನ್ನು ಹೀಗೆ ಬಯಲಿಗೆಳೆಯುವುದರ ಹಿಂದೆ ಪೂರ್ವಾಗ್ರಹ ಪೀಡಿತ ಮನಸ್ಸಾಗಲೀ ಯಾವುದೋ ದುರುದ್ದೇಶವಾಗಲೀ ಇಲ್ಲ. ಬದಲಿಗೆ ಸತ್ಯವನ್ನು ತಿಳಿಸುವ ಆ ಮೂಲಕ  ಶೋಷಿತರ ಏಳಿಗೆಗೆ ಐತಿಹಾಸಿಕವಾಗಿ ಅಡ್ಡಿಯಾದ ಕಹಿ ಘಟನೆಯನ್ನು ದಾಖಲಿಸುವುದಷ್ಟೆ ಇಲ್ಲಿಯ ಉದ್ದೇಶ.

    ಇರಲಿ, ಪೂನಾ ಒಪ್ಪಂದ ಹಾಗೆಂದರೇನು ಎಂದು ತಿಳಿಯುವುದಕ್ಕೆ ಮೊದಲು ಆ ಒಪ್ಪಂದಕ್ಕೆ ಕಾರಣವಾದ ಕೆಲವು ಘಟನೆಗಳತ್ತ ಕಣ್ಣಾಯಿಸುವುದು ಸೂಕ್ತ. ಏಕೆಂದರೆ  ಅಂತಹ ಘಟನೆಗಳು ಮತ್ತು ಆ ಘಟನೆಗಳ ಉಪಕ್ರಮವಾಗಿ ರೂಪುಗೊಂಡದ್ದೆ ಈ ಒಪ್ಪಂದ.
  
    1930ರ ನವೆಂಬರ್ ತಿಂಗಳಲ್ಲಿ ಬ್ರಿಟಿಷ್ ಭಾರತದಲ್ಲಿ ಸಾಂವಿಧಾನಿಕ ಬೆಳವಣಿಗೆಗಳನ್ನು ಪರಿಷ್ಕರಿಸಲು ಲಂಡನ್ನಿನಲ್ಲಿ ಪ್ರಧಾನಿ ರ್ಯಾಮ್ಸೆ ಮ್ಯಾಕ್ ಡೊನಾಲ್ಡ್‍ರ ಅಧ್ಯಕ್ಷತೆಯಲ್ಲಿ  ಮೊದಲನೆಯ ದುಂಡುಮೇಜಿನ ಸಭೆ ನಡೆಯಿತು. ಸಭೆಯಲ್ಲಿ ಅಸ್ಪøಶ್ಯರ ಪ್ರತಿನಿಧಿಗಳಾಗಿದ್ದ ಡಾ.ಅಂಬೇಡ್ಕರ್‍ರವರು ಸಮಾನ ಪೌರತ್ವ, ಸಮಾನತೆಯ ಹಕ್ಕು, ಶಾಸಕಾಂಗಗಳಲ್ಲಿ ಪ್ರಾತಿನಿಧ್ಯ, ಉದ್ಯೋಗದಲ್ಲಿ ಮೀಸಲಾತಿ ಇತ್ಯಾದಿ ಬೇಡಿಕೆಗಳನ್ನೊಳಗೊಂಡ ಜ್ಞಾಪನಪತ್ರವೊಂದನ್ನು ದುಂಡುಮೇಜಿನ ಸಭೆಯ ಬಹುಮುಖ್ಯ ಉಪಸಮಿತಿಯಾದ ಅಲ್ಪಸಂಖ್ಯಾತರ ಸಮಿತಿಗೆ ಸಲ್ಲಿಸಿದರು. ಸಭೆಯು ಮುಕ್ತಾಯವಾಗುವ ಮುನ್ನ ಅಂಬೇಡ್ಕರರ ಬೇಡಿಕೆಗಳ ಬಗ್ಗೆ ಆ ಸಭೆ ಸಹಮತ ವ್ಯಕ್ತಪಡಿಸಿತು. ಒಂದರ್ಥದಲ್ಲಿ ಪ್ರಥಮ ದುಂಡುಮೇಜಿನ ಸಭೆ ಅಸ್ಪøಶ್ಯರಿಗೆ ಒಂದು ರೀತಿಯ ನೈತಿಕ ಜಯವನ್ನು ತಂದುಕೊಟ್ಟತು. ಏಕೆಂದರೆ ಈ ಸಭೆಯಲ್ಲಿ ಪ್ರಪ್ರಥಮವಾಗಿ ಅಸ್ಪøಶ್ಯರು ಬೇರೆ ಅಲ್ಪಸಂಖ್ಯಾತರ ರೀತಿಯಲ್ಲಿ  ಪ್ರತ್ಯೇಕ ರಾಜಕೀಯ ಮತ್ತು ಸಾಂವಿಧಾನಿಕ ಹಕ್ಕು ಪಡೆಯಲು ಅರ್ಹರು ಎಂಬ ತೀರ್ಮಾನ ವ್ಯಕ್ತವಾಯಿತು. ಒಂದರ್ಥದಲ್ಲಿ ಇದು ಅಂಬೇಡ್ಕರರಿಗೆ ಸಿಕ್ಕ ಪ್ರಥಮ ರಾಜಕೀಯ ಯಶಸ್ಸು ಕೂಡ ಆಗಿತ್ತು

     ದುರಂತವೆಂದರೆ ಅಂಬೇಡ್ಕರರ ಈ ಯಶಸ್ಸು ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಯಿತು. ಹೀಗಾಗಿ ಎಲ್ಲಿ ಅಂಬೇಡ್ಕರರ ಬೇಡಿಕೆಗಳು ಕಾನೂನಾಗಿ ರೂಪಿತವಾಗುತ್ತದೋ ಎಂದು ಆತಂಕಗೊಂಡ, ಮೊದಲ ದುಂಡು ಮೇಜಿನ ಸಭೆಗೆ ಕಾರಣಾಂತರಗಳಿಂದ ಗೈರಾಗಿದ್ದ ಕಾಂಗ್ರೆಸ್ಸಿಗರು ಎರಡನೇ ದುಂಡುಮೇಜಿನ ಸಭೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿ ಮಹಾತ್ಮಗಾಂಧಿಯವರನ್ನು ತನ್ನ ಪ್ರತಿನಿಧಿಯಾಗಿ ಕಳುಹಿಸಿತು.
   
    ಅಚ್ಚರಿಯೆಂದರೆ ಯಾವ ಗಾಂಧೀಜಿಯವರನ್ನು ಅಸ್ಪøಶ್ಯರ ಪರ ಎಂದು ಆ ಕಾಲದಲ್ಲಿ ಬಿಂಬಿಸಲಾಗಿತ್ತೊ ಅದೇ ಗಾಂಧೀಜಿಯವರು ಎರಡನೇ ದುಂಡುಮೇಜಿನ ಸಭೆಯಲ್ಲಿ ಅದೇ ಅಸ್ಪøಶ್ಯರ ವಿರುದ್ಧ ನಿಂತರು! ಯಾವ ಪರಿ ಎಂದರೆ ಸ್ವತಃ ಅಂಬೇಡ್ಕರ್‍ರವರೇ “ಇದು ಶ್ರೀ ಗಾಂಧಿ ಮತ್ತು ಕಾಂಗ್ರೆಸ್ಸು ಅಸ್ಪøಶ್ಯರ ವಿರುದ್ಧ ಸಾರಿದ ಸಮರವಾಗಿತ್ತು” ಎನ್ನುವಷ್ಟರ ಮಟ್ಟಿಗೆ! ಪ್ರಶ್ನೆಯೇನೆಂದರೆ ಗಾಂಧಿ ಮತ್ತು ಕಾಂಗ್ರೆಸ್ಸಿಗರು ಹಾಗೇಕೆ ಮಾಡಿದರು? ಅಸ್ಪøಶ್ಯರ ವಿರುದ್ಧ ಸಮರ ಸಾರುವ ಅಗತ್ಯವಾದರೂ ಏನಿತ್ತು? ಇದು ಸವರ್ಣೀಯ ಹಿಂದುಗಳು ಒಟ್ಟಾಗಿ ಅಸ್ಪøಶ್ಯರ ಹಕ್ಕುಗಳನ್ನು ತುಳಿಯುವ ಹೀನ ಕೃತ್ಯವಾಗಿತ್ತೇ? ಮತ್ತು ಅಂತಹ ಕೃತ್ಯದ ನೇತೃತ್ವವನ್ನು ಸ್ವತಃ ಮಹಾತ್ಮ ಗಾಂಧಿಯವರೇ ವಹಿಸಿಕೊಂಡಿದ್ದರೆ?

     ಗಾಂಧಿಯವರ ಅಂದಿನ ಮನಸ್ಥಿತಿಯನ್ನು ಅಂಬೇಡ್ಕರರ ಮಾತುಗಳಲ್ಲೇ ಹೇಳುವುದಾದರೆ “ಶ್ರೀ ಗಾಂಧಿಯವರು ಆವೇಶ ಭರಿತರಾಗಿದ್ದರು.  ಪ್ರಥಮ ದುಂಡು ಮೇಜಿನ ಸಭೆಯಲ್ಲಿ ಈ ಅಲ್ಪಸಂಖ್ಯಾತರ (ಅಸ್ಪøಶ್ಯರು, ಮುಸಲ್ಮಾನರು, ಕ್ರೈಸ್ತರು, ಸಿಖ್ಖರು, ಆಂಗ್ಲೋಇಂಡಿಯನ್ನರು) ಒಡಂಬಡಿಕೆಯನ್ನು  ಸಿದ್ದಪಡಿಸುವುದರಲ್ಲಿ ಭಾಗವಹಿಸಿದ ಪ್ರತಿಯೊಬ್ಬರ ಮೇಲೂ ಅವರು ಹರಿಹಾಯ್ದರು. ಅದರಲ್ಲಿಯೂ ಅವರು ಅಸ್ಪøಶ್ಯರಿಗೆ ಪ್ರತ್ಯೇಕ ರಾಜಕೀಯ ಹಕ್ಕನ್ನು  ನೀಡುವುದನ್ನು ಉಗ್ರವಾಗಿ ಪ್ರತಿಭಟಿಸಿದರು!”.
     ಅಂದಹಾಗೆ ಸಭೆಯಲ್ಲಿ ಆಕ್ರೋಶಗೊಂಡ  ಗಾಂಧಿಯವರು ಮಾತನಾಡುತ್ತಾ “ಅಸ್ಪøಶ್ಯರ ಪರವಾಗಿ ಮುಂದಿಡಲಾದ ಈ ಬೇಡಿಕೆ (ಪ್ರತ್ಯೇಕ ರಾಜಕೀಯ ಹಕ್ಕು) ನನ್ನನ್ನು ನಿರ್ದಯವಾಗಿ ಇರಿದಂತಿದೆ!  ಬೇಕಾದರೆ ಅಸ್ಪøಶ್ಯರು ಇಸ್ಲಾಂ ಧರ್ಮಕ್ಕೆ ಹೋಗಲಿ, ಕ್ರೈಸ್ತ ಧರ್ಮವನ್ನಾದರೂ ಸೇರಲಿ, ನನ್ನದೇನು ಅಭ್ಯಂತರವಿಲ್ಲ. ಆದರೆ ಅವರಿಗೆ  ಪ್ರತ್ಯೇಕ ಮತದಾನ ಪದ್ಧತಿ ನೀಡುವುದನ್ನು ಖಂಡತುಂಡವಾಗಿ ವಿರೋಧಿಸುತ್ತೇನೆ“ ಎನ್ನುತ್ತಾರೆ. ಇದು ಯಾವ ಪರಿ ಎಂದರೆ ಭಾರತಕ್ಕೆ ಸ್ವಾತಂತ್ರ್ಯ ಕೊಡದಿದ್ದರೂ ಪರವಾಗಿಲ್ಲ  ಅಸ್ಫøಶ್ಯರಿಗೆ ಪ್ರತ್ಯೇಕ ಮತದಾನ ಪದ್ಧತಿ ಕೊಡುವುದು ಮಾತ್ರ ಬೇಡ. ಹಾಗೇನಾದರೂ ಅಸ್ಪøಶ್ಯರಿಗೆ ಪ್ರತ್ಯೇಕ ಮತದಾನ ಪದ್ಧತಿ ಮತ್ತು ಮೀಸಲಾತಿ ಕೊಟ್ಟಿದ್ದೇ ಆದರೆ ಅದನ್ನು ನನ್ನ ಪ್ರಾಣವನ್ನೇ ಪಣವಾಗಿಟ್ಟು ವಿರೋಧಿಸುವೆ“ ಎನ್ನುತ್ತಾರೆ. ತಮ್ಮ ಈ ವಿರೋಧಕ್ಕೆ ಗಾಂಧೀಜಿಯವರು ಕೊಡುವ ಕಾರಣವಾದರೂ ಎನು? “ಇದರಿಂದ ಹಿಂದೂ ಧರ್ಮದ ವಿಭಜನೆಯಾಗುತ್ತದೆ“ ಎಂದು!
    
   ಯಾರನ್ನು ಮಹಾತ್ಮ ಎನ್ನಲಾಗುತ್ತಿತ್ತೋ, ಯಾರನ್ನು ಅಸ್ಪøಶ್ಯರ ಉದ್ಧಾರಕ ಎನ್ನಲಾಗುತ್ತಿತ್ತೋ ಅಂತಹವರಿಂದ ಹೊರಟ “ಅಸ್ಪøಶ್ಯೋದ್ಧಾರದ” ಮಾತುಗಳಿವು! ಹಾಗೇನಾದರೂ ಗಾಂಧೀಜಿಯವರ ಮಾತೇ “ಅಂತಿಮ ತೀರ್ಪು” ಎನ್ನುವ ಹಾಗಿದ್ದರೆ ಆವತ್ತೆ ಅಸ್ಪøಶ್ಯರ ಹಣೆಬರಹ ಏನೆಂದು ತೀರ್ಮಾನವಾಗಿರುತ್ತಿತ್ತು! ಆದರೆ ಗಾಂಧೀಜಿಯವರ ಆ ರೋಷದ ಮಾತುಗಳ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದ ಸಭೆ ಅಸ್ಪøಶ್ಯರಿಗೆ ಅವರ ನ್ಯಾಯಬದ್ಧ ಹಕ್ಕುಗಳನ್ನು ನೀಡುವುದರ ಪರ ಇದ್ದಂತ್ತಿತು.್ತ ಅಲ್ಲದೇ “ಅಸ್ಪøಶ್ಯರ ಮೊದಲನೇ ಶತೃ ಸಾಕ್ಷಾತ್ ಗಾಂಧೀಜಿಯವರೇ” ಎಂದು ಇಡೀ ಸಭೆಗೆ ಚೆನ್ನಾಗಿ ತಿಳಿದು ಹೋಯಿತು. ತಾನು ನೀಡುವ  ತೀರ್ಪಿಗೆ ಎಲ್ಲರೂ ಬದ್ಧರಾಗಿರಬೇಕೆಂದು ಒಪ್ಪಿಗೆ ಪಡೆದು ಎಲ್ಲರಿಂದಲೂ ಸಹಿ ಹಾಕಿಸಿಕೊಂಡ ಬ್ರಿಟಿಷ್ ಪ್ರಧಾನಿಯವರು ಎಲ್ಲರನ್ನು ಭಾರತಕ್ಕೆ ವಾಪಸ್ ಕಳುಹಿಸಿದರು. 
  
   ಇತ್ತ ಭಾರತಕ್ಕೆ ವಾಪಸ್ ಬಂದ ಗಾಂಧೀಜಿಯವರು ಸುಮ್ಮನೆ ಕೂರಲಿಲ್ಲ್ಲ. ಅಸ್ಪøಶ್ಯರ ಬೇಡಿಕೆಗಳ ಪರ ನಿಂತಿದ್ದ ಮುಸಲ್ಮಾನರನ್ನು ಅಸ್ಪøಶ್ಯರ ವಿರುದ್ಧ ಎತ್ತಿಕಟ್ಟಲು ಯತ್ನಿಸಿದರು. ಆದರೆ ಪ್ರತಿಫಲ ಶೂನ್ಯವಾಗಿತ್ತು. ಈ ಪಿತೂರಿಯನ್ನು ಸ್ವತಃ ಅಂಬೇಡ್ಕರ್‍ರವರೇ “ಮುಸಲ್ಮಾನರು ಈ ಐತಿಹಾಸಿಕ ಪಿತೂರಿಯಲ್ಲಿ ಭಾಗಿಗಳಾಗಲು ನಿರಾಕರಿಸಿದ್ದರಿಂದ ಈ ಯೋಜನೆ ವಿಫಲಗೊಂಡಿತು” ಎನ್ನುತ್ತಾರೆ.

    ಒಟ್ಟಾರೆ ಗಾಂಧೀಜಿಯವರಿಂದ ಸೃಷ್ಟಿಯಾದ ಈ ಎಲ್ಲಾ ಗೊಂದಲಗಳ ನಡುವೆ ಆಗಸ್ಟ್ 17, 1932ರಂದು ಬ್ರಿಟಿಷ್ ಪ್ರಧಾನಿ ರ್ಯಾಮ್ಸೆ ಮ್ಯಾಕ್ ಡೊನಾಲ್ಡ್ ಐತಿಹಾಸಿಕ “ಕೋಮುವಾರು ತೀರ್ಪು” ಪ್ರಕಟಿಸಿದರು. ಅದರಲ್ಲಿ ಅಂಬೇಡ್ಕರ್‍ರವರು ಕೇಳಿದ್ದ ಎಲ್ಲಾ ನ್ಯಾಯಬದ್ಧ ಬೇಡಿಕೆಗಳನ್ನು(ಪ್ರತ್ಯೇಕ ಮತದಾನ ಪದ್ಧತಿ, ಉದ್ಯೋಗದಲ್ಲಿ ಮೀಸಲಾತಿ, ಸಮಾನ ನಾಗರೀಕ ಹಕ್ಕು ಇತ್ಯಾದಿ) ಈಡೇರಿಸಲಾಗಿತ್ತು. ಹಾಗೆಯೇ ‘ಹಿಂದೂಧರ್ಮ  ವಿಭಜನೆಯಾಗುತ್ತದೆ’ ಎಂಬ ಗಾಂಧೀಜಿಯವರ ಆತಂಕವನ್ನು ದೂರಗೊಳಿಸಲು ಅಸ್ಪøಶ್ಯರಿಗೆ ಎರಡು ಓಟು ಹಾಕುವ ಹಕ್ಕು ನೀಡಲಾಯಿತು! ಒಂದು ಓಟನ್ನು ”ತಮ್ಮವರು ಮಾತ್ರ ಸ್ಪರ್ಧಿಸುವ” ಹಾಗೇ “ತಾವೊಬ್ಬರೇ ಮಾತ್ರ ಮತ ಚಲಾಯಿಸುವ” ಪ್ರತ್ಯೇಕ ಮತಕ್ಷೇತ್ರದಲ್ಲಿ ಚಲಾಯಿಸಲು, ಮತ್ತೊಂದು ಓಟನ್ನು ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗಳ ಪರ ಸಾಮಾನ್ಯ ಮತ ಕ್ಷೇತ್ರದಲ್ಲಿ ಚಲಾಯಿಸಲು ಅವಕಾಶ ನೀಡಿ ನೀಡಲಾಯಿತು. ಒಂದರ್ಥದಲಿ ಅಸ್ಪøಶ್ಯರಿಗೆ ನೀಡಲಾದ ಈ ಎರಡು ಓಟು ಹಾಕುವ ಹಕ್ಕು ಶತಮಾನಗಳಿಂದ ನೊಂದವರಿಗೆ “ಅಮೃತ” ಸಿಕ್ಕ ಹಾಗೆ ಆಗಿತ್ತು.
 
   ಒಟ್ಟಿನಲಿ ಅಂಬೇಡ್ಕರರ ನ್ಯಾಯಬದ್ಧವಾದ, ತರ್ಕಬದ್ಧವಾದ ಬೇಡಿಕೆ ಮತ್ತು ಆ ಬೇಡಿಕೆಗೆ ಪೂರಕವಾಗಿ ಬ್ರಿಟಿಷ್ ಪ್ರಧಾನಿಯವರ “ಬುದ್ಧಿವಂತಿಕೆಯ ತೀರ್ಮಾನ” ಅಸ್ಪøಶ್ಯತೆಯ ಸಮಸ್ಯೆಯನ್ನು ಒಮ್ಮೆಲೆ ಕೊನೆಗಾಣಿಸುವ ಸದಾಶಯವನ್ನು ಇಡೀ ಭಾರತದಾದ್ಯಂತ ಬಿತ್ತಿತು.
  
   ಆದರೆ? ಯಾವ ಅಸ್ಪøಶ್ಯರನ್ನು ತಾವು  ಶತಮಾನಗಳಿಂದ ಶೋಷಿಸಿದ್ದೇವೆಯೋ ಅಂತಹ ಅಸ್ಪøಶ್ಯರಿಗೆ ಒಮ್ಮೆಲೇ “ಅಮೃತ” ಸಿಗುವುದನ್ನು ಯಾರು ತಾನೆ ಸಹಿಸಿಕೊಳ್ಳುತ್ತಾರೆ? ಅದೂ ಸಾಕ್ಷಾತ್ ಮಹಾತ್ಮ ಗಾಂಧೀಜೀಯವರೆ ಆ ಗುಂಪಿನ ನಾಯಕರಾಗಿರುವಾಗ? ಅಲ್ಲದೆ “ಅಸ್ಪøಶ್ಯರಿಗೆ ನೀಡಲಾಗುವ ಅಂತಹ ಯಾವುದೇ ಸೌಲಭ್ಯವನ್ನು ನನ್ನ ಪ್ರಾಣವನ್ನೇ ಪಣವಾಗಿಟ್ಟು ವಿರೋಧಿಸುವೆ” ಎಂದು ಅವರು ಮೊದಲೇ ತಿಳಿಸಿರುವಾಗ? ಅಕ್ಷರಶಃ ನಿಜ. ಗಾಂಧೀಜಿಯುವರು ತಮ್ಮ ಆ “ತೀರ್ಮಾನಕ್ಕೆ” ಬದ್ಧರಾದರು. ಅಂತಹ ಬದ್ಧತೆಯ (ಅಸ್ಪøಶ್ಯರನ್ನು ತುಳಿಯುವ) ಕಾರಣದಿಂದಲೇ ಸೆಪ್ಟೆಂಬರ್ 20, 1932ರಂದು ಪೂನಾದ ಯರವಾಡ ಜೈಲಿನಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಕುಳಿತರು. ಇದುವರೆಗೂ ತಾವು ಕೈಗೊಂಡಿದ್ದ 21 ಉಪವಾಸಗಳಲ್ಲಿ ಒಮ್ಮೆಯೂ ಅಸ್ಪøಶ್ಯರ ಪರ ಉಪವಾಸ ಕೈಗೊಳ್ಳದ ಗಾಂಧೀಜಿಯವರು ಪ್ರಪ್ರಥಮವಾಗಿ ಅಸ್ಪøಶ್ಯರ ವಿರುದ್ಧವೇ ಉಪವಾಸ ಪ್ರಾರಂಭಿಸಿದ್ದರು!
   
   ಗಾಂಧೀಜಿಯವರ ಈ ಹೇಯ ಉಪವಾಸವನ್ನು ಅವರ ಶಿಷ್ಯನೊಬ್ಬ “ಐತಿಹಾಸಿಕ ಮಹಾನ್ ಉಪವಾಸ” ವೆಂದು ಬಣ್ಣಿಸಿದ! ಇಂತಹ ಈ ಬಣ್ಣನೆಗೆ ಅಂಬೇಡ್ಕರ್‍ರವರ ಪ್ರತಿಕ್ರಿಯೆ ಹೀಗಿತ್ತು ”ಅದರಲ್ಲಿ ಐತಿಹಾಸಿಕ ಮಹತ್ತು ಏನಿದೆಯೋ ನಾನರಿಯೆ. ಈ ಕ್ರಿಯೆಯಲ್ಲಿ ಶೌರ್ಯವೇನು ಇರಲಿಲ್ಲ. ನಿಜವಾದ ಅರ್ಥದಲ್ಲಿ ಅದು ಹೇಡಿಯ ಕೃತ್ಯವಾಗಿತ್ತು. ಅದು ಕೇವಲ ದುಸ್ಸಾಹಸವೇ ಆಗಿತ್ತು. ತನ್ನ ಅಮರಣಾಂತ ಉಪವಾಸಕ್ಕೆ ಬ್ರಿಟಿಷ್ ಸರಕಾರವೂ ಅಸ್ಪøಶ್ಯರೂ ಗಢಗಢ ನಡುಗಿ ನೆಲಕಚ್ಚುವರೆಂದೂ, ತಮಗೆ ಅವರೆಲ್ಲ ಶರಣಾಗಿ ಬರುವರೆಂದೂ ಶ್ರೀಮಾನ್ ಗಾಂಧಿಯವರು ನಂಬಿದ್ದರು. ಆದರೆ ಅವರು (ಅಸ್ಪøಶ್ಯರು ಮತ್ತು ಬ್ರಿಟಿಷರು) ಧೃಡವಾಗಿಯೇ ಉಳಿದು ಗಾಂಧಿಯವರನ್ನು ಪರೀಕ್ಷಿಸ ಬಯಸಿದರು. ಒಂದರ್ಥದಲಿ ಗಾಂಧಿಯವರ ಪರೀಕ್ಷೆಯೂ ಆಯಿತು!  ತಾನು ಹೊಂಚಿದ ಉಪಾಯ ಅತಿಯಾಯಿತೆಂದು ಗಾಂಧಿಯವರಿಗೆ ಮನವರಿಕೆಯಾದಾಗ ಅವರ ಶೂರತನವು ಸೋರಿಹೋಗಿತ್ತು. ಅಸ್ಪøಶ್ಯರಿಗೆ ನೀಡಿರುವ ಸೌಲಭ್ಯವನ್ನು ಹಿಂತೆಗೆಸಿ ಅವರನ್ನು ಯಾವುದೇ ಸಹಾಯವಿಲ್ಲದ, ಯಾವುದೇ ಹಕ್ಕುಗಳಿಲ್ಲದ ನಿಕೃಷ್ಟರನ್ನಾಗಿ ಮಾಡುವವರೆಗೂ ನನ್ನ ಉಪವಾಸ ಮುಂದುವರೆಯುತ್ತದೆ ಎಂದು  ಪ್ರಾರಂಭವಾದ ಅವರ ಸತ್ಯಾಗ್ರಹ  ಕಡೆಗೆ “ನನ್ನ ಜೀವ ನಿಮ್ಮ ಕೈಯಲ್ಲಿದೆ. ನನ್ನನ್ನು ಬದುಕಿಸಿ” ಎಂದು ನನ್ನನ್ನು ಬೇಡಿಕೊಳ್ಳುವವರೆಗೆ ತಲುಪಿತು! ಒಪ್ಪಂದಕ್ಕೆ ಸಹಿಹಾಕಿಸಿಕೊಳ್ಳಲು ಅವರು ತುಂಬಾ ಹಪಹಪಿಸತೊಡಗಿದರು. ಪೂನಾ ಒಪ್ಪಂದಕ್ಕೆ ಸಹಿಯಾಗದೆ ಬ್ರಿಟಿಷ್ ಪ್ರಧಾನಿಯವರ ಕೋಮುವಾರುತೀರ್ಪು ರದ್ಧಾಗುತ್ತಿರಲಿಲ್ಲ. ಪ್ರಾರಂಭದಲ್ಲಿ ಶ್ರೀಮಾನ್ ಗಾಂಧಿಯವರು ಒತ್ತಾಯಿಸಿದ್ದು ಇದನ್ನೆ. ಹಾಗೆಯೇ ಕೋಮುವಾರು ತೀರ್ಪಿಗೆ ಪರ್ಯಾಯವಾಗಿ ಒಪ್ಪಂದದಲ್ಲಿ ಸೂಕ್ತ ಸಾಂವಿಧಾನಿಕ ರಕ್ಷಣೆಯನ್ನು ಸೇರಿಸಲಾಗಿತ್ತು. ಹೀಗಿದ್ದರೂ ಒಪ್ಪಂದಕ್ಕೆ ಸಹಿಮಾಡಲು ಗಾಂಧೀಜಿಯವರು ತೋರಿಸಿದ ಅವಸರ ಒಬ್ಬ ಧೈರ್ಯಗುಂದಿದ ನಾಯಕ ತಮ್ಮ ಮರ್ಯಾದೆಯನ್ನು ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಪರದಾಡಿದ ರೀತಿಯಂತ್ತಿತ್ತು!” ಅಂಬೇಡ್ಕರ್ ಹೇಳುತ್ತಾ ಹೋಗುತ್ತಾರೆ.

   ಮೂಂದುವರಿದು ಅವರು “ಅಂದಹಾಗೆ ಶ್ರೀಮಾನ್ ಗಾಂಧಿಯವರ ಉಪವಾಸ ಕ್ರಿಯೆಯಲ್ಲಿ ಶ್ರೇಷ್ಠವಾದುದು ಏನೂ ಇರಲಿಲ್ಲ. ಅದೊಂದು ಕೀಳು ಹೊಲಸು ಕ್ರಿಯೆಯಾಗಿತ್ತು. ಅದು ಅಸ್ಪøಶ್ಯರ ಒಳಿತಿಗಾಗಿರದೆ ಅವರ ಅವನತಿಯ ಉದ್ದೇಶ ಹೊಂದಿತ್ತು.  ಅಸಹಾಯಕ ಜನರ ಮೇಲೆ ನಡೆಸಿದ ಅಧಮ್ಯ ದೌರ್ಜನ್ಯ ಅದಾಗಿತ್ತು. ಬ್ರಿಟಿಷ್ ಪ್ರಧಾನಮಂತ್ರಿ ಅಸ್ಪøಶ್ಯರಿಗೆ ನೀಡಲು ಉದ್ದೇಶಿಸಿದ್ದ ಸಾಂವಿಧಾನಿಕ ಸೌಲಭ್ಯಗಳನ್ನು ಕಿತ್ತುಕೊಂಡು, ಸವರ್ಣೀಯರ ಆಳ್ವಿಕೆಯಲ್ಲಿ ಅಸ್ಪøಶ್ಯರನ್ನು ಗುಲಾಮರನ್ನಾಗಿಸುವ ಉದ್ದೇಶ ಹೊಂದಿದ್ದ ಅಮರಣಾಂತ ಉಪವಾಸ ಅದಾಗಿತ್ತು. ಅದು ನೀಚ ಹಾಗು ದುಷ್ಟ ಕ್ರಿಯೆಯಾಗಿತ್ತು. ಇಂತಹ ವ್ಯಕ್ತಿಗಳನ್ನು ಪ್ರಾಮಾಣಿಕರೆಂದೂ, ನಂಬಲರ್ಹ ವ್ಯಕ್ತಿಗಳೆಂದೂ ಅಸ್ಪøಶ್ಯರು ಹೇಗೆ ಹೇಳಲು ಸಾಧ್ಯ?” ಅಂಬೇಡ್ಕರ್ ನಿಲ್ಲಿಸುತ್ತಾರೆ.
 
  ಒಟ್ಟಿನಲಿ ಗಾಂಧೀಜಿಯವರು ನಂಬಲನರ್ಹ ಎಂಬುದು ಇಡೀ ಜಗತ್ತಿಗೇ ಗೊತ್ತಾಗಿತ್ತು. ಅವರ ಡಬಲ್‍ಗೇಮ್‍ನ ಹಿಂದಿರುವ ಸತ್ಯ ಇಡೀ ಜಗತ್ತಿಗೇ ಪರಿಚಯವಾಗಿತ್ತು. ಅಂದಹಾಗೆ ಹೇಗಾದರೂ ಮಾಡಿ ಜೀವ ಉಳಿಸಿಕೊಳ್ಳ ಬೇಕೆಂಬ ಧಾವಂತದಲ್ಲಿ ಗಾಂಧಿಯವರಿದ್ದರೆ ಈ ಸಂದರ್ಭದಲ್ಲಿ ಅಂಬೇಡ್ಕರ್ ರವರ ಮನಸ್ಥಿತಿ? ಅವರ ಮಾತುಗಳಲ್ಲೇ ಹೇಳುವುದಾದರೆ “ನನ್ನ ಮಟ್ಟಿಗೆ ಹೇಳುವುದಾದರೆ ಅಂದು ನಾನು ಎದುರಿಸಿದ ಅತ್ಯಂತ ಗಂಭೀರ ಮತ್ತು ಅತೀವ ಉಭಯಸಂಕಟವನ್ನು ಬಹುಶಃ ಯಾರೂ ಎದುರಿಸಿರಲಿಕ್ಕಿಲ್ಲ. ಅದು ದಿಗ್ಭ್ರಮೆಗೊಳಿಸುವಂತಹ ಪ್ರಸಂಗವಾಗಿತ್ತು. ನನಗೆ ಎರಡು ಪರ್ಯಾಯ ಮಾರ್ಗಗಳಿದ್ದು ಅವುಗಳಲ್ಲಿ ನಾನು ಒಂದನ್ನು ಅನುಸರಿಸಬೇಕಾಗಿತ್ತು. ಮಾನವೀಯತೆಯ ದೃಷ್ಟಿಯಿಂದ ಗಾಂಧೀಜಿಯವರನ್ನು ಸಾವಿನ ದವಡೆಯಿಂದ ಪಾರುಮಾಡಬೇಕಾದ ಕರ್ತವ್ಯ ನನ್ನೆದುರಿಗಿತ್ತು, ಅಲ್ಲದೆ ಬ್ರಿಟಿಷ್ ಪ್ರಧಾನಿಯವರು ಅಸ್ಪøಶ್ಯರಿಗೆ ಕೊಡಮಾಡಿದ ರಾಜಕೀಯ ಹಕ್ಕುಗಳನ್ನು ರಕ್ಷಿಸುವ ಹೊಣೆಯೂ ನನ್ನ ಮೇಲಿತ್ತು. ಕಡೆಗೆ ನಾನು ಮಾನವೀಯತೆಯ ಕರೆಗೆ ಓಗೊಟ್ಟೆ! ಶ್ರೀಮಾನ್ ಗಾಂಧಿಯವರಿಗೆ ‘ಒಪ್ಪಿಗೆಯಾಗುವಚಿತೆ’ ಕೋಮುವಾರು ತೀರ್ಪಿನಲ್ಲಿ ಮಾರ್ಪಾಡು ಮಾಡಲು ಒಪ್ಪಿಕೊಂಡೆ. ಈ ಒಪ್ಪಂದವನ್ನೆ ಪೂನಾ ಒಪ್ಪಂದ ಎಂದು ಕರೆಯಲಾಗಿದೆ.”
 
    ಹೀಗೆ ಗಾಂಧೀಜಿಯವರ ಪ್ರಾಣವನ್ನು ಉಳಿಸಲು ತನ್ನ ಜನರ ಹಿತವನ್ನು ಬಲಿಕೊಟ್ಟು  ಡಾ.ಅಂಬೇಡ್ಕರ್‍ರವರು 1932 ಸೆಪ್ಟೆಂಬರ್ 24 ರಂದು ಪೂನಾ ಒಪ್ಪಂದಕ್ಕೆ ಸಹಿಹಾಕಿದರು. ನೆನಪಿರಲಿ, ಗಾಂಧೀಜಿ ಮತ್ತು ಅಂಬೇಡ್ಕರ್‍ರವರ ನಡುವೆ ನಡೆದ ಈ ಒಪ್ಪಂದ ಕೂಡ “ಅಚಿತರಾಷ್ಟ್ರೀಯ ಒಪ್ಪಂದವಾಗಿತ್ತು! ಖ್ಯಾತ ಚಿಂತಕ ವಿ.ಟಿ.ರಾಜಶೇಖರ್ ಜಾತಿಯನ್ನು “ರಾಷ್ಟ್ರದೊಳಗಿನ ರಾಷ್ಟ್ರ” ಎನ್ನುತ್ತಾರೆ. ಈ ಪ್ರಕಾರ ಗಾಂಧೀಜಿಯವರು ಸವರ್ಣ ಹಿಂದೂ ರಾಷ್ಟ್ರದ ಪ್ರತಿನಿಧಿಯಾದರೆ ಅಂಬೇಡ್ಕರ್‍ರವರು ಅಸ್ಪøಶ್ಯ ರಾಷ್ಟ್ರದ ಪ್ರತಿನಿಧಿಯಾಗಿದ್ದರು!
  
    ಗಾಂಧೀಜಿಯವರೇನೋ ರಾಜಕೀಯ ಹೋರಾಟದ ಕಾರಣಕ್ಕಾಗಿ ಅದಾಗಲೇ ಮಹಾತ್ಮ ಎನಿಸಿಕೊಂಡಿದ್ದರು. ಆದರೆ ಅಂಬೇಡ್ಕರ್? ನಿಸ್ಸಂಶಯವಾಗಿ ಈ ಒಪ್ಪಂದದ ನಂತರ ಅವರು ಅಸ್ಪøಶ್ಯರ ಪ್ರಶ್ನಾತೀತ ನಾಯಕನಾಗಿ ಹೊರಹೊಮ್ಮಿದರು. ಮಹಾತ್ಮ ಗಾಂಧೀಜಿಯವರೇ ತಮ್ಮ ‘ನೈಜ ವ್ಯಕ್ತಿತ್ವ’ವನ್ನು ಪ್ರದರ್ಶನಕ್ಕಿಟ್ಟು ಅಸ್ಪøಶ್ಯರ ವಿರುದ್ಧವೇ ಉಪವಾಸ ಕೂರಬೇಕಾದ ಸಂಧಿಗ್ಧ ಸಂದರ್ಭ ಸೃಷ್ಟಿಸಿದ ಅಂಬೇಡ್ಕರರ ತಂತ್ರ ಜಗತ್ತಿನಾದ್ಯಂತ ಪ್ರಸಂಶೆಗೆ ಒಳಗಾಯಿತು.
  
  ಇರಲಿ, ಈ ಒಪ್ಪಂದದಿಂದ ಅಸ್ಪøಶ್ಯರಿಗೆ ಧಕ್ಕಿದ್ದಾದ್ದರೂ ಎನು? ಕೋಮುವಾರು ತೀರ್ಪಿನಲ್ಲಿ ಪ್ರಸ್ತಾಪಿಸಿದ್ದ ಅಸ್ಪøಶ್ಯರಿಗೆ ಸಮಾನ ನಾಗರೀಕ ಹಕ್ಕುಗಳನ್ನು ನೀಡುವ, ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡುವ ತೀರ್ಮಾನಗಳನ್ನು  ಈ ಒಪ್ಪಂದ ಉಳಿಸಿಕೊಂಡಿತ್ತು. ಹಾಗೆಯೇ ಮೀಸಲು ಕ್ಷೇತ್ರಗಳು ಕೂಡ ದೊರಕಿತ್ತು. ಕೊರತೆ ಏನೆಂದರೆ ಅಸ್ಫøಶ್ಯರಿಗೆ ನೀಡಲಾಗಿದ್ದ “ಆ ಪವಿತ್ರ ಎರಡು ಓಟು ಹಾಕುವ” ಹಾಗೂ “ಪ್ರತ್ಯೇಕ ಮತದಾನ ಪದ್ಧತಿ”ಯನ್ನು ಕಿತ್ತುಕೊಳ್ಳಲಾಗಿತ್ತು. ”ಅಮೃತ” ಸಮಾನವಾಗಿದ್ದ ಇವು ಅಸ್ಪøಶ್ಯರಿಗೆ ಧಕ್ಕದಂತೆ ಮಾಡುವಲ್ಲಿ ಗಾಂಧಿಯವರು ನಡೆಸಿದ ಆ ಉಪವಾಸ ಸತ್ಯಾಗ್ರಹ ಯಶಸ್ವಿಯಾಗಿತ್ತು.
 
    ಒಂದಂತು ನಿಜ, ಬಾಯಲ್ಲಿ ಅಸ್ಪøಶ್ಯೋದ್ಧಾರದ ಮಂತ್ರ, ಬಗಲಲ್ಲಿ ಅವರನ್ನು ಸದೆಬಡಿಯಲು ದೊಣ್ಣೆ ಹಿಡಿಯುವ ಗಾಂಧೀಜಿಯವರ ತಂತ್ರ ಪೂನಾ ಒಪ್ಪಂದದ ಮೂಲಕ ಬೀದಿಗೆ ಬಂದಿತ್ತು. ಅವರ ಈ ತಂತ್ರವನ್ನು ನೋಡಿಯೇ ಅಂಬೇಡ್ಕರ್‍ರವರು ಅವರನ್ನು “ಯಶಸ್ವಿ ನಯವಂಚಕ” ಎಂದಿರುವುದು. ಹೀಗಿರುವಾಗ ಅವರು ಅಂದರೆ ಗಾಂಧೀಜಿಯವರು ಅಸ್ಪøಶ್ಯರಿಗೆ ಮಹಾತ್ಮ ಹೇಗಾಗುತ್ತಾರೆ? ಬೇಕಿದ್ದರೆ ಅವರು ಸವರ್ಣ ಹಿಂದೂಗಳ ಲೋಕದ ಮಹಾತ್ಮರಾಗಬಹುದು. ಅಸ್ಪøಶ್ಯ ಲೋಕಕ್ಕಂತೂ ಖಂಡಿತ ಅಲ್ಲ!
                                            
                                            

Monday, 26 May 2014


We neglected your....



 

Sorry, Oh! Father
You said
Capture
The political power
But we said
Never

Our brothers
Ran behind the hand
Our sisters
Rushed to fluck the flower
And thy
Elephant
Is crying
And struggling
To pronounce JAI BHEEM

Father please
Beat us, kick us
We neglected your
Power, the master key
Giving  it our enemy
Asking him
Please, protect me!

                           -raghothama ho.ba


We neglected your....



 Sorry, Oh! Father
You said
Capture
The political power
But we said
Never

Our brothers
Ran behind the hand
Our sisters
Rushed to fluck the flower
And thy
Elephant
Is crying
And struggling
To pronounce JAI BHEEM

Father please
Beat us, kick us
We neglected your
Power, the master key
Giving  it our enemy
Asking him
Please, protect me!

                           -raghothama ho.ba

ಇನ್ನು ನಮ್ಮ ನಾಳೆಗಳು ಸಾಯುತ್ತವೆ


ಅಂದು ಹೇಳಿದ್ದು
ತಂದೆ ಬಾಬಾಸಾಹೇಬ
‘ನೋಡಪ್ಪಾ, ಹಿಡಿ ರಾಜ್ಯಾಧಿಕಾರದ
ಕೈಯನ್ನು, ಬಳಸಿ, ಬೀಸು
ಓಟೆಂಬ ಖಡ್ಗವನ್ನು ಬಲಕ್ಕೆ ಎಡಕ್ಕೆ
ಮುಗಿಸು ಅಸಮಾನತೆಯ
ಅನ್ಯಾಯ, ಅಜ್ಞಾನವ
ಉಳಿಸು ಸಂವಿಧಾನ ಧರ್ಮವ’

ಇಂದು ನೊಂದು
ನುಡಿಯುತ್ತಿದೆ ಮನ
ತಂದೆ ನೀ ಹೇಳಿದ್ದು ಕೇಳಲಿಲ್ಲ
ನನ್ನ ಜನ, ನನ್ನ ಮನ
ಅಡವಿಟ್ಟರು ನೋಡಾ ಖಡ್ಗವ
ಹೆಂಡಕ್ಕೆ,  ಬ್ರಾಂದಿಗೆ, ಬೀರಿಗೆ
ನೂರು ಇನ್ನೂರರ ನೋಟಿಗೆ
ಕುಳಿತಿಹರು ಮೈಕೊಡುತ್ತಾ
ಪೋಲೀಸರ ಬೂಟಿಗೆ

ಇನ್ನು ನಮ್ಮ ನಾಳೆಗಳು
ಅವರದಾಗಿವೆ
ನಮ್ಮದು ಕನಸಾಗಿದೆ
ಅರಿಯದೆ ನನ್ನವರು
ರಾಜ್ಯಾಧಿಕಾರದ ನಿನ್ನುಸಿರು
ಥರಥರದ ಕೈಯ ಹಿಡಿದರು
ಬಗೆಬಗೆಯ ಹೂವ ಮುಡಿದರು

ಕ್ಷಮಿಸು ತಂದೆ
ಕಂದ ಆನೆ
ಘೀಳಿಡುತ್ತಿದೆ
ನಿನ್ನಯ ಘೋಷವ
ಹೇಳಲಾರದೆ
ಜೈಭೀಮ ಎಂದು
ಕೂಗಲಾರದೆ

             -ರಘೋತ್ತಮ ಹೊ.ಬ.




 

Sunday, 25 May 2014



ಅವರು ಕಾಡಿದರು ನಿರಂತರಮಹಾ ಒಗಟಾಗಿ

                                                                  - ರಘೋತ್ತಮ ಹೊ


     ಚಿ.ಮೂ. ರವರನ್ನು ಚಂಪಾ ತಮ್ಮ  ಲೇಖನಿಯ ದಾಳಿಗೆ ಸಿಲುಕಿಸಿದ್ದು ಮತ್ತು ಕೆ.ಹೆಚ್. ನರಸಿಂಹಮೂರ್ತಿಯವರು ಚಂಪಾರವರನ್ನು ಪ್ರತಿದಾಳಿಗೆ ಸಿಲುಕಿಸಿದ ಸಂಧರ್ಭ ವೈಚಾರಿಕ ಅನುಸಂಧಾನಕ್ಕೆ ಇತ್ತೀಚಿನ ದಿನಗಳಲ್ಲಿ "ವಿ, " ಒದಗಿಸಿದ ಸ್ಪಷ್ಟ ವೇದಿಕೆ.  ಸ್ವಾಗತಾರ್ಹವೆಂದರೆ ಅಂತಹ ಅನುಸಂಧಾನದಲ್ಲಿ ಅಂಬೇಡ್ಕರ್ ವಿಚಾರಗಳ ಪ್ರಸ್ತಾಪವಾಗಿದ್ದು, ತನ್ಮೂಲಕ ಅವರ ವಿಚಾರಗಳ ಚರ್ಚೆಗೆ ಸೂಕ್ತ ಸಂಧಭ ಸೃಷ್ಟಿಸಿದ್ದು.

  ಜಾತೀಯತೆ, ಅಸ್ಪøಶ್ಯತೆಯನ್ನು ಪ್ರಶ್ನಿಸುವ ಭರದಲ್ಲಿ ಚಂಪಾರವರು ಚಿ.ಮೂ ರವರನ್ನು "ಡಾ|| ಅಂಬೇಡ್ಕರ್ ರವರು ಮನುಸ್ಮøತಿಯನ್ನು ಸುಟ್ಟಿದ್ದು ತಪ್ಪೆ?" ಎಂದು ಪ್ರಶ್ನಿನಿಸಿದ್ದಾರೆ. ಕೆ. ಹೆಚ್. ನರಸಿಂಹಮೂರ್ತಿರವರು ಚಿ.ಮೂ ರವರನ್ನು ಸಮರ್ಥಿಸುವ ಭರದಲ್ಲಿಅಂಬೇಡ್ಕರ್ ಮನೂಸ್ಮøತಿಯನ್ನು ಸುಟ್ಟರೂ ಇತರ ದಾರ್ಮಿಕ ಗ್ರಂಥಗಳನ್ನು ಅವರೇಕೆ ಸುಟ್ಟುಹಾಕಲಿಲ್ಲ?” ಎಂದು ಪ್ರಶ್ನಿಸುವ ಮೂಲಕ ಹಿಂದೂ ಧರ್ಮದ ಇತರ ಧಾರ್ಮಿಕ ಗ್ರಂಥಗಳಾದ ವೇದ, ಉಪನಿಷತ್, ಭಗವದ್ಗೀತೆಗಳ ಬಗ್ಗೆ ಅಂಬೇಡ್ಕರ್ರಿಗೆ ಗೌರವವಿತ್ತೆಂಬ ಭಾವನೆ ಬರುವಂತೆ ಮಾತಾನಾಡಿದ್ದಾರೆ. ಇದು ನಿಜಾನಾ? ಖಂಡಿತಾ ಒಪ್ಪತಕ್ಕದ್ದಲ್ಲ ವಾಸ್ತವವೆಂದರೆ ಅಂಬೇಡ್ಕರ್ ತಮ್ಮ ಜೀವನದುದ್ದಕ್ಕೂ ಮನುಸ್ಮøತಿಯನ್ನು ಒಳಗೊಂಡಂತೆ ಹಿಂದೂ ಧರ್ಮದ ಎಲ್ಲಾ ಗ್ರಂಥಗಳನ್ನು, ಒಟ್ಟಾರೆ ಹಿಂದೂ ಧರ್ಮವನ್ನು ಬಿಡದೆ ಕಾಡಿದ್ದಾರೆ, ಒಂದು ರೀತಿಯ ಒಗಟಾಗಿ!

  ಅವರ ಕಾಡುವಿಕೆಯ ಪ್ರಕ್ರಿಯೆಯು ದಿಡೀರನೇ ಹುಟ್ಟಿದ್ದಲ್ಲ. ಅದು ಸಮಗ್ರ ಸಂಶೋಧನೆಯ ಮೂಲಕ ಕಂಡುಕೊಂಡದ್ದು. ಅಂತಹ ಸಂಶೋಧನೆಯ ಭರದಲ್ಲಿ "ಭಾರತದಲ್ಲಿ ಜಾತಿಗಳು", "ಜಾತಿ ನಿರ್ಮೂಲನೆ", "ಅಸ್ಪøಶ್ಯರು ಯಾರು? ಅವರೇಕೆ ಅಸ್ಪøಶ್ಯರಾದರು?", "ಶೂದ್ರರು ಯಾರು?" ಎಂಬ ಕೃತಿಗಳನ್ನು ಬರೆಯುವ ಅವರು ಕಡೆಗೆ "ಹಿಂದೂ ಧರ್ಮದ ಒಗಟುಗಳುಎಂಬ ಕೃತಿಯಲ್ಲಿ ಹಿಂದೂ ಧರ್ಮವನ್ನು ಕುರಿತು 24 ಒಗಟುಗಳನ್ನು ಕೇಳುತ್ತಾರೆ!

  ಹಾಗಿದ್ದರೆ ಅಂಬೇಡ್ಕರ್ ಕಾಡುವ ಪ್ರಕ್ರಿಯೆಗೆ ಕಾರಣವಾದರೂ ಏನಿತ್ತು? ಅದು ಯಾರದಾದರೂ ಮೇಲಿನ ವೈಯಕ್ತಿಕ ದ್ವೇಷದಿಂದಲೇ? ಅಥವಾ ಪೂರ್ವಾಗ್ರಹ ಪೀಡಿತ ಮನಸ್ಸಿನಿಂದಲೆ? ಖಂಡಿತ ಇಲ್ಲ. ಅಂಬೇಡ್ಕರ್ ಪ್ರಕ್ರಿಯೆಯ ಹಿಂದೆ ಎರಡು ಸಾವಿರ ವರ್ಷಗಳ  ನೋವಿನ ಇತಿಹಾಸವಿದೆ. ಇಂತಹ ಇತಿಹಾಸದಲ್ಲಿ ತನ್ನ ಜನರನ್ನು ಕ್ಷಣ ಕ್ಷಣಕ್ಕೂ ತುಳಿದಿರುವ, ಈಗಲೂ ತುಳಿಯುತ್ತಿರುವ ಬಗ್ಗೆ ನಿರಂತರ ನೋವಿತ್ತು, ದ್ವೇಷವಿತ್ತು, ಅಕ್ರೋಶವಿತ್ತು. ಇಂತಹ ನೋವೆ, ದ್ವೇಷವೇ, ಆಕ್ರೋಶವೇ ಅಂಬೇಡ್ಕರ್ರನ್ನು ಪ್ರಕ್ರಿಯೆಗೆ ಕೈಹಚ್ಚುವಂತೆ ಮಾಡಿದ್ದು. ಹಾಗಂತ ಇದು ಸುಲಬದ್ದಾಗಿರಲಿಲ್ಲ, ಒಂದರ್ಥದಲ್ಲಿ ಕಠಿಣತಮ ಪ್ರಕ್ರಿಯೆ. ಅಚ್ಚರಿಯ ವಿಷಯವೆಂದರೆ ಅದರಲ್ಲಿ ಅವರು ಯಶಸ್ಸು ಸಾಧಿಸಿರುವುದು.

  1920ರಲ್ಲೇ ಅವರು "ಹಿಂದೂ ಸಮಾಜ ಅಸಮಾನತೆಯ ತವರು. ಅದು ಏಣಿ ಇಲ್ಲದ ಪ್ರವೇಶ ದ್ವಾರವಿಲ್ಲದ ಅನೇಕ ಮಹಡಿಗಳುಳ್ಳ ಗೋಪುರ. ಒಂದು ಮಹಡಿಯಲ್ಲಿ ಹುಟ್ಟಿದ ಜನ ಅಲ್ಲಿಯೇ ಸತ್ತು ಕೊಳೆಯ ಬೇಕು" ಎಂದು ಶ್ರೇಣಿಕೃತ ಜಾತಿವ್ಯವಸ್ಥೆಯ ಬಗ್ಗೆ ತಮ್ಮ ಖಚಿತ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಹೀಗೆ ಅಭಿಪ್ರಾಯ ವ್ಯಕ್ತಪಡಿಸುವ ಅವರು ಇದಕ್ಕೆ ಕಾರಣ ಯಾರು? ಎಂದು ಹುಡುಕುತ್ತಾ ಉತ್ತರ ಕಂಡುಕೊಳ್ಳುವುದು ಮನುಸ್ಮøತಿಯಲ್ಲಿ! "ಮನು ಧರ್ಮ ಶಾಸ್ತ್ರದ ವಿಧಿಗಳಿಗಿಂತ ಹೆಚ್ಚು ಕುಖ್ಯಾತವಾದ (ಸಾಮಾಜಿಕ ಹಕ್ಕುಬಾದ್ಯತೆಯುಳ್ಳ) ವಿಧಿಗಳು ಜಗತ್ತಿನಲ್ಲಿ ಇನ್ನೆಲ್ಲಿಯೂ ಇಲ್ಲ. ಜಗತ್ತಿನ ಯಾವುದೇ ಭಾಗದಲ್ಲಿ ನಡೆದಿರಬಹುದಾದ ಸಾಮಾಜಿಕ ಅನ್ಯಾಯವು ಅನ್ಯಾಯದ ಮುಂದೆ ಪೇಲವವಾಗಿ ಕಾಣುತ್ತದೆ" ಎಂದು ಮನುಧರ್ಮ ಶಾಸ್ತ್ರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುವ ಅವರು "ಮನುಷ್ಯತ್ವವನ್ನು ಮನುಷ್ಯನಿಗೆ ನಿರಾಕರಿಸುವುದಷ್ಟಕ್ಕೆ ಮನು ಸುಮ್ಮನಿರುವುದಿಲ್ಲ, ಮನುಷ್ಯ ನ ವ್ಯಕ್ತಿತ್ವವನ್ನು ಉದ್ದೇಶಪೂರ್ವಕವಾಗಿ ಹೀನಾಯಗೊಳಿಸುವುದನ್ನು ಅವನು ಸಮರ್ಥಿಸುತ್ತಾನೆ" ಎನ್ನುತ್ತಾರೆ. ಮುಂದುವರಿದು ಅವರು "ಯಾವುದೇ ಸಮಾಜವು ತನ್ನ ಜನರನ್ನು ಜ್ಞಾನ ಸಂಪಾದನೆ ಮಾಡದಂತೆ ಸಾಮೂಹಿಕವಾಗಿ ತಡೆದಿರುವ ಪಾಪಕೃತ್ಯವನ್ನು ಮಾಡಿಲ್ಲ ಮತ್ತು ಜ್ಞಾನ ಸಂಪಾದನೆಯನ್ನು ಅಪರಾಧವೆಂದು ಪರಿಗಣಿಸಿ ಶಿಕ್ಷಿಸುವುದನ್ನು ಯಾವುದೇ ಸಮಾಜವು ಮಾಡಿಲ್ಲ. ಇಡೀ ಜಗತ್ತಿನಲ್ಲಿ ಧಾರ್ಮಿಕ ಕಟ್ಟಳೆಗಳ ಮೂಲಕ ಜ್ಞಾನ ಸಂಪಾದನೆಯನ್ನು ನಿರಾಕರಿಸಿದ ಏಕೈಕ ವ್ಯಕ್ತಿ ಮನು" ಎನ್ನುತ್ತಾರೆ. ಮತ್ತು ಅಂತಿಮವಾಗಿ ಅಂಬೇಡ್ಕರ್ರವರು ಮನುವಿನ ಧರ್ಮವನ್ನು ಸ್ವಾತಂತ್ರ್ಯ, ಸಮಾನತೆ, ಭಾತೃತ್ವ ರಹಿತ ಧರ್ಮವೆಂದು ಸಾರುತ್ತಾರೆ. ದುರದೃಷ್ಟಕರವೆಂದರೆ ನರಸಿಂಹಮೂರ್ತಿಯವರು ಇದನ್ನು ಮನು ಧರ್ಮ ಶಾಸ್ತ್ರದ ಲೋಪದೋಷಗಳೆಂದು ಪರಿಗಣಿಸಿ ಅದನ್ನು ಯಕಶ್ಚಿತ್ ಆಚಾರ ಸಂಹಿತೆ ಎಂದಿರುವುದು. ಹಾಗಿದ್ದರೆ ಇಂತಹ "ಲೋಪದೋಷಗಳು" ಮತ್ತು "ಆಚಾರ ಸಂಹಿತೆ" ಇಂತಹ ಹೀನ ಅಸಮಾನತೆಗೆ ಕಾರಣವಾಗಿರುವುದು ಸುಳ್ಳೆ? ಮತ್ತು ಅದನ್ನು ಖಂಡಿಸುವುದು, ಅಂತಿಮವಾಗಿ ಅಂಬೇಡ್ಕರ್ರವರು ಕಾಲದಲ್ಲೇ ಅದನ್ನು ಸುಟ್ಟಿದ್ದು ತಪ್ಪೇ?

  ಇರಲಿ, ಮನು ಧರ್ಮ ಶಾಸ್ತ್ರದ ಬಗ್ಗೆ ಇಂತಹ ನಿಲುವು ತಳೆಯುವ ಅಂಬೇಡ್ಕರ್ರವರು ಹಿಂದೂ ಧರ್ಮದ ಇತರ ಧಾರ್ಮಿಕ ಗ್ರಂಥಗಳಾದ ವೇದ, ಉಪನಿಷತ್ತು ಮತ್ತು ಭಗವದ್ಗೀತೆಗಳ ಬಗ್ಗೆ ಯಾವ ನಿಲುವು ತಳೆಯುತ್ತಾರೆ? ಒಂದಂತೂ ನಿಜ ಅವರು ಅವುಗಳ ಬಗ್ಗೆ "ಯಾವುದೇ ಮಲತಾಯಿಧೋರಣೆ ತೋರಲು ಹೋಗಿಲ್ಲ"! ಮನುಧರ್ಮ ಶಾಸ್ತ್ರವನ್ನು ಯಾವ ದೃಷ್ಟಿಯಲ್ಲಿ ನೋಡಿದ್ದಾರೋ ಅದೇ ದೃಷ್ಟಿಯಲ್ಲಿ ಅವುಗಳನ್ನು ಕೂಡ ನೋಡಿದ್ದಾರೆ.! ಸಾಂಕೇತಿಕವಾಗಿ ಮನುಧರ್ಮಶಾಸ್ತ್ರವನ್ನು ಸುಟ್ಟಿದ್ದಾರೆ ಅಷ್ಟೆ.

  ತಮ್ಮ "ಹಿಂದೂ ಧರ್ಮದ ಒಗಟುಗಳು" ಕೃತಿಯಲ್ಲಿ ಅಂಬೇಡ್ಕರ್ರವರು ವೇದ, ಉಪನಿಷತ್ತು, ಭಗದ್ಗೀತೆಗಳ ಮೇಲೆ ಒಗಟಿನ ರೂಪದ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಾರೆ. ಒಬ್ಬ ವ್ಯಕ್ತಿ ಹಿಂದೂ ಏಕೆ ಆಗಿದ್ದಾನೆ? ವೇದಗಳು ಹುಟ್ಟಿದ್ದು ಹೇಗೆ? ವೇದಗಳನ್ನು ಮಾನವರಾಗಲಿ ದೇವರಾಗಲಿ ರಚಿಸಲಿಲ್ಲವೆಂದು ಘೋಷಿಸಿದ್ದು ಏಕೆ? ಉಪನಿಷತ್ತುಗಳು ವೇದಗಳ ಮೇಲೆಕೆ ಯುದ್ಧ ಸಾರಿದವು? ಉಪನಿಷತ್ತುಗಳನ್ನು ವೇದಗಳಿಗೆ ಹೇಗೆ ಅಧೀನವನ್ನಾಗಿ ಮಾಡಲಾಯಿತು? ಹಿಂದೂ ದೈವಗಳು ಏಳು ಬೀಳುಗಳನ್ನು ಅನುಭವಿಸುವಂತೆ ಏಕೆ ಮಾಡಿದರು? ದೇವರುಗಳನ್ನು ಪದಚ್ಯುತಗೊಳಿಸಿ  ದೇವಿಯರನ್ನೇಕೆ ಮೇಲೇರಿಸಲಾಯಿತು? ಕಲಿಯುಗವನ್ನು ಅನಂತವಾಗಿಸದಿಸಿದ್ದೇಕೆ? ರಾಮಕೃಷ್ಣ ಎಂಬ ಒಗಟುಗಳು? ಇವಿಷ್ಟು ಅಂಬೇಡ್ಕರ್ ಕೇಳುವ ಅಂತಹ ಒಗಟಿನ ರೂಪದ ಪ್ರಶ್ನೆಗಳ ಸ್ಯಾಂಪಲ್ ಅಷ್ಟೇ.

  ಕೃತಿಯ ಆರಂಭದಲ್ಲೇ ಅವರುವೇದಗಳು ಯೋಗ್ಯತೆ ಇಲ್ಲದ ಪುಸ್ತಕಗಳು, ಅವುಗಳನ್ನು ದೋಷರಹಿತವೆಂದಾಗಲೀ, ಪವಿತ್ರವೆಂದಾಗಲೀ ಕರೆಯಲು ಕಾರಣವೇ ಇಲ್ಲಎನ್ನುತ್ತಾ ಮುಂದುವರೆದುನಿಜವಾಗಿಯೂ ವೇದಗಳಿಗೆ ಏನಾದರೂ ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯವಿದೆಯೇ?” ಎಂದು ಪ್ರಶ್ನಿಸುತ್ತಾರೆ! ಹಾಗೆಯೇ ಅವರು ವೇದ ಮತ್ತು ಉಪನಿಷತ್ತುಗಳು ಪರಸ್ಪರ ವಿರುದ್ದ ಎಂಬ ಅಭಿಪ್ರಾಯ ವ್ಯಕ್ತ ಪಡಿಸುತ್ತಾ, ಉಪನಿಷತ್ತು ಮತ್ತು ವೇದಾಂತ ಬೇರೆ ಬೇರೆ ಎಂಬ ಸ್ಪಷ್ಟೀಕರಣ ನೀಡುತ್ತಾ, ವೇದಗಳನ್ನು ಉಪನಿಷತ್ತುಗಳಲ್ಲಿ ಮಿಳಿತಗೊಳಿಸಿ ಅದನ್ನು ಉನ್ನತೀಕರಿಸುವ ಪ್ರಕ್ರಿಯೆಯ ಮೇಲೆ ಬೆಳಕು ಚೆಲ್ಲುತ್ತಾರೆ.


 ಅಂತಿಮವಾಗಿ ಭಗವದ್ಗೀತೆಯನ್ನು ಪ್ರಶ್ನಿಸುವ ಅಂಬೇಡ್ಕರ್ರವರುಕೊಲ್ಲುವುದೇ ಕ್ಷತ್ರಿಯನ ಕರ್ತವ್ಯವೆಂದೂ ಹೇಳುವ ಭಗವದ್ಗೀತೆಯ ತಾತ್ವಿಕ ಸಮರ್ಥನೆ ಅತ್ಯಂತ ಕನಿಷ್ಟವಾಗಿ ಹೇಳುವುದಾದರೆ ಬಾಲಿಶವಾಗಿದೆ. ಕೊಂದರೆ ಕೊಲೆಯಲ್ಲ, ಕೊಲೆಯಾಗುವದು ದೇಹ ಆತ್ಮವಲ್ಲ ಎಂದು ಹೇಳುವುದು ಎಲ್ಲಿಯೂ ಕೇಳರಿಯದಂತಹ ಕೊಲೆಯ ಕ್ರೂರ ಸಮರ್ಥನೆಯಾಗಿದೆಎನ್ನುತ್ತಾ ಅದರ ತಾತ್ವಿಕ ತಳಹದಿಯನ್ನೇ ಅಲುಗಾಡಿಸುತ್ತಾರೆ.

 ಒಟ್ಟಿನಲ್ಲಿ ಹೀಗೆ ಅಂಬೇಡ್ಕರ್ರವರು ಹಿಂದೂ ಧರ್ಮವನ್ನು ನಿರಂತರವಾಗಿ ಕಾಡುತ್ತಾರೆ. “ ತಾವಿರುವ ಕತ್ತಲೆಯನ್ನು ಅರಿಯದವರು ಬೆಳಕಿಗಾಗಿ ಎಂದೂ ಹುಡುಕಾಡುವುದಿಲ್ಲಎಂದು ಕಾಡುವಿಕೆಯ ಪ್ರಕ್ರಿಯೆಗೆ ಸಮರ್ಥನೆಯನ್ನು ಕೂಡ ಕೊಡುತ್ತಾರೆ. ಅಂಬೇಡ್ಕರ್ ಪ್ರಕ್ರಿಯೆಯಲ್ಲಿ ಚಂಪಾರವರು ಕೇಳುವ ಪ್ರಶ್ನೆ ಮತ್ತು ಅದಕ್ಕೆ ನರಸಿಂಹಮೂರ್ತಿಯವರು ಕೇಳುವ ಉಪಪ್ರಶ್ನೆ ಎರಡಕ್ಕೂ ಕೂಡ ಉತ್ತರ ಸಿಕ್ಕೇ ಸಿಕ್ಕುತ್ತದೆ. ತಮ್ಮ ಜೀವನದ ಅಂತಿಮ ದಿನಗಳಲ್ಲಿ ಒಂದು ಧೃಢ ನಿರ್ಧಾರಕ್ಕೆ ಬರುವ ಅಂಬೇಡ್ಕರ್ರವರು 1956 ಅಕ್ಟೋಬರ್ 14 ರಂದು ತಮ್ಮ ಲಕ್ಷಾಂತರ ಅನುಯಾಯಿಗಳೊಂದಿಗೆ ಭೌಧ್ದ ಧರ್ಮ ಸ್ವೀಕರಿಸುತ್ತಾರೆ. ಒಗಟುಗಳನ್ನು ಕೇಳಿ ತಾವೇ ಮಹಾ ಒಗಟಾಗಿ ಮಹಾ ಒಗಟಿಗೆ ಉತ್ತರ ರೂಪದಲ್ಲಿ ಬುದ್ಧನನ್ನು ತೋರಿಸುತ್ತಾರೆ. ತನ್ಮೂಲಕ ತಮ್ಮ ಕಾಡುವಿಕೆಯ ಪ್ರಕ್ರಿಯೆಗೆ ಯಾರೂ ಊಹಿಸಲಾಗದ ನಂಬಲಸಾಧ್ಯವಾದ ಒಂದುಅಪರೂಪದ ಅಂತ್ಯಕೊಡುತ್ತಾರೆ. ಸಧ್ಯ ಅಂಬೇಡ್ಕರ್ರರನ್ನು ಅಪರೂಪದ ಅಂತ್ಯ ದೃಷ್ಟಿಯಲ್ಲಿ ಮಾತ್ರ ನೋಡಬೇಕಷ್ಟೆ.