ಅಂಬೇಡ್ಕರರ ಪ್ರಕಾರ ಜಾತಿ ಮತ್ತು ಅಸ್ಪøಶ್ಯತೆ ಸೃಷ್ಟಿಗೆ ಮೂಲ ಕಾರಣ
ಅಂಬೇಡ್ಕರರ ಪ್ರಕಾರ ಜಾತಿ ಮತ್ತು ಅಸ್ಪøಶ್ಯತೆ ಸೃಷ್ಟಿಗೆ ಮೂಲ ಕಾರಣ ಸಪಿಂಡ ವಿವಾಹ. ಅಂತಹ ವಿವಾಹ ಜಾತಿಯ ಉಗಮಕ್ಕೆ ಬೀಜ ಬಿತ್ತಿತು. ಆದರೆ ಅದರ ನಿರ್ಮೂಲನೆ? ಹಾಗೆ ಸೃಷ್ಟಿಯಾದ ಜಾತಿಗಳ ನಡುವೆ ವಿವಾಹದ ಮೂಲಕ ಸಾಧ್ಯವೆ? ಖಂಡಿತ ಸಾಧ್ಯವಿಲ್ಲ. ಆದರೆ ತಳ ಜಾತಿಗಳು ಆರ್ಥಿಕವಾಗಿ ಮೇಲೆ ಬಂದರೆ ಮತ್ತು ಹಾಗೆ ಮೇಲೆ ಬಂದು ಮೇಲ್ಮಟ್ಟದಲ್ಲಿ ಹಾಗೆಯೇ ಉಳಿದರೆ ಜಾತಿ ಭೀತಿ ಕಡಿಮೆಯಾಗುತ್ತದೆ. ಜಾತಿ ಭೀತಿ ಕಡಿಮೆಯಾಯಿತೆಂದರೆ ಜಾತಿ ನಿರ್ಮೂಲನೆಯಾಯಿತೆಂದೇ ಅರ್ಥ. ಮತ್ತು ಆ ಕಾರಣಕ್ಕಾಗಿ ಅಂದರೆ ತಳ ಸಮೂಹಗಳ ಆರ್ಥಿಕ ಸಮತೆಯ ಕಾರಣಕ್ಕಾಗಿ ಮೀಸಲಾತಿಗಿಂತ ವಿವಿಧ ಉದ್ಯೋಗಗಳ ಎಲ್ಲ ಕ್ಷೇತ್ರಗಳೂ ನೊಂದ ತಳ ಸಮುದಾಯಗಳಿಗೆ ತೆರೆಯಬೇಕು. ವ್ಯಾಪಾರ, ವ್ಯವಹಾರ, ಅಂಗಡಿ, ಮುಂಗಟ್ಟು, ಕಾರ್ಖಾನೆ ಹೀಗೆ ಎಲ್ಲ ಕ್ಷೇತ್ರಗಳಲ್ಲು ತಳ ಸಮುದಾಯಗಳು ತನ್ನ ಅಸ್ತಿತ್ವ ಸಾಧಿಸುವಂತಾಗಬೇಕು ಮತ್ತು ಅದಕ್ಕೆ ಸರ್ಕಾರಗಳು ಪ್ರೋತ್ಸಾಹಕ ವಾತಾವರಣ ಸೃಷ್ಟಿಸಬೇಕು. ಸರ್ಕಾರಗಳು ಅಂಬಾನಿ, ಅದಾನಿ, ನಾರಾಯಣಮೂರ್ತಿ, ಅಶೋಕ್ ಖೇಣಿ, ವಿಜಯ್ ಮಲ್ಯಗಳಿಗೆ ರಿಯಾಯಿತಿಗಳನ್ನು ನೀಡುವುದಲ್ಲ. ನಿಜವಾದ ರಿಯಾಯಿತಿ, ಎಕರೆಗೆ ಒಂದು ರೂಪಾಯಿಯಂತೆ ಭೂಮಿ ಗುತ್ತಿಗೆ, ಬ್ಯಾಂಕ್‍ಗಳಿಂದ ಭರಪೂರ ಖಾತರಿ ಪಡಿಸಿದ ಸಾಲ ನೀಡಬೇಕಾಗಿರುವುದು ತಳ ಸಮೂಹಗಳ ಜನರಿಗೆ. ಆಗ ತಳ ಸಮುದಾಯಗಳು ಆರ್ಥಿಕವಾಗಿ ಬಲಾಢ್ಯಗೊಳ್ಳುತ್ತವೆ.
ಹಾಗೆಯೇ ತಳ ಸಮುಧಾಯಗಳ ಜನರೂ ಅಷ್ಟೆ ಸಾಧ್ಯವಾದಷ್ಟು ಸ್ವಯಂ ಉದ್ಯೋಗದ ಕಡೆ ಗಮನಹರಿಸಬೇಕು. ಎಷ್ಟು ಸಾಧ್ಯವೋ ಅಷ್ಟು ಖಾಸಗಿ ಅಂಗಡಿ, ಹೋಟೆಲ್ಲು, ಕಾರ್ಖಾನೆ ಇತ್ಯಾದಿಗಳನ್ನು ಸ್ಥಾಪಿಸುವ ಕಡೆ , ಸ್ಥಾಪಿಸಿ ನಡೆಸುವ ಕಡೆ ಗಮನಹರಿಸಬೇಕು. ದಾರಿ ಕಷ್ಟದ್ದಾಗಬಹುದು. ಆದರೆ ಮುಂದೆ ನಡೆಯುವಾಗ ಮುಳ್ಳುಕಂಟಿಗಳನ್ನು ಬದಿಗೆ ಸರಿಸುವಂತೆ ಪ್ರಯತ್ನ ಸಾಗಬೇಕು. ಒಂದು ತಲೆಮಾರು ಹೀಗೆ ಕಷ್ಟ ಪಟ್ಟರೆ ಖಂಡಿತ ತಳಸಮುದಾಯಗಳ ಮುಂದಿನ ತಲೆಮಾರು ಜಾತಿ ಭೀತಿಯಿಂದ ಬಚಾವ್ ಆಗುತ್ತವೆ. ಇದು ಸಾಧ್ಯವೇ ಎಂಬ ಪ್ರಶ್ನೆ ಬೇಡ. ಹಿಂದೆ ಅಮೆರಿಕಾದಲ್ಲಿಯೂ ಕೂಡ ‘ಬೀಳಿಯರಿಗೆ ಮಾತ್ರ ಹೊಟೆಲ್’ ಎಂಬ ಬೋರ್ಡುಗಳಿದ್ದವು. ಇದನ್ನು ಚಾಲೆಂಜ್ ಆಗಿ ತೆಗೆದುಕೊಂಡ ಕರಿಯರ ‘ಕರಿಯರಿಗೆ ಮಾತ್ರ ಹೊಟೆಲ್’ ಎಂದು ತಮ್ಮ ದೇ ಹೋಟೆಲ್ಲುಗಳನ್ನು ತೆರೆದರು. ಆಗ ಕರಿಯರಿಗೆ ಯಶಸ್ಸು ಸಿಕ್ಕಿತು. ಇಂದು ಅಮೆರಿಕಾದಲ್ಲಿ ಕರಿಯರು ಬಿಳಿಯರಷ್ಟೆ ಪ್ರಬಲವಾಗಿದ್ದಾರೆ. ಕರಿಯರು ನಾಶವಾಗಿಲ್ಲ, ಆದರೆ ಆರ್ಥಿಕ ಬೆಳವಣಿಗೆಯಿಂದಾಗಿ ಸಮಾನತೆ ಬಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲ ತಳ ಸಮೂಹಗಳು ಅಡಿ ಇಡಬೇಕಿದೆ.
-ರಘೋತ್ತಮ ಹೊ.ಬ

No comments:
Post a Comment