Raghothama Hoba's writings
an ambedkarites blog
Saturday, 29 May 2021
Raghothama hoba: ಶೌಚಾಲಯ ಶುಚಿಗೊಳಿಸುವುದನ್ನು "ಆ ಸಮುದಾಯ"ದವರೇ ಮಾಡಬೇಕೆ?
Raghothama hoba: ಶೌಚಾಲಯ ಶುಚಿಗೊಳಿಸುವುದನ್ನು "ಆ ಸಮುದಾಯ"ದವರೇ ಮಾಡಬೇಕೆ?: ಸಂಸ್ಥೆಯೊಂದರಲ್ಲಿ ಮೀಟಿಂಗ್ ನಡೆಯುತ್ತಿತ್ತು. ಸದಸ್ಯರೊಬ್ಬರು "ನಮ್ಮ ಸಂಸ್ಥೆಯ ಶೌಚಾಲಯಗಳೆಲ್ಲವೂ ಗಲೀಜು ಆಗಿವೆ. ಆ ಯಮ್ಮನನ್ನು ಕರೆಸಿ" ಎಂದು ಮುಖ್ಯಸ್ಥರನ...
Friday, 10 February 2017
ಉತ್ತರ ಪ್ರದೇಶ: ಐದನೇ ಬಾರಿ ಗದ್ದುಗೆಯತ್ತ ಮಾಯಾವತಿ?
ಉತ್ತರಪ್ರದೇಶದಲ್ಲಿ ಚುನಾವಣೆ ಇದೀಗ ಭರದಿಂದ ಸಾಗುತ್ತಿದೆ. ಭಾರತದ ಬೃಹತ್ ಪ್ರಜಾಪ್ರಭುತ್ವ ಈ ರಾಜ್ಯದ ಹಣೆಬರಹ ಬರುವ ಮಾರ್ಚ್ 11ಕ್ಕೆ ನಿರ್ಧಾರವಾಗಲಿದೆ. ಉತ್ತರಪ್ರದೇಶದ ಈ ಚುನಾವಣೆ ಬಹುಮಹತ್ವದ್ದು ಯಾಕೆಂದರೆ ಬೃಹತ್ ಈ ರಾಜ್ಯ ಅತಿ ಹೆಚ್ಚು ಸದಸ್ಯರನ್ನು ರಾಜ್ಯಸಭೆಗೆ ಕಳುಹಿಸುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮುಂಬರಲಿರುವ ಪ್ರಮುಖ ನಿರ್ಧಾರಗಳ ದೃಷ್ಟಿಯಲ್ಲಿ ಈ ರಾಜ್ಯದ ಫಲಿತಾಂಶ ಬಹುಮಹತ್ವದ್ದು. ಹಾಗಿದ್ದರೆ ಇಲ್ಲಿಯ ಪ್ರಮುಖ ರಾಜಕೀಯ ಪಕ್ಷ ಅಥವಾ ಸ್ಪರ್ಧಿ ಬಿಜೆಪಿ ಎಂದರ್ಥವೆ? ಖಂಡಿತ ಇಲ್ಲ. ಎಲ್ಲಾ ರಾಜ್ಯಗಳಲ್ಲಿರುವಂತೆ ಪ್ರಾದೇಶಿಕ ಪಕ್ಷಗಳು ಈ ರಾಜ್ಯದ ಪ್ರಮುಖ ಶಕ್ತಿಗಳು. ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷಗಳೇ ಆ ಶಕ್ತಿಗಳು. ನಿಜ, ಹಾಲಿ ಸಮಾಜವಾದಿ ಪಕ್ಷ ಅಧಿಕಾರದಲ್ಲಿರಬಹುದು. ಈ ದಿಸೆಯಲ್ಲಿ ಆ ಪಕ್ಷಕ್ಕೆ ಹೊಡೆತ ನೀಡುವ ಮೊದ¯ ಅಂಶವೇ ಆಡಳಿತ ವಿರೋಧಿ ಅಲೆಯ ಆ ಅಂಶ. ಹಾಗಿದ್ದರೆ ಚಿಜvಚಿಟಿಣಚಿge? ಅದರ ಸಾಂಪ್ರದಾಯಿಕ ಎದುರಾಳಿ ಬಿಎಸ್‍ಪಿಗೆ.
ಹೌದು, ದಲಿತ ನೇತೃತ್ವದ ಈ ಪಕ್ಷವನ್ನು ತಮ್ಮ ಎಂದಿನ ಅಸ್ಪøಶ್ಯತೆ ನೋಟದಲ್ಲಿಯೇ ಎಲೆಕ್ಟ್ರಾನಿಕ್ ಮೀಡಿಯಾಗಳು ಲಘುವಾಗಿ ಪರಿಗಣಿಸಿವೆ. ಆದರೆ ವಾಸ್ತವ, ಬಿಎಸ್‍ಪಿ ಬರೋಬ್ಬರಿ ನಾಲ್ಕು ಬಾರಿ ಉತ್ತರಪ್ರದೇಶವನ್ನು ಆಳಿದೆ ಐದನೆಯ ಬಾರಿಗೆ ಭರ್ಜರಿ ತಯಾರಿಯೊಂದಿಗೆ ದಾಪುಗಾಲಿಡುತ್ತಿದೆ. ದಾಪುಗಾಲು ಯಾಕೆಂದರೆ ಎಲ್ಲಾ ಪಕ್ಷಗಳು ಚುನಾವಣೆ ಇನ್ನೆರಡು ವಾರಗಳು ಎನ್ನುವಂತೆ ಹಂತಹಂತವಾಗಿ ಏಳು ಹಂತಗಳಿಗೆ ಎನ್ನುವಂತೆ ಅಭ್ಯರ್ಥಿಗಳನ್ನು ಪ್ರಕಟಿಸುತ್ತಿದ್ದರೆ ಬಿಎಸ್‍ಪಿ ಎಲ್ಲಾ ಏಳು ಹಂತಗಳಿಗೂ, ಎಲ್ಲಾ 403 ಸ್ಥಾನಗಳಿಗೂ ತಿಂಗಳಿಗೂ ಮೊದಲೇ ಒಮ್ಮೆಗೇ ಅಭ್ಯರ್ಥಿಗಳನ್ನು ಪ್ರಕಟಿಸಿ ಪ್ರಚಾರಕ್ಕೆ ಶುರುವಿಟ್ಟುಕೊಂಡಿದೆ!
ಹಾಗಿದ್ದರೆ ಬಿಎಸ್‍ಪಿಯ ಇಂತಹ ಆತ್ಮವಿಶ್ವಾಸಕ್ಕೆ ಕಾರಣ? ಉತ್ತರ: ಅದರ ತರಬೇತಿ ಪಡೆದ ಗಟ್ಟಿ ಕಾರ್ಯಕರ್ತರ ಪಡೆ ಮತ್ತು ಶೇ.25 ರಷ್ಟಿರುವ ಅದರ ಮಿನಿಮಮ್ ಮತಬ್ಯಾಂಕು. ಹೌದು, ಮಿನಿವiಮ್ ಮತಬ್ಯಾಂಕು, ಏಕೆಂದರೆ ಉತ್ತರಪ್ರದೇಶದಲ್ಲಿ ಶೇ.20ರಷ್ಟು ದಲಿತರಿದ್ದಾರೆ. ಅದರಲ್ಲೂ ಪಕ್ಷದ ಮುಖ್ಯಸ್ಥೆ ಮಾಯಾವತಿಯವರ ಸ್ವಜಾತಿ ಜಾಟವ್ ಸಮುದಾಯವೇ ಶೇ.12ರಷ್ಟಿದೆ. ಈ ನಿಟ್ಟಿನಲ್ಲಿ ಇಂತಹ ಮಿನಿಮಮ್ ಮತಬ್ಯಾಂಕು ಇರುವುದರಿಂದಲೇ ಮಾಯಾವತಿ 4 ಬಾರಿ ಆ ರಾಜ್ಯದ ಮುಖ್ಯಮಂತ್ರಿಯಾದದ್ದು. ಹಾಗಿದ್ದರೆ ಇಲ್ಲಿ ಉಪಜಾತಿಗಳಿಲ್ಲವೆ? ಇವೆ ಮತ್ತು ಅವು ಆಗಾಗ ಜಾಟವ್ ಜಾತಿಯ ಮಾಯಾವತಿಯವರಿಗೆ ಕೈಕೊಟ್ಟಿರುವುದೂ ನಿಜ. ಹೀಗೆ ಕೈಕೊಟ್ಟಿದ್ದರಿದ್ದಲೇ ಅಂದರೆ ಜಾಟವೇತರ ದಲಿತ ಸಮುದಾಯ ಕಳೆದ ಬಾರಿ ಲೋಕಸಭೆಗೆ ಬಿಜೆಪಿಗೆ ಶೇ.45 ರಷ್ಟು ಮತ ಚಲಾಯಿಸಿದ್ದರಿಂದಲೇ ಮೋದಿ ಪ್ರಧಾನಿಯಾದದ್ದು. ಆದರೆ ಈ ಬಾರಿ ಮಾಯಾವತಿಯವರಿಗೆ ಖುಷಿ ತರುವ ವಿಚಾರವೆಂದರೆ ಎಲ್ಲಾ ದಲಿತ ಜಾತಿ ಉಪಜಾತಿಗಳು ಅಂದರೆ ಜಾಟವ್, ಪಾಸಿ, ದೋಬಿ, ವಾಲ್ಮೀಕಿ, ಕೋರಿ ಮತ್ತು ಕಾಟಿಕ್ ಹೀಗೆ ಜಾತಿಗಳು ಬಿಎಸ್‍ಪಿ ಪರ ನಿಂತಿರುವುದು. ಅಂದಹಾಗೆ ಇದಕ್ಕೆ ಮಾಯಾವತಿಯವರು ಮಾಡಿರಬಹುದಾದ ಜಾದೂ ಏನು ಕಾರಣವಲ್ಲ! ಬದಲಿಗೆ ಅಖಿಲೇಶ್ ಯಾದವ್ ಕಾರಣ. ಏಕೆಂದರೆ ಪರಿಶಿಷ್ಟರನ್ನು ತನ್ನ ಐದು ವರ್ಷಗಳ ಆಡಳಿತದಲ್ಲಿ ಸಂಪೂರ್ಣ ಕಡೆಗಣಿಸಿದ ಅಖಿಲೇಶ್, ಅವರ ಮೀಸಲಾತಿಯನ್ನು ದುರ್ಬಲಗೊಳಿಸಲು ಪರಿಶಿಷ್ಟ ಜಾತಿ ಪಟ್ಟಿಗೆ ಹಿಂದುಳಿದ ವರ್ಗಗಳ 17 ಜಾತಿಗಳನ್ನು ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವುದು ಎಲ್ಲಾ ಪರಿಶಿಷ್ಟರನ್ನು ಕೆರಳಿಸಿದೆ. ಈ ನಿಟ್ಟಿನಲ್ಲಿ ಇದನ್ನು ತಡೆಯಲಿಕ್ಕೆ ಮಾಯಾವತಿಯವರಿಂದಷ್ಟೇ ಸಾಧ್ಯ ಎಂದೆನಿಸಿ ಪರಿಶಿಷ್ಟರು ಹಿಂದೆಂದೂ ಕಾಣದಂತೆ ಉಪಜಾತಿಭೇದ ಮೀರಿ ಮಾಯಾವತಿಯವರ ಹಿಂದೆ ನಿಂತಿದ್ದಾರೆ. ಖಂಡಿತ ಇದು ಬಿಎಸ್‍ಪಿಗೆ ಅನುಕೂಲಕರವಾಗಲಿದೆ.
ದಲಿತ- ಮುಸ್ಲಿಮ್ ಭಾಯಿ-ಭಾಯಿ: ಹೌದು, ಉತ್ತರ ಪ್ರದೇಶ ಚುನಾವಣೆಯ ಈ ಬಾರಿಯ ವಿಶೇಷ ಮಾಯಾವತಿ ಒಗ್ಗೂಡಿಸ ಹೊರಟರುವ ದಲಿತ –ಮುಸ್ಲಿಮ್ ಒಗ್ಗಟ್ಟಿನ ಶಕ್ತಿ. ಇದು ದಿಢೀರನೇ ಹುಟ್ಟಿಕೊಂಡ ಶಕ್ತಿಯಲ್ಲ. ಕಳೆದ ಎರಡು ವರ್ಷಗಳಿಂದ ರಾಜ್ಯದಾದ್ಯಂತ ಸಾವಿರಾರು ದಲಿತ- ಮುಸ್ಲಿಂ ಸಹೋದರತಾ ಸಮಾವೇಶಗಳನ್ನು ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರಗೆ ನಡೆಸಿರುವ ಮಾಯಾವತಿಯವರು ಅದರ ಫಲಿತವಾಗಿ ಮುಸ್ಲಿಮರಿಗೆ ಬೇರಾವುದೇ ಪಕ್ಷವೂ ನೀಡದಷ್ಟು ಅಂದರೆ 100 ಕಡೆ ಸ್ಪರ್ಧಿಸಲು ಟಿಕೆಟ್ ನೀಡಿದ್ದಾರೆ. ಉತ್ತರಪ್ರದೇಶದಲ್ಲಿ ಮುಸ್ಲಿಮರ ಸಂಖ್ಯೆ ಅತಿ ಹೆಚ್ಚು ಅಂದರೆ ಶೇ.21. ನಂತರದ ಸ್ಥಾನ ದಲಿತರದ್ದು ಅಂದರೆ ಶೇ.20. ಇವೆರಡು ಸಮುದಾಯಗಳ ಒಟ್ಟು ಸಂಖ್ಯೆ ಸರಿಸುಮಾರು ಶೇ.40. ಗೆಲ್ಲಲು ಬೇಕಿರುವುದು ಶೇ.30 ಮತಗಳು. ಮಾಯಾವತಿಯವರಿಗೆ ಈ ಬಾರಿ ಆಶಾಭಾವ ನೀಡುತ್ತಿರುವುದೇ ಈ ಎರಡು ಸಮುದಾಯಗಳ ಇಂತಹ ಜನಸಂಖ್ಯೆಯ ಒಟ್ಟಾರೆ ಶೇಕಡಾ ಲೆಕ್ಕಾಚಾರ. ಹಾಗಂತ ಮಾಯಾವತಿಯವರು ಈ ಲೆಕ್ಕಾಚಾರವನ್ನಷ್ಟೆ ನಂಬಿ ಕುಳಿತಿಲ್ಲ. ತಮ್ಮ ಆಪ್ತ ನಂಬಿಕಸ್ತ ಮಾಜಿ ಸಚಿವ ನಸೀಮುದ್ದಿನ್ ಸಿದ್ದಿಕಿಯವರ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದ ಮನೆ ಮನೆ ಭೇಟಿಕೈಗೊಂಡಿದ್ದಾರೆ ಮತ್ತು ಅವರ ಈ ಸಮುದಾಯಗಳ ಜೋಡಣೆ ಕೆಲಸಕ್ಕೆ 20ಕ್ಕೂ ಹೆಚ್ಚು ಮುಸ್ಲಿಮ್ ಧರ್ಮಗುರುಗಳೂ ಕೈಜೋಡಿಸಿದ್ದಾರೆಂದರೆ ದಲಿತ- ಮುಸ್ಲಿಂ ಏಕತೆಯ ಮಾಯಾವತಿಯವರ ಈ ಪ್ರಯತ್ನದ ಗಂಭೀರತೆಯನ್ನು ಎಂತಹವರಾದರೂ ಅರ್ಥಮಾಡಿಕೊಳ್ಳಬಹುದು. ಇದು ಯಾವ ಪರಿಣಾಮ ಬೀರಿದೆಯೆಂದರೆ ಸಮಾಜವಾದಿ ಪಕ್ಷದ ಜೊತೆ ಗುರುತಿಸಿಕೊಂಡಿದ್ದ ಮುಸ್ಲಿಮ್ ನೇತಾರ ‘ಖ್ವಾಮಿ ಏಕತಾ ದಳ್’ ಪಕ್ಷದ ಮಾಜಿ ಡಾನ್ ಎಂದೇ ಖ್ಯಾತರಾದ ಮುಕ್ತಾರ್ ಅನ್ಸಾರಿ ಈಗ ಇಡೀ ತಮ್ಮ ಪಕ್ಷವನ್ನು ಬಿಎಸ್‍ಪಿಯಲ್ಲಿ ವಿಲೀನಗೊಳಿಸಿ ಮಾಯಾವತಿಯವರ ಜೊತೆ ಕೈಜೋಡಿಸಿದ್ದಾರೆ. ಅಂದಹಾಗೆ ಮುಕ್ತಾರ್ ಅನ್ಸಾರಿ ಏನು ಸಾಮಾನ್ಯದವರಲ್ಲ ಉತ್ತರ ಪ್ರದೇಶದ ಪೂರ್ವಾಂಚಲ ಭಾಗದಲ್ಲಿ ಪ್ರಭಾವಶಾಲಿಯಾದ ಅವರು ಕನಿಷ್ಠವೆಂದರೂ 20 ಕ್ಷೇತ್ರಗಳಲ್ಲಿ ನೇರ ಪರಿಣಾಮ ಬೀರಬಲ್ಲಂಥವರು ಮತ್ತು ಅವರು ಮತ್ತವರ ಸಂಬಂಧಿಗಳು ಸ್ಪರ್ಧಿಸಿರುವ ಮೂರು ಕ್ಷೇತ್ರಗಳಲ್ಲಿ ಇನ್ನೂ ಚುನಾವಣೆಯೇ ನಡೆಯದಿದ್ದರೂ ಈಗಾಗಲೇ ಗೆದ್ದಿದ್ದಾರೆ ಎಂದು ಮಾಧ್ಯಮದಿಂದ ಗುರುತಿಸಲ್ಪಟ್ಟಿರುವಂಥವರು! ಅಂದಹಾಗೆ ತಾಜಾ ಸುದ್ದಿಯೆಂದರೆ ದೆಹಲಿಯ ಜುಮ್ಮಾ ಮಸೀದಿಯ ಶಾಹಿ ಇಮಾಂ ಸೈಯದ್ ಅಹಮದ್ ಬುಖಾರಿ ಯವರು ಈ ಬಾರಿ ಬಿಎಸ್ಪಿಗೆ ಮತ ನೀಡುವಂತೆ ಫತ್ವಾ ಹೊರಡಿಸಿದ್ದಾರೆ! ಸಾಲದಕ್ಕೆ "ರಾಷ್ಟ್ರೀಯ ಉಲೇಮಾ ಕೌನ್ಸಿಲ್" ತಾನು ಸ್ಪರ್ಧಿಸಬೇಕೆಂದುಕೊಂಡಿದ್ದ 84 ಕ್ಷೇತ್ರಗಳಿಂದ ಹಿಂದೆ ಸರಿದು ಬಿಎಸ್ಪಿ ಗೆ ಬೆಂಬಲ ಘೋಷಿಸಿದೆ ಇದರ ಜೊತೆಗೆ ಸುನ್ನಿ ಮುಸ್ಲಿಂ ಧರ್ಮ ಗುರುಗಳ, ಮುಖಂಡರುಗಳ ಸಂಘಟನೆಯಾದ "ಆಲ್ ಇಂಡಿಯಾ ಉಲೇಮ ಮತ್ತು ಮಸಾಹೇಕ್ ಮಂಡಳಿ", " ದಾರುಲ್ ಉಲೇಮ ದಿಯೊಬಂದ್" ಮತ್ತು "ಗರೀಬ್ ನವಾಜ್ ಫೌಂಡೇಶನ್'" ನಂತಹ ಬಹುತೇಕ ಮುಸ್ಲಿಂ ಪ್ರಮುಖ ಸಂಘಟನೆ ಗಳು ಬಹಿರಂಗವಾಗಿ ಬಿಎಸ್ಪಿ ಗೆ ಬೆಂಬಲ ಘೋಷಿಸಿವೆ ಪ್ರಚಾರಕ್ಕೂ ಇಳಿದಿವೆ. ಮುಸ್ಲಿಮರಿಗೆ ಮೀಸಲಾತಿ, ದರ್ಗಾ ಕಾಯ್ದೆ ಅನುಷ್ಠಾನ, ರಾಜ್ಯ ನಾಗರಿಕ ಸೇವಾ ಪರೀಕ್ಷೆ ಗಳಲ್ಲಿ ಉರ್ದು ಭಾಷೆ ಅಳವಡಿಕೆ ಬಗ್ಗೆ ಅಖಿಲೇಶ್ ಯಾದವ್ ನೀಡಿದ್ದ ಆಶ್ವಾಸನೆ ಈಡೇರಿಸದ್ದರ ಬಗ್ಗೆ ಅಸಂತುಷ್ಟ ಗೊಂಡಿರುವ ಈ ಪ್ರಮುಖ ಮುಸ್ಲಿಂ ಸಂಘಟನೆಗಳು ಮುಸ್ಲಿಮರ ಮೀಸಲಾತಿ ಪರ ಇರುವ ಬಿಎಸ್ಪಿ ಗೆ ನಮ್ಮ ಬೆಂಬಲ ಎಂದು ಘಂಟಾಘೋಷವಾಗಿ ಹೇಳಿಕೆ ನೀಡಿವೆ.
ನೋಟು ರದ್ದು ಮತ್ತು ಆರ್‍ಎಸ್‍ಎಸ್‍ನ ಮೀಸಲಾತಿ ವಿರೋಧಿ ಹೇಳಿಕೆ: ಮತ್ತೊಂದು ಪ್ರಮುಖ ಅಂಶ ಮಾಯಾವತಿಯವರ ಗೆಲುವಿಗೆ ಸಹಕರಿಸುತ್ತಿರುವಂಥದನ್ನು ಇಲ್ಲಿ ಹೇಳಲೇಬೇಕು ಅದು ನರೇಂದ್ರ ಮೋದಿಯ 500 ಮತ್ತು 1000ದ ನೋಟು ರದ್ದು ಯೋಜನೆ! ನೋಟುರದ್ದು ಯಾವ ರೀತಿ ಪರಿಣಾಮಬೀರಿದೆಯೆಂದರೆ ಜನ ಅದರಲ್ಲೂ ಉತ್ತರ ಪ್ರದೇಶದ ಜನ ಈ ಚುನಾವಣೆಯಲ್ಲಿ ಖಂಡಿತ ಸೇಡು ತೀರಿಸಿಕೊಳ್ಳುವವರಿದ್ದಾರೆ. ಅದರ ನಿಚ್ಚಳ ಲಾಭ ಅದನ್ನು ದಿನ ಒಂದರಿಂದಲೇ ವಿರೋಧಿಸುತ್ತ ಬಂದಿರುವ ಮಾಯಾವತಿಯವರಿಗಾಗಲಿದೆ. ಹೇಗೆಂದರೆ ಸಭೆಗಳಲ್ಲಿ ಮಾಯಾವತಿ “ನೀವು (ಉತ್ತರ ಪ್ರದೇಶದ ಜನ) ಅವರನ್ನು (ಮೋದಿಯನ್ನು) ಪ್ರಧಾನಿ ಮಾಡಿದಿರಿ. ಆದರೆ ಅವರು ನಿಮ್ಮ ದುಡ್ಡು ಕಿತ್ತುಕೊಂಡರು” ಎನ್ನುತ್ತಿದ್ದಂತೆ ಇಡೀ ಸಭೆ ಶಿಳ್ಳೆ ಹಾಕಿ ಕಿವಿಗಡಚಿಕ್ಕುವ ಚಪ್ಪಾಳೆಯೊಂದಿಗೆ ಮಾಯಾವತಿಯವರ ಈ ಹೇಳಿಕೆಗೆ ಬಲ ತುಂಬುತ್ತದೆ. ಈ ನಡುವೆ ಮೀಸಲಾತಿ ವಿರುದ್ಧ ಹೇಳಿಕೆ ನೀಡಿರುವ ಆರ್‍ಎಸ್‍ಎಸ್ ಮುಖಂಡ ಮನಮೋಹನ್ ವೈದ್ಯರ ಮಾತುಗಳೂ ಕೂಡ ಈ ಸಂದರ್ಭದಲ್ಲಿ ಮಾಯಾವತಿಯವರಿಗೆ ವರವಾಗಲಿದೆ. ಹೇಗೆಂದರೆ ಇದನ್ನು ಎಗ್ಗಿಲ್ಲದೆ ಪ್ರಸ್ತಾಪಿಸುತ್ತಿರುವ ಬೆಹೆನ್‍ಜೀ “ಬಿಜೆಪಿ ಈ ಬಾರಿ ಅಧಿಕಾರಕ್ಕೆ ಬಂದರೆ ಎಸ್ಸಿ, ಎಸ್ಟಿ ಮತ್ತು ಒಬಿಸಿಗಳ ಮೀಸಲಾತಿಯನ್ನು ಶೀಘ್ರದಲ್ಲೇ ಕೊನೆಗೊಳಿಸಲಿದೆ. ಈ ನಿಟ್ಟಿನಲ್ಲಿ ಅವರಿಗೆ ನಿಮ್ಮ ಮತಗಳ ಮೂಲಕ ಪಾಠ ಕಲಿಸಿ” ಎಂದು ಜನತೆಯನ್ನು ನೇರ ಹುರಿದುಂಬಿಸುತ್ತಿದ್ದಾರೆ.
ಪರಿಣಾಮ ಬೀರದ ಕಾಂಗ್ರೆಸ್- ಅಖಿಲೇಶ್ ಒಪ್ಪಂದ: ಮಾಯಾವತಿಯವರಿಗೆ ಧನಾತ್ಮಕವಾಗಿರುವ ಮತ್ತೊಂದು ಅಂಶ ಸಮಾಜವಾದಿ ಪಕ್ಷದ ಅಂತಃಕಲಹ ಮತ್ತು ಕಾಂಗ್ರೆಸ್-ಅಖಿಲೇಶ್ ಯಾದವ್ ಹೊಂದಾಣಿಕೆ. ಸಮಾಜವಾದಿ ಅಂತಃಕಲಹ ಅದರಲ್ಲೂ ಅಂತಹ ಕಲಹದಲ್ಲಿ ಮುಲಾಯಂ ಸಿಂಗ್ ಯಾದವ್‍ಗೆ ಹಿನ್ನಡೆಯಾಗಿರುವುದು ಮಾಯಾವತಿಯವರಿಗೆ ವರದಾನವಾಗಲಿದೆ. ಯಾಕೆಂದರೆ ಮುಸ್ಲಿಮ್ ಮತಗಳ ಮೇಲೆ ತಂದೆ ಮುಲಾಯಂ ಸಿಂಗ್ ಯಾದವ್‍ಗಿರುವಷ್ಟು ಹಿಡಿತ ಅಖಿಲೇಶ್ ಯಾದವ್‍ಗೆ ಇಲ್ಲ. ಹಿಡಿತವೂ ಇಲ,್ಲ ಪ್ರೀತಿಯೂ ಇಲ್ಲ! ಇದನ್ನು ಸ್ವಯಂ ಬಹಿರಂಗಪಡಿಸಿರುವ ಮುಲಾಯಂ “ರಾಜ್ಯದ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ)ರನ್ನಾಗಿ ಮುಸ್ಲಿಮ್ ಸಮುದಾಯದವರೊಬ್ಬರನ್ನು ತಾನು ನೇಮಿಸಿದಾಗ ಕುಪಿತಗೊಂಡ ಮುಖ್ಯಮಂತ್ರಿ ಅಖಿಲೇಶ್ ತನ್ನೊಡನೆ 15 ದಿನ ಮಾತಾಡಲೇ ಇಲ್ಲ” ಎಂದಿದ್ದಾರೆ. ಈ ನಡುವೆ ತರಾತುರಿಯಲ್ಲಿ ಮಾಡಿಕೊಂಡಿರುವ ಕಾಂಗ್ರೆಸ್ ಜೊತೆಗಿನ ಒಪ್ಪಂದದಲ್ಲಿ ದುರ್ಬಲ ಕಾಂಗ್ರೆಸ್‍ಗೆ ಅಖಿಲೇಶ್ 105 ಸ್ಥಾನಗಳನ್ನು ನೀಡಿದ್ದಾರೆ. ಚುನಾವಣಾ ಪಂಡಿತರ ಪ್ರಕಾರ ಇದು ಅಖಿಲೇಶ್‍ಗೆ ಲಾಭ ತಂದುಕೊಡುವುದಕ್ಕಿಂತ ನಷ್ಟವುಂಟುಮಾಡುವ ಸಾಧ್ಯತೆಯೇ ಹೆಚ್ಚು. ಏಕೆಂದರೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಶಕ್ತಿ ಬಹಳ ದುರ್ಬಲ. ಕಳೆದ ವಿಧಾನಸಭೆಯಲ್ಲಿ ಅದು ಗಳಿಸಿದ್ದ ಸ್ಥಾನ ಕೇವಲ 28. ಹೋರಾಟ ನೀಡಿದ್ದದ್ದು ಕೇವಲ 60 ಸ್ಥಾನಗಳಲ್ಲಷ್ಟೆ. ಹೀಗಿರುವ ಇಂಥ ದುರ್ಬಲ ಶಕ್ತಿಗೆ ಹೆಚ್ಚು ಸ್ಥಾನಗಳನ್ನು ನೀಡಿ ಅಂತಹ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ ಸ್ಪರ್ಧಿಸುವ ಅವಕಾಶವನ್ನೇ ಕಳೆದುಕೊಂಡರೆ? ಖಂಡಿತ ಅದರ ಲಾಭ ಇತರ ಪಕ್ಷಗಳಿಗಾಗಲಿದೆ.
ಒಟ್ಟಾರೆ ಹೇಳುವುದಾದರೆ ದಲಿತ ಸಮುದಾಯದ ಹಿಂದೆಂದೂ ಕಾಣದ ಒಗ್ಗಟ್ಟು, ಹರಿದು ಬರುತ್ತಿರುವ ಮುಸ್ಲಿಮ್ ಸಮುದಾಯದ ಅಖಂಡ ಬೆಂಬಲ, ಮೋದಿ 500 ಮತ್ತು 1000ದ ನೋಟು ರದ್ದು ಮಾಡಿರುವ ಸಂದರ್ಭ, ಸಮಾಜವಾದಿ ಪಕ್ಷದ ಕುಟುಂಬ ಕಲಹ ಮಾಯಾವತಿಯವರಿಗೆ ಅನುಕೂಲಕರ ವಾತಾವರಣ ನಿರ್ಮಿಸಿದೆ, ಅವರನ್ನು ಐದನೆಯ ಬಾರಿಗೆ ಲಕ್ನೋ ಗದ್ದುಗೆಗೆ ಏರಿಸಲಿದೆ. ಅಂದಹಾಗೆ ಪೂರ್ವಾಗ್ರಹಪೀಡಿತ ಕೆಲ ಮಾಧ್ಯಮ ಸಮೀಕ್ಷೆಗಳನ್ನು ನೋಡಿ ಮಾಯಾವತಿಯವರಿಗೆ ಒದಗಿಬರಬಹುದಾದ ಇಂತಹ ಅನುಕೂಲದ ಸಾಧ್ಯತೆಯನ್ನು ಋಣಾತ್ಮಕವಾಗಿ ನೋಡುವ ಕೆಲವರು ಮಾಯಾವತಿ ಒಂದಲ್ಲ ಎರಡಲ್ಲ ನಾಲ್ಕು ಬಾರಿ ಉತ್ತರಪ್ರದೇಶದ ಮುಖ್ಯಮಂತ್ರಿಯಾದವರು ಎಂಬ ಅಂಶವನ್ನಾದರೂ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ಉತ್ತಮ!
-ರಘೋತ್ತಮ ಹೊ.ಬ

Saturday, 4 February 2017
With Muslim backing Mayawati on her way to become CM for fifth time.
Uttar Pradesh election is a crucial for both Hindutwa forces and Muslims. For BJP which represents communal forces it wants to capture the temple of power of biggest democracy of India viz UP and for Muslims they want to protect their life that could be harmed by BJP if came into power through its communal activities. Uttar Pradesh is a heartland of Hindutwa where infamous Ayodhya lies with the Babri masjid ash tag to its user name. So if Ayodhya gets fire not only Muslims of UP but of whole India will suffer it. In fact as long as Ayodhya conflict kept in unfazed condition whole Muslim community will be in peace. Hence peace which comes out from good law and order is the main requirement of UP. But BJP is at the bank of the tank to catch prey! Then what to do? Bringing a government that can create a atmosphere of peace with good law and order preventing mighty Modi in repeating another Godhra in UP.
For this what can be done by Muslims now? Bringing Akhilesh once again whose track record is filled with so many communal clashes or to bring a person whose previous regimes are known for strict law and order? Yes , latter is the right one. Because if Akhilesh back again means hell is back again to Muslims! In fact whether it may be Dadri or Muzaffarnagar or Meerut ruling Akhilesh Yadav was hand in glow with BJP which carried communal violence under the behest of RSS. So what's the reason for Akhilesh's blind eye to such acts of BJP? Its Akhilesh's apathy towards Muslims. Yes, as told by his father Mulayam Akhilesh was very angry when Mulayam made a Muslim as the Director General of State Police (DGP). And to this issue Akhilesh's angry was so intense that he didn't talk with his father for nearly 15 days! If its so how can such a Akhilesh yadav protects the interest of Muslims?
Then in near future democracy in UP whom should Muslims support? Yes, it's Mayawati. Who has a good track record of good law and order. Good law and order, yes its a must for near future 2019 where Modi would definitely rake up the issue of Ayodhya and will construct Ram Temple as told in their manifesto. Then if "Iron Lady" comes in power how can they break the law and order and build Ram Temple? Definitely IRS totally impossible. Then if this has to be happened and If crores of lives of Muslims had to be saved definitely Mayawati should be at the helm of UP.
Muslims know this. Hence they are backing Mayawati this time for her fifth stint as CM.
-Raghothama Hoba

Sunday, 21 August 2016
ನಿಜವಾದ ದೇಶಪ್ರೇಮವೆಂದರೆ... ಅದು ಟಿಪ್ಪುವಿನದು
-ರಘೋತ್ತಮ ಹೊ.ಬ
“ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರ ಅನ್ನುವುದನ್ನು ಕೇಳಿದರೆ ತಲೆ ಚಚ್ಚಿಕೊಳ್ಳಬೇಕು ಎನಿಸುತ್ತದೆ. ಎಲ್ಲಾ ರಾಜರು ತಮ್ಮ ರಾಜ್ಯವನ್ನು ಉಳಿಸಿಕೊಳ್ಳಲು ಹೋರಾಡಿದಂತೆ ಟಿಪ್ಪು ಕೂಡ ಮಾಡಿದ್ದಾನೆ. ಅವನ ಹೆಸರನ್ನು ಭಗತ್‍ಸಿಂಗ್, ಸುಭಾಷ್‍ಚಂದ್ರ ಬೋಸ್, ಮಹಾತ್ಮ ಗಾಂಧಿ ಜೊತೆ ಸೇರಿಸಿಕೊಳ್ಳಲು ಸಾಧ್ಯವಿಲ್ಲ”. ಟಿಪ್ಪುವಿನ ಬಗ್ಗೆ ಹಿಂದುತ್ವವಾದಿಗಳ ‘ಶ್ರೇಷ್ಠ್ಟ’ ಮಾತುಗಳಿವು! ಬಹುಶಃ ಸ್ವಾತಂತ್ರ್ಯ ಹೋರಾಟವೊಂದಕ್ಕೆ, ಆ ಹೋರಾಟದಲ್ಲಿ ಭಾಗವಹಿಸಿದ ಪ್ರತಿಯೊಬ್ಬರ ನೆತ್ತರಿನ ಹನಿಗೆ ಇದಕ್ಕಿಂತ ಕ್ರೂರವಾಗಿ ಅಪಮಾನ ಎಸಗಲು ಸಾಧ್ಯವಿಲ್ಲ. ಹಾಗೆ ಹೇಳುವುದಾದರೆ ಹಿಂದುತ್ವವಾದಿಗಳ ಇಂತಹ ಮಾತುಗಳು ಈ ದೇಶದ, ಈ ದೇಶ ಕಟ್ಟುವಲ್ಲಿ ಯತ್ನಿಸಿದ ಪ್ರತಿಯೊಬ್ಬರನ್ನೂ ಅಪಮಾನಿಸಿದಂತೆ ಮತ್ತು ಅವರು ಹೇಳಿದ್ದೇ ಸತ್ಯವಾದರೆ ಭಾರತದ ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟ ಎಂಬ ಅಧ್ಯಾಯಕ್ಕೆ ಬೆಲೆಯೇ ಇರುವುದಿಲ್ಲ. ಯಾಕೆಂದರೆ ಬಹುತೇಕ ಸ್ವಾತಂತ್ರ್ಯ ಹೋರಾಟಗಾರರಿಗೆ ತಾವು ಹಿಂದುತ್ವವಾದಿಗಳು, ನಾವು ಹಿಂದೂಗಳಿಗಾಗಿಯೇ ಬ್ರಿಟಿಷರ ವಿರುದ್ಧ ಹೋರಾಡಬೇಕು, ದೇಶ ಕಟ್ಟಿಕೊಂಡು ನಮಗೇನಾಗಬೇಕು ಎಂಬ ಧೋರಣೆ ಖಂಡಿತ ಇರಲಿಲ್ಲ. ಹಾಗೆಯೇ ಸ್ವಾತಂತ್ರ್ಯ ಹೋರಾಟಗಾರರಿಗೆ ಇಂತಹ ಧೋರಣೆ ಇರಲಿಲ್ಲವೆಂದರೆ ಹಿಂದುತ್ವವಾದಿಗಳ ಪ್ರಕಾರ ಅಂತಹವರ್ಯಾರೂ ಸ್ವಾತಂತ್ರ್ಯ ಹೋರಾಟಗಾರರೇ ಅಲ್ಲ! ಅವರೆಲ್ಲರೂ... ಅಂದರೆ ಬಂಗಾಳದ ನವಾಬ ಸಿರಾಜುದ್ದೌಲ, ಪಂಜಾಬ್‍ನ ರಣಜಿತ್ ಸಿಂಗ್, ಮಹಾರಾಷ್ಟ್ರದ ನಾನಾಫಡ್ನವೀಸ, ನಾನಾ ಸಾಹೇಬ, ಅವಧ್‍ನ ರಾಣಿ ಬೇಗಂ ಹಜರತ್ ಮಹಲ್, ಝಾನ್ಸಿಯ ರಾಣಿ ಲಕ್ಷ್ಮಿಬಾಯಿ, ಕಿತ್ತೂರಿನ ಚೆನ್ನಮ್ಮ, ಹಾಗೆ 1857ರಲ್ಲಿ ‘ಬಹದ್ದೂರ್‍ಷಾನ ಪರ’ ದಂಗೆ ಎದ್ದ ದೆಹಲಿಯ ಸಿಪಾಯಿಗಳು ಇವರ್ಯಾರೂ ಸ್ವಾತಂತ್ರ್ಯ ಹೋರಾಟಗಾರರೇ ಅಲ್ಲ! ಸ್ವಾತಂತ್ರ್ಯ ಹೋರಾಟದ ಪುಟದಲ್ಲಿ ಇವರಿಗೇ ಜಾಗವೇ ಇರಲಿಕ್ಕಿಲ್ಲ! ಕ್ಷಮಿಸಿ, ಇವರ ಬದಲು ಹಿಂದುತ್ವವಾದಿಗಳು ಹೇಳುವವರನ್ನು ತುರುಕೋಣವೆಂದರೆ ಅಂಥಹವರಾರೂ ಸಂಘ ಪರಿವಾರದ ಇತಿಹಾಸದಲ್ಲಿ ಹುಟ್ಟಿಲ್ಲ.
ಹಾಗಿದ್ದರೆ ಏನು ಮಾಡುವುದು? ಹಿಂದುತ್ವವಾದಿಗಳು ಹೇಳಿರುವುದನ್ನು ಒಪ್ಪಿಕೊಂಡು ಟಿಪ್ಪುವನ್ನು ಒಳಗೊಂಡಂತೆ ಇವರನ್ನೆಲ್ಲಾ ತಿರಸ್ಕರಿಸಬೇಕೆ? ಖಂಡಿತ ಸಾಧ್ಯವಿಲ್ಲದ ಮಾತು. ಯಾಕೆಂದರೆ ಸೂರ್ಯ ಚಂದ್ರರಿರುವ ತನಕ ಇಂತಹವರು ಸ್ವಾತಂತ್ರ್ಯ ಹೋರಾಟಗಾರರಾಗಿ ಜನಮಾನಸದಲ್ಲಿ ಉಳಿಯುತ್ತಾರೆ. ಹಾಗೆಯೇ ಟಿಪ್ಪುವೂ ಕೂಡ. ಅವನನ್ನು ಟೀಕಿಸುವ ಯಾರದೇ ಹೇಳಿಕೆಯಾಗಲೀ ಬಹುಶಃ ಅವನ ಸಾಧನೆಯ ಒಂದಂಶವನ್ನೂ ಸಹ ಅಲುಗಾಡಿಸಲು ಸಾಧ್ಯವಿಲ್ಲ. ಯಾಕೆಂದರೆ ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ್ದು ಒಂದೆರಡು ಯುದ್ಧಗಳಲ್ಲಿ ಅಲ್ಲ. ಬರೋಬ್ಬರಿ ನಾಲ್ಕು ಯುದ್ಧಗಳಲ್ಲಿ! ನಿಜ, ಟಿಪ್ಪು ಬ್ರಿಟಿಷರನ್ನು ಭಾರತದಿಂದ ಓಡಿಸಲು ಹೋರಾಡಲಿಲ್ಲ. ಬದಲಿಗೆ ಅವರು ಇಲ್ಲಿ ತಳವೂರಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಅವರಿಗೆ ಟಿಪ್ಪು ಪ್ರಬಲ ಪ್ರತಿರೋಧ ಒಡ್ಡಿದ. ಬಹುಶಃ ಅವನು ಮನಸ್ಸು ಮಾಡಿದ್ದರೆ ಪಂಜಾಬ್‍ನ ರಣಜಿತ್‍ಸಿಂಗ್‍ನ ಹಾಗೆ ಹೈದರಾಬಾದ್‍ನ ನಿಜಾಮನ ಹಾಗೆ ಬ್ರಿಟಿಷರ ಸಹಾಯಕ ಸೈನ್ಯ ಪದ್ಧತಿ ಒಪ್ಪಿಕೊಂಡು ಅವರಿಗೆ ಅಡಿಯಾಳಾಗಿ 49ವರ್ಷವೇನು 99ವರ್ಷ ಬದುಕಬಹುದಿತ್ತು (ಟಿಪ್ಪು ಹುಟ್ಟಿದ್ದು 1750ರಲ್ಲಿ ಸತ್ತಿದ್ದು1799ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡುತ್ತ ರಣರಂಗದಲ್ಲಿ). ಆದರೆ ಟಿಪ್ಪು ಪರದೇಶಿ ಪರಂಗಿಗಳಿಗೆ ಶರಣಾಗಲು ಸಿದ್ಧನಿರಲಿಲ್ಲ. ಬದಲಿಗೆ ಆ ಕಾಲದಲ್ಲಿ “ತನ್ನ ಹೆಸರು ಕೇಳಿದರೆ ಇಡೀ ಲೀಡನ್ ಬೀದಿ ನಡುಗುವಂತೆ” ಮಾಡಿದ್ದ! (ಲೀಡನ್ ಬೀದಿ: ಲಂಡನ್ ನಗರದಲ್ಲಿನ ಅಂದಿನ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಕೇಂದ್ರ ಸ್ಥಾನ). ಯಾಕೆಂದರೆ ಮರಾಠರು, ಹೈದರಾಬಾದಿನ ನಿಜಾಮನರನ್ನೊಳಗೊಂಡಂತೆ ಅಂದಿನ ಕಾಲದ ಎಲ್ಲಾ ರಾಜರು ಬ್ರಿಟಿಷರ ಸಹಾಯಕ ಸೇನಾ ಪದ್ಧತಿಗೆ ಒಪ್ಪಿಕೊಂಡರು. ಆದರೆ ಟಿಪ್ಪು ಅದಕ್ಕೆ ತಲೆಬಾಗಲಿಲ್ಲ. ಬದಲಿಗೆ ಅವರ ವಿರುದ್ಧ ಫ್ರೆಂಚರ ನೆಪೊಲಿಯನ್ ಬೋನಾಪಾರ್ಟೆಯ ಸಹಾಯ ಪಡೆಯಲು, ಆಪ್ಘನ್ನಿನ ದೊರೆ ಜಮಾಲ್ ಷಾನ ಬೆಂಬಲ ಪಡೆಯಲು ಯತ್ನಿಸಿದ. ಆದರೆ ನೆಪೋಲಿಯನ್ನನ ಸೈನ್ಯ ಈಜಿಪ್ಟ್‍ನಲ್ಲಿ ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಭಾರತಕ್ಕೆ ಬರಲಾಗಲಿಲ್ಲ. ಹಾಗೆಯೇ ಪರ್ಶಿಯನ್ನರು ಆಪ್ಘನಿಸ್ತಾನದ ಜಮಾಲ್ ಷಾನ ಮುಂದುವರಿಕೆಗೆ ತಡೆಯೊಡ್ಡಿದರು. ಅಂಥಹದ್ದೇನಾದರು ಅಂದರೆ ನೆಪೋಲಿಯನ್ ಬೊನಾಪಾರ್ಟೆ ಏನಾದರು ಭಾರತಕ್ಕೆ ಬಂದು ಟಿಪ್ಪುವಿನ ಜೊತೆ ಕೈಜೋಡಿಸಿದ್ದೆ ಆದರೆ ಭಾರತದ ಇತಿಹಾಸದ ಚಿತ್ರಣವೇ ಬದಲಾಗಿರುತ್ತಿತ್ತು. ಆದರೆ ಅಂಥಹದಕ್ಕೆ ಅವಕಾಶವಿರದೇ ಟಿಪ್ಪು ಅದಾಗಲೇ ಬ್ರಿಟಿಷರ ಗುಂಡಿಗೆ ತನ್ನ ಎದೆಯೊಡ್ಡಿದ್ದ. ಮೂರನೇ ಮೈಸೂರು ಯುದ್ಧದಲ್ಲಿ ತನ್ನಿಬ್ಬರು ಮಕ್ಕಳನ್ನು ಲಾರ್ಡ್ ಕಾರ್ನವಾಲೀಸನ ತೆಕ್ಕೆಗೆ ಒತ್ತೆಯಾಳುಗಳಾಗಿ ಒಪ್ಪಿಸಿದ್ದ.
ಈ ಸಂದರ್ಭದಲ್ಲಿ ಒಂದೆರಡು ವಿಷಯಗಳನ್ನು ಸ್ಪಷ್ಟಪಡಿಸಲೇಬೇಕು. ಅದು ಟಿಪ್ಪು ಹಿಂದೂ ವಿರೋಧಿ ಎನ್ನುವುದರ ಬಗ್ಗೆ. ಬಹುಶಃ ಹಾಗೆಂದರೆ ನಮ್ಮ ನಾಲಿಗೆಯಲ್ಲಿ ಹುಳ ಬೀಳುತ್ತದಷ್ಟೆ. ಯಾಕೆಂದರೆ ಯಾವ ಹಿಂದೂ ಧರ್ಮಕ್ಕೆ ಸೇರಿದ ಮಹಾರಾಷ್ಟ್ರದ ಪಿಂಡಾರಿಗಳು ಶೃಂಗೇರಿಯ ಶಾರದ ಮಠವನ್ನು ಧ್ವಂಸಗೈದರೋ ಅಂತಹ ಮಠವನ್ನು ಮತ್ತೆ ಕಟ್ಟಿದವನು, ಉದ್ಧಾರಮಾಡಿದವನು ಟಿಪ್ಪು ಸುಲ್ತಾನ್. ಹಾಗೆ ಟಿಪ್ಪುವಿನ ಶ್ರೀರಂಗ ಭಕ್ತಿ ಎಲ್ಲರಿಗೂ ತಿಳಿದದ್ದೆ. ಯಾಕೆಂದರೆ ಟಿಪ್ಪುವಿನ ಅರಮನೆಯ ಸಮೀಪ ಕೆಲವೇ ಮೀಟರುಗಳ ದೂರದಲ್ಲಿ ಶ್ರೀರಂಗಸ್ವಾಮಿಯ ದೇವಾಲಯ ಈಗಲೂ ನಳನಳಿಸುತ್ತಾ ನಿಂತಿದೆ. ಇನ್ನೂ ನಂಜನಗೂಡಿನ ನಂಜುಂಡೇಶ್ವರನನ್ನು ಟಿಪ್ಪು “ಹಕೀಮ್ ನಂಜುಂಡ” ಎನ್ನುತ್ತಿದ್ದದ್ದು ಮತ್ತು ನಂಜುಂಡೇಶ್ವರನ ದೇವಾಲಯಕ್ಕೆ ಟಿಪ್ಪು ನೀಡಿದ ರತ್ನಖಚಿತ ಬಟ್ಟಲು, ಕೆಲವು ವಜ್ರಗಳ ದೊಡ್ಡ ಉದಾಹರಣೆಯೇ ನಮ್ಮ ಮುಂದಿದೆ. ಈಗಲೂ ಇಂಥಹದ್ದನೆಲ್ಲ ಅಂದರೆ ನಂಜನಗೂಡಿನ ದೇವಸ್ಥಾನದಲ್ಲಿರುವ ಕೆಲವು ಚಿನ್ನದ ಪಾತ್ರೆಗಳು, ಕೊಡುಗೆಗಳ ಮೇಲೆ “ಟಿಪ್ಪು ಸುಲ್ತಾನನ ಸೇವೆ” ಎಂದಿರುವುದನ್ನು ನಾವು ಕಾಣಬಹುದು. ಟಿಪ್ಪು ಹಿಂದೂ ಧರ್ಮದ ಪ್ರೋತ್ಸಾಹಕನೇ ಅಥವಾ ದ್ರೋಹಿಯೇ ಎಂದು ನಿರ್ಧರಿಸಲು ಇಂತಹ ಒಂದೆರಡು ಉದಾಹರಣೆಗಳು ಸಾಕು. ದುರಂತವೆಂದರೆ ಹಿಂದುತ್ವವಾದಿಗಳು ಹಿಂದೂ ದೇವಾಲಯಗಳ ಬಗ್ಗೆ ಟಿಪ್ಪು ಈ ರೀತಿ ನೆರವು ನೀಡಿರುವುದನ್ನು “ಟಿಪ್ಪು ತನ್ನ ಅನಿಷ್ಟ ನಿವಾರಣೆಗೆ ಮಾಡಿದ ಕೆಲಸವೇ ಹೊರತು ಭಕ್ತಿಯಿಂದಲ್ಲ” ಎನ್ನುತ್ತಾರೆ! ತನ್ಮೂಲಕ ಮೊಸರಲ್ಲೂ ಕೂಡ ಕಲ್ಲು ಹುಡುಕುವ ಕೆಲಸ ಮಾಡುತ್ತಾರೆ. ಹಾಗಿದ್ದರೆ ಇವರ ಪ್ರಕಾರ ಆಂಜನೇಯನ ಹಾಗೆ ಟಿಪ್ಪು ತನ್ನ ಎದೆಬಗೆದು ‘ನೋಡಿ ನನ್ನ ಹಿಂದೂ ಭಕ್ತಿ’ ಎಂದೂ ತೋರಿಸಬೇಕಿತ್ತು! (ಕ್ಷಮಿಸಿ, ಹಾಗೆ ತೋರಿಸಿದ್ದರು ಕೂಡ ಹಿಂದುತ್ವವಾದಿಗಳು ನಂಬುತ್ತಿರಲಿಲ್ಲ! ಟಿಪ್ಪುವಿಗೆ ಶ್ವಾಸಕೋಶದ ಕಾಯಿಲೆ ಇತ್ತು. ಅದಕ್ಕೆ ಆತ ಎದೆಬಗೆದ ಎನ್ನುತಿದ್ದರೇನೋ!)
ಅಂದಹಾಗೆ ಇನ್ನೊಂದು ಅಭಿವೃದ್ಧಿಪರ ಸತ್ಯವನ್ನು ಪ್ರಸ್ತಾಪಿಸಲೇಬೇಕು. ಅದು ಕಾವೇರಿ ನದಿಗೆ ಕನ್ನಂಬಾಡಿಯಲ್ಲಿ ಟಿಪ್ಪು ಅಣೆಕಟ್ಟು ಕಟ್ಟಲು ಶಂಕುಸ್ಥಾಪನೆ ನೆರವೇರಿಸಿದ್ದರ ಕುರಿತು. ಹೌದು, ಇಂದಿನ ಕೆ.ಆರ್.ಎಸ್‍ಗೆ 1794ರಲ್ಲೇ ಯೋಜನೆ ರೂಪಿಸಿ ಶಂಕುಸ್ಥಾಪನೆ ನೆರವೇರಿಸಿದ್ದು ಟಿಪ್ಪು ಸುಲ್ತಾನ್. ಆ ಬಗ್ಗೆ ಶಾಸನ ಈಗಲೂ ಕೆ.ಆರ್.ಎಸ್‍ನ ಮುಖ್ಯ ಧ್ವಾರದಲ್ಲಿರುವ ಗಾಜಿನ ಫಲಕದಲ್ಲಿ ಭದ್ರವಾಗಿದೆ. ಆ ಶಾಸನದಲ್ಲಿ “ಪೈಗಂಬರ್ ಮಹಮ್ಮದರ ಜನ್ಮದಿನದಂದು...... ಪಶ್ಚಿಮ ದಿಕ್ಕಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಚಿರಸ್ಥಾಯಿಯಾದ ಅಣೆಕಟ್ಟು ಕಟ್ಟಿಸಲು ಶಂಕುಸ್ಥಾಪನೆ ಮಾಡಿದ್ದೇವೆ” ಎಂದಿದೆ. ಸಂತಸದ ವಿಚಾರವೆಂದರೆ ನೂರು ವರ್ಷಗಳ ನಂತರ ಅಂದರೆ 1902ರಲ್ಲಿ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‍ವರು ಅಣೆಕಟ್ಟೆ ಕಟ್ಟಲು ಪ್ರಾರಂಭಿಸಿದ ನಂತರ, ಎಲ್ಲಿ ಟಿಪ್ಪು ಶಂಕುಸ್ಥಾಪನೆ ನೆರವೇರಿಸಿದ್ದನೋ ಅದೇ ಸ್ಥಳದಲ್ಲಿ ಮಹಾರಾಜ ಕೃಷ್ಣರಾಜ ಒಡೆಯರ್‍ರವರು ಕೆ.ಆರ್.ಎಸ್ ಕಟ್ಟಿಸುತ್ತಾರೆ. ತನ್ಮೂಲಕ ಟಿಪ್ಪು ಕನಸನ್ನು ರಾಜರ್ಷಿ ನಾಲ್ವಡಿಯವರು ನನಸುಮಾಡುತ್ತಾರೆ. ದುರಂತವೆಂದರೆ 32 ವರ್ಷ ಶ್ರಮವಹಿಸಿ ಕಟ್ಟಿದ ಟಿಪ್ಪು ಮತ್ತು ನಾಲ್ವಡಿಯವರ ಇಂಥಹ ಸಾಧನೆಯನ್ನು ಹಿಂದುತ್ವವಾದಿ ಇತಿಹಾಸಕಾರರು ಕೇವಲ 3-4 ವರ್ಷ ದಿವಾನರಾಗಿದ್ದ ವಿಶ್ವೇಶ್ವರಯ್ಯನವರ ಹೆಸರಿಗೆ ಹೈಜಾಕ್ ಮಾಡಿದ್ದಾರೆ. ತನ್ಮೂಲಕ ಟಿಪ್ಪು ಮತ್ತು ನಾಲ್ವಡಿಯವರಿಗೆ ದ್ರೋಹ ಎಸಗಿದ್ದಾರೆ. ಒಟ್ಟಾರೆ ಆ ಕಾಲದಲ್ಲಿ ಅಂದರೆ 1794ರಲ್ಲಿ ನಾಲ್ಕನೇ ಮೈಸೂರು ಯುದ್ಧ ನಡೆಯದಿದ್ದರೆ, ಟಿಪ್ಪು 1799ರಲ್ಲಿ ಸಾಯದಿದ್ದರೆ ಕೆಆರ್‍ಎಸ್ ಕಟ್ಟಿ ಇಷ್ಟೊತ್ತಿಗಾಗಲೇ 200ವರ್ಷಗಳ ಮೇಲಾಗಿರುತ್ತಿತ್ತು. ಮಂಡ್ಯ, ಮೈಸೂರು, ಬೆಂಗಳೂರು, ಹಾಸನ, ಕೋಲಾರಗಳನ್ನೊಳಗೊಂಡಂತೆ ಸಮಸ್ತ ದಕ್ಷಿಣ ಕರ್ನಾಟಕ ಅಭಿವೃದ್ಧಿಯಲ್ಲಿ ಇಷ್ಟೊತ್ತಿಗಾಗಲೇ 100ವರ್ಷ ಮುಂದಿರುತ್ತಿದ್ದವು. ಟಿಪ್ಪುವಿನ ಮರಣದಿಂದಾಗಿ, ಇಡೀ ಮೈಸೂರು ಬ್ರಿಟಿಷರ ವಶವಾದ್ದರಿಂದಾಗಿ ಕೆಆರ್‍ಎಸ್ ನಿರ್ಮಾಣ 100 ವರ್ಷ ತಡವಾಯಿತು. ಹೀಗಿದ್ದರೂ ಕೆಆರ್‍ಎಸ್‍ಗೆ ಒಂದು ಪರಿಕಲ್ಪನೆ ನೀಡಿ ಕನ್ನಂಬಾಡಿಯಲ್ಲಿ ಅದಕ್ಕೆ ಶಂಕುಸ್ಥಾಪನೆ ನೆರವೇರಿಸಿ ಕರುನಾಡಿಗೆ ಶಾಶ್ವತ ನೀರಾವರಿ ಒದಗಿಸಲು ಯತ್ನಿಸಿದ ಟಿಪ್ಪುವನ್ನು ಕನ್ನಡಿಗರು ವಿಶೇಷವಾಗಿ ದಕ್ಷಿಣ ಕರ್ನಾಟಕದ ಜನ ನೆನೆಯಬೇಕಲ್ಲವೇ? ಅಂದಹಾಗೆ ಟಿಪ್ಪು ಬರೇ ತನ್ನ ಧರ್ಮದವರಿಗೋಸ್ಕರ ಕನ್ನಂಬಾಡಿಯಲ್ಲಿ ಅಣೆಕಟ್ಟೆ ಕಟ್ಟಲು ಪ್ರಾರಂಭಿಸಿದನೆ? ಅವನನ್ನು ಹಿಂದೂ ದ್ರೋಹಿ ಎನ್ನುವವರು ಈ ಬಗ್ಗೆ ಉತ್ತರಿಸಬೇಕು.
ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿನ ಟಿಪ್ಪುವಿನ ಇಂತಹ ಜನಪರ ಕಾರ್ಯಗಳನ್ನು ಹೇಳುವುದನ್ನು ಬಿಟ್ಟು ಹಿಂದೂತ್ವವಾದಿಗಳು ದೂರದ ಲಂಡನ್ನಿನಲ್ಲಿ ಇದೆ ಎನ್ನಲಾದ, ಕೇರಳದಲ್ಲಿ ನೆಡೆದಿದೆ ಎನ್ನಲಾದ ಶಾಸನಗಳನ್ನು ಘಟನೆಗಳನ್ನು ಪ್ರಸ್ತಾಪಿಸಿ ಜನತೆಯನ್ನು ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ. ಹಾಗಿದ್ದರೆ ಯಾಕೆ ಇವರ್ಯಾರಿಗೂ ಟಿಪ್ಪುವಿನ ವಿರುದ್ಧ ಕರ್ನಾಟಕದೊಳಗೆ ಇಂತಹ ಸಾಕ್ಷಿ ಸೃಷ್ಟಿಸಲು ಸಾಧ್ಯವಾಗುತ್ತಿಲ್ಲ? ಜನಸಾಮಾನ್ಯರು ಪರಿಶೀಲಿಸುವರೆಂಬ ಭಯವೇ?
ಏನೇ ಇರಲಿ ಟಿಪ್ಪುವನ್ನು ಹಿಂದೂ ದ್ರೋಹಿ ಎನ್ನುವುದು, ಸ್ವಾತಂತ್ರ್ಯಯೋಧ ಅಲ್ಲ ಎನ್ನುವುದು ಇಡೀ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ, ದೇಶಪ್ರೆಮಿ ಯೋಧರಿಗೆ ಎಸಗುವ ಭಯಾನಕ ಮೋಸ. ಆಂದಹಾಗೆ 1945ರಲ್ಲಿ ಮಹಾತ್ಮ ಗಾಂಧಿಯವರು ಟಿಪ್ಪು ಸ್ಮರಣೋತ್ಸವ ಸಂದರ್ಭದಲ್ಲಿ ಎ.ಜೆ.ಖಲೀಲ್ ಎಂಬುವವರಿಗೆ ಪತ್ರವೊಂದನ್ನು ಬರೆಯುತ್ತಾರೆ. ಅದರಲ್ಲಿ ಅವರು “ಆ ಮಹಾಪ್ರಭು ಟಿಪ್ಪುವಿನ ಮಹಾಮಂತ್ರಿಯದರೂ ಯಾರು? ಅವನೊಬ್ಬ ಹಿಂದೂ(ದಿವಾನ್ ಪೂರ್ಣಯ್ಯ). ಸ್ವಾತಂತ್ರ್ಯ ಪ್ರವಾದಿ ಈ ಟಿಪ್ಪುವನ್ನು ಶತೃಗಳಿಗೆ ಹಿಡಿದೊಪ್ಪಿಸಿದ ಸ್ವಾಮಿ ದ್ರೋಹಿ ಅವನೇ. ಎಂಬುದನ್ನು ನಾವು ನಾಚಿಕೆಯಿಂದ ಒಪ್ಪಿಕೊಳ್ಳಬೇಕು” ಎನ್ನುತ್ತಾರೆ. ತನ್ಮೂಲಕ ಯಾರು ದೇಶದ್ರೋಹಿಗಳು ಎಂಬುದನ್ನು ಗಾಂಧಿಯವರು ಸೂಕ್ಷ್ಮವಾಗಿ ತಿಳಿಸುತ್ತಾರೆ.
ಸತ್ಯ ಹೀಗಿರುವಾಗ ತನ್ನ ದೇಶಕ್ಕಾಗಿ ಬ್ರಿಟಿಷರ ವಿರುದ್ಧ ತನ್ನ ರಕ್ತ ಚೆಲ್ಲಿದ ಟಿಪ್ಪು ದೇಶ ದ್ರೋಹಿ, ಹಿಂದೂ ದ್ರೋಹಿ ಹೇಗಾಗುತ್ತಾನೆ? ಕಾರ್ಗಿಲ್‍ನಲ್ಲಿ ಭಾರತದ ಸೈನಿಕರು ಪ್ರಾಣತೆತ್ತರು ಎಂಬುದನ್ನು ಹಾಡಿ ಹೊಗಳುತ್ತಾ ಎ.ಸಿ ರೂಮಿನಲ್ಲಿ ಕುಳಿತು ಸಂತಾಪ ಸೂಚಿಸುವುದಲ್ಲ ದೇಶಪ್ರೇಮ! ನಿಜವಾದ ದೇಶಪ್ರೇಮಿಗಳು ಬ್ರಿಟೀಷರನ್ನು ಈ ನೆಲದಿಂದ ಬಡಿದಟ್ಟಲು ಯತ್ನಿಸಿದವರು, ಅವರ ವಿರುದ್ಧ ಒಂದೊಂದು ಕಲ್ಲು ಎಸೆದವರು, ಹಾಗೆ ಅವರ ವಿರುದ್ಧ ರಣರಂಗದಲ್ಲಿ ಕತ್ತಿ ಹಿಡಿದು ಸೆಣೆಸಿದವರು, ರಕ್ತ ಚೆಲ್ಲಿ ಮಾತೃಭೂಮಿಗಾಗಿ ಪ್ರಾಣ ತೆತ್ತವರು. ಬಹುಶಃ ಆ ಪಟ್ಟಿಯಲ್ಲಿ ಟಿಪ್ಪು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾನೆ ಎಂದರೆ ಅತಿಶಯೋಕ್ತಿಯೇನಲ್ಲ.

ಅಂಬೇಡ್ಕರ್ ರೂಪಿಸಿದ ‘ಏಕರೂಪ ಹಿಂದೂ ಸಂಹಿತೆ’
-ರಘೋತ್ತಮ ಹೊ.ಬ
‘ಏಕರೂಪ ನಾಗರಿಕ ಸಂಹಿತೆ’ ಹೀಗೊಂದು ಚರ್ಚೆ ದೇಶದೆಲ್ಲೆಡೆ ಪ್ರಾರಂಭವಾಗಿದೆ. ಕೇಂದ್ರ ಬಿಜೆಪಿ ಸರ್ಕಾರ ತನ್ನ ಅಜೆಂಡಾ ಜಾರಿಗಾಗಿ ಹೀಗೊಂದು ಚರ್ಚೆ ಹುಟ್ಟುಹಾಕಿದೆ. ಕಾನೂನು ಇಲಾಖೆಗೆ ಆ ಬಗ್ಗೆ ವರದಿ ನೀಡುವಂತೆ ಅದು ಕೇಳಿದೆ. ತರಾತುರಿ ನೋಡಿದರೆ ‘ಸಮಾನ’ ನಾಗರಿಕ ಸಂಹಿತೆ ಜಾರಿಗೆ ಕೇಂದ್ರ ಸರ್ಕಾರದ ಈ ಬದ್ಧತೆ ನೆನೆಸಿಕೊಂಡರೇನೆ ಬಲ್ಲವರಿಗೆ ಅಚ್ಚರಿ ಎನಿಸದಿರದು. ಯಾಕೆಂದರೆ ಈಗ ‘ಏಕರೂಪ ನಾಗರಿಕ ಸಂಹಿತೆ’ ಜಾರಿ ತರ ಹೊರಟಿರುವ ಇದೇ ಮನಸ್ಸುಗಳೇ ಹಿಂದೆ ಅಂಬೇಡ್ಕರ್ ‘ಹಿಂದೂ ಸಂಹಿತೆ’ ರೂಪಿಸಲು ಹೊರಟಾಗ ಉಗ್ರವಾಗಿ ವಿರೋಧಿಸಿವೆ. ಆಶ್ಚರ್ಯವೆಂದರೆ ಈಗ ಇವರಿಗೆ ‘ಏಕರೂಪ ನಾಗರಿಕ ಸಂಹಿತೆ’ ಜಾರಿಯಾಗಬೇಕಾಗಿದೆ. ಅಂದರೆ ತಮ್ಮ ಮನೆಯ ಕೊಳೆ ಕಡೆ ತಕರಾರಿಲ್ಲ, ಅದು ಹಾಗೆಯೇ ಇರಲಿ ಎಂಬಂತೆ ಆದರೆ ಬೇರೆಯವರ ಮನೆ ಕಡೆ ಕಣ್ಣು! ಮತ್ತು ಇದೇ ಈ ಸಂಹಿತೆಯ ಗೊಂದಲ ಕೂಡ. ಈ ಹಿನ್ನೆಲೆಯಲ್ಲಿ ಅಂದರೆ ಏಕರೂಪ ನಾಗರಿಕ ಸಂಹಿತೆಯ ಚರ್ಚೆಯ ಈ ಹಿನ್ನೆಲೆಯಲ್ಲಿ ಈ ದೇಶದ ಪ್ರಥಮ ಕಾನೂನು ಸಚಿವರಾಗಿದ್ದಾಗ ಅಂಬೇಡ್ಕರ್ ಅಂದು ರೂಪಿಸಿದ ಹಿಂದೂ ಸಂಹಿತೆ ಬಗ್ಗೆ ಸದ್ಯ ಚರ್ಚಿಸುವ ಅಗತ್ಯವಿದೆ.
ಹಿಂದೂ ಸಂಹಿತೆ ಮಸೂದೆ ಅಥವ ಜನಪ್ರಿಯ ಧಾಟಿಯಲ್ಲಿ ಹೇಳುವುದಾದರೆ ಅಂಬೇಡ್ಕರ್‍ರವರು ರಚಿಸಿದ ‘ಹಿಂದೂ ಕೋಡ್ ಬಿಲ್’ನಲ್ಲಿ ಅಂತಹದ್ದೇನಿತ್ತು? ಅದಕ್ಕೆ ಇಂದಿನ ಕರ್ಮಠ ಹಿಂದೂಗಳ ಅಂದಿನ ಪೂರ್ವಿಕರ ಅಭಿಪ್ರಾಯ? ಆದ ಗತಿ? ಈ ಹಿನ್ನೆಲೆಯಲ್ಲಿ ಅದರ ಸಾರ ದಾಖಲಿಸುವುದಾದರೆ, ಹಿಂದೂ ಸಂಹಿತೆ ಮಸೂದೆ ಮುಖ್ಯವಾಗಿ 7 ಅಂಶಗಳನ್ನು ಒಳಗೊಂಡಿತ್ತು. ಅವುಗಳೆಂದರೆ 1.ಆಸ್ತಿಯ ಹಂಚಿಕೆ. 2.ಆಸ್ತಿಗೆ ವಾರಸುದಾರರನ್ನು ಪಟ್ಟಿಮಾಡುವುದು. 3.ಜೀವನಾಂಶ. 4.ಮದುವೆ. 5.ವಿಚ್ಛೇಧನ. 6.ದತ್ತು ಸ್ವೀಕಾರ. 7.ಅಪ್ರಾಪ್ತ ವಯಸ್ಕರ ಮದುವೆ. ಇವೇ ಆ ಏಳು ಅಂಶಗಳು. ಅಂದಹಾಗೆ ಈ ಮಸೂದೆ ಹಿಂದೂಗಳಿಗಷ್ಟೆ ಸಂಬಂಧಿಸಿದ ಮಸೂದೆಯಾಗಿತ್ತು ಮತ್ತು ‘ಹಿಂದೂ’ ಎಂಬ ಆ ವ್ಯಾಪ್ತಿಯಲ್ಲಿ ಬೌದ್ಧ, ಜೈನ ಮತ್ತು ಸಿಖ್ ಧರ್ಮಗಳನ್ನೂ ಸೇರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅದನ್ನು ಅಂಬೇಡ್ಕರರು ಹಿಂದೂ ಸಂಹಿತೆ ಮಸೂದೆ ಎಂದೇ ಕರೆದಿದ್ದರು. ಹಾಗೆ ಯಾಕೆ ಹಿಂದೂಗಳಿಗೇ ಕಾನೂನು ರೂಪಿಸಬೇಕು ಎಂದು ವಿವರಿಸುತ್ತಾ ಅಂಬೇಡ್ಕರರು ಹೇಳುವುದು “ಹಿಂದೂ ಸಮಾಜ ಸದಾ ನಂಬಿರುವುದೆಂದರೆ ಕಾನೂನು ರೂಪಿಸುವ ಕೆಲಸ ಕೇವಲ ದೇವರದ್ದು ಅಥವ ಸ್ಮøತಿಯದ್ದಾಗಿದ್ದು ಅದನ್ನು ಬದಲಿಸುವ ಹಕ್ಕು ಹಿಂದೂ ಸಮಾಜಕ್ಕೆ ಇಲ್ಲ ಎಂಬುದು. ಈ ಕಾರಣಕ್ಕಾಗಿ ಹಲವು ತಲೆಮಾರುಗಳು ಕಳೆದಿದ್ದರೂ ಕೂಡ ಹಿಂದೂ ಸಮಾಜದಲ್ಲಿ ಕಾನೂನು ಬದಲಾಗದೆ ಹಾಗೆಯೇ ಇದೆ. ಈ ನಿಟ್ಟಿನಲ್ಲಿ ಹೇಳುವುದಾದರೆ ಹಿಂದೂ ಸಮಾಜ ತನ್ನ ಸಾಮಾಜಿಕ, ಆರ್ಥಿಕ ಮತ್ತು ಕಾನೂನಾತ್ಮಕ ಜೀವನವನ್ನು ಬದಲಿಸಿಕೊಳ್ಳುವುದು ತನ್ನ ಸ್ವಂತ ಜವಾಬ್ದಾರಿ ಮತ್ತು ತನ್ನ ಶಕ್ತಿಯದ್ದು ಎಂದು ಎಂದಿಗೂ ಒಪ್ಪಿಕೊಂಡೇ ಇಲ್ಲ. ಈ ಹಿನ್ನೆಲೆಯಲ್ಲಿ ಹಿಂದೂ ಸಂಹಿತೆ ಮಸೂದೆ ಮೂಲಕ ಹಿಂದೂ ಸಮಾಜ ಇಂತಹದ್ದೊಂದು ದೊಡ್ಡ ಹೆಜ್ಜೆ ಇಡುತ್ತಿರುವುದು ಇದೇ ಪ್ರಥಮ” (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.14, ಭಾಗ.1, ಪು.41). ಖಂಡಿತ, ಅಂಬೇಡ್ಕರರು ಅಂತಹದ್ದೊಂದು ಪ್ರಯತ್ನಕ್ಕೆ ಮುಂದಾಗಲಿಕ್ಕೆ ಪ್ರಮುಖ ಕಾರಣ ಈ ದೇಶದ ಮಹಿಳೆಯರು ಮತ್ತು ಮಕ್ಕಳ ಹಿತಚಿಂತನೆ ಎಂಬುದು ಅವರ ಈ ಮಸೂದೆಯ ಒಟ್ಟಾರೆ ವಿಶ್ಲೇಷಣೆಯಿಂದ ಅರಿವಾಗುತ್ತದೆ.
ಮಸೂದೆ, ಮೊದಲಿಗೆ ಅಂಬೇಡ್ಕರರು ಹೇಳುವುದು ಆಸ್ತಿಯ ವಾರಸುದಾರಿಕೆಯ ಬಗ್ಗೆ. ಆ ಕಾಲದಲ್ಲಿ ಬ್ರಿಟಿಷರ ಕಾಲದಲ್ಲಿ ಹಿಂದೂಗಳಲ್ಲಿ ಆಸ್ತಿಯ ಹಂಚಿಕೆ ಬಗ್ಗೆ ಎರಡು ವಿಧಾನಗಳಿತ್ತು. ಒಂದನೆಯದು ಮಿತಾಕ್ಷರ, ಎರಡನೆಯದು ದಯಾಭಾಗ ಮತ್ತು ಇದರಲ್ಲಿ ಹಿಂದೂಗಳು ಪ್ರಮುಖವಾಗಿ ಮಿತಾಕ್ಷರ ಪದ್ಧತಿಯನ್ನು ಅನುಸರಿಸುತ್ತಿದ್ದರು. ಮಿತಾಕ್ಷರದ ಈ ಪದ್ಧತಿಯಲ್ಲಿ ಆಸ್ತಿಯು ವ್ಯಕ್ತಿಯ ಸ್ವಂತ ಆಸ್ತಿಯಾಗಿರುತ್ತಿರಲಿಲ್ಲ. ಬದಲಿಗೆ ಅದು ತಂದೆ, ಮಗ, ಮೊಮ್ಮಗ ಮತ್ತು ಮರಿ ಮೊಮ್ಮಗ ಹೀಗೆ ನಾಲ್ವರು ಸಮಾನ ಪಾಲುದಾರರಿಗೆ ಸೇರಿರುತ್ತಿತ್ತು. (ತಂದೆ, ಮಗ, ಮೊಮ್ಮಗ, ಮರಿ ಮೊಮ್ಮಗ ಈ ಸರಣಿಯಲ್ಲಿ ಹೆಣ್ಣು ಮಕ್ಕಳಿಗೆ ಅವಕಾಶವೇ ಇಲ್ಲ ಎಂಬುದನ್ನು ಓದುಗರು ಗಮನಿಸಬೇಕು). ಆದರೆ ಅಂಬೇಡ್ಕರರು ಮಿತಾಕ್ಷರದ ಈ ಪದ್ಧತಿಯ ಬದಲಿಗೆ ದಯಾಭಾಗ ಪದ್ಧತಿಯನ್ನು ಅನುಸರಿಸಬೇಕು ಎಂದು ಸಲಹೆ ನೀಡಿದ್ದರು. ದಯಾಭಾಗ ಈ ಪದ್ಧತಿಯ ಪ್ರಕಾರ ವ್ಯಕ್ತಿಯ ಆಸ್ತಿಯು ಆತನ ಸ್ವಂತದ್ದಾಗಿದ್ದು ಮುಂದೆ ಅದು ಆತನ ಉತ್ತರಾಧಿಕಾರಿಗೆ ಸೇರುತ್ತಿತ್ತು. ಆ ಉತ್ತರಾಧಿಕಾರಿ ಅದನ್ನು ಮಾರಬಹುದಿತ್ತು, ಕೊಡುಗೆ ಅಥವ ವಿಲ್ ಮೂಲಕ ತನಗೆ ಬೇಕಾದವರಿಗೆ ಕೊಡಬಹುದಿತ್ತು.
ಇನ್ನು ಎರಡನೆಯ ಅಂಶ ಅಂಬೇಡ್ಕರರು ಹೇಳಿದ್ದು ವ್ಯಕ್ತಿ ಸತ್ತ ನಂತರ ಆಸ್ತಿ ಯಾರಿಗೆ ಸೇರುತ್ತದೆ ಎಂಬುದನ್ನು. ಅಂದು ಜಾರಿಯಲ್ಲಿದ್ದ ಮಿತಾಕ್ಷರ ಪದ್ಧತಿ ಪ್ರಕಾರ ವ್ಯಕ್ತಿ ಸತ್ತ ನಂತರ ಆತನ ಆಸ್ತಿ ಆತನ ಸಹಜಾತರು ಅಂದರೆ ಅಣ್ಣತಮ್ಮಂದರಿಗಿಂತ ಆತನ ಪಿತೃ ಸಂಬಂಧಿಗಳಿಗೆ ಹೋಗುತ್ತಿತ್ತು. ಅಂದರೆ ತಂದೆಯ ಸಂಬಂಧಿಗಳಿಗೆ ಹೋಗುತ್ತಿತ್ತು. ಆದರೆ ಅಂಬೇಡ್ಕರರು ದಯಾಭಾಗ ಪದ್ಧತಿ ಶಿಫಾರಸು ಮಾಡಲಾಗಿ ಆಸ್ತಿ ಆತನ ರಕ್ತ ಸಂಬಂಧಿಗಳಿಗೇ ಹೋಗುವಂತಾಯಿತು. ಈ ಸಂದರ್ಭದಲ್ಲಿ ಅಂಬೇಡ್ಕರರು ಆಸ್ತಿಯ ವಾರಸುದಾರಿಕೆಗೆ ಸಂಬಂಧಿಸಿದಂತೆ ಮಹಿಳೆಯರ ಪರವಾಗಿ ಒಂದು ಬದಲಾವಣೆ ತಂದರು. ಅದೆಂದರೆ ಅದುವರೆಗಿನ ನಿಯಮದಲ್ಲಿ ಕೇವಲ ಮಗನಷ್ಟೆ ವಾರಸುದಾರನಾಗಿರುತ್ತಿದ್ದ. ಆದರೆ ಅಂಬೇಡ್ಕರರು ಅಂತಹ ವಾರಸುದಾರಿಕೆಗೆ ಮಗಳು, ವಿಧವೆ, ಈಗಾಗಲೇ ಮರಣ ಹೊಂದಿರುವಂತಹ ಮಗನ ವಿಧವಾ ಪತ್ನಿ ಇವರೆಲ್ಲರನ್ನು ಮಗನಷ್ಟೆ ಸಮಾನ ವಾರಸುದಾರಿಕೆಗೆ ತಂದರು. ಆ ಮೂಲಕ ಹೆಣ್ಣು ಮಕ್ಕಳಿಗೂ ಆಸ್ತಿಯಲ್ಲಿ ಪಾಲು ನೀಡಿದರು. ಅಂದಹಾಗೆ ಅದು ಅದೆಷ್ಟು ಪಾಲು? ಅಂದರೆ ತಂದೆಯ ಆಸ್ತಿಯಲ್ಲಿ ಮಗನಿಗೆ ಎಷ್ಟು ಸಿಗುತ್ತದೆಯೋ ಅದರ ಅರ್ಧದಷ್ಟು ಮಗಳಿಗೆ. ಈ ಸಂದರ್ಭದಲ್ಲಿ ಆ ಹೆಣ್ಣು ಮಗಳು ಮದುವೆಯಾಗಿದ್ದರೆ ಅಥವ ಮದುವೆಯಾಗದಿದ್ದರೆ? ಖಂಡಿತ, ಅದ್ಯಾವುದೂ ಅಡ್ಡಿ ಬರದಂತೆ ಮಗನ ಅರ್ಧದಷ್ಟು ಆಕೆ ಪಡೆಯುವಂತಾಯಿತು.
ಇನ್ನು ಈ ವಾರಸುದಾರಿಕೆಯಲ್ಲಿ, ಮೊದಲು ತಂದೆ ನಂತರ ತಾಯಿ ಎಂದಿತ್ತು. ಆದರೆ ಅಂಬೇಡ್ಕರರು ಮೊದಲು ತಾಯಿ ನಂತರ ತಂದೆ ಎಂದು ಬದಲಿಸಿದರು. ಈ ಸಂದರ್ಭದಲ್ಲಿ ಮಹಿಳೆಯರದೇ ಹೆಸರಿನಲ್ಲಿರುವ ಆಸ್ತಿ ಅಥವ ಸ್ತ್ರೀಧನಕ್ಕೆ ಸಂಬಂಧಿಸಿ ಅನೇಕ ವಾರಸುದಾರಿಕೆಯ ನಿಯಮಗಳಿದ್ದವು. ಅಂಬೇಡ್ಕರರು ಅವೆಲ್ಲವನ್ನು ಒಂದೇ ನಿಯಮದಡಿ ತಂದರು. ಹಾಗೆಯೇ ಹೇಗೆ ತಂದೆಯ ಆಸ್ತಿಯಲ್ಲಿ ಮಗಳಿಗೆ ಅರ್ಧದಷ್ಟು ಎಂದರೋ ಹಾಗೆಯೇ ಸ್ತ್ರೀಧನದಲ್ಲಿ ಮಗನಿಗೂ ಮಗಳ ಅರ್ಧದಷ್ಟು ಎಂದು ಬದಲಾವಣೆ ತಂದರು. ಅಂದಹಾಗೆ ಅದುವರೆವಿಗೆ ಇದ್ದ ನಿಯಮವೆಂದರೆ ಗಂಡ ತೀರಿಹೋದರೆ ಆಸ್ತಿ ಆಕೆಯ ಗಂಡನ ಸಂಬಂಧಿಕರಿಗೆ ಹೋಗುತ್ತಿತ್ತು. ಆದರೆ ಅಂಬೇಡ್ಕರರು ಅದನ್ನು ಆತನ ವಿಧವಾ ಪತ್ನಿಗಷ್ಟೆ ಎಂಬಂತೆ ಬದಲಾವಣೆ ತಂದರು. ಪತಿಯ ಸಂಬಂಧಿಕರಿಗೆ ಅದರಲ್ಲಿ ಯಾವುದೇ ಪಾಲೂ ಇಲ್ಲವೆಂಬ ನಿಯಮ ರೂಪಿಸಿದರು. ಈ ಸಮಯದಲ್ಲಿ ವರದಕ್ಷಿಣೆ ಬಗ್ಗೆಯೂ ಅಂಬೇಡ್ಕರರು ಒಂದು ನಿಯಮ ತಂದರು. ಅಂದರೆ ಅದನ್ನು ನಿಷೇಧಿಸಿದರು. ಆದರೂ ವರದಕ್ಷಿಣೆ, ಅದು ವಧುವಿನ ಆಸ್ತಿ. ಅದನ್ನು ಆಕೆಯ ಗಂಡನಾಗಲೀ ಆತನ ಸಂಬಂಧಿಕರಾಗಲೀ ಬಳಸುವಂತಿಲ್ಲ. ಬದಲಿಗೆ ಆಕೆಗೆ 18 ವರ್ಷ ತುಂಬಿದ ನಂತರ ಅದು ಆಕೆಯ ವಯಕ್ತಿಕ ಆಸ್ತಿಯಾಗುತ್ತದೆ ಎಂದರು. .
ಇನ್ನು ಅದುವರೆಗೆ ಅಕಸ್ಮಾತ್ ಹೆಂಡತಿ ಗಂಡನಿಂದ ದೂರವಾಗಿ ಬದುಕುವಂತಾದರೆ ಆಕೆಗೆ ಜೀವನಾಂಶ ಸಿಗುತ್ತಿರಲಿಲ್ಲ. ಆದರೆ ಅಂಬೇಡ್ಕರರು ಜೀವನಾಂಶ ಸಿಗುವಂತೆ ಮಾಡಿದರು. ಅಲ್ಲದೆ ಅಂತಹ ಜೀವನಾಂಶದ ಸಂದರ್ಭವನ್ನು ಕೂಡ ಅವರು ಮಹಿಳೆಯ ಹಿತದೃಷ್ಟಿಯಿಂದ ಪಟ್ಟಿಮಾಡಿದರು. ಅವುಗಳೆಂದರೆ 1.ಆತ ಅಸಹನೀಯ ರೋಗದಿಂದ ನರಳುತ್ತಿದ್ದರೆ. 2.ಆತ ಇನ್ನೊಬ್ಬಳನ್ನು ಇಟ್ಟುಕೊಂಡಿದ್ದರೆ. 3.ಆತ ಅತಿ ಕ್ರೂರನಾಗಿದ್ದರೆ. 4.ಆತ ಅವಳನ್ನು ಬಿಟ್ಟು ಎರಡು ವರ್ಷಗಳು ಮೀರಿ ದೂರ ಇದ್ದರೆ. 5.ಆತ ಬೇರೆ ಯಾವುದಾದರೂ ಧರ್ಮಕ್ಕೆ ಮತಾಂತರ ಹೊಂದಿದ್ದರೆ. 6.ಅಥವಾ ಇನ್ನಾವುದಾದರೂ ನ್ಯಾಯಬದ್ಧ ಕಾರಣಗಳು.
ಒಟ್ಟಾರೆ ಹೀಗೆ ಅಂಬೇಡ್ಕರರು ಮಹಿಳೆಗೆ ಕಾನೂನಾತ್ಮಕವಾಗಿ ಸ್ವಾತಂತ್ರ್ಯ ನೀಡಿದ್ದರು.
ಇನ್ನು ಮದುವೆ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಅದುವರೆವಿಗೂ ಹಿಂದೂ ಕಾನೂನಿನಲ್ಲಿ ಸಾಕ್ರಮೆಂಟ್ ಅಥವ ಧಾರ್ಮಿಕ ಮದುವೆಗಷ್ಟೆ ಮಾನ್ಯತೆ ಇತ್ತು. ಸಿವಿಲ್ ಮ್ಯಾರೇಜ್ ಅಥವ ನಾಗರಿಕ ಮದುವೆಗೆ ಯಾವುದೇ ಮಾನ್ಯತೆ ಇರಲಿಲ್ಲ. ಹಾಗೆಯೇ ಧಾರ್ಮಿಕ ಮದುವೆಯಲ್ಲಿ ಜಾತಿ, ಉಪಜಾತಿ ನಮೂದಿಸುವುದು ಕಡ್ಡಾಯವಾಗಿತ್ತು. ಆದರೆ ಅಂಬೇಡ್ಕರರು ರೂಪಿಸಿದ ಮದುವೆಯ ಆ ನಿಯಮದಲ್ಲಿ ಜಾತಿ ಮತ್ತು ಉಪಜಾತಿ ಕಡ್ಡಾಯ ನಮೂದಿಸುವುದನ್ನು ಕೈಬಿಟ್ಟರು. ಪ್ರಾಪ್ತ ವಯಸ್ಕರಿದ್ದರೆ ಸಾಕು ಅವರು ಯಾವುದೇ ಜಾತಿ ಉಪಜಾತಿ ಇರಲಿ ಮದುವೆ ಸಿಂಧು ಎಂಬ ನಿಯಮ ರೂಪಿಸಿದರು. ಅಂದಹಾಗೆ ಅದುವರೆವಿಗೂ ಇದ್ದ ಧಾರ್ಮಿಕ ಮದುವೆ ಪದ್ಧತಿಯಲ್ಲಿ ವಿಚ್ಛೇದನಕ್ಕೆ ಅವಕಾಶ ಇರಲಿಲ್ಲ. ಆದರೆ ಅಂಬೇಡ್ಕರರು ವಿಚ್ಛೇದನಕ್ಕೆ ಅವಕಾಶ ನೀಡಿದರು. ಅದಕ್ಕೆ ಅವರು ಏಳು ಕಾರಣಗಳನ್ನು ನೀಡಿದರು. ಅವುಗಳೆಂದರೆ 1.ಪತ್ನಿಯನ್ನು ಪರಿತ್ಯಜಿಸಿ ದೂರ ಇರುವುದು. 2.ಬೇರೆ ಧರ್ಮಕ್ಕೆ ಮತಾಂತರ ಹೊಂದಿರುವುದು. 3.ಬೇರೊಬ್ಬರನ್ನು ಇಟ್ಟುಕೊಂಡಿರುವುದು. 4.ಗುಣಪಡಿಸಲಾಗದ ರೋಗದಿಂದ ನರಳುತ್ತಿರುವುದು. 5.ಕುಷ್ಟರೋಗದಿಂದ ನರಳುತ್ತಿರುವುದು. 6.ಅಂಟುರೋಗದಿಂದ ನರಳುತ್ತಿರುವುದು. 7.ಕ್ರೂರತೆ.
ಈ ಸಂದರ್ಭದಲ್ಲಿ ಮಹಿಳೆಯರಿಗೆ ಮದುವೆಯನ್ನೇ ರದ್ದುಗೊಳಿಸಿಕೊಳ್ಳುವ ನಿಯಮ ಕೂಡ ಅಂಬೇಡ್ಕರರು ಸೇರಿಸಿದರು. ಆ ಸಂದರ್ಭಗಳೆಂದರೆ, 1.ನಪುಂಸಕತ್ವ 2.ಸಪಿಂಡ 3.ಮಾನಸಿಕ ಅಸ್ವಸ್ಥತೆ 4.ಪೋಷಕರ ಬಲವಂತ. ಅಂದಹಾಗೆ ಅದುವರೆಗೆ ಬಹುಪತ್ನಿತ್ವ ಜಾರಿಯಲ್ಲಿತ್ತು. ಆದರೆ ಅಂಬೇಡ್ಕರರು ಏಕಪತ್ನಿತ್ವ ನಿಯಮವನ್ನು ವಿವಾಹ ಕಾನೂನಿಗೆ ಸೇರಿಸಿದರು. ಒಟ್ಟಾರೆ ಹೀಗೆ ಅಮೂಲಾಗ್ರ ಬದಲಾವಣೆಗಳನ್ನೊಳಗೊಂಡ ಹಿಂದೂ ಸಂಹಿತೆ ಮಸೂದೆಯನ್ನು ಅಂಬೇಡ್ಕರರು ರೂಪಿಸಿ ಸಂಸತ್ತಿನಲ್ಲಿ ಮಂಡಿಸಿದರು. ಅದು ಅಂಗೀಕಾರಗೊಂಡಿತೇ? ಖಂಡಿತ, ಆ ಕಥೆ ಹೇಳಿದರೆ ಅದೇ ಒಂದು ಮಹಾಕಾವ್ಯವಾಗುತ್ತದೆ. ಯಾಕೆಂದರೆ ಕರ್ಮಠ ಹಿಂದೂಗಳು ತಮ್ಮ ಧರ್ಮಕ್ಕೆ ಈ ಪರಿಯ ತಿದ್ದುಪಡಿಯನ್ನು ತರುವುದನ್ನು ಅದರಲ್ಲೂ ಅಸ್ಪøಶ್ಯನೊಬ್ಬ ತರುವುದನ್ನು ಸಹಿಸಿಕೊಳ್ಳುತ್ತಾರೆಯೇ? ಖಂಡಿತ ಇಲ್ಲ. ಅಂಬೇಡ್ಕರರ ಈ ಹಿಂದೂ ಸಂಹಿತೆ ಮಸೂದೆಗೆ ಎದುರಾಗಿ ಅವರು ಸ್ಮøತಿ, ಶೃತಿ ಧರ್ಮಗಳ ಉಲ್ಲೇಖ ಮುಂದಿಡುತ್ತಾರೆ. ಉದಾಹರಣೆಗೆ ಶ್ರೀ ಸರ್ವತೆ ಎಂಬುವವರೊಬ್ಬರು ಹೇಳುತ್ತಾರೆ “ಹಿಂದೂ ಧರ್ಮ ಜಾತಿ ಆಧಾರದ ಮೇಲೆ ನಿಂತಿದೆ. ಒಂದು ವೇಳೆ ಮದುವೆಯೊಂದು ನಡೆಯಿತೆಂದರೆ ಅದು ಪವಿತ್ರ ಎಂದರ್ಥ ಅದನ್ನು ರದ್ದುಗೊಳಿಸಲು ಸಾಧ್ಯವೇ ಇಲ್ಲ. ಇನ್ನು ಸನಾತನ ವೈದಿಕ ಧರ್ಮದ ಪ್ರಕಾರ ವಿಚ್ಛೇದನವಂತು ಸಾಧ್ಯವೇ ಇಲ್ಲ!”. (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.14, ಭಾಗ.2, ಪು.807). ಇನ್ನು ಶ್ರೀ ಶ್ಯಾಮನಂದನ್ ಸಹಾಯ್ ಎನ್ನುವವರು “ಬರೇ ಒಂದು ಸಮುದಾಯಕ್ಕೆ (ಹಿಂದೂ ಧರ್ಮ) ಏಕೆ ನೀವು ಅಂಟಿಕೊಂಡಿರುವಿರಿ? ಇಡೀ ದೇಶಕ್ಕೆ, ಎಲ್ಲ ಧರ್ಮಕ್ಕೆ ಇದನ್ನು ಅನ್ವಯಿಸಿ” (ಅದೇ ಕೃತಿ. ಪು.908) ಎನ್ನುತ್ತಾ ಈಗಿನ ಹಿಂದುತ್ವವಾದಿಗಳ ಪ್ರಶ್ನೆಯನ್ನು ಆಗಲೇ ಅಂಬೇಡ್ಕರರ ಮುಂದಿಡುತ್ತಾರೆ! ಅಂದಹಾಗೆ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಹಕ್ಕು ನೀಡಿರುವುದರ ಬಗ್ಗೆ ಶ್ರೀ.ಎಂ.ಎ..ಅಯ್ಯಂಗಾರ್‍ರವರು ಹೇಳುವುದು “ಹಿಂದೂ ವಿವಾಹ ಪದ್ಧತಿ, ವಿಚ್ಛೇಧನ ನೀಡದಿರುವುದು, ಹಾಗೆಯೇ ಕುಟುಂಬಕ್ಕೆ ಬಾಧ್ಯಸ್ಥರಲ್ಲದ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ನೀಡದಿರುವುದು, ಇತ್ಯಾದಿ... ಇವೆಲ್ಲ ಈ ದೇಶದ ಜನತೆಯ ನೈತಿಕ ಶಕ್ತಿಯ ಮೂಲಗಳಾಗಿವೆ! ನಾನೊಂದು ಸರಳ ಪ್ರಶ್ನೆ ಕೇಳುತ್ತೇನೆ. ನನ್ನ ಮಗಳು ಮದುವೆಯಾಗುತ್ತಾಳೆ ಎಂದಿಟ್ಟುಕೊಳ್ಳಿ. ಆಗ ನಾನು ನನ್ನ ಅಳಿಯನ ಮನೆಯಲ್ಲಿ ಉಳಿದುಕೊಳ್ಳಬೇಕೋ ಅಥವಾ ನನ್ನ ಮಗನ ಮನೆಯಲ್ಲಿ ಉಳಿದುಕೊಳ್ಳಬೇಕೋ? ಹೇಳಿ, ನೀವೇ ಹೇಳಿ” (ಅದೇ ಕೃತಿ. ಪು.939).
ಖಂಡಿತ, ಹೀಗೆ ಸಾಗುವ ಆ ಚರ್ಚೆ ಅಂಬೇಡ್ಕರರ ಆ ಮಸೂದೆಗೆ ನ್ಯಾಯ ದೊರಕಿಸಿಕೊಟ್ಟಿತೆ? ಇಲ್ಲ. ಬದಲಿಗೆ ಅಂಬೇಡ್ಕರರು ತಮ್ಮ ಆ ಕಾನೂನು ಮಂತ್ರಿ ಪದವಿಗೇ ರಾಜೀನಾಮೆ ನೀಡುವಂತಹ ಪರಿಸ್ಥಿತಿ ತಂದೊಡ್ಡಿತು ಮತ್ತು ಅಂಬೇಡ್ಕರರು ರಾಜೀನಾಮೆ ನೀಡಿದರು ಕೂಡ. ಈ ಬಗ್ಗೆ 1951 ಅಕ್ಟೋಬರ್ 10 ರಂದು ತಮ್ಮ ರಾಜೀನಾಮೆ ಭಾಷಣದಲ್ಲಿ ಅಂಬೇಡ್ಕರರು ಹೇಳುವುದು “ಈ ಮಸೂದೆಯನ್ನು 1947 ಆಗಸ್ಟ್ 11 ರಂದು ಸದನದಲ್ಲಿ ಮಂಡಿಸಲಾಯಿತು. ನಾಲ್ಕು ವರ್ಷಗಳ ನಂತರ ಇದರ ಕೇವಲ 4 ಕಲಂಗಳನ್ನಷ್ಟೆ ಅಂಗೀಕರಿಸಿ ಅದನ್ನು ಕೊಲ್ಲಲಾಯಿತು. ಯಾರೂ ಅಳದೆ, ಯಾರೂ ಶೋಕರಾಗವನ್ನು ಹಾಡದೆ ಅದು(ಹಿಂದೂ ಸಂಹಿತೆ ಮಸೂದೆ) ಸತ್ತುಹೋಯಿತು!” ಈ ಸಂದರ್ಭದಲ್ಲಿ ಅಂಬೇಡ್ಕರರು ಈ ಬಗೆಗಿನ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂರವರ ಅಸಹಕಾರವನ್ನು ಸಹ ತಮ್ಮ ಆ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದರು. ಯಾಕೆಂದರೆ ಪ್ರಾರಂಭದಲ್ಲಿ ನೆಹರೂರವರು ಮಸೂದೆಯಲ್ಲಿ ಕೇವಲ ಮದುವೆ ಮತ್ತು ವಿಚ್ಛೇದನದ ಭಾಗವನ್ನಷ್ಟೆ ಕೈಗೆತ್ತಿಕೊಳ್ಳುವಂತೆ ಅಂಬೇಡ್ಕರರಿಗೆ ಸೂಚಿಸಿದ್ದರು. ಆದರೆ ತದನಂತರದ ಬೆಳವಣೀಗೆಯಲ್ಲಿ ಇಡೀ ಮಸೂದೆಯನ್ನೇ ಕೈಬಿಡುವಂತೆ ಸೂಚಿಸಿದರು! ಪರಿಣಾಮ ಅಂಬೇಡ್ಕರರಿಗೆ ಮಂತ್ರಿ ಪದವಿಗೆ ರಾಜೀನಾಮೆ ನೀಡದೆ ಬೇರೆ ದಾರಿಯೇ ಇರಲಿಲ್ಲ.

ಒಟ್ಟಾರೆ ತಮ್ಮ ಕೈಕೊಡುತ್ತಿದ್ದ ಅನಾರೋಗ್ಯದ ನಡುವೆಯೂ ಅಂಬೇಡ್ಕರರು ಹಿಂದೂ ಸಂಹಿತೆ ಮಸೂದೆ ಅಂಗೀಕಾರಕ್ಕೆ ಅವಿರತ ಹೋರಾಡಿದರು. ಅವರೇ ಹೇಳಿಕೊಂಡಿರುವಂತೆ ಅದಕ್ಕಾಗಿ ಅವರು ಮಾನಸಿಕ ಕಿರುಕುಳ ಕೂಡ ಅನುಭವಿಸಬೇಕಾಯಿತು. (ಅದೇ ಕೃತಿ. ಪು.1324). ಅಂತಿಮವಾಗಿ 1955-56 ಸಮಯದಲ್ಲಿ ಅಂಬೇಡ್ಕರರು ರಾಜೀನಾಮೆ ಕೊಟ್ಟ 4 ವರ್ಷಗಳ ನಂತರ ಮಸೂದೆ ಅಂಗೀಕಾರವಾಯಿತು. ಈ ಸಂದರ್ಭದಲ್ಲಿ ಈ ವರ್ಷ ಇಡೀ ದೇಶಕ್ಕೆ ನಂ.1 ಎಂಬ ಖ್ಯಾತಿಯೊಡನೆ ಐಎಎಸ್ ಪರೀಕ್ಷೆ ಪಾಸು ಮಾಡಿದ ಟೀನಾ ಡಾಬಿ ಎಂಬ ಶೋಷಿತ ಸಮುದಾಯದ ಹೆಣ್ಣುಮಗಳ ಹೇಳಿಕೆ ಇಲ್ಲಿ ಉಲ್ಲೇಖಾರ್ಹ. ಟೀನಾ ಡಾಬಿ ಹೇಳುತ್ತಾರೆ “ಬಾಬಾಸಾಹೇಬ್ ಅಂಬೇಡ್ಕರರೇ ನನ್ನ ತಾತ ಮತ್ತು ಅವರೇ ನನಗೆ ಸ್ಫೂರ್ತಿ. ಅವರ ಮೀಸಲಾತಿ ನೀತಿ ಮತ್ತು ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ‘ಹಿಂದೂ ಸಂಹಿತೆ ಮಸೂದೆ’ಯಿಂದಷ್ಟೆ ನಾನು ಐಎಎಸ್ ಪಾಸು ಮಾಡಲು ಸಾಧ್ಯವಾಯಿತು”. ಖಂಡಿತ, ಟೀನಾ ಡಾಬಿಯವರ ಈ ಹೇಳಿಕೆ ಈ ದೇಶದ ಎಲ್ಲ ಮಹಿಳೆಯರ ಹೇಳಿಕೆಯಾಗಬೇಕು. ದುರಂತವೆಂದರೆ ಈ ದೇಶದ ಮೇಲ್ವರ್ಗದ ಹೆಣ್ಣುಮಕ್ಕಳಿಗೆ ಅಂಬೇಡ್ಕರ್ ತಮಗೋಸ್ಕರ ಈ ಪರಿ ಹೋರಾಡಿರುವ ಸತ್ಯ ಅರಿವಿಗೆ ಬರುವುದಿಲ್ಲ. ಬದಲಿಗೆ ಯಥಾಪ್ರಕಾರ ಜಾತೀಯತೆಯ ಮನಸ್ಥಿತಿಯಲ್ಲಿ ಅಂಬೇಡ್ಕರರನ್ನು ವಿರೋಧಿಸ ನೋಡುತ್ತಾರೆ. ಈ ನಿಟ್ಟಿನಲ್ಲಿ ಈಗ ಏಕರೂಪ ನಾಗರಿಕ ಸಂಹಿತೆ ಜಾರಿಮಾಡಲು ಉತ್ಸುಕವಾಗಿರುವ ಮನಸ್ಸುಗಳು ಆಗ ನಮ್ಮ ಪೂರ್ವಿಕರು ಅಂಬೇಡ್ಕರರ ಹಿಂದೂ ಸಂಹಿತೆ ಮಸೂದೆ ಜಾರಿಗೊಳ್ಳಲೇಕೆ ಅಡ್ಡಗಾಲಾಗಿದ್ದರು ಎಂಬುದನ್ನು ಯೋಚಿಸಿ ಸಿಂಹಾವಲೋಕನ ಮಾಡಿಕೊಳ್ಳಬೇಕಿದೆ ಮತ್ತು ಆ ನಂತರವಷ್ಟೆ ಅವರು ಏಕರೂಪ ನಾಗರಿಕ ಸಂಹಿತೆ ಬಗ್ಗೆ ಚರ್ಚೆ ನಡೆಸಲು ಅರ್ಹರಾಗುತ್ತಾರೆ. ಇಲ್ಲದಿದ್ದರೆ ಏಕರೂಪ ನಾಗರಿಕ ಸಂಹಿತೆಯ ಈ ಚರ್ಚೆ ಹಿಂದೂ ಕಾನೂನನ್ನು ಅಲ್ಪಸಂಖ್ಯಾತರ ಮೇಲೆ ಹೇರುವ ವ್ಯವಸ್ಥಿತ ಹುನ್ನಾರದ ಭಾಗವೆನ್ನದೆ ವಿಧಿಯಿಲ್ಲ.
Thursday, 4 August 2016
ರಾಜಕಾರಣಕ್ಕಾಗಿ ಬೌದ್ಧಧರ್ಮ ಬಳಕೆ: ಬಿಜೆಪಿ ಷಡ್ಯಂತ್ರ ವಿಫಲಗೊಳಿಸಿದ ಉತ್ತರ ಪ್ರದೇಶದ ದಲಿತರು
ಕಳೆದ ಏಪ್ರಿಲ್ ತಿಂಗಳಲ್ಲಿ ಬಿಹಾರದ ಸಾರನಾಥದಿಂದ ಬಿಜೆಪಿ ವತಿಯಿಂದ ಯಾತ್ರೆಯೊಂದು ಉದ್ಘಾಟನೆ ಆಗಿತ್ತು. ಹೆಸರು "ಧಮ್ಮ ಚೇತನಾ ಯಾತ್ರೆ". ಖಂಡಿತ ಅದು ಬೌದ್ಧ ಧರ್ಮದ ಯಾತ್ರೆಯಾಗಿತ್ತು. "ಮೋದಿ ಮಾಂಕ್ಸ್" ಅಥವಾ "ಮೋದಿ ಭಿಕ್ಕುಗಳು" ಎಂದು ಕರೆಯಲ್ಪಡುತ್ತಿದ್ದ ಹಿರಿಯ ಭಿಕ್ಕು ಧಮ್ಮ ವಿರಿಯೊ ಮುಂದಾಳತ್ವ ದ ಭಿಕ್ಕುಗಳ ಗುಂಪು ಈ ಯಾತ್ರೆಯ ನೇತೃತ್ವ ವಹಿಸಿತ್ತು. ಮೋದಿ ಸಾಧನೆಗಳನ್ನು ಹೊಗಳುವುದು, ಅಂಬೇಡ್ಕರ್ ಬಗ್ಗೆ ಮೋದಿಯ ಮಾತುಗಳನ್ನು ಪ್ರಚುರಪಡಿಸುವುದು ಉತ್ತರಪ್ರದೇಶದ ಉದ್ದಗಲಕ್ಕೂ ಹಾದುಹೋಗುತ್ತಿದ್ದ ಈ ಯಾತ್ರೆಯ ಉದ್ದೇಶ ವಾಗಿತ್ತು. ಅಂದರೆ ಹೆಸರು ಬೌದ್ಧ ಧರ್ಮ ಆದರೆ ಉದ್ದೇಶ ಬಿಜೆಪಿ ರಾಜಕೀಯ ಅಂದರೆ ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯುವ ವಿಧಾನ ಸಭೆ ಚುನಾವಣೆಯಲ್ಲಿ ದಲಿತರ ಓಟಗಳನ್ನು ಸೆಳೆಯುವ ಬಿಜೆಪಿಯ ಚುನಾವಣಾ ರಾಜಕೀಯವದು!
ಇದಕ್ಕೆ ಕಾರಣ "ಹೇಗಿದ್ದರು ಬೌದ್ಧ ಧರ್ಮದ ಬಹುತೇಕ ಅನುಯಾಯಿಗಳು ಅಥವಾ ಅದರತ್ತ ಒಲವುಳ್ಳವರು ದಲಿತರು. ಆದ್ದರಿಂದ ಅವರ ನಡುವೆ ಧಮ್ಮ ಯಾತ್ರೆಯೆಂದರೆ, ಅದರಲ್ಲೂ ಬೌದ್ಧ ಭಿಕ್ಕುಗಳೇ ಅಂತಹ ಯಾತ್ರೆಯ ನೇತೃತ್ವ ವಹಿಸುತ್ತಾರೆಂದರೆ... ಆ ಮೂಲಕ ಬಿಜೆಪಿ ಮತ್ತು ಸಂಘಪರಿವಾರದ ಮುಖಂಡರು ಅಂತಹ ಯಾತ್ರೆಯಲ್ಲಿ ಪಾಲ್ಗೊಂಡರೆ ದಲಿತರ ಓಟುಗಳನ್ನು ಬೌದ್ಧ ಧರ್ಮದ ಹೆಸರಲ್ಲಿ ಒಂದಷ್ಟಾದರೂ ಕೀಳಬಹುದು...!"
ಖಂಡಿತ, ಇಂತಹ ಉದ್ದೇಶ ಮತ್ತು ಈ "ಉದ್ದೇಶ" ದ ಬೌದ್ಧ ಯಾತ್ರೆ, ಮತ್ತು ಅದನ್ನು ಡಿಸೈನ್ ಮಾಡಿದ ಸಂಘಪರಿವಾರದ ಅಪಾಯಕಾರಿ ತಲೆ ಎಲ್ಲವನ್ನೂ ನೆನೆಸಿಕೊಂಡರೆ ಕೇವಲ ಕ್ರಿಮಿನಲ್ ಗಳು ಮಾತ್ರ ಇಂತಹದ್ದನ್ನು ಮಾಡಲು ಸಾಧ್ಯ ಎಂದು ಯಾರಿಗಾದರೂ ಅನಿಸದಿರದು. ಯಾಕೆಂದರೆ ಶಾಂತಿ ಧೂತ ಬುದ್ದನನ್ನೂ ಹಿಂದುತ್ವ ತನ್ನ ಅಪಾಯಕಾರಿ ರಾಜಕೀಯ ಕುಟಿಲತೆಗೆ ಬಳಸಿಕೊಳ್ಳುತ್ತದೆಂದರೆ ಧರ್ಮವನ್ನು ದುರುಪಯೋಗಪಡಿಸಿಕೊಳ್ಳುವ ಅದರ ನೀತಿ ಮೇರೆ ಮೀರಿರುವುದು ಎಂಥವರಿಗಾದರೂ ಸ್ಪಷ್ಟವಾಗುತ್ತದೆ. ಅಂದರೆ ಹೇಗಿದ್ದರೂ ಬುದ್ಧ ಎಂದರೆ ದಲಿತರಿಗೆ ಭಾವನಾತ್ಮಕ ನಂಟು. ಅಂತಹ ನಂಟನ್ನು ಹಿಂದುತ್ವದ ನೇತೃತ್ವದಲ್ಲಿ ಧಮ್ಮ ಯಾತ್ರೆಯೊಂದರ ಮೂಲಕ ಬೆಸೆದರೆ? ದಲಿತರ ಧಾರ್ಮಿಕ ಭಾವನೆಗಳನ್ನು ಹಿಂದುತ್ವದ ರಾಜಕೀಯಕ್ಕೆ ಬಳಸಿಕೊಂಡರೆ? ಹಿಂದುತ್ವವೂ ಭದ್ರವಾದಂಗಾಯ್ತು ದಲಿತರನ್ನೂ ಹಳ್ಳಕ್ಕೆ ಕೆಡವಿದಂಗಾಯ್ತು!
ಏಕೆಂದರೆ ಈಗಾಗಲೇ ಅಡ್ಚಾಣಿಯವರ ಅಯೋಧ್ಯೆ ಯ ರಾಮಮಂದಿರ ರಥಯಾತ್ರೆಯ ಮೂಲಕ ಹಿಂದೂಗಳನ್ನು ಭಾವನಾತ್ಮಕವಾಗಿ ಮುಸ್ಲಿಮರ ವಿರುದ್ದ ಕೆರಳಿಸಿ ದೇಶಾದ್ಯಂತ ಬಿಜೆಪಿ ತನ್ನ ಮರದ ಬೇರನ್ನು ಭದ್ರಪಡಿಸಿಕೊಂಡಿದೆ. ಎಟುಕದ್ದೆಂದರೆ "ದಲಿತ" ಎಂಬ ಆ ಗುಂಪಷ್ಟೆ. ಅಂದಹಾಗೆ ಅಂತಹ ಗುಂಪನ್ನು ಬೌದ್ಧ ಧಮ್ಮ ಚೇತನ ಯಾತ್ರೆಯ ಮೂಲಕ ಬೆಸೆದರೆ? ಮುಗಿದುಹೋಯಿತು! ಹಿಂದುತ್ವಕ್ಕೆ ಇನ್ನು ತಡೆ ಎನ್ನುವುದೇ ಇರುವುದಿಲ್ಲ. ಅದಕ್ಕೇ ಹೇಳಿದ್ದು ಇದು ಕ್ರಿಮಿನಲ್ ಐಡಿಯಾ ಎಂದು. ಯಾಕೆಂದರೆ ಒಮ್ಮೆ ಬೌದ್ಧ ಧರ್ಮದ ಹೆಸರಲ್ಲಿ ದಲಿತರು ಬಿಜೆಪಿಗೆ ಓಟು ಹಾಕಲು ಪ್ರಾರಂಭಿಸಿದರೆ ಮುಗಿದುಹೋಯಿತು ಬಿಜೆಪಿಯನ್ನು ಇನ್ನು ತಡೆಯುವವರು ಯಾರೂ ಇರುವುದಿಲ್ಲ. ಅಧಿಕಾರ ಅವರಿಗೆ ಪರ್ಮನೆಂಟ್ ಆಗಿ ಬರೆದುಕೊಟ್ಟಂತೆಯೇ.
ಈ ಸಂದರ್ಭದಲ್ಲಿ ಹಿಂದೂ ಧರ್ಮ ಬೇರೆ ಬೌದ್ಧ ಧರ್ಮ ಬೇರೆ, ಹಾಗೆಯೇ ದಲಿತರು ಬೌದ್ಧ ಧರ್ಮಕ್ಕೆ ಮತಾಂತರವಾಗುವುದನ್ನು ಹಿಂದುತ್ವ ವಿರೋಧಿಸುತ್ತದಲ್ಲ ಎಂಬ ಜಿಜ್ಞಾಸೆ ಅಥವಾ ಚಿಂತನೆ ಶೋಷಿತ ಬಂಧುಗಳಲ್ಲಿ ಮೂಡಬಹುದು. ಇದಕ್ಕೆ ಉತ್ತರ ಒಂದು ಪ್ರಶ್ನೆ ಆಗುತ್ತದೆ. ಅಂದರೆ ಯಾವುದು ಗ್ರೇಟ್ ಧರ್ಮ ಯಾ ರಾಜಕಾರಣ? ಎಂಬುದೇ ಆ ಪ್ರಶ್ನೆ. ಖಂಡಿತ ಸಂಘಪರಿವಾರಕ್ಕೆ ತಿಳಿದಿದೆ "ಗ್ರೇಟ್ ರಾಜಕಾರಣ" ಎಂದು. ಯಾಕೆಂದರೆ ಒಮ್ಮೆ ರಾಜಕೀಯ ಅಧಿಕಾರ ಪಡೆದರೆ ಅದರಲ್ಲಿ ತಮ್ಮ ಸ್ವಂತ ಧರ್ಮವನ್ನು ಪೋಷಿಸಬಹುದು , ಬೇರೆಯವರ ಧರ್ಮವನ್ನು ಹದ್ದುಬಸ್ತಿನಲ್ಲೂ ಇಡಬಹುದು ಎಂಬುದು. ಆ ಕಾರಣಕ್ಕೆ ಈಗಾಗಲೇ ಮುಸ್ಲಿಮರನ್ನು ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಮತ್ತು ಭಯೋತ್ಪಾದನೆಯ ಭೂತದ ಮೂಲಕ ನಿಯಂತ್ರಿಸುವಲ್ಲಿ ಹಿಂದುತ್ವ ತನ್ನ ಅಭಿಯಾನ ಚಾಲೂ ಇಟ್ಟಿದೆ. ಆದರೆ ನಿಯಂತ್ರಣಕ್ಕೆ ಸಿಗದದ್ದವರೆಂದರೆ ದಲಿತರು ಮತ್ತವರ ಅಂಬೇಡ್ಕರ್ ವಾದಿ ರಾಜಕಾರಣ. ಆ ಕಾರಣಕ್ಕೆ ಅಂಬೇಡ್ಕರ್ ವಾದವನ್ನು ಕಂಟ್ರೋಲ್ ಮಾಡಬೇಕೆಂದರೆ ಬೌದ್ಧ ಧರ್ಮವನ್ನು ಬಳಸಿಕೊಂಡರೆ ಹೇಗೆ? ಆಶ್ಚರ್ಯವೆಂದರೆ ಹಿಂದುತ್ವ ಈಗಾಗಲೇ ಅದರಲ್ಲಿ ಭಾಗಶಃ ಯಶಸ್ಸು ಕಂಡಿದೆ. ಉದಾಹರಣೆಗೆ ಹೇಳುವುದಾದರೆ ಮಹಾರಾಷ್ಟ್ರದ ಆರ್ ಪಿಐ ನಾಯಕ ಬೌದ್ಧ ಧರ್ಮಕ್ಕೆ ಸೇರಿದ ರಾಮದಾಸ್ ಅಥವಾಲೆ ರಾಜ್ಯಸಭಾ ಸದಸ್ಯನಾಗಿ ಮೋದಿ ಮಂತ್ರಿ ಮಂಡಲದಲ್ಲಿ ಮಂತ್ರಿಯೂ ಆಗಿದ್ದಾನೆ. ಈ ನಿಟ್ಟಿನಲ್ಲಿ ಈ ಅಥವಾಲೆ ಹೇಳುವುದು ಮಾಯಾವತಿ ಯಾಕೆ ಇನ್ನೂ ಬೌದ್ದ ಧರ್ಮಕ್ಕೆ ಮತಾಂತರವಾಗಿಲ್ಲ? ಎಂದು! ಆದರೆ ವಾಸ್ತವವೆಂದರೆ ಮಾಯಾವತಿಯವರು ಈಗಾಗಲೇ ಬೌದ್ಧ ಧರ್ಮದ ಅನುಯಾಯಿ ಎಂಬುದು ಎಲ್ಲರಿಗೂ ತಿಳಿದಿದೆ. ಅವರು ಬೌದ್ಧ ಅನುಯಾಯಿ ಆಗಿರುವುದರಿಂದಲೇ ಉತ್ತರ ಪ್ರದೇಶದ ದಲಿತರು ಆ ಪರಿ ಬೌದ್ಧ ಧರ್ಮದೆಡೆ ಒಲವು ಹೊಂದಿರುವುದು ಮತ್ತು ಬಿಜೆಪಿ ಅದನ್ನು ಬಳಸಿಕೊಳ್ಳಲು ಹೊರಟಿರಯವುದು. ಒಟ್ಟಾರೆ ಅರ್ಥವಾಗುವುದು ರಾಮದಾಸ್ ಅಥವಾಲೆಯೂ ಕೂಡ ಬಿಜೆಪಿಯ ಇಂತಹ ಸಂಚಿನ ಅಂದರೆ ದಲಿತರನ್ನು ಸೆಳೆಯಲು ಬೌದ್ಧ ಧರ್ಮ ಬಳಸಿಕೊಳ್ಳುವ ಸಂಚಿನ ಭಾಗವಾಗಿದ್ದಾರೆ ಎಂಬುದು.
ಆದರೆ ಸ್ವಾಗತಾರ್ಹವೆಂದರೆ ಹಿಂದುತ್ವದ ಈ ಬೌದ್ಧ ಧರ್ಮ ಬಳಸಿಕೊಳ್ಳುವ ಸಂಚಿಗೆ ಉತ್ತರಪ್ರದೇಶದಲ್ಲಿ ಭಾರೀ ಹೊಡೆತ ಬಿದ್ದಿದೆ. ಯಾಕೆಂದರೆ ತನ್ನ ಧಮ್ಮ ಚೇತನಾ ಯಾತ್ರೆಯ ಸಮಾರೋಪವನ್ನು ಇದೇ ಜುಲೈ 31 ರಂದು ಆಗ್ರಾದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಆ ಸಮಾವೇಶದಲ್ಲಿ 50,000 ದಲಿತರನ್ನು ಸೇರಿಸುವ ಉದ್ದೇಶ ಹೊಂದಿತ್ತು ಮತ್ತು ಆ ಸಮಾವೇಶದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮಾತನಾಡುವ ಕಾರ್ಯಕ್ರಮವಿತ್ತು. ಆದರೆ ಆ ಸಮಾವೇಶಕ್ಕೆ ಯಾವೊಬ್ಬ ದಲಿತನೂ ಬರುವ ಸಂಭವ ಕಾಣದೆ ಬಿಜೆಪಿ ಆ ಸಮಾವೇಶವನ್ನೆ ರದ್ದುಮಾಡಿದೆ. ಆ ಮೂಲಕ ತನ್ನ ಕೋಮುವಾದಿ ರಾಜಕಾರಣಕ್ಕೆ ಬೌದ್ಧ ಧರ್ಮ ಬಳಸಿಕೊಳ್ಳುವ ಅದರ ತಂತ್ರಕ್ಕೆ ಅದು ಭಾರೀ ಮುಖಭಂಗ ಅನುಭವಿಸಿದೆ! ಈ ದಿಸೆಯಲ್ಲಿ ಹೇಳುವುದಾದರೆ ಉತ್ತರ ಪ್ರದೇಶದ ದಲಿತರು ಬಿಜೆಪಿಗೆ ಮುಟ್ಟಿನೋಡಿಕೊಳ್ಳುವ ಪೆಟ್ಟನ್ನೇ ಕೊಟ್ಟಿದ್ದಾರೆ. ಯಾಕೆಂದರೆ ಒಮ್ಮೆ ಬಿಜೆಪಿಯ ಈ ತಂತ್ರ ಯಶಸ್ಸು ಕಂಡಿದ್ದರೆ ದೇಶಾದ್ಯಂತ ಅದು ಇದನ್ನು ಅನ್ವಯಿಸುತ್ತಿತ್ತು ಮತ್ತು ಅದಕ್ಕೆ ಕನಿಷ್ಠ ಪಕ್ಷ ದಲಿತರಲ್ಲಿ ಶೇ.50 ಅಥವಾ ಒಟ್ಟು ರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡರೆ ಶೇ.10 ವೋಟ್ ಬ್ಯಾಂಕ್ ಪರ್ಮನೆಂಟಾಗಿ ಸಿಗುತ್ತಿತ್ತು! ಆದರೆ ಈಗ ಬಿಜೆಪಿಯ ಆ ತಂತ್ರವನ್ನು ಉತ್ತರ ಪ್ರದೇಶದ ದಲಿತರು ವಿಫಲಗೊಳಿಸಿರುವುದರಿಂದ ಒಟ್ಟಾರೆ ದಲಿತ ರಾಜಕಾರಣಕ್ಕೂ ಒಂದು ಬೆಲೆ ಸಿಕ್ಕಿದೆ ಹಾಗೆ ಭವಿಷ್ಯದ ದೃಷ್ಟಿಯಿಂದ ತನ್ನನ್ನು ತಾತ್ಕಾಲಿಕವಾಗಿ ಬೆಂಬಲಿಸಿ ಭವಿಷ್ಯದಲ್ಲಿ ತನ್ನನ್ನು ಆಪೋಶನ ತೆಗೆದುಕೊಳ್ಳಬಹುದಾದ ಹಿಂದುತ್ವದಿಂದ ತಪ್ಪಿಸಿಕೊಂಡ ಶ್ರೇಯವೂ ಬೌದ್ಧ ಧರ್ಮಕ್ಕೆ ಸಿಕ್ಕಿದೆ.
ದಲಿತರು ಇಂದು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ತುರ್ತಿದೆ . ನಮ್ಮ ಸದ್ಯದ ಅಗತ್ಯ ಬೌದ್ಧ ಧರ್ಮವೋ ಯಾ ಸ್ವಾಭಿಮಾನಿ ಅಂಬೇಡ್ಕರ್-ಕಾನ್ಷೀರಾಂ-ಮಾಯಾವತಿ ಪ್ರಣೀತ ರಾಜಕಾರಣವೋ ಎಂಬುದನ್ನು ಅರಿಯಬೇಕಿದೆ. ದಲಿತರು ತಕ್ಷಣಕ್ಕೆ ಬೌದ್ಧ ಧರ್ಮ ಅಂದರೆ ಬಿಜೆಪಿ ಬಲೆ ಹಿಡಿದು ಕಾದು ಕುಳಿತಿದೆ ನುಂಗಲು! ಅಂಬೇಡ್ಕರ್ ವಾದಿ ರಾಜಕಾರಣ ಎಂದರೆ ಅಲ್ಲಿ ರಾಜಕಾರಣವೂ ಉಳಿಯುತ್ತದೆ ಹಾಗೆಯೇ ಆ ರಾಜಕೀಯ ಅಧಿಕಾರದಿಂದ ಉಳಿಸಕೊಳ್ಳಬಹುದಾದ ನಮ್ಮ ಸ್ವಧರ್ಮ ಅಂದರೆ ಬೌದ್ಧ ಧರ್ಮ ಕೂಡ ಉಳಿಯುತ್ತದೆ.
ಎಲ್ಲರಿಗೂ ಇತಿಹಾಸ ತಿಳಿದಂತೆ ಬೌದ್ಧ ಧರ್ಮ ನಾಶವಾದದ್ದೆ ರಾಜಾಶ್ರಯ ಅಥವಾ ರಾಜಕೀಯ ಆಶ್ರಯ ತಪ್ಪಿದ್ದರಿಂದ. ಅಂದಹಾಗೆ ಹಿಂದುತ್ವ ಬೋಧಿಸುವ ರಾಜಕೀಯ ಪಕ್ಷ ಬಿಜೆಪಿ ಬೌದ್ಧ ಧರ್ಮ ಬೆಳೆಸುತ್ತದೆ ಎಂಬುದಕ್ಕೆ ಏನು ಗ್ಯಾರಂಟಿ? ಬೆಳೆಸುವುದಿರಲಿ ನಾವು ಬೌದ್ಧಧರ್ಮವನ್ನು ಶಾಶ್ವತವಾಗಿ ಹಿಂದುತ್ವಕ್ಕೆ ಕಳೆದುಕೊಳ್ಳಬೇಕಾದ ಅಪಾಯವಿದೆ. ಈ ನಿಟ್ಟಿನಲ್ಲಿ ಬಿಜೆಪಿಯ ಇಂತಹ ಷಡ್ಯಂತ್ರವನ್ನು ವಿಫಲಗೊಳಿಸಿದ ಉತ್ತರ ಪ್ರದೇಶದ ದಲಿತರು ಸ್ತುತ್ಯರ್ಹರು . ಇಡೀ ದೇಶದ ದಲಿತರೆಲ್ಲರೂ ಅವರ ಈ ಕಾರ್ಯವನ್ನು ಶ್ಲಾಘಿಸಿಬೇಕಿದೆ. ತನ್ಮೂಲಕ ಹಿಂದುತ್ವದ ಅಪಾಯದಿಂದ ತಮ್ಮನ್ನು ತಾವು ದಲಿತರು ಕಾಪಾಡಿಕೊಳ್ಳಬೇಕಿದೆ
-ರಘೋತ್ತಮ ಹೊಬ
Tuesday, 29 March 2016
ಶೂದ್ರರ ಅಸಂಘಟನೆಯೇ ಬ್ರಾಹ್ಮಣೇತರ ಚಳುವಳಿಯ ವೈಫಲ್ಯಕ್ಕೆ ಕಾರಣ.
ಕೆಲ ದಿನಗಳ ಹಿಂದೆ ಸ್ನೇಹಿತರೊಬ್ಬರಿಂದ ತಮಿಳುನಾಡಿನಲ್ಲಿ ಬ್ರಾಹ್ಮಣರನ್ನು ವಿರೋಧಿಸಿದ ಬ್ರಾಹ್ಮಣೇತರ ಪೆರಿಯಾರ್ ನೇತೃತ್ವದ ಚಳುವಳಿ ವಿಫಲವಾಯಿತು... ಅಲ್ಲಿ ಈಗ ಬಹುಸಂಖ್ಯೆಯ ದೇವಸ್ಥಾನಗಳಿವೆ ... ಅತಿಹೆಚ್ಚು ಮೌಢ್ಯಾಚರಣೆ ಇದೆ
ಹೀಗೆ ಸಾಗಿತ್ತು ವಿಶ್ಲೇಷಣೆ. Well ಆ ವಿಶ್ಲೇಷಣೆಯ ಸಾರ ಮೌಲ್ಯಯುತವಾದದ್ದೆ. ಆದರೆ ವಾಸ್ತವ? ಅದೆಂದರೆ ತಮಿಳುನಾಡಿನಲ್ಲೆ ಆಗಲೀ ಕೇರಳದಲ್ಲೆ ಆಗಲೀ ಇಂದು ಪೆರಿಯಾರರ ಮತ್ತು ನಾರಾಯಣ ಗುರುಗಳ ಚಳುವಳಿ ಬಲವಾಗಿ ಇಲ್ಲ ಅಥವ ವಿರುದ್ಧ ಮುಖಿಯಾಗಿಯೂ ಇರಬಹುದು. ಕಾರಣ ಅವರು ಮಂಡಿಸಿದ ಬ್ರಾಹ್ಮಣ ವಿರೋಧಿ ಸಿದ್ಧಾಂತಗಳಲ್ಲ ಅಥವ ನಡೆಸಿದ ಬ್ರಾಹ್ಮಣ ವಿರೋಧಿ ಹೋರಾಟಗಳೂ ಅಲ್ಲ. ಸತ್ಯವೆಂದರೆ ಪೆರಿಯಾರ್ ಮತ್ತು ನಾರಾಯಣ ಗುರುಗಳ ಹೋರಾಟ ಸರಿಯಾದ ಮಾರ್ಗದಲ್ಲೆ ಇತ್ತು. ಆದರೆ ಅವರ ಅನುಯಾಯಿಗಳು? ವಿಶೇಷವಾಗಿ ಶೂದ್ರ ಸಮುದಾಯ? ಅದೊಂದು ಸೈದ್ಧಾಂತಿಕ ಸಮುದಾಯವಾಗಿ ಸಂಘಟಿತವಾಗಲೇ ಇಲ್ಲ. ಅಂದರೆ there is no takers for periyar's thought from shudras. ಅರ್ಥಾತ್ ಪೆರಿಯಾರ್ ನನ್ನವರು, ಅವರು ಹೇಳಿದ ದೌರ್ಜನ್ಯದ ಇತಿಹಾಸ ನನ್ನದು ನನ್ನ ಶೋಷಣೆಯ ಭಾಗದ್ದು ಎಂದು ಯಾವುದೇ ಶೂದ್ರ ಸಮುದಾಯ ಮುಂದೆ ಬರಲಿಲ್ಲ. ಬಲಿಜ ನಾಯ್ಡು ಸಮುದಾಯಕ್ಕೆ ಸೇರಿದ ಪೆರಿಯಾರರನ್ನು ತಮಿಳುನಾಡಿನ ಇತರೆ ಶೂದ್ರ ಸಮುದಾಯಗಳಾದ ತೇವರ್, ಗೌಂಡರ್, ಮೊದಲಿಯಾರ್, ನಾಡಾರ್, ನಾಯರ್ ಹೀಗೆ ಬೇರೆ ಯಾರೂ ಕೂಡ ತಮ್ಮದು ಎಂದು ಸ್ವೀಕರಿಸಲಿಲ್ಲ. ಪರಿಣಾಮ ಪೆರಿಯಾರರ ಹೋರಾಟ ಅವರ ಕಾಲದಲ್ಲೆ ಮಂಕಾಗುತ್ತಾ ಬಂತು.
ಆಶ್ಚರ್ಯವೆಂದರೆ ಪೆರಿಯಾರರ ದ್ರಾವಿಡ ಸಿದ್ಧಾಂತದಡಿಯಲ್ಲಿ ದ್ರಾವಿಡ ಪಕ್ಷಗಳು ಮತ್ತವರ ಶಿಷ್ಯಂದಿರು ಅಧಿಕಾರ ಪಡೆದರೂ ಪೆರಿಯಾರರ ಬ್ರಾಹ್ಮಣವಿರೋಧಿ ಮತ್ತು ದೈವತ್ವ ವಿರೋಧಿ ಸಿದ್ಧಾಂತ ಅನುಷ್ಠಾನ ಗೊಳಿಸಲಾಗಲೇ ಇಲ್ಲ ಬದಲಿಗೆ ದೂರದ ಕರ್ನಾಟಕದಿಂದ ಬ್ರಾಹ್ಮಣ ನಾಯಕತ್ವ ಆಮದು ಮಾಡಿಕೊಂಡ ದ್ರಾವಿಡಿಗರು ಪೆರಿಯಾರರ ಸಿದ್ಧಾಂತ ವಿಫಲಗೊಳಿಸುತ್ತಾ ಹೋದರು. ಮತ್ತೆ ಹೇಳುವುದಾದರೆ ಇದಕ್ಕೆ ಕಾರಣ ಶೂದ್ರ ಸಮುದಾಯಗಳ ಅಸಂಘಟನೆ.
ಇದಕ್ಕೆ ವಿರುದ್ಧವಾಗಿ ಬಾಬಾಸಾಹೇಬ್ ಅಂಬೇಡ್ಕರ್ ರವರು ಯಶಸ್ಸು ಕಂಡರು. ಪೆರಿಯಾರರಷ್ಟೆ ಅಂಬೇಡ್ಕರರು ಬ್ರಾಹ್ಮಣವಾದದ ವಿರುದ್ಧ ಹೋರಾಟ , ಕೃತಿಗಳನ್ನು ರಚಿಸಿದರಾದರೂ ರಾಷ್ಟ್ರ ಮಟ್ಟದಲ್ಲಿ ಚದುರಿದ ಶೋಷಿತ ಸಮುದಾಯಗಳನ್ನು ಒಂದು ಎಂಬಂತೆ ಸಂಘಟಿಸಿದರು. ಸಾಲದಕ್ಜೆ ಅವರೆಲ್ಲರನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳು ಎಂದು ನಾಮಾಂಕಿತಗೊಳಿಸಿ ಅವರಿಗೆ ಶಾಸನಬದ್ಧ ಮೀಸಲಾತಿಯನ್ನು ಸಹ ಬಾಬಾಸಾಹೇಬರು ನೀಡಿದರು. ಇದೊಂದು ಸಮುದಾಯಗಳನ್ನು ಯಶಸ್ವಿ ಯಾಗಿ ಬೆಸೆಯುವ ಪ್ರಕ್ರಿಯೆಯಾಗಿ ನಡೆಯಿತು. ಹಾಗೆ ಪರಿಶಿಷ್ಟ ಜಾತಿ/ ವರ್ಗಗಳವರು ಅಷ್ಟೇ ರಾಜ್ಯ ರಾಜ್ಯಗಳ ಗಡಿ ಮೀರಿ ಜಾತಿ ಜಾತಿಗಳ ಗಡಿ ಮೀರಿ ಅಂಬೇಡ್ಕರ್ ರನ್ನು ತನ್ನವರು ಎಂದು ಸ್ವೀಕರಿಸಿದರು. ಚರಿತ್ರೆಯಲ್ಲಿ ಇನ್ನೆಂದೂ ನಡೆದಿರದಂತಹ ಒಗ್ಗೂಡಿಸುವ ಪ್ರಕ್ರಿಯೆ ಭಾರತದಲ್ಲಿ ನಡೆಯಿತು. ಈ ನಿಟ್ಟಿನಲ್ಲಿ ಬಾಬಾಸಾಹೇಬರ Educate Agitate Organise (ಶಿಕ್ಷಣ ಪಡೆಯಿರಿ, ಹೋರಾಟ ಮಾಡಿರಿ ಮತ್ತು ಸಂಘಟಿತರಾಗಿ) ಮಂತ್ರ ಸಮುದಾಯಗಳನ್ನು ಒಗ್ಗೂಡಿಸುವ ಸಂಘಟಿಸುವ ಮೂಲಕ ಇಲ್ಲಿ ತನ್ನ ಕಾರ್ಯ ಸಾಧಿಸಿತ್ತು. ಹಾಗೆ ಒಗ್ಗೂಡುವುವಿಕೆಯ ಪರಿಣಾಮ ಭಾರತದಲ್ಲಿ ರಾಷ್ಟ್ರೀಯ ಸಮುದಾಯಗಳಾಗಿ 3 ಸಮುದಾಯಗಳು ಅಸ್ತಿತ್ವಕ್ಕೆ ಬಂದವು. ಅವುಗಳು ಮುಸ್ಲಿಮರು, ಬ್ರಾಹ್ಮಣರು ಮತ್ತು ಪರಿಶಿಷ್ಟ ಜಾತಿ/ವರ್ಗಗಳವರು(ದಲಿತರು).
ನಿಜ, ಶೂದ್ರ ಸಮುದಾಯಗಳಿಗೆ ರಾಜಕೀಯ ಅಧಿಕಾರ ನಿರಂತರ ಸಿಗುತ್ತಿದೆ. ಅಭಿವೃದ್ಧಿಯು ನಡೆಯುತ್ತಿದೆ. ಆದರೆ ದುರಂತ ಸೈದ್ಧಾಂತಿಕ ಅವರ ನಿರಂತರ ಬೆಂಬಲ ಬ್ರಾಹ್ಮಣಶಾಹಿಗೆ. ಅದಲ್ಲದೆ ಹಾಗೆ ಹುಟ್ಟಿಕೊಂಡ ಬ್ರಾಹ್ಮಣೇತರ ಚಳುವಳಿಯನ್ನು ಅದರ ನೇತಾರರನ್ನು
ಸಂಘಪರಿವಾರ ವಶಪಡಿಸಿಕೊಂಡು ಅಂತಹ ವಿರೋಧ ಮತ್ತೆ ತಲೆ ಎತ್ತದಂತೆ ನೋಡಿಕೊಳ್ಳುತ್ತಿದೆ. ಅಥವ ಅಂತಹ ಸಮುದಾಯಗಳಿಗೆ ಹೋಲುವ ಪುರಾಣದ ಕೆಲ ಋಷಿ ಮುನಿಗಳನ್ನು ತಗಲುಹಾಕಿ ಇನ್ನೆಂದಿಗೂ ಆ ಸಮುದಾಯಗಳು ತಲೆ ಎತ್ತದಂತೆ ಬ್ರಾಹ್ಮಣಶಾಹಿ ತನ್ನ ಪ್ರಯತ್ನ ಮುಂದುವರಿಸಿದೆ.
ಹಾಗೆ ಶೂದ್ರ ಸಮುದಾಯಗಳಿಗೂ ಅಷ್ಟೇ ಪುರಾಣದ ಋಷಿಮುನಿಗಳಷ್ಟೆ ಅವರಿಗೆ ಸ್ವರ್ಗ, ಪೆರಿಯಾರರತ್ತ ಅವರು ಕಣ್ಣೆತ್ತಿನೋಡುವುದಿರಲಿ ಅವರನ್ನು ಅಂತಹ ಇತರರನ್ನು ದಲಿತರು ಎಂದುಕೊಳ್ಳುವ ವರೆಗೆ ತನ್ಮೂಲಕ ತನಗೆ ಸ್ಫೂರ್ತಿಯಾಗುವಂತ ಮಾದರಿಗಳನ್ನು ನಿರಾಕರಿಸುವುದರೆಡೆಗೆ ಅವರು ಸಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೆರಿಯಾರರ ಚಳುವಳಿಯ ವೈಫಲ್ಯಕ್ಕೆ ಪೆರಿಯಾರರತ್ತ ಬೊಟ್ಟುಮಾಡುವುದು ಖಂಡಿತ ಆ ಮಹಾನ್ ವ್ಯಕ್ತಿತ್ವಕ್ಕೆ ಮಾಡುವ ಅಪಚಾರವಾಗುತ್ತದೆ. ಹಾಗಲ್ಲದಿದ್ದರೆ ಕಾನ್ಷೀರಾಮ್ ಜೀ ಯಾಕೆ ಪೆರಿಯಾರ್, ನಾರಾಯಣ ಗುರು ನಮ್ಮ ಪೂರ್ವಿಕರು ಎನ್ನುತ್ತಿದ್ದರು? ಬಹುಜನ ಸಮಾಜ ಎನ್ನುತ್ತಿದ್ದರು? ಈ ಹಿನ್ನೆಲೆಯಲ್ಲಿ ಪೆರಿಯಾರರ ಚಳುವಳಿ ಮುಂದುವರಿಯದಿದ್ದಕ್ಕೆ ಪೆರಿಯಾರರ ಹೋರಾಟ, ಸಿದ್ಧಾಂತ ಕಾರಣವಲ್ಲ ಬದಲಿಗೆ ಶೂದ್ರ ಸಮುದಾಯಗಳ ಅಸಂಘಟನೆ ಕಾರಣ.

Subscribe to:
Posts (Atom)