Friday, 10 February 2017

ಉತ್ತರ ಪ್ರದೇಶ: ಐದನೇ ಬಾರಿ ಗದ್ದುಗೆಯತ್ತ ಮಾಯಾವತಿ?

ಉತ್ತರಪ್ರದೇಶದಲ್ಲಿ ಚುನಾವಣೆ ಇದೀಗ ಭರದಿಂದ ಸಾಗುತ್ತಿದೆ. ಭಾರತದ ಬೃಹತ್ ಪ್ರಜಾಪ್ರಭುತ್ವ ಈ ರಾಜ್ಯದ ಹಣೆಬರಹ ಬರುವ ಮಾರ್ಚ್ 11ಕ್ಕೆ ನಿರ್ಧಾರವಾಗಲಿದೆ. ಉತ್ತರಪ್ರದೇಶದ ಈ ಚುನಾವಣೆ ಬಹುಮಹತ್ವದ್ದು ಯಾಕೆಂದರೆ ಬೃಹತ್ ಈ ರಾಜ್ಯ ಅತಿ ಹೆಚ್ಚು ಸದಸ್ಯರನ್ನು ರಾಜ್ಯಸಭೆಗೆ ಕಳುಹಿಸುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮುಂಬರಲಿರುವ ಪ್ರಮುಖ ನಿರ್ಧಾರಗಳ ದೃಷ್ಟಿಯಲ್ಲಿ ಈ ರಾಜ್ಯದ ಫಲಿತಾಂಶ ಬಹುಮಹತ್ವದ್ದು. ಹಾಗಿದ್ದರೆ ಇಲ್ಲಿಯ ಪ್ರಮುಖ ರಾಜಕೀಯ ಪಕ್ಷ ಅಥವಾ ಸ್ಪರ್ಧಿ ಬಿಜೆಪಿ ಎಂದರ್ಥವೆ? ಖಂಡಿತ ಇಲ್ಲ. ಎಲ್ಲಾ ರಾಜ್ಯಗಳಲ್ಲಿರುವಂತೆ ಪ್ರಾದೇಶಿಕ ಪಕ್ಷಗಳು ಈ ರಾಜ್ಯದ ಪ್ರಮುಖ ಶಕ್ತಿಗಳು. ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷಗಳೇ ಆ ಶಕ್ತಿಗಳು. ನಿಜ, ಹಾಲಿ ಸಮಾಜವಾದಿ ಪಕ್ಷ ಅಧಿಕಾರದಲ್ಲಿರಬಹುದು. ಈ ದಿಸೆಯಲ್ಲಿ ಆ ಪಕ್ಷಕ್ಕೆ ಹೊಡೆತ ನೀಡುವ ಮೊದ¯ ಅಂಶವೇ ಆಡಳಿತ ವಿರೋಧಿ ಅಲೆಯ ಆ ಅಂಶ. ಹಾಗಿದ್ದರೆ ಚಿಜvಚಿಟಿಣಚಿge? ಅದರ ಸಾಂಪ್ರದಾಯಿಕ ಎದುರಾಳಿ ಬಿಎಸ್‍ಪಿಗೆ.

ಹೌದು, ದಲಿತ ನೇತೃತ್ವದ ಈ ಪಕ್ಷವನ್ನು ತಮ್ಮ ಎಂದಿನ ಅಸ್ಪøಶ್ಯತೆ ನೋಟದಲ್ಲಿಯೇ ಎಲೆಕ್ಟ್ರಾನಿಕ್ ಮೀಡಿಯಾಗಳು ಲಘುವಾಗಿ ಪರಿಗಣಿಸಿವೆ. ಆದರೆ ವಾಸ್ತವ, ಬಿಎಸ್‍ಪಿ ಬರೋಬ್ಬರಿ ನಾಲ್ಕು ಬಾರಿ ಉತ್ತರಪ್ರದೇಶವನ್ನು ಆಳಿದೆ ಐದನೆಯ ಬಾರಿಗೆ ಭರ್ಜರಿ ತಯಾರಿಯೊಂದಿಗೆ ದಾಪುಗಾಲಿಡುತ್ತಿದೆ. ದಾಪುಗಾಲು ಯಾಕೆಂದರೆ ಎಲ್ಲಾ ಪಕ್ಷಗಳು ಚುನಾವಣೆ ಇನ್ನೆರಡು ವಾರಗಳು ಎನ್ನುವಂತೆ ಹಂತಹಂತವಾಗಿ ಏಳು ಹಂತಗಳಿಗೆ ಎನ್ನುವಂತೆ ಅಭ್ಯರ್ಥಿಗಳನ್ನು ಪ್ರಕಟಿಸುತ್ತಿದ್ದರೆ ಬಿಎಸ್‍ಪಿ ಎಲ್ಲಾ ಏಳು ಹಂತಗಳಿಗೂ, ಎಲ್ಲಾ 403 ಸ್ಥಾನಗಳಿಗೂ ತಿಂಗಳಿಗೂ ಮೊದಲೇ ಒಮ್ಮೆಗೇ ಅಭ್ಯರ್ಥಿಗಳನ್ನು ಪ್ರಕಟಿಸಿ ಪ್ರಚಾರಕ್ಕೆ ಶುರುವಿಟ್ಟುಕೊಂಡಿದೆ!

ಹಾಗಿದ್ದರೆ ಬಿಎಸ್‍ಪಿಯ ಇಂತಹ ಆತ್ಮವಿಶ್ವಾಸಕ್ಕೆ ಕಾರಣ? ಉತ್ತರ: ಅದರ ತರಬೇತಿ ಪಡೆದ ಗಟ್ಟಿ ಕಾರ್ಯಕರ್ತರ ಪಡೆ ಮತ್ತು ಶೇ.25 ರಷ್ಟಿರುವ ಅದರ ಮಿನಿಮಮ್ ಮತಬ್ಯಾಂಕು. ಹೌದು, ಮಿನಿವiಮ್ ಮತಬ್ಯಾಂಕು, ಏಕೆಂದರೆ ಉತ್ತರಪ್ರದೇಶದಲ್ಲಿ ಶೇ.20ರಷ್ಟು ದಲಿತರಿದ್ದಾರೆ. ಅದರಲ್ಲೂ ಪಕ್ಷದ ಮುಖ್ಯಸ್ಥೆ ಮಾಯಾವತಿಯವರ ಸ್ವಜಾತಿ ಜಾಟವ್ ಸಮುದಾಯವೇ ಶೇ.12ರಷ್ಟಿದೆ. ಈ ನಿಟ್ಟಿನಲ್ಲಿ ಇಂತಹ ಮಿನಿಮಮ್ ಮತಬ್ಯಾಂಕು ಇರುವುದರಿಂದಲೇ ಮಾಯಾವತಿ 4 ಬಾರಿ ಆ ರಾಜ್ಯದ ಮುಖ್ಯಮಂತ್ರಿಯಾದದ್ದು. ಹಾಗಿದ್ದರೆ ಇಲ್ಲಿ ಉಪಜಾತಿಗಳಿಲ್ಲವೆ? ಇವೆ ಮತ್ತು ಅವು ಆಗಾಗ ಜಾಟವ್ ಜಾತಿಯ ಮಾಯಾವತಿಯವರಿಗೆ ಕೈಕೊಟ್ಟಿರುವುದೂ ನಿಜ. ಹೀಗೆ ಕೈಕೊಟ್ಟಿದ್ದರಿದ್ದಲೇ ಅಂದರೆ ಜಾಟವೇತರ ದಲಿತ ಸಮುದಾಯ ಕಳೆದ ಬಾರಿ ಲೋಕಸಭೆಗೆ ಬಿಜೆಪಿಗೆ ಶೇ.45 ರಷ್ಟು ಮತ ಚಲಾಯಿಸಿದ್ದರಿಂದಲೇ ಮೋದಿ ಪ್ರಧಾನಿಯಾದದ್ದು. ಆದರೆ ಈ ಬಾರಿ ಮಾಯಾವತಿಯವರಿಗೆ ಖುಷಿ ತರುವ ವಿಚಾರವೆಂದರೆ ಎಲ್ಲಾ ದಲಿತ ಜಾತಿ ಉಪಜಾತಿಗಳು ಅಂದರೆ ಜಾಟವ್, ಪಾಸಿ, ದೋಬಿ, ವಾಲ್ಮೀಕಿ, ಕೋರಿ ಮತ್ತು ಕಾಟಿಕ್ ಹೀಗೆ ಜಾತಿಗಳು ಬಿಎಸ್‍ಪಿ ಪರ ನಿಂತಿರುವುದು. ಅಂದಹಾಗೆ ಇದಕ್ಕೆ ಮಾಯಾವತಿಯವರು ಮಾಡಿರಬಹುದಾದ ಜಾದೂ ಏನು ಕಾರಣವಲ್ಲ! ಬದಲಿಗೆ ಅಖಿಲೇಶ್ ಯಾದವ್ ಕಾರಣ. ಏಕೆಂದರೆ ಪರಿಶಿಷ್ಟರನ್ನು ತನ್ನ ಐದು ವರ್ಷಗಳ ಆಡಳಿತದಲ್ಲಿ ಸಂಪೂರ್ಣ ಕಡೆಗಣಿಸಿದ ಅಖಿಲೇಶ್, ಅವರ ಮೀಸಲಾತಿಯನ್ನು ದುರ್ಬಲಗೊಳಿಸಲು ಪರಿಶಿಷ್ಟ ಜಾತಿ ಪಟ್ಟಿಗೆ ಹಿಂದುಳಿದ ವರ್ಗಗಳ 17 ಜಾತಿಗಳನ್ನು ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವುದು ಎಲ್ಲಾ ಪರಿಶಿಷ್ಟರನ್ನು ಕೆರಳಿಸಿದೆ. ಈ ನಿಟ್ಟಿನಲ್ಲಿ ಇದನ್ನು ತಡೆಯಲಿಕ್ಕೆ ಮಾಯಾವತಿಯವರಿಂದಷ್ಟೇ ಸಾಧ್ಯ ಎಂದೆನಿಸಿ ಪರಿಶಿಷ್ಟರು ಹಿಂದೆಂದೂ ಕಾಣದಂತೆ ಉಪಜಾತಿಭೇದ ಮೀರಿ ಮಾಯಾವತಿಯವರ ಹಿಂದೆ ನಿಂತಿದ್ದಾರೆ. ಖಂಡಿತ ಇದು ಬಿಎಸ್‍ಪಿಗೆ ಅನುಕೂಲಕರವಾಗಲಿದೆ.

ದಲಿತ- ಮುಸ್ಲಿಮ್ ಭಾಯಿ-ಭಾಯಿ: ಹೌದು, ಉತ್ತರ ಪ್ರದೇಶ ಚುನಾವಣೆಯ ಈ ಬಾರಿಯ ವಿಶೇಷ ಮಾಯಾವತಿ ಒಗ್ಗೂಡಿಸ ಹೊರಟರುವ ದಲಿತ –ಮುಸ್ಲಿಮ್ ಒಗ್ಗಟ್ಟಿನ ಶಕ್ತಿ. ಇದು ದಿಢೀರನೇ ಹುಟ್ಟಿಕೊಂಡ ಶಕ್ತಿಯಲ್ಲ. ಕಳೆದ ಎರಡು ವರ್ಷಗಳಿಂದ ರಾಜ್ಯದಾದ್ಯಂತ ಸಾವಿರಾರು ದಲಿತ- ಮುಸ್ಲಿಂ ಸಹೋದರತಾ ಸಮಾವೇಶಗಳನ್ನು ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರಗೆ ನಡೆಸಿರುವ ಮಾಯಾವತಿಯವರು ಅದರ ಫಲಿತವಾಗಿ ಮುಸ್ಲಿಮರಿಗೆ ಬೇರಾವುದೇ ಪಕ್ಷವೂ ನೀಡದಷ್ಟು ಅಂದರೆ 100 ಕಡೆ ಸ್ಪರ್ಧಿಸಲು ಟಿಕೆಟ್ ನೀಡಿದ್ದಾರೆ. ಉತ್ತರಪ್ರದೇಶದಲ್ಲಿ ಮುಸ್ಲಿಮರ ಸಂಖ್ಯೆ ಅತಿ ಹೆಚ್ಚು ಅಂದರೆ ಶೇ.21. ನಂತರದ ಸ್ಥಾನ ದಲಿತರದ್ದು ಅಂದರೆ ಶೇ.20. ಇವೆರಡು ಸಮುದಾಯಗಳ ಒಟ್ಟು ಸಂಖ್ಯೆ ಸರಿಸುಮಾರು ಶೇ.40. ಗೆಲ್ಲಲು ಬೇಕಿರುವುದು ಶೇ.30 ಮತಗಳು. ಮಾಯಾವತಿಯವರಿಗೆ ಈ ಬಾರಿ ಆಶಾಭಾವ ನೀಡುತ್ತಿರುವುದೇ ಈ ಎರಡು ಸಮುದಾಯಗಳ ಇಂತಹ ಜನಸಂಖ್ಯೆಯ ಒಟ್ಟಾರೆ ಶೇಕಡಾ ಲೆಕ್ಕಾಚಾರ. ಹಾಗಂತ ಮಾಯಾವತಿಯವರು ಈ ಲೆಕ್ಕಾಚಾರವನ್ನಷ್ಟೆ ನಂಬಿ ಕುಳಿತಿಲ್ಲ. ತಮ್ಮ ಆಪ್ತ ನಂಬಿಕಸ್ತ ಮಾಜಿ ಸಚಿವ ನಸೀಮುದ್ದಿನ್ ಸಿದ್ದಿಕಿಯವರ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದ ಮನೆ ಮನೆ ಭೇಟಿಕೈಗೊಂಡಿದ್ದಾರೆ ಮತ್ತು ಅವರ ಈ ಸಮುದಾಯಗಳ ಜೋಡಣೆ ಕೆಲಸಕ್ಕೆ 20ಕ್ಕೂ ಹೆಚ್ಚು ಮುಸ್ಲಿಮ್ ಧರ್ಮಗುರುಗಳೂ ಕೈಜೋಡಿಸಿದ್ದಾರೆಂದರೆ ದಲಿತ- ಮುಸ್ಲಿಂ ಏಕತೆಯ ಮಾಯಾವತಿಯವರ ಈ ಪ್ರಯತ್ನದ ಗಂಭೀರತೆಯನ್ನು ಎಂತಹವರಾದರೂ ಅರ್ಥಮಾಡಿಕೊಳ್ಳಬಹುದು. ಇದು ಯಾವ ಪರಿಣಾಮ ಬೀರಿದೆಯೆಂದರೆ ಸಮಾಜವಾದಿ ಪಕ್ಷದ ಜೊತೆ ಗುರುತಿಸಿಕೊಂಡಿದ್ದ ಮುಸ್ಲಿಮ್ ನೇತಾರ ‘ಖ್ವಾಮಿ ಏಕತಾ ದಳ್’ ಪಕ್ಷದ ಮಾಜಿ ಡಾನ್ ಎಂದೇ ಖ್ಯಾತರಾದ ಮುಕ್ತಾರ್ ಅನ್ಸಾರಿ ಈಗ ಇಡೀ ತಮ್ಮ ಪಕ್ಷವನ್ನು ಬಿಎಸ್‍ಪಿಯಲ್ಲಿ ವಿಲೀನಗೊಳಿಸಿ ಮಾಯಾವತಿಯವರ ಜೊತೆ ಕೈಜೋಡಿಸಿದ್ದಾರೆ. ಅಂದಹಾಗೆ ಮುಕ್ತಾರ್ ಅನ್ಸಾರಿ ಏನು ಸಾಮಾನ್ಯದವರಲ್ಲ ಉತ್ತರ ಪ್ರದೇಶದ ಪೂರ್ವಾಂಚಲ ಭಾಗದಲ್ಲಿ ಪ್ರಭಾವಶಾಲಿಯಾದ ಅವರು ಕನಿಷ್ಠವೆಂದರೂ 20 ಕ್ಷೇತ್ರಗಳಲ್ಲಿ ನೇರ ಪರಿಣಾಮ ಬೀರಬಲ್ಲಂಥವರು ಮತ್ತು ಅವರು ಮತ್ತವರ ಸಂಬಂಧಿಗಳು ಸ್ಪರ್ಧಿಸಿರುವ ಮೂರು ಕ್ಷೇತ್ರಗಳಲ್ಲಿ ಇನ್ನೂ ಚುನಾವಣೆಯೇ ನಡೆಯದಿದ್ದರೂ ಈಗಾಗಲೇ ಗೆದ್ದಿದ್ದಾರೆ ಎಂದು ಮಾಧ್ಯಮದಿಂದ ಗುರುತಿಸಲ್ಪಟ್ಟಿರುವಂಥವರು! ಅಂದಹಾಗೆ ತಾಜಾ ಸುದ್ದಿಯೆಂದರೆ ದೆಹಲಿಯ ಜುಮ್ಮಾ ಮಸೀದಿಯ ಶಾಹಿ ಇಮಾಂ ಸೈಯದ್ ಅಹಮದ್ ಬುಖಾರಿ ಯವರು ಈ ಬಾರಿ ಬಿಎಸ್ಪಿಗೆ ಮತ ನೀಡುವಂತೆ ಫತ್ವಾ ಹೊರಡಿಸಿದ್ದಾರೆ‌! ಸಾಲದಕ್ಕೆ "ರಾಷ್ಟ್ರೀಯ ಉಲೇಮಾ ಕೌನ್ಸಿಲ್" ತಾನು ಸ್ಪರ್ಧಿಸಬೇಕೆಂದುಕೊಂಡಿದ್ದ 84 ಕ್ಷೇತ್ರಗಳಿಂದ ಹಿಂದೆ ಸರಿದು ಬಿಎಸ್ಪಿ ಗೆ ಬೆಂಬಲ ಘೋಷಿಸಿದೆ ಇದರ ಜೊತೆಗೆ ಸುನ್ನಿ ಮುಸ್ಲಿಂ ಧರ್ಮ ಗುರುಗಳ, ಮುಖಂಡರುಗಳ ಸಂಘಟನೆಯಾದ "ಆಲ್ ಇಂಡಿಯಾ ಉಲೇಮ ಮತ್ತು ಮಸಾಹೇಕ್ ಮಂಡಳಿ", " ದಾರುಲ್ ಉಲೇಮ ದಿಯೊಬಂದ್" ಮತ್ತು "ಗರೀಬ್ ನವಾಜ್ ಫೌಂಡೇಶನ್'" ನಂತಹ ಬಹುತೇಕ ಮುಸ್ಲಿಂ ಪ್ರಮುಖ ಸಂಘಟನೆ ಗಳು ಬಹಿರಂಗವಾಗಿ ಬಿಎಸ್ಪಿ ಗೆ ಬೆಂಬಲ ಘೋಷಿಸಿವೆ ಪ್ರಚಾರಕ್ಕೂ ಇಳಿದಿವೆ. ಮುಸ್ಲಿಮರಿಗೆ ಮೀಸಲಾತಿ, ದರ್ಗಾ ಕಾಯ್ದೆ ಅನುಷ್ಠಾನ, ರಾಜ್ಯ ನಾಗರಿಕ ಸೇವಾ ಪರೀಕ್ಷೆ ಗಳಲ್ಲಿ ಉರ್ದು ಭಾಷೆ ಅಳವಡಿಕೆ ಬಗ್ಗೆ  ಅಖಿಲೇಶ್ ಯಾದವ್ ನೀಡಿದ್ದ ಆಶ್ವಾಸನೆ ಈಡೇರಿಸದ್ದರ ಬಗ್ಗೆ ಅಸಂತುಷ್ಟ ಗೊಂಡಿರುವ ಈ ಪ್ರಮುಖ ಮುಸ್ಲಿಂ ಸಂಘಟನೆಗಳು ಮುಸ್ಲಿಮರ ಮೀಸಲಾತಿ ಪರ ಇರುವ ಬಿಎಸ್ಪಿ ಗೆ ನಮ್ಮ ಬೆಂಬಲ ಎಂದು ಘಂಟಾಘೋಷವಾಗಿ ಹೇಳಿಕೆ ನೀಡಿವೆ.

ನೋಟು ರದ್ದು ಮತ್ತು ಆರ್‍ಎಸ್‍ಎಸ್‍ನ ಮೀಸಲಾತಿ ವಿರೋಧಿ ಹೇಳಿಕೆ: ಮತ್ತೊಂದು ಪ್ರಮುಖ ಅಂಶ ಮಾಯಾವತಿಯವರ ಗೆಲುವಿಗೆ ಸಹಕರಿಸುತ್ತಿರುವಂಥದನ್ನು ಇಲ್ಲಿ ಹೇಳಲೇಬೇಕು ಅದು ನರೇಂದ್ರ ಮೋದಿಯ 500 ಮತ್ತು 1000ದ ನೋಟು ರದ್ದು ಯೋಜನೆ! ನೋಟುರದ್ದು ಯಾವ ರೀತಿ ಪರಿಣಾಮಬೀರಿದೆಯೆಂದರೆ ಜನ ಅದರಲ್ಲೂ ಉತ್ತರ ಪ್ರದೇಶದ ಜನ ಈ ಚುನಾವಣೆಯಲ್ಲಿ ಖಂಡಿತ ಸೇಡು ತೀರಿಸಿಕೊಳ್ಳುವವರಿದ್ದಾರೆ. ಅದರ ನಿಚ್ಚಳ ಲಾಭ ಅದನ್ನು ದಿನ ಒಂದರಿಂದಲೇ ವಿರೋಧಿಸುತ್ತ ಬಂದಿರುವ ಮಾಯಾವತಿಯವರಿಗಾಗಲಿದೆ. ಹೇಗೆಂದರೆ ಸಭೆಗಳಲ್ಲಿ ಮಾಯಾವತಿ “ನೀವು (ಉತ್ತರ ಪ್ರದೇಶದ ಜನ) ಅವರನ್ನು (ಮೋದಿಯನ್ನು) ಪ್ರಧಾನಿ ಮಾಡಿದಿರಿ. ಆದರೆ ಅವರು ನಿಮ್ಮ ದುಡ್ಡು ಕಿತ್ತುಕೊಂಡರು” ಎನ್ನುತ್ತಿದ್ದಂತೆ ಇಡೀ ಸಭೆ ಶಿಳ್ಳೆ ಹಾಕಿ ಕಿವಿಗಡಚಿಕ್ಕುವ ಚಪ್ಪಾಳೆಯೊಂದಿಗೆ ಮಾಯಾವತಿಯವರ ಈ ಹೇಳಿಕೆಗೆ ಬಲ ತುಂಬುತ್ತದೆ. ಈ ನಡುವೆ ಮೀಸಲಾತಿ ವಿರುದ್ಧ ಹೇಳಿಕೆ ನೀಡಿರುವ ಆರ್‍ಎಸ್‍ಎಸ್ ಮುಖಂಡ ಮನಮೋಹನ್ ವೈದ್ಯರ ಮಾತುಗಳೂ ಕೂಡ ಈ ಸಂದರ್ಭದಲ್ಲಿ ಮಾಯಾವತಿಯವರಿಗೆ ವರವಾಗಲಿದೆ. ಹೇಗೆಂದರೆ ಇದನ್ನು ಎಗ್ಗಿಲ್ಲದೆ ಪ್ರಸ್ತಾಪಿಸುತ್ತಿರುವ ಬೆಹೆನ್‍ಜೀ “ಬಿಜೆಪಿ ಈ ಬಾರಿ ಅಧಿಕಾರಕ್ಕೆ ಬಂದರೆ ಎಸ್ಸಿ, ಎಸ್ಟಿ ಮತ್ತು ಒಬಿಸಿಗಳ ಮೀಸಲಾತಿಯನ್ನು ಶೀಘ್ರದಲ್ಲೇ ಕೊನೆಗೊಳಿಸಲಿದೆ. ಈ ನಿಟ್ಟಿನಲ್ಲಿ ಅವರಿಗೆ ನಿಮ್ಮ ಮತಗಳ ಮೂಲಕ ಪಾಠ ಕಲಿಸಿ” ಎಂದು ಜನತೆಯನ್ನು ನೇರ ಹುರಿದುಂಬಿಸುತ್ತಿದ್ದಾರೆ.

ಪರಿಣಾಮ ಬೀರದ ಕಾಂಗ್ರೆಸ್- ಅಖಿಲೇಶ್ ಒಪ್ಪಂದ: ಮಾಯಾವತಿಯವರಿಗೆ ಧನಾತ್ಮಕವಾಗಿರುವ ಮತ್ತೊಂದು ಅಂಶ ಸಮಾಜವಾದಿ ಪಕ್ಷದ ಅಂತಃಕಲಹ ಮತ್ತು ಕಾಂಗ್ರೆಸ್-ಅಖಿಲೇಶ್ ಯಾದವ್ ಹೊಂದಾಣಿಕೆ. ಸಮಾಜವಾದಿ ಅಂತಃಕಲಹ ಅದರಲ್ಲೂ ಅಂತಹ ಕಲಹದಲ್ಲಿ ಮುಲಾಯಂ ಸಿಂಗ್ ಯಾದವ್‍ಗೆ ಹಿನ್ನಡೆಯಾಗಿರುವುದು ಮಾಯಾವತಿಯವರಿಗೆ ವರದಾನವಾಗಲಿದೆ. ಯಾಕೆಂದರೆ ಮುಸ್ಲಿಮ್ ಮತಗಳ ಮೇಲೆ ತಂದೆ ಮುಲಾಯಂ ಸಿಂಗ್ ಯಾದವ್‍ಗಿರುವಷ್ಟು ಹಿಡಿತ ಅಖಿಲೇಶ್ ಯಾದವ್‍ಗೆ ಇಲ್ಲ. ಹಿಡಿತವೂ ಇಲ,್ಲ ಪ್ರೀತಿಯೂ ಇಲ್ಲ! ಇದನ್ನು ಸ್ವಯಂ ಬಹಿರಂಗಪಡಿಸಿರುವ ಮುಲಾಯಂ “ರಾಜ್ಯದ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ)ರನ್ನಾಗಿ ಮುಸ್ಲಿಮ್ ಸಮುದಾಯದವರೊಬ್ಬರನ್ನು ತಾನು ನೇಮಿಸಿದಾಗ ಕುಪಿತಗೊಂಡ ಮುಖ್ಯಮಂತ್ರಿ ಅಖಿಲೇಶ್ ತನ್ನೊಡನೆ 15 ದಿನ ಮಾತಾಡಲೇ ಇಲ್ಲ” ಎಂದಿದ್ದಾರೆ. ಈ ನಡುವೆ ತರಾತುರಿಯಲ್ಲಿ ಮಾಡಿಕೊಂಡಿರುವ ಕಾಂಗ್ರೆಸ್ ಜೊತೆಗಿನ ಒಪ್ಪಂದದಲ್ಲಿ ದುರ್ಬಲ ಕಾಂಗ್ರೆಸ್‍ಗೆ ಅಖಿಲೇಶ್ 105 ಸ್ಥಾನಗಳನ್ನು ನೀಡಿದ್ದಾರೆ. ಚುನಾವಣಾ ಪಂಡಿತರ ಪ್ರಕಾರ ಇದು ಅಖಿಲೇಶ್‍ಗೆ ಲಾಭ ತಂದುಕೊಡುವುದಕ್ಕಿಂತ ನಷ್ಟವುಂಟುಮಾಡುವ ಸಾಧ್ಯತೆಯೇ ಹೆಚ್ಚು. ಏಕೆಂದರೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಶಕ್ತಿ ಬಹಳ ದುರ್ಬಲ. ಕಳೆದ ವಿಧಾನಸಭೆಯಲ್ಲಿ ಅದು ಗಳಿಸಿದ್ದ ಸ್ಥಾನ ಕೇವಲ 28. ಹೋರಾಟ ನೀಡಿದ್ದದ್ದು ಕೇವಲ 60 ಸ್ಥಾನಗಳಲ್ಲಷ್ಟೆ. ಹೀಗಿರುವ ಇಂಥ ದುರ್ಬಲ ಶಕ್ತಿಗೆ ಹೆಚ್ಚು ಸ್ಥಾನಗಳನ್ನು ನೀಡಿ ಅಂತಹ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ ಸ್ಪರ್ಧಿಸುವ ಅವಕಾಶವನ್ನೇ ಕಳೆದುಕೊಂಡರೆ? ಖಂಡಿತ ಅದರ ಲಾಭ ಇತರ ಪಕ್ಷಗಳಿಗಾಗಲಿದೆ.

ಒಟ್ಟಾರೆ ಹೇಳುವುದಾದರೆ ದಲಿತ ಸಮುದಾಯದ ಹಿಂದೆಂದೂ ಕಾಣದ ಒಗ್ಗಟ್ಟು, ಹರಿದು ಬರುತ್ತಿರುವ ಮುಸ್ಲಿಮ್ ಸಮುದಾಯದ  ಅಖಂಡ ಬೆಂಬಲ, ಮೋದಿ 500 ಮತ್ತು 1000ದ ನೋಟು ರದ್ದು ಮಾಡಿರುವ ಸಂದರ್ಭ, ಸಮಾಜವಾದಿ ಪಕ್ಷದ ಕುಟುಂಬ ಕಲಹ ಮಾಯಾವತಿಯವರಿಗೆ ಅನುಕೂಲಕರ ವಾತಾವರಣ ನಿರ್ಮಿಸಿದೆ, ಅವರನ್ನು ಐದನೆಯ ಬಾರಿಗೆ ಲಕ್ನೋ ಗದ್ದುಗೆಗೆ ಏರಿಸಲಿದೆ. ಅಂದಹಾಗೆ ಪೂರ್ವಾಗ್ರಹಪೀಡಿತ ಕೆಲ ಮಾಧ್ಯಮ ಸಮೀಕ್ಷೆಗಳನ್ನು ನೋಡಿ ಮಾಯಾವತಿಯವರಿಗೆ ಒದಗಿಬರಬಹುದಾದ ಇಂತಹ ಅನುಕೂಲದ ಸಾಧ್ಯತೆಯನ್ನು ಋಣಾತ್ಮಕವಾಗಿ ನೋಡುವ ಕೆಲವರು ಮಾಯಾವತಿ ಒಂದಲ್ಲ ಎರಡಲ್ಲ ನಾಲ್ಕು ಬಾರಿ ಉತ್ತರಪ್ರದೇಶದ ಮುಖ್ಯಮಂತ್ರಿಯಾದವರು ಎಂಬ ಅಂಶವನ್ನಾದರೂ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ಉತ್ತಮ!

-ರಘೋತ್ತಮ ಹೊ.ಬ

No comments:

Post a Comment