ನಿಜವಾದ ದೇಶಪ್ರೇಮವೆಂದರೆ... ಅದು ಟಿಪ್ಪುವಿನದು
-ರಘೋತ್ತಮ ಹೊ.ಬ
“ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರ ಅನ್ನುವುದನ್ನು ಕೇಳಿದರೆ ತಲೆ ಚಚ್ಚಿಕೊಳ್ಳಬೇಕು ಎನಿಸುತ್ತದೆ. ಎಲ್ಲಾ ರಾಜರು ತಮ್ಮ ರಾಜ್ಯವನ್ನು ಉಳಿಸಿಕೊಳ್ಳಲು ಹೋರಾಡಿದಂತೆ ಟಿಪ್ಪು ಕೂಡ ಮಾಡಿದ್ದಾನೆ. ಅವನ ಹೆಸರನ್ನು ಭಗತ್‍ಸಿಂಗ್, ಸುಭಾಷ್‍ಚಂದ್ರ ಬೋಸ್, ಮಹಾತ್ಮ ಗಾಂಧಿ ಜೊತೆ ಸೇರಿಸಿಕೊಳ್ಳಲು ಸಾಧ್ಯವಿಲ್ಲ”. ಟಿಪ್ಪುವಿನ ಬಗ್ಗೆ ಹಿಂದುತ್ವವಾದಿಗಳ ‘ಶ್ರೇಷ್ಠ್ಟ’ ಮಾತುಗಳಿವು! ಬಹುಶಃ ಸ್ವಾತಂತ್ರ್ಯ ಹೋರಾಟವೊಂದಕ್ಕೆ, ಆ ಹೋರಾಟದಲ್ಲಿ ಭಾಗವಹಿಸಿದ ಪ್ರತಿಯೊಬ್ಬರ ನೆತ್ತರಿನ ಹನಿಗೆ ಇದಕ್ಕಿಂತ ಕ್ರೂರವಾಗಿ ಅಪಮಾನ ಎಸಗಲು ಸಾಧ್ಯವಿಲ್ಲ. ಹಾಗೆ ಹೇಳುವುದಾದರೆ ಹಿಂದುತ್ವವಾದಿಗಳ ಇಂತಹ ಮಾತುಗಳು ಈ ದೇಶದ, ಈ ದೇಶ ಕಟ್ಟುವಲ್ಲಿ ಯತ್ನಿಸಿದ ಪ್ರತಿಯೊಬ್ಬರನ್ನೂ ಅಪಮಾನಿಸಿದಂತೆ ಮತ್ತು ಅವರು ಹೇಳಿದ್ದೇ ಸತ್ಯವಾದರೆ ಭಾರತದ ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟ ಎಂಬ ಅಧ್ಯಾಯಕ್ಕೆ ಬೆಲೆಯೇ ಇರುವುದಿಲ್ಲ. ಯಾಕೆಂದರೆ ಬಹುತೇಕ ಸ್ವಾತಂತ್ರ್ಯ ಹೋರಾಟಗಾರರಿಗೆ ತಾವು ಹಿಂದುತ್ವವಾದಿಗಳು, ನಾವು ಹಿಂದೂಗಳಿಗಾಗಿಯೇ ಬ್ರಿಟಿಷರ ವಿರುದ್ಧ ಹೋರಾಡಬೇಕು, ದೇಶ ಕಟ್ಟಿಕೊಂಡು ನಮಗೇನಾಗಬೇಕು ಎಂಬ ಧೋರಣೆ ಖಂಡಿತ ಇರಲಿಲ್ಲ. ಹಾಗೆಯೇ ಸ್ವಾತಂತ್ರ್ಯ ಹೋರಾಟಗಾರರಿಗೆ ಇಂತಹ ಧೋರಣೆ ಇರಲಿಲ್ಲವೆಂದರೆ ಹಿಂದುತ್ವವಾದಿಗಳ ಪ್ರಕಾರ ಅಂತಹವರ್ಯಾರೂ ಸ್ವಾತಂತ್ರ್ಯ ಹೋರಾಟಗಾರರೇ ಅಲ್ಲ! ಅವರೆಲ್ಲರೂ... ಅಂದರೆ ಬಂಗಾಳದ ನವಾಬ ಸಿರಾಜುದ್ದೌಲ, ಪಂಜಾಬ್‍ನ ರಣಜಿತ್ ಸಿಂಗ್, ಮಹಾರಾಷ್ಟ್ರದ ನಾನಾಫಡ್ನವೀಸ, ನಾನಾ ಸಾಹೇಬ, ಅವಧ್‍ನ ರಾಣಿ ಬೇಗಂ ಹಜರತ್ ಮಹಲ್, ಝಾನ್ಸಿಯ ರಾಣಿ ಲಕ್ಷ್ಮಿಬಾಯಿ, ಕಿತ್ತೂರಿನ ಚೆನ್ನಮ್ಮ, ಹಾಗೆ 1857ರಲ್ಲಿ ‘ಬಹದ್ದೂರ್‍ಷಾನ ಪರ’ ದಂಗೆ ಎದ್ದ ದೆಹಲಿಯ ಸಿಪಾಯಿಗಳು ಇವರ್ಯಾರೂ ಸ್ವಾತಂತ್ರ್ಯ ಹೋರಾಟಗಾರರೇ ಅಲ್ಲ! ಸ್ವಾತಂತ್ರ್ಯ ಹೋರಾಟದ ಪುಟದಲ್ಲಿ ಇವರಿಗೇ ಜಾಗವೇ ಇರಲಿಕ್ಕಿಲ್ಲ! ಕ್ಷಮಿಸಿ, ಇವರ ಬದಲು ಹಿಂದುತ್ವವಾದಿಗಳು ಹೇಳುವವರನ್ನು ತುರುಕೋಣವೆಂದರೆ ಅಂಥಹವರಾರೂ ಸಂಘ ಪರಿವಾರದ ಇತಿಹಾಸದಲ್ಲಿ ಹುಟ್ಟಿಲ್ಲ.
ಹಾಗಿದ್ದರೆ ಏನು ಮಾಡುವುದು? ಹಿಂದುತ್ವವಾದಿಗಳು ಹೇಳಿರುವುದನ್ನು ಒಪ್ಪಿಕೊಂಡು ಟಿಪ್ಪುವನ್ನು ಒಳಗೊಂಡಂತೆ ಇವರನ್ನೆಲ್ಲಾ ತಿರಸ್ಕರಿಸಬೇಕೆ? ಖಂಡಿತ ಸಾಧ್ಯವಿಲ್ಲದ ಮಾತು. ಯಾಕೆಂದರೆ ಸೂರ್ಯ ಚಂದ್ರರಿರುವ ತನಕ ಇಂತಹವರು ಸ್ವಾತಂತ್ರ್ಯ ಹೋರಾಟಗಾರರಾಗಿ ಜನಮಾನಸದಲ್ಲಿ ಉಳಿಯುತ್ತಾರೆ. ಹಾಗೆಯೇ ಟಿಪ್ಪುವೂ ಕೂಡ. ಅವನನ್ನು ಟೀಕಿಸುವ ಯಾರದೇ ಹೇಳಿಕೆಯಾಗಲೀ ಬಹುಶಃ ಅವನ ಸಾಧನೆಯ ಒಂದಂಶವನ್ನೂ ಸಹ ಅಲುಗಾಡಿಸಲು ಸಾಧ್ಯವಿಲ್ಲ. ಯಾಕೆಂದರೆ ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ್ದು ಒಂದೆರಡು ಯುದ್ಧಗಳಲ್ಲಿ ಅಲ್ಲ. ಬರೋಬ್ಬರಿ ನಾಲ್ಕು ಯುದ್ಧಗಳಲ್ಲಿ! ನಿಜ, ಟಿಪ್ಪು ಬ್ರಿಟಿಷರನ್ನು ಭಾರತದಿಂದ ಓಡಿಸಲು ಹೋರಾಡಲಿಲ್ಲ. ಬದಲಿಗೆ ಅವರು ಇಲ್ಲಿ ತಳವೂರಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಅವರಿಗೆ ಟಿಪ್ಪು ಪ್ರಬಲ ಪ್ರತಿರೋಧ ಒಡ್ಡಿದ. ಬಹುಶಃ ಅವನು ಮನಸ್ಸು ಮಾಡಿದ್ದರೆ ಪಂಜಾಬ್‍ನ ರಣಜಿತ್‍ಸಿಂಗ್‍ನ ಹಾಗೆ ಹೈದರಾಬಾದ್‍ನ ನಿಜಾಮನ ಹಾಗೆ ಬ್ರಿಟಿಷರ ಸಹಾಯಕ ಸೈನ್ಯ ಪದ್ಧತಿ ಒಪ್ಪಿಕೊಂಡು ಅವರಿಗೆ ಅಡಿಯಾಳಾಗಿ 49ವರ್ಷವೇನು 99ವರ್ಷ ಬದುಕಬಹುದಿತ್ತು (ಟಿಪ್ಪು ಹುಟ್ಟಿದ್ದು 1750ರಲ್ಲಿ ಸತ್ತಿದ್ದು1799ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡುತ್ತ ರಣರಂಗದಲ್ಲಿ). ಆದರೆ ಟಿಪ್ಪು ಪರದೇಶಿ ಪರಂಗಿಗಳಿಗೆ ಶರಣಾಗಲು ಸಿದ್ಧನಿರಲಿಲ್ಲ. ಬದಲಿಗೆ ಆ ಕಾಲದಲ್ಲಿ “ತನ್ನ ಹೆಸರು ಕೇಳಿದರೆ ಇಡೀ ಲೀಡನ್ ಬೀದಿ ನಡುಗುವಂತೆ” ಮಾಡಿದ್ದ! (ಲೀಡನ್ ಬೀದಿ: ಲಂಡನ್ ನಗರದಲ್ಲಿನ ಅಂದಿನ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಕೇಂದ್ರ ಸ್ಥಾನ). ಯಾಕೆಂದರೆ ಮರಾಠರು, ಹೈದರಾಬಾದಿನ ನಿಜಾಮನರನ್ನೊಳಗೊಂಡಂತೆ ಅಂದಿನ ಕಾಲದ ಎಲ್ಲಾ ರಾಜರು ಬ್ರಿಟಿಷರ ಸಹಾಯಕ ಸೇನಾ ಪದ್ಧತಿಗೆ ಒಪ್ಪಿಕೊಂಡರು. ಆದರೆ ಟಿಪ್ಪು ಅದಕ್ಕೆ ತಲೆಬಾಗಲಿಲ್ಲ. ಬದಲಿಗೆ ಅವರ ವಿರುದ್ಧ ಫ್ರೆಂಚರ ನೆಪೊಲಿಯನ್ ಬೋನಾಪಾರ್ಟೆಯ ಸಹಾಯ ಪಡೆಯಲು, ಆಪ್ಘನ್ನಿನ ದೊರೆ ಜಮಾಲ್ ಷಾನ ಬೆಂಬಲ ಪಡೆಯಲು ಯತ್ನಿಸಿದ. ಆದರೆ ನೆಪೋಲಿಯನ್ನನ ಸೈನ್ಯ ಈಜಿಪ್ಟ್‍ನಲ್ಲಿ ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಭಾರತಕ್ಕೆ ಬರಲಾಗಲಿಲ್ಲ. ಹಾಗೆಯೇ ಪರ್ಶಿಯನ್ನರು ಆಪ್ಘನಿಸ್ತಾನದ ಜಮಾಲ್ ಷಾನ ಮುಂದುವರಿಕೆಗೆ ತಡೆಯೊಡ್ಡಿದರು. ಅಂಥಹದ್ದೇನಾದರು ಅಂದರೆ ನೆಪೋಲಿಯನ್ ಬೊನಾಪಾರ್ಟೆ ಏನಾದರು ಭಾರತಕ್ಕೆ ಬಂದು ಟಿಪ್ಪುವಿನ ಜೊತೆ ಕೈಜೋಡಿಸಿದ್ದೆ ಆದರೆ ಭಾರತದ ಇತಿಹಾಸದ ಚಿತ್ರಣವೇ ಬದಲಾಗಿರುತ್ತಿತ್ತು. ಆದರೆ ಅಂಥಹದಕ್ಕೆ ಅವಕಾಶವಿರದೇ ಟಿಪ್ಪು ಅದಾಗಲೇ ಬ್ರಿಟಿಷರ ಗುಂಡಿಗೆ ತನ್ನ ಎದೆಯೊಡ್ಡಿದ್ದ. ಮೂರನೇ ಮೈಸೂರು ಯುದ್ಧದಲ್ಲಿ ತನ್ನಿಬ್ಬರು ಮಕ್ಕಳನ್ನು ಲಾರ್ಡ್ ಕಾರ್ನವಾಲೀಸನ ತೆಕ್ಕೆಗೆ ಒತ್ತೆಯಾಳುಗಳಾಗಿ ಒಪ್ಪಿಸಿದ್ದ.
ಈ ಸಂದರ್ಭದಲ್ಲಿ ಒಂದೆರಡು ವಿಷಯಗಳನ್ನು ಸ್ಪಷ್ಟಪಡಿಸಲೇಬೇಕು. ಅದು ಟಿಪ್ಪು ಹಿಂದೂ ವಿರೋಧಿ ಎನ್ನುವುದರ ಬಗ್ಗೆ. ಬಹುಶಃ ಹಾಗೆಂದರೆ ನಮ್ಮ ನಾಲಿಗೆಯಲ್ಲಿ ಹುಳ ಬೀಳುತ್ತದಷ್ಟೆ. ಯಾಕೆಂದರೆ ಯಾವ ಹಿಂದೂ ಧರ್ಮಕ್ಕೆ ಸೇರಿದ ಮಹಾರಾಷ್ಟ್ರದ ಪಿಂಡಾರಿಗಳು ಶೃಂಗೇರಿಯ ಶಾರದ ಮಠವನ್ನು ಧ್ವಂಸಗೈದರೋ ಅಂತಹ ಮಠವನ್ನು ಮತ್ತೆ ಕಟ್ಟಿದವನು, ಉದ್ಧಾರಮಾಡಿದವನು ಟಿಪ್ಪು ಸುಲ್ತಾನ್. ಹಾಗೆ ಟಿಪ್ಪುವಿನ ಶ್ರೀರಂಗ ಭಕ್ತಿ ಎಲ್ಲರಿಗೂ ತಿಳಿದದ್ದೆ. ಯಾಕೆಂದರೆ ಟಿಪ್ಪುವಿನ ಅರಮನೆಯ ಸಮೀಪ ಕೆಲವೇ ಮೀಟರುಗಳ ದೂರದಲ್ಲಿ ಶ್ರೀರಂಗಸ್ವಾಮಿಯ ದೇವಾಲಯ ಈಗಲೂ ನಳನಳಿಸುತ್ತಾ ನಿಂತಿದೆ. ಇನ್ನೂ ನಂಜನಗೂಡಿನ ನಂಜುಂಡೇಶ್ವರನನ್ನು ಟಿಪ್ಪು “ಹಕೀಮ್ ನಂಜುಂಡ” ಎನ್ನುತ್ತಿದ್ದದ್ದು ಮತ್ತು ನಂಜುಂಡೇಶ್ವರನ ದೇವಾಲಯಕ್ಕೆ ಟಿಪ್ಪು ನೀಡಿದ ರತ್ನಖಚಿತ ಬಟ್ಟಲು, ಕೆಲವು ವಜ್ರಗಳ ದೊಡ್ಡ ಉದಾಹರಣೆಯೇ ನಮ್ಮ ಮುಂದಿದೆ. ಈಗಲೂ ಇಂಥಹದ್ದನೆಲ್ಲ ಅಂದರೆ ನಂಜನಗೂಡಿನ ದೇವಸ್ಥಾನದಲ್ಲಿರುವ ಕೆಲವು ಚಿನ್ನದ ಪಾತ್ರೆಗಳು, ಕೊಡುಗೆಗಳ ಮೇಲೆ “ಟಿಪ್ಪು ಸುಲ್ತಾನನ ಸೇವೆ” ಎಂದಿರುವುದನ್ನು ನಾವು ಕಾಣಬಹುದು. ಟಿಪ್ಪು ಹಿಂದೂ ಧರ್ಮದ ಪ್ರೋತ್ಸಾಹಕನೇ ಅಥವಾ ದ್ರೋಹಿಯೇ ಎಂದು ನಿರ್ಧರಿಸಲು ಇಂತಹ ಒಂದೆರಡು ಉದಾಹರಣೆಗಳು ಸಾಕು. ದುರಂತವೆಂದರೆ ಹಿಂದುತ್ವವಾದಿಗಳು ಹಿಂದೂ ದೇವಾಲಯಗಳ ಬಗ್ಗೆ ಟಿಪ್ಪು ಈ ರೀತಿ ನೆರವು ನೀಡಿರುವುದನ್ನು “ಟಿಪ್ಪು ತನ್ನ ಅನಿಷ್ಟ ನಿವಾರಣೆಗೆ ಮಾಡಿದ ಕೆಲಸವೇ ಹೊರತು ಭಕ್ತಿಯಿಂದಲ್ಲ” ಎನ್ನುತ್ತಾರೆ! ತನ್ಮೂಲಕ ಮೊಸರಲ್ಲೂ ಕೂಡ ಕಲ್ಲು ಹುಡುಕುವ ಕೆಲಸ ಮಾಡುತ್ತಾರೆ. ಹಾಗಿದ್ದರೆ ಇವರ ಪ್ರಕಾರ ಆಂಜನೇಯನ ಹಾಗೆ ಟಿಪ್ಪು ತನ್ನ ಎದೆಬಗೆದು ‘ನೋಡಿ ನನ್ನ ಹಿಂದೂ ಭಕ್ತಿ’ ಎಂದೂ ತೋರಿಸಬೇಕಿತ್ತು! (ಕ್ಷಮಿಸಿ, ಹಾಗೆ ತೋರಿಸಿದ್ದರು ಕೂಡ ಹಿಂದುತ್ವವಾದಿಗಳು ನಂಬುತ್ತಿರಲಿಲ್ಲ! ಟಿಪ್ಪುವಿಗೆ ಶ್ವಾಸಕೋಶದ ಕಾಯಿಲೆ ಇತ್ತು. ಅದಕ್ಕೆ ಆತ ಎದೆಬಗೆದ ಎನ್ನುತಿದ್ದರೇನೋ!)
ಅಂದಹಾಗೆ ಇನ್ನೊಂದು ಅಭಿವೃದ್ಧಿಪರ ಸತ್ಯವನ್ನು ಪ್ರಸ್ತಾಪಿಸಲೇಬೇಕು. ಅದು ಕಾವೇರಿ ನದಿಗೆ ಕನ್ನಂಬಾಡಿಯಲ್ಲಿ ಟಿಪ್ಪು ಅಣೆಕಟ್ಟು ಕಟ್ಟಲು ಶಂಕುಸ್ಥಾಪನೆ ನೆರವೇರಿಸಿದ್ದರ ಕುರಿತು. ಹೌದು, ಇಂದಿನ ಕೆ.ಆರ್.ಎಸ್‍ಗೆ 1794ರಲ್ಲೇ ಯೋಜನೆ ರೂಪಿಸಿ ಶಂಕುಸ್ಥಾಪನೆ ನೆರವೇರಿಸಿದ್ದು ಟಿಪ್ಪು ಸುಲ್ತಾನ್. ಆ ಬಗ್ಗೆ ಶಾಸನ ಈಗಲೂ ಕೆ.ಆರ್.ಎಸ್‍ನ ಮುಖ್ಯ ಧ್ವಾರದಲ್ಲಿರುವ ಗಾಜಿನ ಫಲಕದಲ್ಲಿ ಭದ್ರವಾಗಿದೆ. ಆ ಶಾಸನದಲ್ಲಿ “ಪೈಗಂಬರ್ ಮಹಮ್ಮದರ ಜನ್ಮದಿನದಂದು...... ಪಶ್ಚಿಮ ದಿಕ್ಕಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಚಿರಸ್ಥಾಯಿಯಾದ ಅಣೆಕಟ್ಟು ಕಟ್ಟಿಸಲು ಶಂಕುಸ್ಥಾಪನೆ ಮಾಡಿದ್ದೇವೆ” ಎಂದಿದೆ. ಸಂತಸದ ವಿಚಾರವೆಂದರೆ ನೂರು ವರ್ಷಗಳ ನಂತರ ಅಂದರೆ 1902ರಲ್ಲಿ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‍ವರು ಅಣೆಕಟ್ಟೆ ಕಟ್ಟಲು ಪ್ರಾರಂಭಿಸಿದ ನಂತರ, ಎಲ್ಲಿ ಟಿಪ್ಪು ಶಂಕುಸ್ಥಾಪನೆ ನೆರವೇರಿಸಿದ್ದನೋ ಅದೇ ಸ್ಥಳದಲ್ಲಿ ಮಹಾರಾಜ ಕೃಷ್ಣರಾಜ ಒಡೆಯರ್‍ರವರು ಕೆ.ಆರ್.ಎಸ್ ಕಟ್ಟಿಸುತ್ತಾರೆ. ತನ್ಮೂಲಕ ಟಿಪ್ಪು ಕನಸನ್ನು ರಾಜರ್ಷಿ ನಾಲ್ವಡಿಯವರು ನನಸುಮಾಡುತ್ತಾರೆ. ದುರಂತವೆಂದರೆ 32 ವರ್ಷ ಶ್ರಮವಹಿಸಿ ಕಟ್ಟಿದ ಟಿಪ್ಪು ಮತ್ತು ನಾಲ್ವಡಿಯವರ ಇಂಥಹ ಸಾಧನೆಯನ್ನು ಹಿಂದುತ್ವವಾದಿ ಇತಿಹಾಸಕಾರರು ಕೇವಲ 3-4 ವರ್ಷ ದಿವಾನರಾಗಿದ್ದ ವಿಶ್ವೇಶ್ವರಯ್ಯನವರ ಹೆಸರಿಗೆ ಹೈಜಾಕ್ ಮಾಡಿದ್ದಾರೆ. ತನ್ಮೂಲಕ ಟಿಪ್ಪು ಮತ್ತು ನಾಲ್ವಡಿಯವರಿಗೆ ದ್ರೋಹ ಎಸಗಿದ್ದಾರೆ. ಒಟ್ಟಾರೆ ಆ ಕಾಲದಲ್ಲಿ ಅಂದರೆ 1794ರಲ್ಲಿ ನಾಲ್ಕನೇ ಮೈಸೂರು ಯುದ್ಧ ನಡೆಯದಿದ್ದರೆ, ಟಿಪ್ಪು 1799ರಲ್ಲಿ ಸಾಯದಿದ್ದರೆ ಕೆಆರ್‍ಎಸ್ ಕಟ್ಟಿ ಇಷ್ಟೊತ್ತಿಗಾಗಲೇ 200ವರ್ಷಗಳ ಮೇಲಾಗಿರುತ್ತಿತ್ತು. ಮಂಡ್ಯ, ಮೈಸೂರು, ಬೆಂಗಳೂರು, ಹಾಸನ, ಕೋಲಾರಗಳನ್ನೊಳಗೊಂಡಂತೆ ಸಮಸ್ತ ದಕ್ಷಿಣ ಕರ್ನಾಟಕ ಅಭಿವೃದ್ಧಿಯಲ್ಲಿ ಇಷ್ಟೊತ್ತಿಗಾಗಲೇ 100ವರ್ಷ ಮುಂದಿರುತ್ತಿದ್ದವು. ಟಿಪ್ಪುವಿನ ಮರಣದಿಂದಾಗಿ, ಇಡೀ ಮೈಸೂರು ಬ್ರಿಟಿಷರ ವಶವಾದ್ದರಿಂದಾಗಿ ಕೆಆರ್‍ಎಸ್ ನಿರ್ಮಾಣ 100 ವರ್ಷ ತಡವಾಯಿತು. ಹೀಗಿದ್ದರೂ ಕೆಆರ್‍ಎಸ್‍ಗೆ ಒಂದು ಪರಿಕಲ್ಪನೆ ನೀಡಿ ಕನ್ನಂಬಾಡಿಯಲ್ಲಿ ಅದಕ್ಕೆ ಶಂಕುಸ್ಥಾಪನೆ ನೆರವೇರಿಸಿ ಕರುನಾಡಿಗೆ ಶಾಶ್ವತ ನೀರಾವರಿ ಒದಗಿಸಲು ಯತ್ನಿಸಿದ ಟಿಪ್ಪುವನ್ನು ಕನ್ನಡಿಗರು ವಿಶೇಷವಾಗಿ ದಕ್ಷಿಣ ಕರ್ನಾಟಕದ ಜನ ನೆನೆಯಬೇಕಲ್ಲವೇ? ಅಂದಹಾಗೆ ಟಿಪ್ಪು ಬರೇ ತನ್ನ ಧರ್ಮದವರಿಗೋಸ್ಕರ ಕನ್ನಂಬಾಡಿಯಲ್ಲಿ ಅಣೆಕಟ್ಟೆ ಕಟ್ಟಲು ಪ್ರಾರಂಭಿಸಿದನೆ? ಅವನನ್ನು ಹಿಂದೂ ದ್ರೋಹಿ ಎನ್ನುವವರು ಈ ಬಗ್ಗೆ ಉತ್ತರಿಸಬೇಕು.
ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿನ ಟಿಪ್ಪುವಿನ ಇಂತಹ ಜನಪರ ಕಾರ್ಯಗಳನ್ನು ಹೇಳುವುದನ್ನು ಬಿಟ್ಟು ಹಿಂದೂತ್ವವಾದಿಗಳು ದೂರದ ಲಂಡನ್ನಿನಲ್ಲಿ ಇದೆ ಎನ್ನಲಾದ, ಕೇರಳದಲ್ಲಿ ನೆಡೆದಿದೆ ಎನ್ನಲಾದ ಶಾಸನಗಳನ್ನು ಘಟನೆಗಳನ್ನು ಪ್ರಸ್ತಾಪಿಸಿ ಜನತೆಯನ್ನು ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ. ಹಾಗಿದ್ದರೆ ಯಾಕೆ ಇವರ್ಯಾರಿಗೂ ಟಿಪ್ಪುವಿನ ವಿರುದ್ಧ ಕರ್ನಾಟಕದೊಳಗೆ ಇಂತಹ ಸಾಕ್ಷಿ ಸೃಷ್ಟಿಸಲು ಸಾಧ್ಯವಾಗುತ್ತಿಲ್ಲ? ಜನಸಾಮಾನ್ಯರು ಪರಿಶೀಲಿಸುವರೆಂಬ ಭಯವೇ?
ಏನೇ ಇರಲಿ ಟಿಪ್ಪುವನ್ನು ಹಿಂದೂ ದ್ರೋಹಿ ಎನ್ನುವುದು, ಸ್ವಾತಂತ್ರ್ಯಯೋಧ ಅಲ್ಲ ಎನ್ನುವುದು ಇಡೀ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ, ದೇಶಪ್ರೆಮಿ ಯೋಧರಿಗೆ ಎಸಗುವ ಭಯಾನಕ ಮೋಸ. ಆಂದಹಾಗೆ 1945ರಲ್ಲಿ ಮಹಾತ್ಮ ಗಾಂಧಿಯವರು ಟಿಪ್ಪು ಸ್ಮರಣೋತ್ಸವ ಸಂದರ್ಭದಲ್ಲಿ ಎ.ಜೆ.ಖಲೀಲ್ ಎಂಬುವವರಿಗೆ ಪತ್ರವೊಂದನ್ನು ಬರೆಯುತ್ತಾರೆ. ಅದರಲ್ಲಿ ಅವರು “ಆ ಮಹಾಪ್ರಭು ಟಿಪ್ಪುವಿನ ಮಹಾಮಂತ್ರಿಯದರೂ ಯಾರು? ಅವನೊಬ್ಬ ಹಿಂದೂ(ದಿವಾನ್ ಪೂರ್ಣಯ್ಯ). ಸ್ವಾತಂತ್ರ್ಯ ಪ್ರವಾದಿ ಈ ಟಿಪ್ಪುವನ್ನು ಶತೃಗಳಿಗೆ ಹಿಡಿದೊಪ್ಪಿಸಿದ ಸ್ವಾಮಿ ದ್ರೋಹಿ ಅವನೇ. ಎಂಬುದನ್ನು ನಾವು ನಾಚಿಕೆಯಿಂದ ಒಪ್ಪಿಕೊಳ್ಳಬೇಕು” ಎನ್ನುತ್ತಾರೆ. ತನ್ಮೂಲಕ ಯಾರು ದೇಶದ್ರೋಹಿಗಳು ಎಂಬುದನ್ನು ಗಾಂಧಿಯವರು ಸೂಕ್ಷ್ಮವಾಗಿ ತಿಳಿಸುತ್ತಾರೆ.
ಸತ್ಯ ಹೀಗಿರುವಾಗ ತನ್ನ ದೇಶಕ್ಕಾಗಿ ಬ್ರಿಟಿಷರ ವಿರುದ್ಧ ತನ್ನ ರಕ್ತ ಚೆಲ್ಲಿದ ಟಿಪ್ಪು ದೇಶ ದ್ರೋಹಿ, ಹಿಂದೂ ದ್ರೋಹಿ ಹೇಗಾಗುತ್ತಾನೆ? ಕಾರ್ಗಿಲ್‍ನಲ್ಲಿ ಭಾರತದ ಸೈನಿಕರು ಪ್ರಾಣತೆತ್ತರು ಎಂಬುದನ್ನು ಹಾಡಿ ಹೊಗಳುತ್ತಾ ಎ.ಸಿ ರೂಮಿನಲ್ಲಿ ಕುಳಿತು ಸಂತಾಪ ಸೂಚಿಸುವುದಲ್ಲ ದೇಶಪ್ರೇಮ! ನಿಜವಾದ ದೇಶಪ್ರೇಮಿಗಳು ಬ್ರಿಟೀಷರನ್ನು ಈ ನೆಲದಿಂದ ಬಡಿದಟ್ಟಲು ಯತ್ನಿಸಿದವರು, ಅವರ ವಿರುದ್ಧ ಒಂದೊಂದು ಕಲ್ಲು ಎಸೆದವರು, ಹಾಗೆ ಅವರ ವಿರುದ್ಧ ರಣರಂಗದಲ್ಲಿ ಕತ್ತಿ ಹಿಡಿದು ಸೆಣೆಸಿದವರು, ರಕ್ತ ಚೆಲ್ಲಿ ಮಾತೃಭೂಮಿಗಾಗಿ ಪ್ರಾಣ ತೆತ್ತವರು. ಬಹುಶಃ ಆ ಪಟ್ಟಿಯಲ್ಲಿ ಟಿಪ್ಪು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾನೆ ಎಂದರೆ ಅತಿಶಯೋಕ್ತಿಯೇನಲ್ಲ.